ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾದ ಕುಸಾಲ್ ಮೆಂಡಿಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ಲಂಕಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಪಾತುಮ್ ನಿಸ್ಸಂಕಾ (30) ಹಾಗೂ ದಿಮುತ್ ಕರುಣರತ್ನೆ (8) ಬೇಗನೆ ವಿಕೆಟ್ ಒಪ್ಪಿಸಿದ್ದರು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಸಾಲ್ ಮೆಂಡಿಸ್ ಅದ್ಭುತ ಇನಿಂಗ್ಸ್ ಕಟ್ಟಿದರು.
13ನೇ ಓವರ್ ವೇಳೆ ಕ್ರೀಸ್ಗೆ ಆಗಮಿಸಿದ ಕುಸಾಲ್ ಮೆಂಡಿಸ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದ ಲಂಕಾ ಬ್ಯಾಟರ್ ಅಫ್ಘಾನ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕುಸಾಲ್ ಮೆಂಡಿಸ್ ಬ್ಯಾಟ್ನಿಂದ ಕೇವಲ 59 ಎಸೆತಗಳಲ್ಲಿ ಶತಕ ಮೂಡಿಬಂತು.
ಶತಕದ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ಕುಸಾಲ್ ಮೆಂಡಿಸ್ 87 ಎಸೆತಗಳಲ್ಲಿ 19 ಫೋರ್ ಹಾಗೂ 9 ಸಿಕ್ಸ್ಗಳೊಂದಿಗೆ 158 ರನ್ ಬಾರಿಸಿದರು. ಆ ಬಳಿಕ ರಿಟೈರ್ಡ್ ಆಗಿ ನಿರ್ಗಮಿಸಿದರು.
A 150 off just 84 deliveries 😍
Kusal Mendis looks in scintillating form ahead of the #CWC23 🔥#AFGvSL 📝: https://t.co/LIcVNRI3su pic.twitter.com/2Q6dcnMQ8V
— ICC (@ICC) October 3, 2023
ಕುಸಾಲ್ ಮೆಂಡಿಸ್ ನಿರ್ಗಮನದ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಅಫ್ಘಾನ್ ಬೌಲರ್ಗಳು ಶ್ರೀಲಂಕಾ ತಂಡವನ್ನು 46.2 ಓವರ್ಗಳಲ್ಲಿ 294 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.