India T20 WC Squad: ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ 13 ಆಟಗಾರರು ಕನ್​ಫರ್ಮ್

India T20 WC Squad: ಟೀಮ್ ಇಂಡಿಯಾ ಟಿ20 ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ದ ಟಿ20 ಸರಣಿ ಆಡಲು ಪ್ಲ್ಯಾನ್ ರೂಪಿಸಿದೆ. ಈ ಎರಡೂ ತಂಡಗಳಲ್ಲಿ ಅತ್ಯುತ್ತಮ ವೇಗಿಗಳಿದ್ದಾರೆ. ಹೀಗಾಗಿಯೇ ಟಿ20 ವಿಶ್ವಕಪ್​ ಆರಂಭಕ್ಕೂ ಕೆಲ ದಿನಗಳ ಮುಂಚಿತವಾಗಿ ಈ ಎರಡು ತಂಡಗಳ ವಿರುದ್ದ ಟಿ20 ಸರಣಿ ಆಡಲು ಟೀಮ್ ಇಂಡಿಯಾ ಮುಂದಾಗಿದೆ.

India T20 WC Squad: ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ 13 ಆಟಗಾರರು ಕನ್​ಫರ್ಮ್
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 30, 2022 | 3:54 PM

India T20 WC Squad: ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಶುರುವಾಗಲಿರುವ ಟಿ20 ವಿಶ್ವಕಪ್​ಗೆ ತಂಡಗಳ ಘೋಷಣೆಗೆ ಐಸಿಸಿ ಗುಡುವು ನೀಡಿದೆ. ಅದರಂತೆ ಸೆಪ್ಟೆಂಬರ್​ 15 ರೊಳಗೆ ಪ್ರತಿ ತಂಡಗಳು 15 ಸದಸ್ಯರ ಪಟ್ಟಿಯನ್ನು ಸಲ್ಲಿಸಬೇಕೆಂದು ತಿಳಿಸಲಾಗಿದೆ. ವಿಶೇಷ ಎಂದರೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿರುವ 13 ಆಟಗಾರರು ಈಗಾಗಲೇ ಕನ್​ಫರ್ಮ್ ಆಗಿದ್ದಾರೆ ಎಂದು ವರದಿಯಾಗಿದೆ. ಇದನ್ನು ಪುಷ್ಠೀಕರಿಸುವಂತೆ ಇತ್ತೀಚೆಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಹೇಳಿಕೆ ನೀಡಿದ್ದರು.

ಟಿ20 ವಿಶ್ವಕಪ್​ಗಾಗಿ ನಾವು ಈಗಾಗಲೇ ಶೇ.80 ರಿಂದ 90 ರಷ್ಟು ತಂಡವನ್ನು ಸೆಟ್ ಮಾಡಿದ್ದೇವೆ. ಸಹಜವಾಗಿ, ಪರಿಸ್ಥಿತಿಗಳನ್ನು ಅವಲಂಬಿಸಿ ಮೂರು-ನಾಲ್ಕು ಬದಲಾವಣೆಗಳಾಗಬಹುದು ಎಂದು ರೋಹಿತ್ ಶರ್ಮಾ ಇತ್ತೀಚೆಗೆ ತಿಳಿಸಿದ್ದರು. ಅದರಂತೆ ಇದೀಗ 13 ಆಟಗಾರರು ಬಹುತೇಕ ಫೈನಲ್ ಆಗಿದೆ ಎಂದು ತಿಳಿದು ಬಂದಿದೆ. ಅಂದರೆ ಏಷ್ಯಾಕಪ್​ನಲ್ಲಿ ಸ್ಥಾನ ಪಡೆದಿರುವ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಟಿ20 ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇದಾಗ್ಯೂ ಮತ್ತೆರಡು ಸ್ಥಾನಗಳಲ್ಲಿ ಯಾರು ಆಡಲಿದ್ದಾರೆ ಎಂಬುದೇ ಪ್ರಶ್ನೆ.

ಏಕೆಂದರೆ ಗಾಯಗೊಂಡಿರುವ ಜಸ್​ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಏಷ್ಯಾಕಪ್​ನಿಂದ ಹೊರಗುಳಿದಿದ್ದರು. ಈ ಇಬ್ಬರು ಆಟಗಾರರು ಮುಂಬರುವ ಸರಣಿಗಳಲ್ಲಿ ಆಡುವುದು ಇನ್ನೂ ಸಹ ಖಚಿತವಾಗಿಲ್ಲ. ಟಿ20 ವಿಶ್ವಕಪ್​ಗೂ ಮುನ್ನ ಭಾರತ ತಂಡವು ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಈ ಸರಣಿಗಳಲ್ಲಿ ಈ ಇಬ್ಬರು ವೇಗಿಗಳು ಕಣಕ್ಕಿಳಿದರೆ ಮಾತ್ರ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯಬಹುದು.

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಹೀಗಾಗಿಯೇ 15 ಸದಸ್ಯರಲ್ಲಿ 2 ಸ್ಥಾನಗಳ ಬಗ್ಗೆ ಕಾದು ನೋಡುವ ತಂತ್ರಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಮುಂದಾಗಿದೆ ಎಂದು ವರದಿಯಾಗಿದೆ. ಅಂದರೆ ಹರ್ಷಲ್ ಪಟೇಲ್ ಹಾಗೂ ಜಸ್​ಪ್ರೀತ್ ಬುಮ್ರಾ ಕಂಬ್ಯಾಕ್ ಮಾಡಿದರೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನಬಹುದು.

ಇನ್ನು ಏಷ್ಯಾಕಪ್​ಗೆ ಆಯ್ಕೆಯಾಗದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ಈ ಮೂವರು ಆಟಗಾರರು ಆಸ್ಟ್ರೇಲಿಯಾ ಪಿಚ್​ನಲ್ಲಿ ಆಡಿದ ಅನುಭವ ಹೊಂದಿದ್ದು, ಹೀಗಾಗಿ ಬಿಸಿಸಿಐ ಮೀಸಲು ಆಟಗಾರರ ಪಟ್ಟಿಯಲ್ಲಿ ಅನುಭವಿ ಆಟಗಾರರಿಗೆ ಮಣೆ ಹಾಕಲಿದೆ. ಸದ್ಯದ ಮಾಹಿತಿ ಪ್ರಕಾರ ಟಿ20 ವಿಶ್ವಕಪ್​ಗಾಗಿ ಆಯ್ಕೆಯಾಗಲಿರುವ ಟೀಮ್ ಇಂಡಿಯಾದ  13 ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ.

  1. ರೋಹಿತ್ ಶರ್ಮಾ (ನಾಯಕ)
  2. ಕೆಎಲ್ ರಾಹುಲ್ (ಉಪನಾಯಕ)
  3. ವಿರಾಟ್ ಕೊಹ್ಲಿ
  4. ಸೂರ್ಯಕುಮಾರ್ ಯಾದವ್
  5. ಹಾರ್ದಿಕ್ ಪಾಂಡ್ಯ
  6. ರವೀಂದ್ರ ಜಡೇಜಾ
  7. ದಿನೇಶ್ ಕಾರ್ತಿಕ್
  8. ರಿಷಭ್ ಪಂತ್
  9. ದೀಪಕ್ ಹೂಡಾ
  10. ಭುವನೇಶ್ವರ್ ಕುಮಾರ್
  11. ದೀಪಕ್ ಚಹರ್
  12. ಅರ್ಷದೀಪ್ ಸಿಂಗ್
  13. ಯುಜ್ವೇಂದ್ರ ಚಹಾಲ್

ಈ 13 ಆಟಗಾರರು ಮುಂಬರುವ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ದದ ಸರಣಿಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇವರಲ್ಲಿ ಕಳಪೆ ಫಾರ್ಮ್ ಪ್ರದರ್ಶಿಸಿದ ಆಟಗಾರರನ್ನು ಅಂತಿಮವಾಗಿ ತಂಡದಿಂದ ಕೈ ಬಿಡಬಹುದು. ಇದೇ ಕಾರಣದಿಂದಾಗಿ ರೋಹಿತ್ ಶರ್ಮಾ ಪರಿಸ್ಥಿತಿಗಳನ್ನು ಅವಲಂಬಿಸಿ ಮೂರು-ನಾಲ್ಕು ಬದಲಾವಣೆಗಳಾಗಬಹುದು ಎಂದು ತಿಳಿಸಿದ್ದರು.

ಇನ್ನು ಗಾಯದಿಂದ ಚೇತರಿಸಿಕೊಂಡರೆ ಜಸ್​ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಕೂಡ ತಂಡದಲ್ಲಿ ಸ್ಥಾನ ಪಡೆಯಬಹುದು. ಈ ಮೂಲಕ ಬಲಿಷ್ಠ 15 ಸದಸ್ಯರ ಬಳಗವನ್ನು ರೂಪಿಸುವ ಪ್ಲ್ಯಾನ್​ನಲ್ಲಿದೆ ಬಿಸಿಸಿಐ.

13 ದಿನಗಳಲ್ಲಿ 6 ಪಂದ್ಯ:

ಟೀಮ್ ಇಂಡಿಯಾ ಟಿ20 ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ದ ಟಿ20 ಸರಣಿ ಆಡಲು ಪ್ಲ್ಯಾನ್ ರೂಪಿಸಿದೆ. ಈ ಎರಡೂ ತಂಡಗಳಲ್ಲಿ ಅತ್ಯುತ್ತಮ ವೇಗಿಗಳಿದ್ದಾರೆ. ಹೀಗಾಗಿಯೇ ಟಿ20 ವಿಶ್ವಕಪ್​ ಆರಂಭಕ್ಕೂ ಕೆಲ ದಿನಗಳ ಮುಂಚಿತವಾಗಿ ಈ ಎರಡು ತಂಡಗಳ ವಿರುದ್ದ ಟಿ20 ಸರಣಿ ಆಡಲು ಟೀಮ್ ಇಂಡಿಯಾ ಮುಂದಾಗಿದೆ.

ಈ ಸರಣಿಗಳು ಸೆಪ್ಟೆಂಬರ್​ನಲ್ಲಿ ಶುರುವಾಗಲಿದೆ. ಮೊದಲು ಆಸ್ಟ್ರೇಲಿಯಾ ವಿರುದ್ದ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಭಾರತದಲ್ಲೇ ನಡೆಯಲಿರುವ ಈ ಸರಣಿಯ ಪಂದ್ಯಗಳು ಸೆಪ್ಟೆಂಬರ್ 20, 23 ಮತ್ತು 25 ರಂದು ಕ್ರಮವಾಗಿ ಮೊಹಾಲಿ, ನಾಗ್ಪುರ ಮತ್ತು ಹೈದರಾಬಾದ್‌ನಲ್ಲಿ ಆಡಲಾಗುತ್ತದೆ.

ಇದಾದ ಬಳಿಕ ಸೌತ್ ಆಫ್ರಿಕಾ ವಿರುದ್ದದ ಸರಣಿ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯು ಸೆಪ್ಟೆಂಬರ್ 28 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಗಳು ಸೆಪ್ಟೆಂಬರ್ 28 ರಂದು ತಿರುವನಂತಪುರಂ, ಅಕ್ಟೋಬರ್ 2 ರಂದು ಗುವಾಹಟಿ ಮತ್ತು ಅಕ್ಟೋಬರ್ 4 ರಂದು ಇಂದೋರ್‌ನಲ್ಲಿ ನಡೆಯಲಿವೆ. ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಾಗುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ದ ಕೇವಲ 13 ದಿನಗಳಲ್ಲಿ 6 ಟಿ20 ಪಂದ್ಯಗಳನ್ನು ಆಡಲಿರುವುದು. ಅತ್ತ ಟಿ20 ವಿಶ್ವಕಪ್​ ಅಕ್ಟೋಬರ್ 16 ರಿಂದ ಶುರುವಾಗಲಿದೆ. ಇತ್ತ ಟೀಮ್ ಇಂಡಿಯಾ ಸರಣಿ ಮುಗಿಯುವುದು ಅಕ್ಟೋಬರ್ 11 ರಂದು.

ಅಂದರೆ 2 ವಾರಗಳ ಒಳಗೆ ಎರಡು ಬಲಿಷ್ಠ ತಂಡಗಳನ್ನು ಎದುರಿಸಿದ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್​ಗೆ ತೆರಳಲಿದೆ. ಈ ಮೂಲಕ ಆಸೀಸ್​ ಪಿಚ್​ನಲ್ಲಿ ವೇಗವನ್ನು ಮತ್ತು ಬೌನ್ಸರ್​ ಎಸೆತಗಳನ್ನು ಎದುರಿಸಲು ಟೀಮ್ ಇಂಡಿಯಾ ತವರಿನಲ್ಲೇ ಮಾಸ್ಟರ್​ ಪ್ಲ್ಯಾನ್ ರೂಪಿಸಿದೆ.