Viral Video: ಲೈವ್​ನಲ್ಲೇ ಟೀಮ್ ಇಂಡಿಯಾ ಮಾಜಿ ಆಟಗಾರನಿಗೆ ಬ್ಯಾಟ್​ನಲ್ಲಿ ಹೊಡೆದ ಶ್ರೀಕಾಂತ್..!

| Updated By: ಝಾಹಿರ್ ಯೂಸುಫ್

Updated on: Aug 30, 2022 | 12:32 PM

Hemang Badani: ಒಟ್ಟಿನಲ್ಲಿ ಹೆವಿ ಜೋಶ್​ನಲ್ಲಿ ಶ್ರೀಕಾಂತ್ ಮಾಡಿದ ಸಣ್ಣ ಎಡವಟ್ಟಿನಿಂದಾಗಿ ಹೇಮಂಗ್ ಬದಾನಿಯ ಕೈಗೆ ಗಾಯವಾಗಿದ್ದು, ಹೀಗಾಗಿ ಕಾರ್ಯಕ್ರಮದಲ್ಲಿ ಮುಂದುವರೆದಿರಲಿಲ್ಲ.

Viral Video: ಲೈವ್​ನಲ್ಲೇ ಟೀಮ್ ಇಂಡಿಯಾ ಮಾಜಿ ಆಟಗಾರನಿಗೆ ಬ್ಯಾಟ್​ನಲ್ಲಿ ಹೊಡೆದ ಶ್ರೀಕಾಂತ್..!
Krishnamachari Srikkanth
Follow us on

ಆಗಸ್ಟ್ 27 ರಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಏಷ್ಯಾ ಕಪ್ ಪಂದ್ಯಕ್ಕೂ ಮುನ್ನ ನಡೆದ ಟಿವಿ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಹೇಮಂಗ್ ಬದಾನಿ ಗಾಯ ಮಾಡಿಕೊಂಡಿದ್ದಾರೆ. ಆದರೆ ಈ ಗಾಯ ಬದಾನಿ ತಪ್ಪಿನಿಂದಾಗಿದ್ದಲ್ಲ. ಬದಲಾಗಿ ಜೊತೆಯಿದ್ದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರ ಅತ್ಯುತ್ಸಾಹದಿಂದ ಉಂಟಾದ ಗಾಯವಾಗಿದೆ.  ಸ್ಟಾರ್ ಸ್ಪೋರ್ಟ್ಸ್ ತಮಿಳು ಚಾನೆಲ್​ನ ಪ್ರೀವೀವ್ ಕಾರ್ಯಕ್ರಮದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಅವರೊಂದಿಗೆ ಲೈವ್​ನಲ್ಲಿ ಬದಾನಿ ಕಾಣಿಸಿಕೊಂಡಿದ್ದರು. ಈ ವೇಳೆ ಶಾಟ್ ಅನ್ನು ವಿವರಿಸುವಾಗ  ಭಾರತದ ಮಾಜಿ ಓಪನರ್ ಶ್ರೀಕಾಂತ್ ಬ್ಯಾಟ್‌ನಿಂದ ಬದಾನಿ ಕೈಗೆ ಹೊಡೆದರು.

ಇತ್ತ ಜೋರಾಗಿಯೇ ಬಿದ್ದ ಏಟಿನಿಂದ ಬದಾನಿ ನರಳುತ್ತಿರುವುದು ಕಾಣಬಹುದು. ಅಲ್ಲದೆ ಕಾರ್ಯಕ್ರಮದಲ್ಲಿ ಮುಂದವರೆಯಲು ಹೆಣಗಾಡಿದರು. ಆ ಬಳಿಕ ಕಾರ್ಯಕ್ರಮದಿಂದ ಹೊರಹೋಗುತ್ತಿದ್ದಂತೆ ಶ್ರೀಕಾಂತ್ ಹೊಡೆದಿದ್ದು ಜೋರಾಯಿತಾ ಎಂದು ಕ್ಷಮಾಪಣೆ ಕೇಳಿದರು.

ಈ ಘಟನೆಯ ಬಳಿಕ ಹೇಮಂಗ್ ಬದಾನಿ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಕೈಗೆ ಉಂಟಾದ ಗಾಯದ ಕಾರಣ ಆರ್ಮ್​ ಪೌಂಚ್​ ಜೊತೆ ಕಾಣಿಸಿಕೊಂಡ ಬದಾನಿ, ಅದೃಷ್ಟವಶಾತ್ ಯಾವುದೇ ಮೂಳೆ ಮುರಿದಿಲ್ಲ. ಇದಾಗ್ಯೂ ತುಂಬಾ ನೋವಿದೆ. ಸದ್ಯ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಹೆವಿ ಜೋಶ್​ನಲ್ಲಿ ಶ್ರೀಕಾಂತ್ ಮಾಡಿದ ಸಣ್ಣ ಎಡವಟ್ಟಿನಿಂದಾಗಿ ಹೇಮಂಗ್ ಬದಾನಿಯ ಕೈಗೆ ಗಾಯವಾಗಿದ್ದು, ಆ ಬಳಿಕ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ.