Ranji Trophy 2021-22: ರಣಜಿ ಕ್ವಾರ್ಟರ್ ಫೈನಲ್‌ಗೆ 8 ತಂಡ: ನಾಕ್‌ಔಟ್ ಪಂದ್ಯಕ್ಕೆ ಡೇಟ್ ಫಿಕ್ಸ್

| Updated By: ಝಾಹಿರ್ ಯೂಸುಫ್

Updated on: Mar 17, 2022 | 4:58 PM

Ranji Trophy 2021-22: ಕೊರೋನಾದ ಓಮಿಕ್ರಾನ್ ಭೀತಿಯ ಕಾರಣ, ಬಿಸಿಸಿಐ ಎರಡು ಸುತ್ತುಗಳಲ್ಲಿ ಟೂರ್ನಿ ನಡೆಸಿತ್ತು. ಮೊದಲ ಸುತ್ತಿನ 57 ಪಂದ್ಯಗಳು ನಡೆದಿದ್ದು, ಇದೀಗ ಫೈನಲ್ ಸೇರಿದಂತೆ 7 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ.

Ranji Trophy 2021-22: ರಣಜಿ ಕ್ವಾರ್ಟರ್ ಫೈನಲ್‌ಗೆ 8 ತಂಡ: ನಾಕ್‌ಔಟ್ ಪಂದ್ಯಕ್ಕೆ ಡೇಟ್ ಫಿಕ್ಸ್
Ranji Trophy 2021-22
Follow us on

ರಣಜಿ ಟ್ರೋಫಿ 2021-22 ರ ಮೊದಲ ಸುತ್ತು ಮುಕ್ತಾಯವಾಗಿದೆ. ಈಗಾಗಲೇ 8 ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಅದರಂತೆ ಮುಂದಿನ ಸುತ್ತಿನಲ್ಲಿ ಮಧ್ಯಪ್ರದೇಶ, ಬಂಗಾಳ, ಕರ್ನಾಟಕ, ಮುಂಬೈ, ಉತ್ತರಾಖಂಡ, ಪಂಜಾಬ್, ಉತ್ತರ ಪ್ರದೇಶ, ಜಾರ್ಖಂಡ್ ತಂಡಗಳು ಸೆಣಸಲಿದೆ. ಇದಾಗ್ಯೂ ಬಿಸಿಸಿಐ ಟೂರ್ನಿಯ ಎರಡನೇ ಸುತ್ತಿಗೆ ದಿನಾಂಕವನ್ನು ಫಿಕ್ಸ್ ಮಾಡಿರಲಿಲ್ಲ. ಏಕೆಂದರೆ ಈ ಬಾರಿ ಕೊರೋನಾತಂಕದ ಕಾರಣ ರಣಜಿ ಟೂರ್ನಿಯನ್ನು ಎರಡು ಹಂತಗಳಲ್ಲಿ ಆಯೋಜಿಸಲಾಗಿದೆ. ಇದೀಗ ಮೊದಲ ಹಂತ ಮುಕ್ತಾಯವಾಗಿದ್ದು, ಇದೀಗ 2ನೇ ಹಂತವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಐಪಿಎಲ್​ ಮಾರ್ಚ್ 26 ರಿಂದ ಶುರುವಾಗಲಿದ್ದು, ಬಹುತೇಕ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಐಪಿಎಲ್​ ಬಳಿಕ ರಣಜಿ ಕ್ವಾರ್ಟರ್​ ಫೈನಲ್ ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಕ್ರಿಕ್‌ಬಜ್ ವರದಿಯ ಪ್ರಕಾರ, ರಣಜಿ ಟ್ರೋಫಿಯ ನಾಕ್‌ಔಟ್ ಪಂದ್ಯಗಳು ಮೇ 30 ರಿಂದ ಜೂನ್ 26 ರವರೆಗೆ ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಹವಾಮಾನದ ದೃಷ್ಟಿಯಿಂದ ಈ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ರಣಜಿ ಟ್ರೋಫಿಯ ಮೊದಲ ಸುತ್ತು ಫೆಬ್ರವರಿ 17 ರಂದು ಪ್ರಾರಂಭಿಸಲಾಗಿತ್ತು. ಕೊರೋನಾದ ಓಮಿಕ್ರಾನ್ ಭೀತಿಯ ಕಾರಣ, ಬಿಸಿಸಿಐ ಎರಡು ಸುತ್ತುಗಳಲ್ಲಿ ಟೂರ್ನಿ ನಡೆಸಿತ್ತು. ಮೊದಲ ಸುತ್ತಿನ 57 ಪಂದ್ಯಗಳು ನಡೆದಿದ್ದು, ಇದೀಗ ಫೈನಲ್ ಸೇರಿದಂತೆ 7 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ.

ಪ್ರಸಕ್ತ ರಣಜಿ ಸೀಸನ್​ನಲ್ಲಿ ಚೇತನ್ ಬಿಶ್ತ್ 311ರ ಸರಾಸರಿಯಲ್ಲಿ ಗರಿಷ್ಠ 623 ರನ್ ಗಳಿಸಿ ಮಿಂಚಿದ್ದಾರೆ. ಮತ್ತೊಂದೆಡೆ ಸಕಿಬುಲ್ ಘನಿ 601 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಮುಂಬೈನ ಸರ್ಫರಾಜ್ ಖಾನ್ 551 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಒಟ್ಟಿನಲ್ಲಿ ಐಪಿಎಲ್​ ಬೆನ್ನಲ್ಲೇ ರಣಜಿ ಟೂರ್ನಿಯ ನಾಕೌಟ್ ಹಂತದ ಪಂದ್ಯಗಳು ಶುರುವಾಗುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(Knockout Stage Of Ranji Trophy 2021-22 To Be Held In Bengaluru)