India Vs Sri Lanka: ಟೀಮ್ ಇಂಡಿಯಾ ವಿರುದ್ದ ಶ್ರೀಲಂಕಾಗೆ ರೋಚಕ ಜಯ
India Vs Sri Lanka T20 Asia Cup 2022: 174 ರನ್ಗಳ ಟಾರ್ಗೆಟ್ ಪಡೆದ ಶ್ರೀಲಂಕಾ ಪರ ಪಾತುಂ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಭರ್ಜರಿ ಆರಂಭ ಒದಗಿಸಿದ್ದರು. ಇಬ್ಬರು ಆರಂಭಿಕರು ಮೊದಲ ವಿಕೆಟ್ಗೆ 97 ರನ್ಗಳ ಜೊತೆಯಾಟವಾಡಿದರು.
ಟAsia Cup 2022: ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಏಷ್ಯಾಕಪ್ನ ಸೂಪರ್-4 ಹಂತದ ನಾಲ್ಕನೇ ಪಂದ್ಯದಲ್ಲಿ ಭಾರತದ ವಿರುದ್ದ ಶ್ರೀಲಂಕಾ ತಂಡವು 6 ವಿಕೆಟ್ಗಳ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಟೀಮ್ ಇಂಡಿಯಾದ ಫೈನಲ್ಗೇರುವ ಕನಸು ಬಹುತೇಕ ಕಮರಿದೆ. ಏಕೆಂದರೆ ಮುಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೂ, ಉಳಿದ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 72 ರನ್ ಬಾರಿಸಿದರು. ಈ ಭರ್ಜರಿ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು.
174 ರನ್ಗಳ ಟಾರ್ಗೆಟ್ ಪಡೆದ ಶ್ರೀಲಂಕಾ ಪರ ಪಾತುಂ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಭರ್ಜರಿ ಆರಂಭ ಒದಗಿಸಿದ್ದರು. ಇಬ್ಬರು ಆರಂಭಿಕರು ಮೊದಲ ವಿಕೆಟ್ಗೆ 97 ರನ್ಗಳ ಜೊತೆಯಾಟವಾಡಿದರು. ಇದಾಗ್ಯೂ ಅಂತಿಮ ಹಂತದಲ್ಲಿ ಕಂಬ್ಯಾಕ್ ಮಾಡಿದ ಟೀಮ್ ಇಂಡಿಯಾ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರು. ಅದರಂತೆ ಅಂತಿಮ ಓವರ್ನಲ್ಲಿ ಶ್ರೀಲಂಕಾಗೆ ಗೆಲ್ಲಲು 7 ರನ್ಗಳ ಅವಶ್ಯಕತೆಯಿತ್ತು. ಅತ್ಯುತ್ತಮವಾಗಿ ಬೌಲ್ ಮಾಡಿದ ಅರ್ಷದೀಪ್ ಸಿಂಗ್ ಶ್ರೀಲಂಕಾ ಬ್ಯಾಟ್ಸ್ಮನ್ಗಳಾದ ಭಾನುಕಾ ರಾಜಪಕ್ಸೆ ಹಾಗೂ ದುಸನ್ ಶಾನಕರನ್ನು ಇಕ್ಕಟಿಗೆ ಸಿಲುಕಿಸಿದರು. ಆದರೆ 5ನೇ ಎಸೆತದಲ್ಲಿ ರನೌಟ್ ಮಾಡುವ ಅವಕಾಶವನ್ನು ರಿಷಭ್ ಪಂತ್ ಹಾಗೂ ಅರ್ಷದೀಪ್ ಸಿಂಗ್ ತಪ್ಪಿಸಿಕೊಂಡರು. ಅತ್ತ ಓವರ್ ಥ್ರೋನಲ್ಲಿ ಒಂದು ರನ್ ಓಡುವ ಮೂಲಕ ಶ್ರೀಲಂಕಾ ತಂಡವು 19.5 ಓವರ್ನಲ್ಲಿ 174 ರನ್ ಗಳಿಸಿ 6 ವಿಕೆಟ್ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಏಷ್ಯಾಕಪ್ ಫೈನಲ್ ಆಡುವುದನ್ನು ಖಚಿತಪಡಿಸಿಕೊಂಡಿದೆ.
ಭಾರತ-ಶ್ರೀಲಂಕಾ ಇದುವರೆಗೆ 26 ಟಿ20 ಪಂದ್ಯಗಳನ್ನಾಡಿದೆ. ಈ ವೇಳೆ ಶ್ರೀಲಂಕಾ ಗೆದ್ದಿರುವುದು ಕೇವಲ 8 ಬಾರಿ ಮಾತ್ರ. ಅಂದರೆ 17 ಬಾರಿ ಬಾರಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ರದ್ದಾಗಿತ್ತು. ಇದು ಟಿ20 ಕ್ರಿಕೆಟ್ನ ಅಂಕಿ ಅಂಶವಾದರೆ, ಒಟ್ಟಾರೆ ಏಷ್ಯಾಕಪ್ನಲ್ಲಿ ಇದುವರೆಗೆ 21 ಪಂದ್ಯಗಳನ್ನಾಡಿದೆ. ಈ ವೇಳೆ ಟೀಮ್ ಇಂಡಿಯಾ 10 ಬಾರಿ ಜಯ ಸಾಧಿಸಿದರೆ, ಶ್ರೀಲಂಕಾ ಕೂಡ ಭಾರತವನ್ನು 11 ಬಾರಿ ಮಣಿಸಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ
ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಮೀಸಲು ಆಟಗಾರರು: ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.
ಶ್ರೀಲಂಕಾ ತಂಡ ಹೀಗಿದೆ:
ದಸುನ್ ಶನಕ (ನಾಯಕ), ಚರಿತ್ ಅಸಲಂಕಾ (ಉಪನಾಯಕ), ಧನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಶಾಲ್ ಮೆಂಡಿಸ್ (ವಿಕೆಟ್‌ಕೀಪರ್), ಭಾನುಕಾ ರಾಜಪಕ್ಸೆ (ವಿಕೆಟ್‌ಕೀಪರ್), ಅಶೆನ್ ಬಂಡಾರ, ಧನಂಜಯ ಡಿ ಸಿಲ್ವಾ, ವನಿಂದು ಹಸ್ಸರಂಗ, ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ್ ದ್ವಾಂಡರ್ಸೆ, ಬಿನೂರ ಫೆರ್ನಾಂಡೊ, ಚಾಮಿಕ ಕರುಣಾರತ್ನೆ, ದಿಲ್ಶನ್ ಮಧುಶಂಕ, ಮತಿಶ ಪತಿರಾನ, ದಿನೇಶ್ ಚಾಂಡಿಮಲ್ (ವಿಕೆಟ್ ಕೀಪರ್), ನುವಾನಿಂದು ಫೆರ್ನಾಂಡೊ, ಕಸುನ್ ರಜಿತ.
LIVE NEWS & UPDATES
-
ಶ್ರೀಲಂಕಾಗೆ 6 ವಿಕೆಟ್ಗಳ ಜಯ
IND 173/8 (20)
SL 174/4 (19.5)
-
SL 167/4 (19)
ಕೊನೆಯ ಓವರ್ನಲ್ಲಿ 7 ರನ್ಗಳ ಅವಶ್ಯಕತೆ
-
ಮತ್ತೊಂದು ಬೌಂಡರಿ
ಭುವಿ ಎಸೆತದಲ್ಲಿ ಬ್ಯಾಟ್ ಎಡ್ಜ್ ಆಗಿ ಶಾನಕ ಬ್ಯಾಟ್ನಿಂದ ಸ್ಲಿಪ್ ಮೂಲಕ ಮತ್ತೊಂದು ಫೋರ್
SL 165/4 (18.4)
ಪವರ್ ಹಿಟ್
ಭುವನೇಶ್ವರ್ ಕುಮಾರ್ ಎಸೆತ ಲೋ ಫುಲ್ ಟಾಸ್ ಎಸೆತಕ್ಕೆ ಕವರ್ಸ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಶಾನಕ
SL 161/4 (18.3)
ಕೊನೆಯ 2 ಓವರ್ಗಳು ಬಾಕಿ
SL 153/4 (18)
12 ಎಸೆತಗಳಲ್ಲಿ 21 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಭಾನುಕಾ ರಾಜಪಕ್ಸೆ-ದಸುನ್ ಶಾನಕ ಬ್ಯಾಟಿಂಗ್
ಭರ್ಜರಿ ಸಿಕ್ಸ್
ಪಾಂಡ್ಯ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ದುಸನ್ ಶಾನಕ
SL 152/4 (17.5)
ಬೌಂಡರಿ
ಪಾಂಡ್ಯ ಎಸೆತದಲ್ಲಿ ಶಾನಕ ಬ್ಯಾಟ್ ಎಡ್ಜ್…ಸ್ಲಿಪ್ ಮೂಲಕ ಚೆಂಡು ಬೌಂಡರಿಗೆ…ಫೋರ್
SL 146/4 (17.3)
33 ರನ್ಗಳ ಅವಶ್ಯಕತೆ
ಕೊನೆಯ 3 ಓವರ್ಗಳಲ್ಲಿ 33 ರನ್ಗಳ ಅವಶ್ಯಕತೆ
SL 141/4 (17)
ಫೋರ್ರ್ರ್
ಅರ್ಷದೀಪ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶಾನಕ
SL 137/4 (16.2)
4 ಓವರ್ಗಳು ಬಾಕಿ
SL 132/4 (16)
24 ಎಸೆತಗಳಲ್ಲಿ 42 ರನ್ಗಳ ಅವಶ್ಯಕತೆ
ಸಿಕ್ಸ್-ರಾಜ
ಅಶ್ವಿನ್ ಎಸೆತದಲ್ಲಿ ಬಿಗ್ ಸಿಕ್ಸ್ ಸಿಡಿಸಿದ ಭಾನುಕಾ ರಾಜಪಕ್ಸೆ
SL 127/4 (15.2)
ಭರ್ಜರಿ ಸಿಕ್ಸ್
ಚಹಾಲ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಾಜಪಕ್ಸೆ
SL 120/4 (14.5)
4ನೇ ಯಶಸ್ಸು
ಚಹಾಲ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಕುಸಾಲ್ ಮೆಂಡಿಸ್ (57)
SL 110/4 (14.1)
6 ಓವರ್ ಬಾಕಿ
SL 110/3 (14)
36 ಎಸೆತಗಳಲ್ಲಿ 64 ರನ್ಗಳ ಅವಶ್ಯಕತೆ
3ನೇ ಯಶಸ್ಸು
ಅಶ್ವಿನ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಔಟಾದ ಗುಣತಿಲಕ (1)
SL 110/2 (13.4)
ಆಕರ್ಷಕ ಬೌಂಡರಿ
ಅಶ್ವಿನ್ ಎಸೆತದಲ್ಲಿ ಬ್ಯಾಕ್ ಸೈಡ್ನತ್ತ ಬೌಂಡರಿ ಬಾರಿಸಿದ ಮೆಂಡಿಸ್
SL 109/2 (13.1)
ಅರ್ಧಶತಕ ಬಾರಿಸಿದ ಮೆಂಡಿಸ್
ಭುವನೇಶ್ವರ್ ಕುಮಾರ್ ಓವರ್ನಲ್ಲಿ ಫೋರ್ ಬಾರಿಸುವ ಮೂಲಕ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಮೆಂಡಿಸ್
SL 104/2 (12.4)
2ನೇ ವಿಕೆಟ್ ಪತನ
ಚಹಾಲ್ ಎಸೆತದಲ್ಲಿ ಕ್ಯಾಚ್ ನೀಡಿದ ಚರಿತ್ ಅಸಲಂಕಾ (0)
SL 97/2 (11.4)
ಮೊದಲ ವಿಕೆಟ್ ಪತನ
ಚಹಾಲ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ನಿಸ್ಸಂಕಾ (52)
SL 97/1 (11.1)
10 ಓವರ್ ಮುಕ್ತಾಯ
SL 89/0 (10)
ಶ್ರೀಲಂಕಾಗೆ ಗೆಲ್ಲಲು 60 ಎಸೆತಗಳಲ್ಲಿ 85 ರನ್ಗಳ ಅವಶ್ಯಕತೆ
ನಿಸ್ಸಂಕಾ ಹಾಫ್ ಸೆಂಚುರಿ
33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಾತುಂ ನಿಸ್ಸಂಕಾ
SL 88/0 (9.3)
ಭರ್ಜರಿ ಸಿಕ್ಸ್
ಚಹಾಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ನಿಸ್ಸಂಕಾ
SL 82/0 (8.3)
ಪವರ್ಪ್ಲೇ ಮುಕ್ತಾಯ
SL 57/0 (6)
ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಕುಸಾಲ್ ಮೆಂಡಿಸ್ – ಪಾತುಂ ನಿಸ್ಸಂಕಾ
ಭರ್ಜರಿ ಸಿಕ್ಸ್
ಚಹಾಲ್ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್
SL 56/0 (5.4)
ಭರ್ಜರಿ ಶಾಟ್
ಚಹಾಲ್ ಎಸೆತದಲ್ಲಿ ಸ್ವೀಪರ್ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ನಿಸ್ಸಂಕಾ
SL 49/0 (5.1)
18 ರನ್
ಅರ್ಷದೀಪ್ ಓವರ್ನಲ್ಲಿ 2 ಫೋರ್, 1 ಸಿಕ್ಸ್ನೊಂದಿಗೆ 18 ರನ್ ಕಲೆಹಾಕಿದ ಲಂಕಾ ಬ್ಯಾಟ್ಸ್ಮನ್ಗಳು
SL 45/0 (5)
ಫೋರ್ರ್ರ್
ಅರ್ಷದೀಪ್ ಎಸೆತದಲ್ಲಿ ಲಾಂಗ್ ಆಫ್ನತ್ತ ಫೋರ್ ಬಾರಿಸಿದ ನಿಸ್ಸಂಕಾ
SL 36/0 (4.3)
ರಾಕೆಟ್ ಹಿಟ್
ಅರ್ಷದೀಪ್ ಎಸೆತದಲ್ಲಿ ಓವರ್ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಕುಸಾಲ್ ಮೆಂಡಿಸ್
SL 31/0 (4.1)
4 ಓವರ್ ಮುಕ್ತಾಯ
SL 27/0 (4)
ಕ್ರೀಸ್ನಲ್ಲಿ ಮೆಂಡಿಸ್-ಸಿಸ್ಸಂಕಾ ಬ್ಯಾಟಿಂಗ್
ಭರ್ಜರಿ ಸಿಕ್ಸ್
ಪಾಂಡ್ಯ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ನಿಸ್ಸಂಕಾ
SL 23/0 (3.2)
ಆಕರ್ಷಕ ಬೌಂಡರಿ
ಭುವನೇಶ್ವರ್ ಎಸೆತದಲ್ಲಿ ಲಾಂಗ್ ಆಫ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ನಿಸ್ಸಂಕಾ
SL 16/0 (2.4)
ಶ್ರೀಲಂಕಾ ನಿಧಾನಗತಿಯ ಆರಂಭ
SL 9/0 (2)
ಕ್ರೀಸ್ನಲ್ಲಿ ಪಾತುಂ ನಿಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್
ಮೊದಲ ಓವರ್ ಮುಕ್ತಾಯ
ಮೊದಲ ಓವರ್ನಲ್ಲಿ ಕೇವಲ 1 ರನ್ ನೀಡಿದ ಭುವನೇಶ್ವರ್ ಕುಮಾರ್
SL 1/0 (1)
ಟಾರ್ಗೆಟ್ 174
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 72 ರನ್ ಬಾರಿಸಿದರು. ಈ ಭರ್ಜರಿ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿದೆ. ಈ ಮೂಲಕ ಶ್ರೀಲಂಕಾಗೆ 174 ರನ್ಗಳ ಟಾರ್ಗೆಟ್ ನೀಡಿದೆ.
IND 173/8 (20)
ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ
IND 173/8 (20)
ಬಿಗ್ ಹಿಟ್
ಕರುಣರತ್ನೆ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಶ್ವಿನ್
IND 171/8 (19.5)
8ನೇ ವಿಕೆಟ್ ಪತನ
ಕರುಣರತ್ನೆ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಭುವನೇಶ್ವರ್ ಕುಮಾರ್ (0)
IND 164/8 (19.3)
ಪಂತ್ ಔಟ್
ಮಧುಶಂಕ ಎಸೆತದಲ್ಲಿ ರಿಷಭ್ ಪಂತ್ ಭರ್ಜರಿ ಹೊಡೆತ…ಬೌಂಡರಿ ಲೈನ್ನಲ್ಲಿ ಕ್ಯಾಚ್…ಪಂತ್ (17) ಔಟ್
IND 158/7 (18.3)
ಬೌಲ್ಡ್
ಮಧುಶಂಕ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದ ದೀಪಕ್ ಹೂಡಾ (3)
IND 157/6 (18.1)
18 ಓವರ್ ಮುಕ್ತಾಯ
IND 157/5 (18)
ಕ್ರೀಸ್ನಲ್ಲಿ ಪಂತ್ ಹಾಗೂ ಹೂಡಾ ಬ್ಯಾಟಿಂಗ್
ಪಾಂಡ್ಯ ಔಟ್
ಶನಕ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಹಾರ್ದಿಕ್ ಪಾಂಡ್ಯ (17)
IND 149/5 (17.3)
ಸೂಪರ್ ಶಾಟ್
ಶನಕ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಪಂತ್
IND 127/4 (15)
ಪಂತ್ ಪವರ್
ಶನಕ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಪಂತ್
IND 123/4 (14.4)
4ನೇ ವಿಕೆಟ್ ಪತನ
ಶನಕ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಸೂರ್ಯಕುಮಾರ್ ಯಾದವ್ (34)
IND 119/4 (14.2)
14 ಓವರ್ ಮುಕ್ತಾಯ
IND 118/3 (14)
ಕ್ರೀಸ್ನಲ್ಲಿ ಸೂರ್ಯಕುಮಾರ್-ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್
ಹಿಟ್ಮ್ಯಾನ್ ಔಟ್
41 ಎಸೆತಗಳಲ್ಲಿ 72 ರನ್ ಬಾರಿಸಿದ ಕರುಣರತ್ನೆ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ರೋಹಿತ್ ಶರ್ಮಾ
IND 110/3 (12.2)
ಸಿಕ್ಸ್-ಫೋರ್-ಸಿಕ್ಸ್
ಹಸರಂಗರ ಒಂದೇ ಓವರ್ನಲ್ಲಿ 2 ಸಿಕ್ಸ್ ಹಾಗೂ 1 ಫೋರ್ ಬಾರಿಸಿ ಅಬ್ಬರಿಸಿದ ರೋಹಿತ್ ಶರ್ಮಾ
IND 109/2 (12)
ಲಾಂಗ್ ಆನ್ ಸಿಕ್ಸ್
ಹಸರಂಗ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
IND 97/2 (11.2)
ಸೂರ್ಯ-ಸಿಕ್ಸ್
ಮಧುಶಂಕ ಎಸೆತದಲ್ಲಿ ಥರ್ಡ್ಮ್ಯಾನ್ ಫೀಲ್ಡರ್ನತ್ತ ಭರ್ಜರಿ ಸಿ್ಕ್ಸ್ ಸಿಡಿಸಿದ ಸೂರ್ಯಕುಮಾರ್ ಯಾದವ್
IND 89/2 (10.5)
ಹಿಟ್ಮ್ಯಾನ್ ಹಾಫ್ ಸೆಂಚುರಿ
ಫರ್ನಾಂಡೊ ಎಸೆತದಲ್ಲಿ ಭರ್ಜರಿ ಫೋರ್ ಬಾರಿಸುವ ಮೂಲಕ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ
IND 77/2 (9.4)
ಭರ್ಜರಿ ಸಿಕ್ಸ್
ಫರ್ನಾಂಡೊ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
IND 71/2 (9.1)
ಅರ್ಧಶತಕದ ಜೊತೆಯಾಟ
38 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದ ರೋಹಿತ್ ಶರ್ಮಾ – ಸೂರ್ಯಕುಮಾರ್ ಯಾದವ್
IND 65/2 (9)
ಸೂರ್ಯ ಪ್ತತಾಪ
ಹಸರಂಗ ಎಸೆತದಲ್ಲಿ ಲಾಂಗ್ ಆನ್ನತ್ತ ಫೋರ್ ಬಾರಿಸಿದ ಸೂರ್ಯಕುಮಾರ್ ಯಾದವ್
IND 65/2 (9)
ಕ್ಯಾಚ್ ಡ್ರಾಪ್
ಹಸರಂಗ ಎಸೆತದಲ್ಲಿ ರೋಹಿತ್ ಶರ್ಮಾ ಕವರ್ಸ್ನತ್ತ ಭರ್ಜರಿ ಹೊಡೆತ…ದಸುನ್ ಶನಕ ಅದ್ಭುತ ಪ್ರಯತ್ನ.. ಕ್ಯಾಚ್ ಡ್ರಾಪ್
IND 59/2 (8.4)
ಪವರ್ಪ್ಲೇ ಮುಕ್ತಾಯ
IND 44/2 (6)
ಕ್ರೀಸ್ನಲ್ಲಿ ರೋಹಿತ್ ಶರ್ಮಾ-ಸೂರ್ಯಕುಮಾರ್ ಬ್ಯಾಟಿಂಗ್
ಹಿಟ್ಮ್ಯಾನ್
ತೀಕ್ಷಣ ಎಸೆತದಲ್ಲಿ ಡೀಪ್ ಸ್ಕ್ವೇರ್ ನತ್ತ ಭರ್ಜರಿ ಫೋರ್ ಬಾರಿಸಿದ ರೋಹಿತ್ ಶರ್ಮಾ
IND 41/2 (5.2)
5 ಓವರ್ ಮುಕ್ತಾಯ
IND 36/2 (5)
ಭರ್ಜರಿ ಸಿಕ್ಸ್
ಅಸಿತಾ ಎಸೆತದಲ್ಲಿ ಸ್ಕ್ವೇರ್ ಲೆಗ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ
ಮರು ಎಸೆತದಲ್ಲಿ ಮತ್ತೊಂದು ಫೋರ್
IND 32/2 (4.3)
IND 22/2 (4)
ಕ್ರೀಸ್ನಲ್ಲಿ ರೋಹಿತ್ ಶರ್ಮಾ-ಸೂರ್ಯಕುಮಾರ್ ಬ್ಯಾಟಿಂಗ್
ವೆಲ್ಕಂ ಬೌಂಡರಿ
ಚಾಮಿಕ ಎಸೆತದಲ್ಲಿ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
IND 19/2 (3.2)
3 ಓವರ್ ಮುಕ್ತಾಯ
IND 15/2 (3)
ಕೆಎಲ್ ರಾಹುಲ್-ವಿರಾಟ್ ಕೊಹ್ಲಿ ಔಟ್
ಕ್ರೀಸ್ನಲ್ಲಿ ರೋಹಿತ್ ಶರ್ಮಾ-ಸೂರ್ಯಕುಮಾರ್ ಬ್ಯಾಟಿಂಗ್
2ನೇ ವಿಕೆಟ್ ಪತನ
ಮಧುಶಂಕ ಎಸೆತದಲ್ಲಿ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್
ಶೂನ್ಯಕ್ಕೆ ಔಟಾದ ಕೊಹ್ಲಿ
IND 13/2 (2.4)
ಕೆಎಲ್ ರಾಹುಲ್ ಔಟ್
ತೀಕ್ಷಣ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಕೆಎಲ್ ರಾಹುಲ್ (6)
IND 11/1 (1.5)
ಮೊದಲ ಬೌಂಡರಿ
ತೀಕ್ಷಣ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಕೆಎಲ್ ರಾಹುಲ್
IND 11/0 (1.4)
ಲಂಕಾ ಉತ್ತಮ ಆರಂಭ
ಮೊದಲ ಓವರ್ ಮುಕ್ತಾಯ
IND 4/0 (1)
ಕ್ರೀಸ್ನಲ್ಲಿ ಕೆಎಲ್ ರಾಹುಲ್-ರೋಹಿತ್ ಶರ್ಮಾ ಬ್ಯಾಟಿಂಗ್
ಟೀಮ್ ಇಂಡಿಯಾ ಇನಿಂಗ್ಸ್ ಆರಂಭ
ಆರಂಭಿಕರು- ಕೆಎಲ್ ರಾಹುಲ್, ರೋಹಿತ್ ಶರ್ಮಾ
ಮೊದಲ ಓವರ್- ದಿಲ್ಶಾನ್ ಮಧುಶಂಕ
ರವಿ ಬಿಷ್ಣೋಯ್ ಬದಲು ಅಶ್ವಿನ್ಗೆ ಸ್ಥಾನ
One change in the #TeamIndia Playing XI.
R Ashwin comes in for Ravi Bishnoi.
Live – https://t.co/JFtIjXSBXC #INDvSL #AsiaCup2022 pic.twitter.com/yxZoLWYHTe
— BCCI (@BCCI) September 6, 2022
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್
ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ಟಾಸ್ ಗೆದ್ದ ಶ್ರೀಲಂಕಾ
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಟೀಮ್ ಇಂಡಿಯಾ ಆಟಗಾರರು ರೆಡಿ
Getting match ready ??#INDvSL #AsiaCup2022 pic.twitter.com/DkixAdZCAs
— BCCI (@BCCI) September 6, 2022
ಏಷ್ಯಾಕಪ್ ಅಂಕಿ ಅಂಶಗಳು
ಏಷ್ಯಾಕಪ್ನಲ್ಲಿ ಉಭಯ ತಂಡಗಳು ಸಮಬಲ ಹೊಂದಿದೆ. ಅಂದರೆ ಭಾರತ-ಶ್ರೀಲಂಕಾ ಏಷ್ಯಾಕಪ್ನಲ್ಲಿ ಇದುವರೆಗೆ 20 ಪಂದ್ಯಗಳನ್ನಾಡಿದೆ. ಈ ವೇಳೆ ಟೀಮ್ ಇಂಡಿಯಾ 10 ಬಾರಿ ಜಯ ಸಾಧಿಸಿದರೆ, ಶ್ರೀಲಂಕಾ ಕೂಡ ಭಾರತವನ್ನು 10 ಬಾರಿ ಮಣಿಸಿತ್ತು ಎಂಬುದು ವಿಶೇಷ. ಅದರಂತೆ ಏಷ್ಯಾಕಪ್ನಲ್ಲಿ ಉಭಯ ತಂಡಗಳ ಪ್ರದರ್ಶನ ಸಮಬಲದಿಂದ ಕೂಡಿದೆ.
ಟಿ20 ಅಂಕಿ ಅಂಶಗಳು:
ಭಾರತ-ಶ್ರೀಲಂಕಾ ಇದುವರೆಗೆ 25 ಟಿ20 ಪಂದ್ಯಗಳನ್ನಾಡಿದೆ. ಈ ವೇಳೆ ಶ್ರೀಲಂಕಾ ಗೆದ್ದಿರುವುದು ಕೇವಲ 7 ಬಾರಿ ಮಾತ್ರ. ಅಂದರೆ 17 ಬಾರಿ ಬಾರಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ರದ್ದಾಗಿತ್ತು.
ಕದನ ಕುತೂಹಲ
Hello and welcome to Dubai International Stadium for #TeamIndia's match against Sri Lanka. ?#INDvSL #AsiaCup2022 pic.twitter.com/7rZeC7ryEI
— BCCI (@BCCI) September 6, 2022
Published On - Sep 06,2022 6:01 PM