Asia Cup
2025 ರ ಏಷ್ಯಾಕಪ್ (Asia Cup 2025) ಸೆಪ್ಟೆಂಬರ್ 9 ರಿಂದ ಆರಂಭವಾಗಲಿದೆ. ಇದು ಏಷ್ಯಾಕಪ್‌ನ 17 ನೇ ಆವೃತ್ತಿಯಾಗಲಿದ್ದು, ಈ ಟೂರ್ನಿ ಬಿಸಿಸಿಐ ಆತಿಥ್ಯದಲ್ಲಿ ಯುಎಇಯಲ್ಲಿ ನಡೆಯಲಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯುವುದರಿಂದ ಈ ಬಾರಿ ಏಷ್ಯಾಕಪ್ ಅನ್ನು ಟಿ20 ಮಾದರಿಯಲ್ಲಿ ನಡೆಸಲಾಗುತ್ತಿದೆ. ಈ ಪಂದ್ಯಾವಳಿಗೆ ಪಾಕ್ ತಂಡವನ್ನು ಪ್ರಕಟಿಸಲಾಗಿದ್ದು, ಉಳಿದ ತಂಡಗಳನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಆದರೆ ಅದಕ್ಕೂ ಮುನ್ನ ಇದುವರೆಗೆ ನಡೆದಿರುವ ಏಷ್ಯಾಕಪ್‌ನ ಪ್ರತಿ ಆವೃತ್ತಿಗಳಲ್ಲಿ ಯಾವ ಬ್ಯಾಟ್ಸ್‌ಮನ್ ಹೆಚ್ಚು ರನ್ ಗಳಿಸಿದ್ದಾರೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
- ಮೊದಲ ಏಷ್ಯಾಕಪ್ ಆವೃತ್ತಿ 1984 ರಲ್ಲಿ ನಡೆಯಿತು. ಈ ಪಂದ್ಯಾವಳಿಯಲ್ಲಿ ಭಾರತದ ಸುರೀಂದರ್ ಖನ್ನಾ 107 ರನ್ ಬಾರಿಸಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದರು.
- ಎರಡನೇ ಆವೃತ್ತಿಯ ಏಷ್ಯಾಕಪ್ 1986 ರಲ್ಲಿ ನಡೆಯಿತು. ಈ ಆವೃತ್ತಿಯಲ್ಲಿ ಶ್ರೀಲಂಕಾದ ಅರ್ಜುನ ರಣತುಂಗ ಒಟ್ಟು 105 ರನ್ ಬಾರಿಸಿದ್ದರು.
- 1988 ರಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ಪಾಕಿಸ್ತಾನದ ಇಜಾಜ್ ಅಹ್ಮದ್ ಒಟ್ಟು 192 ರನ್ ಗಳಿಸಿದ್ದರು.
- 1990- 91 ರ ನಾಲ್ಕನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ಶ್ರೀಲಂಕಾದ ಅರ್ಜುನ ರಣತುಂಗ ಒಟ್ಟು 166 ರನ್ ಬಾರಿಸಿದ್ದರು.
- 1995ರಲ್ಲಿ ನಡೆದಿದ್ದ ಐದನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ಭಾರತದ ಸಚಿನ್ ತೆಂಡೂಲ್ಕರ್ 205 ರನ್ ಸಿಡಿಸಿದ್ದರು.
- 1997 ರಲ್ಲಿ ನಡೆದಿದ್ದ 6ನೇ ಆವೃತ್ತಿಯ ಏಷ್ಯಾಕಪ್ನಲ್ಲೂ ಶ್ರೀಲಂಕಾದ ಅನುಭವಿ ಬ್ಯಾಟ್ಸ್‌ಮನ್ ಅರ್ಜುನ ರಣತುಂಗ 272 ರನ್ ಸಿಡಿಸಿದ್ದರು.
- 2000ನೇ ಇಸವಿಯಲ್ಲಿ ನಡೆದಿದ್ದ ಏಳನೇ ಆವೃತ್ತಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ 295 ರನ್ ಕಲೆಹಾಕಿದ್ದರು.
- 2004 ರಲ್ಲಿ ನಡೆದಿದ್ದ 8 ನೇ ಆವೃತ್ತಿಯಲ್ಲಿ ಪಾಕಿಸ್ತಾನದ ಶೋಯೆಬ್ ಮಲಿಕ್ 316 ರನ್ ಗಳಿಸಿದ್ರು.
- ಶ್ರೀಲಂಕಾದ ಶ್ರೇಷ್ಠ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ 2008 ರಲ್ಲಿ ನಡೆದಿದ್ದ ಒಂಬತ್ತನೇ ಆವೃತ್ತಿಯಲ್ಲಿ 378 ರನ್ ಬಾರಿಸಿದ್ದರು.
- ಪಾಕಿಸ್ತಾನದ ಶಾಹಿದ್ ಅಫ್ರಿದಿ 2010 ರಲ್ಲಿ ನಡೆದಿದ್ದ ಹತ್ತನೇ ಆವೃತ್ತಿಯಲ್ಲಿ ಒಟ್ಟು 265 ರನ್ ಗಳಿಸಿದ್ದರು.
- 2012 ರಲ್ಲಿ ನಡೆದಿದ್ದ 11ನೇ ಆವೃತ್ತಿಯಲ್ಲಿ ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ 357 ರನ್ ಸಿಡಿಸಿದ್ದರು.
- 2014 ರಲ್ಲಿ ನಡೆದಿದ್ದ 12ನೇ ಆವೃತ್ತಿಯಲ್ಲಿ ಶ್ರೀಲಂಕಾದ ಲಹಿರು ತಿರಿಮನೆ 279 ರನ್ ಗಳಿಸಿದ್ದರು.
- 2016 ರಲ್ಲಿ ನಡೆದಿದ್ದ 13ನೇ ಆವೃತ್ತಿಯಲ್ಲಿ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಸಬ್ಬೀರ್ ರೆಹಮಾನ್ 176 ರನ್ ಬಾರಿಸಿದ್ದರು.
- 2014 ರಲ್ಲಿ ನಡೆದಿದ್ದ 14 ನೇ ಆವೃತ್ತಿಯಲ್ಲಿ ಭಾರತದ ಬ್ಯಾಟ್ಸ್‌ಮನ್ ಶಿಖರ್ ಧವನ್ 342 ರನ್ ಗಳಿಸಿದ್ದರು.
- 2022 ರಲ್ಲಿ ನಡೆದಿದ್ದ 15ನೇ ಆವೃತ್ತಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಒಟ್ಟು 281 ರನ್ ಸಿಡಿಸಿದ್ದರು.
- 2023 ರಲ್ಲಿ ನಡೆದಿದ್ದ 16 ನೇ ಆವೃತ್ತಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಒಟ್ಟು 302 ರನ್ ಗಳಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ