
ಲೆಜೆಂಡ್ಸ್ ಕ್ರಿಕೆಟ್ ಲೀಗ್ (LLC) ಎರಡನೇ ಸೀಸನ್ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಭಾರತದಲ್ಲೇ ಈ ಟೂರ್ನಿ ನಡೆಯಲಿದ್ದು, ಸೆಪ್ಟೆಂಬರ್ 16 ರಿಂದ ಶುರುವಾಗಲಿದೆ. ಹಾಗೆಯೇ ಮತ್ತು ಅಕ್ಟೋಬರ್ 8 ರಂದು ಫೈನಲ್ ಪಂದ್ಯ ನಡೆಯಲಿದೆ. ಮೂರು ವಾರಗಳ ಕಾಲ ನಡೆಯಲಿರುವ ಈ ಟೂರ್ನಿಗಾಗಿ ದೇಶದ 5 ನಗರಗಳ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ.
ಈ ಪಟ್ಟಿಯಲ್ಲಿ ಕೋಲ್ಕತ್ತಾ, ನವದೆಹಲಿ, ಕಟಕ್, ಲಕ್ನೋ ಮತ್ತು ಜೋಧ್‌ಪುರ ಸೇರಿವೆ. ಇನ್ನು ಪ್ಲೇಆಫ್ ನಡೆಯಲಿರುವ ಸ್ಟೇಡಿಯಂ/ನಗರವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.
ಮೊದಲ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವು ವರ್ಲ್ಡ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಭಾರತ ದಿಗ್ಗಜರ ತಂಡದ ನಾಯಕರಾಗಿ ಸೌರವ್ ಗಂಗೂಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಜೋಧ್‌ಪುರ ಮತ್ತು ಲಕ್ನೋನಲ್ಲಿ 2 ಪಂದ್ಯಗಳು ನಡೆದರೆ, ಉಳಿದ ಎಲ್ಲಾ ಮೈದಾನಗಳಲ್ಲಿ ತಲಾ ಮೂರು ಪಂದ್ಯಗಳು ಆಡಲಾಗುತ್ತದೆ.
ನಾವು ಪಂದ್ಯ ಆಯೋಜಿಸುವುದನ್ನು ವೇಳಾಪಟ್ಟಿ ಪ್ರಕಟಣೆಯೊಂದಿಗೆ ಅಧಿಕೃತಗೊಳಿಸಿದ್ದೇವೆ. ಈ ಬಾರಿ ಕೂಡ 3 ತಂಡಗಳಲ್ಲಿ 10 ರಾಷ್ಟ್ರಗಳ ಲೆಜೆಂಡರಿ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಸಹ-ಸಂಸ್ಥಾಪಕ ಮತ್ತು ಸಿಇಒ ರಮಣ್ ರಹೇಜಾ ತಿಳಿಸಿದ್ದಾರೆ.
ಅದರಂತೆ ಈ ಬಾರಿ ಕೂಡ ಇಂಡಿಯಾ ಲೆಜೆಂಡ್ಸ್, ಏಷ್ಯಾ ಲೆಜೆಂಡ್ಸ್ ಹಾಗೂ ವರ್ಲ್ಡ್ ಜೈಂಟ್ಸ್ ತಂಡಗಳು ಕಣಕ್ಕಿಳಿಯಲಿದೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ವೇಳಾಪಟ್ಟಿ:
ಇಂಡಿಯಾ ಲೆಜೆಂಡ್ಸ್ (ಭಾರತ ಮಹಾರಾಜಾಸ್) ತಂಡ ಹೀಗಿದೆ: ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಎಸ್. ಬದ್ರಿನಾಥ್, ಪ್ರಗ್ಯಾನ್ ಓಜಾ, ಪಾರ್ಥಿವ್ ಪಟೇಲ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಆರ್‌ಪಿ ಸಿಂಗ್, ಅಜಯ್ ಜಡೇಜಾ, ಜೋಗಿಂದರ್ ಶರ್ಮಾ, ರಿತೀಂದರ್ ಸಿಂಗ್ ಸೋಧಿ ಮತ್ತು ಇರ್ಫಾನ್ ಪಠಾಣ್.