ರಶೀದ್ ಖಾನ್, ಸ್ಯಾಮ್ ಕರನ್ ಭರ್ಜರಿ ಆಟಕ್ಕೆ ತಲೆಬಾಗಿದ ಸದರ್ನ್ ಬ್ರೇವ್
134 ರನ್ಗಳ ಗುರಿ ಬೆನ್ನತ್ತಿದ ಓವಲ್ ಇನ್ವಿನ್ಸಿಬಲ್ಸ್ ಪರ ಜೋರ್ಡನ್ ಕಾಕ್ಸ್ 37 ಎಸೆತಗಳಲ್ಲಿ 56 ರನ್ ಚಚ್ಚಿದರು. ಇನ್ನು ಸ್ಯಾಮ್ ಕರನ್ 32 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 50 ರನ್ ಬಾರಿಸಿದರು. ಈ ಮೂಲಕ ಓವಲ್ ಇನ್ವಿನ್ಸಿಬಲ್ಸ್ ತಂಡವು ಕೇವಲ 89 ಎಸೆತಗಳಲ್ಲಿ 134 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನ 19ನೇ ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಸೌತಂಪ್ಟನ್ನ ದಿ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆದ ಸದರ್ನ್ ಬ್ರೇವ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಯಾಮ್ ಬಿಲ್ಲಿಂಗ್ಸ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸದರ್ನ್ ಬ್ರೇವ್ ತಂಡವು ಉತ್ತಮ ಆರಂಭ ಪಡೆಯಲು ಸಾಧ್ಯವಾಗಿರಲಿಲ್ಲ.
ಕೇವಲ 42 ರನ್ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ 5 ವಿಕೆಟ್ ಕಳೆದುಕೊಂಡಿತು. ಆ ಬಳಿಕ ಬಂದ ಕಾರ್ಟ್ವೈಟ್ 43 ರನ್ಗಳಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಇತ್ತ ಸ್ಪಿನ್ ಮೋಡಿಯೊಂದಿಗೆ ಎದುರಾಳಿ ಬ್ಯಾಟರ್ಗಳನ್ನು ಕಾಡಿದ ರಶೀದ್ ಖಾನ್ 20 ಎಸೆತಗಳಲ್ಲಿ ಕೇವಲ 20 ರನ್ ನೀಡಿ 3 ವಿಕೆಟ್ ಕಬಳಿಸಿದರು. ರಶೀದ್ ಖಾನ್ಗೆ ಉತ್ತಮ ಸಾಥ್ ನೀಡಿದ ಸ್ಯಾಮ್ ಕರನ್ ಸಹ 3 ವಿಕೆಟ್ ಪಡೆದು ಮಿಂಚಿದರು. ಪರಿಣಾಮ ಸದರ್ನ್ ಬ್ರೇವ್ ತಂಡವು 98 ಎಸೆತಗಳಲ್ಲಿ 133 ರನ್ಗಳಿಸಿ ಆಲೌಟ್ ಆಯಿತು.