
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡುವುದು ಅದ್ಭುತ ಕ್ಯಾಚ್ಗಳು. ಮೊನ್ನೆಯಷ್ಟೆ ಎವಿನ್ ಲೆವಿಸ್ ಹಿಡಿದ ರೋಚಕ ಕ್ಯಾಚ್ ಲಖನೌ ಸೂಪರ್ ಜೇಂಟ್ಸ್ ತಂಡವನ್ನು ಪ್ಲೇ ಆಫ್ಗೆ ಪ್ರವೇಶಿಸುವಂತೆ ಮಾಡಿತು. ಈ ಕ್ಯಾಚ್ ಮರೆಯುವ ಮುನ್ನವೇ ಲಿಯಾಮ್ ಲಿವಿಂಗ್ಸ್ಟೋನ್ (Liam Livingstone) ಮತ್ತೊಂದು ಸ್ಟನ್ನಿಂಗ್ ಕ್ಯಾಚ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದು ನಡೆದಿದ್ದು ಸನ್ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ (SRH vs PBKS) ನಡುವಣ ಪಂದ್ಯದಲ್ಲಿ. 11ನೇ ಓವರ್ನ ಹರ್ಪ್ರೀತ್ ಬ್ರಾರ್ ಬೌಲಿಂಗ್ನಲ್ಲಿ ಎಸ್ಆರ್ಹೆಚ್ ಬ್ಯಾಟರ್ ಅಭಿಷೇಕ್ ಶರ್ಮಾ ಸಿಕ್ಸ್ಗೆಂದು ಚೆಂಡನ್ನು ಲಾಂಗ್ ಆನ್ನಲ್ಲಿ ಅಟ್ಟಿದರು. ಇದನ್ನು ಗಮನಿಸಿದ ಲಿವಿಂಗ್ಸ್ಟೋನ್ ಓಡಿ ಬಂದು ಸಿಕ್ಸ್ಗೆಂದು ಹೋಗುತ್ತಿದ್ದ ಚೆಂಡನ್ನು ಬೌಂಡರಿ ಲೈನ್ ಬಳಿಕ ಮೇಲಕ್ಕೆ ಜಿಗಿದು ಅದ್ಭುತವಾಗಿ ಹಿಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ಮೊದಲು ಬ್ಯಾಟ್ ಮಾಡಿದ ಹೈದರಾಬಾದ್, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಪ್ರಿಯಮ್ ಗಾರ್ಗ್(4) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮ(43) ತಂಡಕ್ಕೆ ಆಸರೆಯಾದರು. ಉಳಿದಂತೆ ರಾಹುಲ್ ತ್ರಿಪಾಠಿ(20), ಐಡೆನ್ ಮಾರ್ಕ್ರಂ(21) ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವಿದರು. ನಂತರ ಬಂದ ನಿಕೋಲಸ್ ಪೂರನ್(5) ಕೂಡ ತಂಡಕ್ಕೆ ನೆರವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್(25) ಹಾಗೂ ರೊಮಾರಿಯೊ ಶೆಫರ್ಡ್ (26*) ಉಪಯುಕ್ತ ರನ್ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಉಳಿದಂತೆ ಸುಚಿತ್(0), ಭುವನೇಶ್ವರ್(1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಪರಿಣಾಮ ಹೈದ್ರಾಬಾದ್ 157 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಪಂಜಾಬ್ ಕಿಂಗ್ಸ್ ಪರ ಬೌಲರ್ಗಳು ಸಂಘಟಿತ ಪ್ರದರ್ಶನ ನೀಡಿದರು. ಪ್ರಮುಖವಾಗಿ ಹರ್ಪ್ರೀತ್ ಬ್ರಾರ್(3/26) ಹಾಗೂ ನ್ಯಾಥನ್ ಎಲೀಸ್(3/40) ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದರೆ, ಕಗೀಸೋ ರಬಾಡ 1 ವಿಕೆಟ್ ಪಡೆದರು.
IND vs SA: ಟಿ20 ಸರಣಿಗೆ ಆಯ್ಕೆಯಾದ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಮಾಡಿದ ಟ್ವೀಟ್ ಏನು ನೋಡಿ
158 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ 16ನೇ ಓವರ್ನ ಮೊದಲ ಎಸೆತದಲ್ಲೇ ದಡ ಸೇರಿತು. ಆರಂಭಿಕ ಶಿಖರ್ ಧವನ್ ಮತ್ತು ಲಿಯಮ್ ಲಿವಿಂಗ್ಸ್ಟೋನ್ ಅವರ ಉತ್ತಮ ಆಟದಿಂದಾಗಿ ಪಂಜಾಬ್ ತಂಡವು 15.1 ಓವರ್ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 160 ರನ್ ಗಳಿಸಿ ಗೆಲುವು ದಾಖಲಿಸಿತು. ಧವನ್ 32 ಎಸೆತಗಳಿಂದ 39 ರನ್ ಹೊಡೆದರೆ ಲಿವಿಂಗ್ಸ್ಟೋನ್ ಭರ್ಜರಿಯಾಗಿ ಆಡಿದರು. ಕೇವಲ 22 ಎಸೆತ ಎದುರಿಸಿದ ಅವರು 2 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ನೆರವಿನಿಂದ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಈಗಾಗಲೇ ಪ್ಲೇ ಆಫ್ ಹಂತಕ್ಕೆ 4 ತಂಡಗಳು ಪ್ರವೇಶ ಪಡೆದಿರುವುದರಿಂದ ರವಿವಾರದ ಪಂಜಾಬ್-ಹೈದರಾಬಾದ್ ನಡುವಿನ ಮುಖಾಮುಖಿ ಕೇವಲ ಔಪಚಾರಿಕ ಪಂದ್ಯವಾಗಿತ್ತಷ್ಟೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:19 am, Mon, 23 May 22