Hardik Pandya: ತಮ್ಮ ಹಾರ್ದಿಕ್​ರನ್ನು ಔಟ್ ಮಾಡಿದಾಗ ಅಣ್ಣ ಕ್ರುನಾಲ್ ಮಾಡಿದ್ದೇನು ನೋಡಿ

| Updated By: Vinay Bhat

Updated on: Mar 29, 2022 | 12:18 PM

GT vs LSG, IPL 2022: ಲಖನೌ ಹಾಗೂ ಗುಜರಾತ್ ಮುಖಾಮುಖಿ ಒಂದು ಕಡೆಯಾದರೆ, ಹಾರ್ದಿಕ್-ಕ್ರುನಾಲ್ ಮುಖಾಮುಖಿ ನೋಡಲು ಪ್ರತಿಯೊಬ್ಬರು ಕಾತುರರಾಗಿದ್ದರು. ಅದರಂತೆ ಈ ಪಂದ್ಯದಲ್ಲಿ ಹಾರ್ದಿಕ್​ಗೆ ಕ್ರನಾಲ್ ಬೌಲಿಂಗ್ ಮಾಡುವ ಸಂದರ್ಭ ಕೂಡ ಒದಗಿ ಬಂತು.

Hardik Pandya: ತಮ್ಮ ಹಾರ್ದಿಕ್​ರನ್ನು ಔಟ್ ಮಾಡಿದಾಗ ಅಣ್ಣ ಕ್ರುನಾಲ್ ಮಾಡಿದ್ದೇನು ನೋಡಿ
Krunal Pandya and Hardik Pandya IPL 2022
Follow us on

ಐಪಿಎಲ್ 2022 ರಲ್ಲಿ (IPL 2022) ನಡೆದ ಲಖನೌ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಲಯನ್ಸ್ ನಡುವಣ ಐದನೇ ಪಂದ್ಯ ಅಣ್ಣ-ತಮ್ಮಂದಿನ ಕಾದಾಟಕ್ಕೆ ಸಾಕ್ಷಿಯಾಯಿತು. ಇದರಲ್ಲಿ ಕ್ರುನಾಲ್ ಪಾಂಡ್ಯ (Krunal Pandya) ಮುಖ್ಯ ಆಟಗಾರನಾಗಿರುವ ಲಖನೌ ಸೂಪರ್ ಜೈಂಟ್ಸ್ ತಂಡ ಸೋತರೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್‌ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತು. ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕ್ರುನಾಲ್ ಮತ್ತು ಹಾರ್ದಿಕ್‌ (Hardik Pandya) ವಿಭಿನ್ನ ತಂಡಗಳಲ್ಲಿ ಕಣಕ್ಕಿಳಿದರು. ಇದಕ್ಕೂ ಮುನ್ನ ಇವರು ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಲವು ವರ್ಷಗಳಿಂದ ಜೊತೆಯಾಗಿ ಆಡುತ್ತಿದ್ದರು. ಲಖನೌ ಹಾಗೂ ಗುಜರಾತ್ ಮುಖಾಮುಖಿ ಒಂದು ಕಡೆಯಾದರೆ, ಹಾರ್ದಿಕ್-ಕ್ರುನಾಲ್ ಮುಖಾಮುಖಿ ನೋಡಲು ಪ್ರತಿಯೊಬ್ಬರು ಕಾತುರರಾಗಿದ್ದರು. ಅದರಂತೆ ಈ ಪಂದ್ಯದಲ್ಲಿ ಹಾರ್ದಿಕ್​ಗೆ ಕ್ರನಾಲ್ ಬೌಲಿಂಗ್ ಮಾಡುವ ಸಂದರ್ಭ ಕೂಡ ಒದಗಿ ಬಂತು. ಅಚ್ಚರಿ ಎಂಬಂತೆ ಕ್ರುನಾಲ್ ತಮ್ಮ ಹಾರ್ದಿಕ್ ವಿಕೆಟ್ ಅನ್ನು ಕಿತ್ತು ಮಿಂಚಿದರು.

ಹೌದು, ಲಖನೌ ನೀಡಿದ್ದ 159 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಅನ್ನು ಕಳೆದುಕೊಂಡು ಆಘಾತ ಅನುಭವಿಸಿತು. ಕೇವಲ 15 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಗುಜರಾತ್ ಟೈಟನ್ಸ್‌ಗೆ ನಾಯಕ ಹಾರ್ದಿಕ್ ಪಾಂಡ್ಯ ಆಧಾರವಾದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು. ಆದರೆ, ಈ ವೇಳೆಯಲ್ಲಿ ದಾಳಿಗಿಳಿದ ಹಾರ್ದಿಕ್ ಸಹೋದರ ಕ್ರುನಾಲ್ ಪಾಂಡ್ಯ 33 ರನ್‌ಗಳಿಸಿದ್ದಾಗ ಹಾರ್ದಿಕ್ ಪಾಂಡ್ಯರನ್ನ ಔಟ್‌ ಮಾಡುವಲ್ಲಿ ಯಶಸ್ವಿಯಾದರು. ಹಾರ್ದಿಕ್ ಭರ್ಜರಿ ಹೊಡೆತಕ್ಕೆ ಮುಂದಾಗಿ ಮನೀಶ್ ಪಾಂಡೆಗೆ ಕ್ಯಾಚಿತ್ತು ನಿರ್ಗಮಿಸಿದರು.

 

ಪ್ರಮುಖ ಆಘಾತಕಾರಿ ಬ್ಯಾಟರ್ ಹಾರ್ದಿಕ್ ವಿಕೆಟ್ ಪಡೆಯುತ್ತಿದ್ದಂತೆ ಕ್ರುನಾಲ್ ಸಂಭ್ರಮಿಸುತ್ತಾರೆ ಎಂದೇ ನಂಬಲಾಗಿತ್ತು. ಆದರೆ ಇಲ್ಲಿ ಹಾಗಾಗಲಿಲ್ಲ. ಕ್ರುನಾಲ್ ಯಾವುದೇ ರೀತಿಯಲ್ಲಿ ಸಂಭ್ರಮಿಸಿದೇ ತನ್ನ ಮುಖವನ್ನು ಮರೆಮಾಚಿದನು ಮತ್ತು ನಂತರ ನಗುತ್ತಿರುವುದು ಕಂಡುಬಂದಿತು. ವಿಕೆಟ್ ಪಡೆದಾಗ ಸಾಮಾನ್ಯವಾಗಿ ಅಗ್ರೆಸ್ಸಿವ್ ಆಗಿ ಕಾಣುವ ಕ್ರುನಾಲ್ ತಮ್ಮನ ವಿಕೆಟ್ ಕಿತ್ತಾಗ ಶಾಂತ ರೀತಿಯಲ್ಲಿ ಕಂಡು ಬಂದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಆರಂಭಿಕ ಆಘಾತ ಎದುರಿಸಿತ್ತು. 29 ರನ್​ಗೆ 4 ವಿಕೆಟ್ ಕಳೆದುಕೊಂಡು ಹಳಿ ತಪ್ಪಿತ್ತು. ಈ ವೇಳೆ ದೀಪಕ್ ಹೂಡಾ (55), ಆಯುಷ್ ಬದೋನಿ (54) ತಂಡಕ್ಕೆ ಗೌರವಯುತ ಮೊತ್ತ ಕಲೆ ಹಾಕಲು ನೆರವಾದರು. ಅಂತಿಮವಾಗಿ ಲಖನೌ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಗುಜರಾತ್ ಕೂಡಾ ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆದರೆ ಮ್ಯಾಥ್ಯೂ ವೇಡ್ 30, ನಾಯಕ ಹಾರ್ದಿಕ್ ಪಾಂಡ್ಯ 33, ಡೇವಿಡ್ ಮಿಲ್ಲರ್ 30 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಬಳಿಕ ರಾಹುಲ್ ತೇವಾಟಿಯಾ ಅಜೇಯ 40 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ 19.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 161 ರನ್ ಗಳಿಸುವ ಮೂಲಕ ಗುಜರಾತ್ ಗೆಲುವು ಕಂಡಿತು.

KL Rahul: ಆತ ನಮ್ಮ ತಂಡದ ಎಬಿ ಡಿವಿಲಿಯರ್ಸ್​ ಎಂದ ಕೆಎಲ್ ರಾಹುಲ್: ಯಾರು ಗೊತ್ತೇ ಆ ಪ್ಲೇಯರ್?

Yuzvendra Chahal: ಶಾಕಿಂಗ್ ಹೇಳಿಕೆ: ಆರ್​ಸಿಬಿಯ ಮಾನ ಹರಾಜು ಮಾಡಿದ ಯುಜ್ವೇಂದ್ರ ಚಹಾಲ್

Published On - 12:17 pm, Tue, 29 March 22