Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಪೈರ್‌ಗೆ ಕೊಲೆ ಬೆದರಿಕೆ ಹಾಕಿದ ಕ್ಲಬ್ ಕ್ರಿಕೆಟಿಗನಿಗೆ ಆಜೀವ ನಿಷೇಧ!

ಹೈಸ್ಕೂಲ್ ಓಲ್ಡ್ ಬಾಯ್ಸ್ ಕ್ರಿಕೆಟ್ ಕ್ಲಬ್ ವಿರುದ್ಧದ ಪಂದ್ಯದ ಬಳಿಕ ತಿಮೋತಿ ವೈರ್ ಕೊನೆಯಲ್ಲಿ ಅಂಪೈರ್‌ಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಅಂಪೈರ್‌ಗೆ ಕೊಲೆ ಬೆದರಿಕೆ ಹಾಕಿದ ಕ್ಲಬ್ ಕ್ರಿಕೆಟಿಗನಿಗೆ ಆಜೀವ ನಿಷೇಧ!
ನ್ಯೂಜಿಲೆಂಡ್ ಕ್ಲಬ್ ಕ್ರಿಕೆಟಿಗ
Follow us
TV9 Web
| Updated By: ಪೃಥ್ವಿಶಂಕರ

Updated on: Dec 17, 2021 | 4:49 PM

ಕ್ರಿಕೆಟ್ ಸಜ್ಜನರ ಆಟ. ಆದರೆ, ಈ ಆಟದಲ್ಲಿಯೂ ಕೆಲವೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ, ಅದು ಅದರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತದೆ. ಇಂತಹದೊಂದು ಘಟನೆ ನ್ಯೂಜಿಲೆಂಡ್‌ನಲ್ಲಿ ನಡೆದಿದೆ. ವಾಸ್ತವವಾಗಿ, ಅಲ್ಲಿನ ಕ್ರಿಕೆಟಿಗನೊಬ್ಬ ಅಂಪೈರ್‌ಗೆ ಕೊಲೆ ಬೆದರಿಕೆ ಹಾಕಿದ್ದಾನೆ, ಅದಕ್ಕೆ ಪ್ರತಿಯಾಗಿ ಅವನು ದೊಡ್ಡ ಶಿಕ್ಷೆಯನ್ನು ಎದುರಿಸಬೇಕಾಗಿದೆ. ಈ ಘಟನೆಯು ಕ್ಲಬ್ ಮಟ್ಟದ ಕ್ರಿಕೆಟಿಗನಿಗೆ ಸಂಬಂಧಿಸಿದೆ. ಡಿಸೆಂಬರ್ 4 ರಂದು, ನ್ಯೂಜಿಲೆಂಡ್‌ನ ಗಿಸ್ಬೋರ್ನ್ ನಗರದಲ್ಲಿ ನಡೆದ ಪಂದ್ಯದ ನಂತರ, ಪಾವರ್ಟಿ ಬೇ ಕ್ರಿಕೆಟ್ ಅಸೋಸಿಯೇಷನ್ ​​ಆಟಗಾರ ತಿಮೋತಿ ವೈರ್‌ನ ಮೇಲೆ ಆಜೀವ ನಿಷೇಧವನ್ನು ವಿಧಿಸಿತು. ಈ ಆಟಗಾರ ಅಂಪೈರ್‌ಗೆ ಜೀವ ಬೆದರಿಕೆ ಹಾಕಿದ್ದು, ಇದು ಕ್ರಿಕೆಟ್ ನೀತಿ ಸಂಹಿತೆಯ 4ನೇ ಹಂತದ ಉಲ್ಲಂಘನೆಯಾಗಿದೆ.

ಹೈಸ್ಕೂಲ್ ಓಲ್ಡ್ ಬಾಯ್ಸ್ ಕ್ರಿಕೆಟ್ ಕ್ಲಬ್ ವಿರುದ್ಧದ ಪಂದ್ಯದ ಬಳಿಕ ತಿಮೋತಿ ವೈರ್ ಕೊನೆಯಲ್ಲಿ ಅಂಪೈರ್‌ಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಆಟಗಾರನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ನಡೆದಿಲ್ಲ. ಈ ಬಗ್ಗೆ ನಿರ್ಧರಿಸಿದ ಸಮಿತಿ ಸಾಕ್ಷ್ಯಾಧಾರಗಳ ಆಧಾರದಲ್ಲಿ ಜೀವಾವಧಿ ನಿಷೇಧದಂತಹ ದೊಡ್ಡ ಶಿಕ್ಷೆ ನೀಡಿದೆ. ಆಟಗಾರನು ಹಂತ 4 ರ ತಪ್ಪಿತಸ್ಥರೆಂದು ಕಂಡುಬಂದ ನಂತರ, ಅವರ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವ ಯಾವುದೇ ಅವಕಾಶವಿಲ್ಲ. ಪಾವರ್ಟಿ ಬೇ ಕ್ರಿಕೆಟ್ ಅಸೋಸಿಯೇಷನ್ ​​ಎರಡು ಬಾರಿ ನಿಯಮಗಳ ಉಲ್ಲಂಘನೆಗಾಗಿ ತಿಮೋತಿ ವೈರ್ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ ಕ್ಲಬ್ ಅಧ್ಯಕ್ಷ ಐಸಾಕ್ ಹ್ಯೂಸ್, ಇಂತಹ ಘಟನೆ ಖಂಡನೀಯ ಹೀಗಾಗಿ ಅಂತಹವರಿಗೆ ಕ್ರಿಕೆಟ್‌ನಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ.

NZC ಗೆ ಆಶ್ಚರ್ಯ ಪ್ರಕರಣದ ಗಂಭೀರತೆಯನ್ನು ಮನಗಂಡ ಸ್ವತಂತ್ರ ಸಮಿತಿ ಇತ್ಯರ್ಥಪಡಿಸಿದ್ದು, ಸಮಗ್ರ ತನಿಖೆ ನಡೆಸಿದ್ದಲ್ಲದೆ ಸಾಕ್ಷಿಗಳ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಈ ಬಗ್ಗೆ ಇನ್ನೂ ಏನನ್ನೂ ಹೇಳುವ ಸ್ಥಿತಿಯಲ್ಲಿ ಮಂಡಳಿ ಇಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮ್ಯಾನೇಜರ್ ರಿಚರ್ಡ್ ಬುಕ್ ಹೇಳಿದ್ದಾರೆ. ವಾಸ್ತವವಾಗಿ, ಆಟಗಾರರ ಮೇಲಿನ ನಿರಂತರ ನಿಷೇಧದಿಂದ ಅವರು ಆಘಾತಕ್ಕೊಳಗಾಗಿದ್ದಾರೆ. ಇದಕ್ಕೂ ಮೊದಲು ಸೆಪ್ಟೆಂಬರ್‌ನಲ್ಲಿ ಇಬ್ಬರು ಎದುರಾಳಿಗಳಿಗೆ ಚಿತ್ರಹಿಂಸೆ ನೀಡಿದ ಕ್ರಿಕೆಟಿಗನಿಗೆ ಮೂರೂವರೆ ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. ಈ ನಿಷೇಧವನ್ನು ಅತ್ಯಂತ ಖಂಡನೀಯ ಎಂದು ಒಟಾಗೊ ಕ್ರಿಕೆಟ್ ಸಂಸ್ಥೆ ಬಣ್ಣಿಸಿದೆ.

Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು