ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ 45 ನೇ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 125 ರನ್ ಗಳಿಸಿ, ನಂತರ ಮಳೆ ಸುರಿಯಲಾರಂಭಿಸಿತು. ಉಭಯ ತಂಡಗಳು ಬಹಳ ಹೊತ್ತು ಕಾದರೂ ಮಳೆ ನಿಲ್ಲದ ಕಾರಣ ಪಂದ್ಯ ರದ್ದುಪಡಿಸಲು ನಿರ್ಧರಿಸಲಾಯಿತು.
4ನೇ ಓವರ್ ಬೌಲ್ ಮಾಡಿದ ಹರ್ಷದ್ ಕೊಂಚ ದುಬಾರಿಯಾದರು. ಈ ಓವರ್ನಲ್ಲಿ 12 ರನ್ ಬಂದವು. 5ನೇ ಎಸೆತವನ್ನು ಶಾರ್ಟ್ ಸಿಕ್ಸರ್ಗಟ್ಟಿದರೆ, ಕೊನೆಯ ಎಸೆತವನ್ನು ಬೌಂಡರಿ ಬಾರಿಸಿದರು.
ಪಂದ್ಯ ಆರಂಭಕ್ಕೂ ಮುನ್ನ ಸಾಕಷ್ಟು ಕಾಟ ನೀಡಿದ್ದ ಮಳೆರಾಯ ಇದೀಗ ಮೊದಲ ಇನ್ನಿಂಗ್ಸ್ ಮುಗಿಯುವ ಮುನ್ನವೇ ಮತ್ತೊಮ್ಮೆ ಎಂಟ್ರಿಕೊಟ್ಟಿದ್ದಾನೆ. ಹೀಗಾಗಿ ಆಟ ತಾತ್ಕಾಲಿಕ ಸ್ಥಗಿತಗೊಂಡಿದೆ.
19ನೇ ಓವರ್ನ 2ನೇ ಎಸೆತದಲ್ಲಿ ಬೌಂಡರಿ ಹಾಗೂ 3ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಬದೋನಿ ತಮ್ಮ ಅರ್ಧಶತಕ ಪೂರೈಸಿದರು. ಲಕ್ನೋ ಇನ್ನಿಂಗ್ಸ್ ತತ್ತರಿಸಿದಾಗ ಬಂದ ಈ ಇನ್ನಿಂಗ್ಸ್ಗೆ ತಂಡಕ್ಕೆ ಮಹತ್ವದ್ದಾಗಿದೆ.
18ನೇ ಓವರ್ನ ನಾಲ್ಕನೇ ಎಸೆತದಲ್ಲಿ ಪೂರನ್ ಕ್ಯಾಚಿತ್ತು ಔಟಾದರು. 6ನೇ ವಿಕೆಟ್ ಪತನ
ತೀಕ್ಷಣ ಬೌಲ್ ಮಾಡಿದ 17ನೇ ಓವರ್ನಲ್ಲಿ 15 ರನ್ ಬಂದವು. ಈ ಓವರ್ನ ಮೊದಲ ಎಸೆತದಲ್ಲಿ ಬಧೋನಿ ಸಿಕ್ಸರ್ ಹೊಡೆದರೆ, 3ನೇ ಎಸೆತದಲ್ಲಿ ಬೌಂಡರಿ ಹೊಡೆದರು.
15ನೇ ಓವರ್ನ 2ನೇ ಎಸೆತದಲ್ಲಿ ಸಿಕ್ಸರ್ ಹೊಡೆದ ಬದೋನಿ, ಲಕ್ನೋ ತಂಡದ ಬೌಂಡರಿ ಬರ ನೀಗಿಸಿದ್ದಾರೆ. 15 ಓವರ್‌ಗಳ ನಂತರ ಲಕ್ನೋ 73/5
ಲಕ್ನೋ ಸೂಪರ್ ಜೈಂಟ್ಸ್ ಸ್ಕೋರ್ 12 ಓವರ್‌ಗಳ ನಂತರ 52/5. ನಿಕೋಲಸ್ ಪೂರನ್ 16 ಎಸೆತಗಳಲ್ಲಿ 9 ರನ್ ಮತ್ತು ಆಯುಷ್ ಬದೋನಿ 7 ಎಸೆತಗಳಲ್ಲಿ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಸ್ಕೋರ್ ಐದು ವಿಕೆಟ್ ನಷ್ಟಕ್ಕೆ 50 ರನ್ ದಾಟಿದೆ. ನಿಕೋಲಸ್ ಪೂರನ್ ಮತ್ತು ಆಯುಷ್ ಬದೋನಿ ಕ್ರೀಸ್‌ನಲ್ಲಿದ್ದಾರೆ.
ಲಕ್ನೋದ ಎಲ್ಲಾ ಐದು ವಿಕೆಟ್‌ಗಳನ್ನು ಸ್ಪಿನ್ ಬೌಲರ್‌ಗಳು ಕಬಳಿಸಿದ್ದಾರೆ. ತೀಕ್ಚಣ ಮತ್ತು ಮೊಯಿನ್ ಅಲಿ ತಲಾ ಎರಡು ವಿಕೆಟ್ ಪಡೆದರೆ, ಜಡೇಜಾ ಒಂದು ವಿಕೆಟ್ ಪಡೆದರು.
10ನೇ ಓವರ್ನ ನಾಲ್ಕನೇ ಎಸೆತದಲ್ಲಿ ಕರಣ್ ಶರ್ಮಾ ನೇರವಾಗಿ ಬೌಲರ್ ಕೈಗೆ ಕ್ಯಾಚಿತ್ತು ಔಟಾದರು. 10 ಓವರ್ ಅಂತ್ಯಕ್ಕೆ ಲಕ್ನೋ 44/5
8 ಓವರ್‌ಗಳ ನಂತರ ಲಕ್ನೋ ಸೂಪರ್ ಜೈಂಟ್ಸ್ ಸ್ಕೋರ್ 38/4.ಪೂರನ್ 4 ಎಸೆತಗಳಲ್ಲಿ 2 ರನ್ ಹಾಗೂ ಕರಣ್ 11 ಎಸೆತಗಳಲ್ಲಿ 6 ರನ್ ಗಳಿಸಿ ಕ್ರೀಸ್ ನಲ್ಲಿ ಆಡುತ್ತಿದ್ದಾರೆ.
ಜಡೇಜಾ ಬೌಲ್ ಮಾಡಿದ 7ನೇ ಓವರ್ನ 5ನೇ ಎಸೆತದಲ್ಲಿ ಸ್ಟೋಯ್ನಿಸ್ ಕ್ಲಿನ್ ಬೌಲ್ಡ್ ಆದರು.
ತೀಕ್ಷಣ ಬೌಲ್ ಮಾಡಿದ 6ನೇ ಓವರ್ನಲ್ಲಿ 2 ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿದವು. 4ನೇ ಎಸೆತದಲ್ಲಿ ಮನನ್ ಬೌಲ್ಡ್ ಆದರೆ, ಆ ಬಳಿಕ ಬಂದ ಕೃನಾಲ್ ಫಸ್ಟ್ ಸ್ಲಿಪ್ನಲ್ಲಿ ಕ್ಯಾಚಿತ್ತು ಔಟಾದರು.
ಪವರ್ ಪ್ಲೇ ಅಂತ್ಯಕ್ಕೆ 31/3
18 ರನ್ ಗಳಿಸುವಷ್ಟರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮೊದಲ ವಿಕೆಟ್ ಪತನಗೊಂಡಿತು. ಕೈಲ್ ಮೇಯರ್ಸ್ 17 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ಇನ್ನು ಮನನ್ ವೋಹ್ರಾ ಅವರೊಂದಿಗೆ ಕರಣ್ ಶರ್ಮಾ ಕ್ರೀಸ್‌ನಲ್ಲಿದ್ದಾರೆ. 5 ಓವರ್‌ಗಳ ನಂತರ ಲಕ್ನೋ ಸ್ಕೋರ್ ಒಂದು ವಿಕೆಟ್‌ಗೆ 25 ರನ್ ಆಗಿದೆ.
ಲಕ್ನೋ ಮೊದಲ ವಿಕೆಟ್ ಪತನ. ಅಲಿ ಬೌಲ್ ಮಾಡಿದ 4ನೇ ಓವರ್ನ 4ನೇ ಎಸೆತದಲ್ಲಿ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
3ನೇ ಓವರ್ ಬೌಲ್ ಮಾಡಿದ ದೀಪಕ್ 10 ರನ್ ಬಿಟ್ಟುಕೊಟ್ಟರು. ಈ ಓವರ್ನ 4ನೇ ಎಸೆತವನ್ನು ಮಿಡ್ ಆಫ್ ತಲೆಯ ಮೇಲೆ ಬೌಂಡರಿ ಹೊಡೆದರು.
ಲಕ್ನೋ ಸೂಪರ್ ಜೈಂಟ್ಸ್ ಆಟಗಾರರಾದ ಮನನ್ ವೋಹ್ರಾ ಮತ್ತು ಕೈಲ್ ಮೇಯರ್ಸ್ ಕ್ರೀಸ್‌ನಲ್ಲಿದ್ದಾರೆ. ದೀಪಕ್ ಚಹಾರ್ ಮೊದಲು ಓವರ್ ಬೌಲಿಂಗ್ ಮಾಡಿದರು. ಓವರ್ನ ಕೊನೆಯ ಎಸೆತದಲ್ಲಿ ಮೇಯರ್ಸ್ ಬೌಂಡರಿ ಹೊಡೆದರು.
ಕೃನಾಲ್ ಪಾಂಡ್ಯ, ಮನನ್ ವೋಹ್ರಾ, ಕೈಲ್ ಮೈಯರ್ಸ್, ಕರಣ್ ಶರ್ಮಾ, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃಷ್ಣಪ್ಪ ಗೌತಮ್, ನವೀನ್ ಉಲ್ ಹಕ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್.
ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ದೀಪಕ್ ಚಹಾರ್, ಮತಿಶ ಪತಿರಾನ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
ಟಾಸ್ ಗೆದ್ದ ಚೆನ್ನೈ ನಾಯಕ ಎಂಎಸ್ ಧೋನಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಈ ಪಂದ್ಯಕ್ಕೂ ಮುನ್ನ ಲಕ್ನೋಗೆ ಭಾರಿ ಹಿನ್ನಡೆಯುಂಟಾಗಿದ್ದು, ತಂಡದ ನಾಯಕ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಈ ಪಂದ್ಯದಿಂದ ಹೊರಬಿದ್ದಿದ್ದಾರೆ.
Published On - 3:07 pm, Wed, 3 May 23