IND vs PAK: ಗೌತಮ್ ಗಂಭೀರ್ ವಿರುದ್ದ ಮತ್ತೆ ನಾಲಿಗೆ ಹರಿಬಿಟ್ಟ ಅಫ್ರಿದಿ..!

India vs Pakistan: ಶಾಹಿದ್ ಅಫ್ರಿದಿ ಜತೆಗಿನ ಗಂಭೀರ್ ವಿವಾದ ಕೂಡ ಸಾಕಷ್ಟು ಸುದ್ದಿಯಾಗಿತ್ತು. 2007ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಯುತ್ತಿತ್ತು. ಈ ಸರಣಿಯ ಪಂದ್ಯವೊಂದರಲ್ಲಿ ಅಫ್ರಿದಿ ಎಸೆತದಲ್ಲಿ ಗಂಭೀರ್ ರನ್ ಗಳಿಸಿದ್ದರು.

IND vs PAK: ಗೌತಮ್ ಗಂಭೀರ್ ವಿರುದ್ದ ಮತ್ತೆ ನಾಲಿಗೆ ಹರಿಬಿಟ್ಟ ಅಫ್ರಿದಿ..!
ಶಾಹಿದ್ ಅಫ್ರಿದಿ: ಈ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ 2ನೇ ಸ್ಥಾನದಲ್ಲಿದ್ದಾರೆ. ಶಾಹಿದ್ ಅಫ್ರಿದಿ ಟಿ20 ವಿಶ್ವಕಪ್‌ನಲ್ಲಿ ಒಟ್ಟು 34 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 23.25 ಸರಾಸರಿಯಲ್ಲಿ 39 ವಿಕೆಟ್ ಪಡೆದಿದ್ದಾರೆ.
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 30, 2022 | 1:29 PM

Shahid Afridi vs Gautam Gambhir: ಅಂತಾರಾಷ್ಟ್ರೀಯ ಕ್ರಿಕೆಟ್​ನ ನಿವೃತ್ತಿಯ ಬಳಿಕ ಕೂಡ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ನಡುವೆ ವಾಕ್ಸಮರ ಮುಂದುವರೆದಿರುವುದು ಗೊತ್ತೇ ಇದೆ. ಅನೇಕ ಬಾರಿ ಇಬ್ಬರು ಆಟಗಾರರು ಸೋಷಿಯಲ್ ಮೀಡಿಯಾ ಮೂಲಕ ಕೂಡ ಕಿತ್ತಾಡಿಕೊಂಡಿದ್ದರು. ಇದೀಗ ಮತ್ತೊಮ್ಮೆ ಅಫ್ರಿದಿ ತಮ್ಮ ಬಾಯಿಯನ್ನು ಹರಿಬಿಟ್ಟಿದ್ದಾರೆ. ಅದು ಕೂಟ ಟೀಮ್ ಇಂಡಿಯಾ ಆಟಗಾರರನ್ನು ಪ್ರಸ್ತಾಪಿಸುವ ಮೂಲಕ ಎಂಬುದೇ ಇಲ್ಲಿ ಚರ್ಚಾ ವಿಷಯ.

ಭಾನುವಾರ ನಡೆದ ಭಾರತ-ಪಾಕ್ ನಡುವಣ ಪಂದ್ಯಕ್ಕೂ ಮುನ್ನ ಗಂಭೀರ್ ಅವರನ್ನು ತೆಗಳುವ ಮೂಲಕ ಅಫ್ರಿದಿ ಹೊಸ ವಿವಾದವನ್ನು ಹುಟ್ಟು ಹಾಕಿದರು. ಟಾಕ್ ಶೋನಲ್ಲಿ ಕಾಣಿಸಿಕೊಂಡ ಅಫ್ರಿದಿ ಭಾರತದ ಮಾಜಿ ಆರಂಭಿಕ ಆಟಗಾರ ಗಂಭೀರ್ ಅವರೊಂದಿಗಿನ ತಮ್ಮ ಆನ್-ಫೀಲ್ಡ್ ಪೈಪೋಟಿಯನ್ನು ನೆನಪಿಸಿಕೊಂಡರು. ಈ ಟಾಕ್ ಶೋನಲ್ಲಿ ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಭಾಗವಾಗಿದ್ದರು.

ಪಾಕಿಸ್ತಾನಿ ಚಾನೆಲ್ ಸಾಮಾ ಟಿವಿಯಲ್ಲಿ ತಜ್ಞರ ಸಮಿತಿಯ ಭಾಗವಾಗಿದ್ದ ಅಫ್ರಿದಿ, ಭಾರತ-ಪಾಕಿಸ್ತಾನ್ ಆಟಗಾರರು ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದರು. ಇದೇ ವೇಳೆ ಗೌತಮ್ ಗಂಭೀರ್ ಹೆಸರನ್ನು ಪ್ರಸ್ತಾಪಿಸಲಾಯಿತು. ಇದಕ್ಕೆ ಉತ್ತರಿಸಿದ ಅಫ್ರಿದಿ, ಗೌತಮ್ ಗಂಭೀರ್ ಭಾರತ ತಂಡದಲ್ಲೇ ಯಾರೂ ಇಷ್ಟಪಡದ ವ್ಯಕ್ತಿ ಎಂದು ಹೀಯಾಳಿಸಿದ್ದರು.

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಟೀಮ್ ಇಂಡಿಯಾ ಕ್ರಿಕೆಟ್​ ಪ್ರೇಮಿಗಳು ಅಫ್ರಿದಿ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಅದರಲ್ಲೂ 2011 ರ ಏಕದಿನ ವಿಶ್ವಕಪ್ ಹಾಗೂ 2007 ರ ಟಿ20 ವಿಶ್ವಕಪ್ ಗೆಲುವಿನ ರುವಾರಿಯಾಗಿ ಗುರುತಿಸಿಕೊಂಡಿರುವ ಗಂಭೀರ್​ಗೆ ಭಾರತೀಯರು ಬೆಂಬಲ ಸೂಚಿಸುತ್ತಿದ್ದಾರೆ.

ಈ ಹಿಂದೆ ಶಾಹಿದ್ ಅಫ್ರಿದಿ ಜತೆಗಿನ ಗಂಭೀರ್ ವಿವಾದ ಕೂಡ ಸಾಕಷ್ಟು ಸುದ್ದಿಯಾಗಿತ್ತು. 2007ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಯುತ್ತಿತ್ತು. ಈ ಸರಣಿಯ ಪಂದ್ಯವೊಂದರಲ್ಲಿ ಅಫ್ರಿದಿ ಎಸೆತದಲ್ಲಿ ಗಂಭೀರ್ ರನ್ ಗಳಿಸಿದ್ದರು. ಈ ವೇಳೆ ಗಂಭೀರ್ ಅಫ್ರಿದಿ ಅವರನ್ನು ಗುದ್ದುವ ಮೂಲಕ ಜಗಳಕ್ಕಿಳಿದಿದ್ದರು. ಈ ವಾಕ್ಸಮರದಲ್ಲಿ ಇಬ್ಬರು ಅಸಭ್ಯ ಪದಗಳನ್ನು ಬಳಸಿದ್ದರು. ಇದಾದ ಬಳಿಕ ಗಂಭೀರ್ ಹಾಗೂ ಅಫ್ರಿದಿ ನಡುವೆ ವೈಮನಸ್ಸು ಮುಂದುವರೆದಿತ್ತು. ಅದು ನಿವೃತ್ತಿಯಾದ ಬಳಿಕ ಕೂಡ ಮುಂದುವರೆದಿರುವುದು ವಿಶೇಷ. ಅದರ ಮುಂದುವರೆದ ಭಾಗವೇ ಇದೀಗ ಶಾಹೀದ್ ಅಫ್ರಿದಿ ನೀಡಿರುವ ಹೊಸ ಹೇಳಿಕೆ.