LSG vs GT Highlights, IPL 2024: ಮುಗ್ಗರಿಸಿದ ಗುಜರಾತ್; ಲಕ್ನೋಗೆ ಸುಲಭ ಜಯ

Lucknow Super Giants vs Gujarat Titans Live Score in Kannada: ಐಪಿಎಲ್ 2024 ರ 21 ನೇ ಪಂದ್ಯದಲ್ಲಿ ಇಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಲಕ್ನೋ ತಂಡ 33 ರನ್​ಗಳ ಸುಲಭ ಜಯ ದಾಖಲಿಸಿದೆ.

LSG vs GT Highlights, IPL 2024: ಮುಗ್ಗರಿಸಿದ ಗುಜರಾತ್; ಲಕ್ನೋಗೆ ಸುಲಭ ಜಯ

Updated on: Apr 07, 2024 | 11:19 PM

ಐಪಿಎಲ್ 2024 ರ 21 ನೇ ಪಂದ್ಯದಲ್ಲಿ ಇಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಲಕ್ನೋ ತಂಡ 33 ರನ್​ಗಳ ಸುಲಭ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಉತ್ತಮ ಆರಂಭದ ಹೊರತಾಗಿಯೂ ಲಕ್ನೋ ಬೌಲರ್​ಗಳ ಕರಾರುವಕ್ಕಾದ ದಾಳಿಗೆ ತತ್ತರಿಸಿ ಕೇವಲ 130 ರನ್​ಗಳಿಗೆ ಆಲೌಟ್ ಆಯಿತು.

LIVE NEWS & UPDATES

The liveblog has ended.
  • 07 Apr 2024 11:18 PM (IST)

    ಲಕ್ನೋಗೆ ಹ್ಯಾಟ್ರಿಕ್ ಜಯ

    ಯಶ್ ಠಾಕೂರ್ ಅವರ ಐದು ವಿಕೆಟ್‌ ಮತ್ತು ಕೃನಾಲ್ ಪಾಂಡ್ಯ ಅವರ ಮೂರು ವಿಕೆಟ್‌ಗಳ ಸಹಾಯದಿಂದ ಗುಜರಾತ್ ಟೈಟಾನ್ಸ್ ತಂಡವನ್ನು 33 ರನ್‌ಗಳಿಂದ ಸೋಲಿಸುವ ಮೂಲಕ ಲಕ್ನೋ ಸೂಪರ್‌ಜೈಂಟ್ಸ್ ಲೀಗ್​ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿದೆ.

  • 07 Apr 2024 11:14 PM (IST)

    ತೆವಾಟಿಯಾ ಔಟ್

    ಗುಜರಾತ್ ಟೈಟಾನ್ಸ್ ಸೋಲು ಸನಿಹವಾಗಿದೆ. ರಾಹುಲ್ ತೆವಾಟಿಯಾ ಕೂಡ ಪೆವಿಲಿಯನ್​ ಮರಳಿದ್ದಾರೆ. 25 ಎಸೆತಗಳಲ್ಲಿ 30 ರನ್ ಗಳಿಸಿದ್ದ ತೆವಾಟಿಯಾ ತಮ್ಮ ಇನ್ನಿಂಗ್ಸ್ ಮುಗಿಸಿದೆ. ಲಕ್ನೋ ಪರ ಯಶ್ ಠಾಕೂರ್ ಪಂದ್ಯದ ನಾಲ್ಕನೇ ವಿಕೆಟ್ ಪಡೆದರು.


  • 07 Apr 2024 11:13 PM (IST)

    ತೆವಾಟಿಯಾ ಮೇಲೆ ಭರವಸೆ

    ಗುಜರಾತ್‌ ಪರ ರಾಹುಲ್ ತೆವಾಟಿಯಾ ಏಕಾಂಗಿ ಹೋರಾಟ ನೀಡುತ್ತಿದ್ದಾರೆ. ಗುಜರಾತ್ ಗೆಲುವಿಗೆ ಈಗ 12 ಎಸೆತಗಳಲ್ಲಿ 44 ರನ್ ಅಗತ್ಯವಿದೆ ಮತ್ತು ತೆವಾಟಿಯಾ 22 ಎಸೆತಗಳಲ್ಲಿ 24 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 07 Apr 2024 11:12 PM (IST)

    ಖಾತೆ ತೆರೆಯದೆ ರಶೀದ್ ಔಟ್

    ಖಾತೆ ತೆರೆಯದೆ ರಶೀದ್ ಖಾನ್ ಅವರನ್ನು ವಜಾ ಮಾಡುವ ಮೂಲಕ ಯಶ್ ಠಾಕೂರ್ ಗುಜರಾತ್ ಗೆ ಏಳನೇ ಹೊಡೆತ ನೀಡಿದ್ದಾರೆ. ಗುಜರಾತ್ ತಂಡ ಇದುವರೆಗೂ 100 ರನ್ ಪೂರೈಸಲು ಸಾಧ್ಯವಾಗಿಲ್ಲ. ಇದು ಈ ಪಂದ್ಯದಲ್ಲಿ ಯಶ್ ಠಾಕೂರ್ ಅವರ ಮೂರನೇ ವಿಕೆಟ್ ಆಗಿದೆ.

  • 07 Apr 2024 10:45 PM (IST)

    ನಲ್ಕಂಡೆ ಪೆವಿಲಿಯನ್‌ಗೆ

    ದರ್ಶನ್ ನಲ್ಕಂಡೆ ರೂಪದಲ್ಲಿ ಗುಜರಾತ್​ನ 5ನೇ ವಿಕೆಟ್ ಪತನವಾಗಿದೆ . ನಲ್ಕಂಡೆ 11 ಎಸೆತಗಳಲ್ಲಿ 12 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಉತ್ತಮ ಆರಂಭದ ನಂತರ ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ ತತ್ತರಿಸಿ 80 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡಿತು.

  • 07 Apr 2024 10:15 PM (IST)

    3ನೇ ವಿಕೆಟ್

    ಲಕ್ನೋ ಸೂಪರ್‌ಜೈಂಟ್ಸ್ ಬೌಲರ್‌ಗಳ ದಾಳಿಗೆ ಗುಜರಾತ್ ತತ್ತರಿಸುತ್ತಿದೆ. ನಾಯಕ ಶುಭಮನ್ ಗಿಲ್ ಮತ್ತು ಕೇನ್ ವಿಲಿಯಮ್ಸನ್ ನಂತರ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಕೂಡ ಪೆವಿಲಿಯನ್‌ಗೆ ಮರಳಿದ್ದಾರೆ. ಸುದರ್ಶನ್ ಅವರನ್ನು ಕೃನಾಲ್ ಪಾಂಡ್ಯ ಔಟ್ ಮಾಡಿದರು. ಗುಜರಾತ್ ತಂಡ 58 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದು, ಶರತ್ ಬಿಆರ್ ಹಾಗೂ ವಿಜಯ್ ಶಂಕರ್ ಕ್ರೀಸ್ ನಲ್ಲಿದ್ದಾರೆ.

  • 07 Apr 2024 10:11 PM (IST)

    ಕೇನ್ ವಿಲಿಯಮ್ಸನ್ ಔಟ್

    ಸ್ಪಿನ್ನರ್ ರವಿ ಬಿಷ್ಣೋಯ್ ಲಕ್ನೋ ಸೂಪರ್‌ಜೈಂಟ್ಸ್‌ಗೆ ಎರಡನೇ ಯಶಸ್ಸನ್ನು ನೀಡಿದ್ದಾರೆ. ಇಂಪ್ಯಾಕ್ಟ್ ಆಟಗಾರನಾಗಿ ಬಂದ ಕೇನ್ ವಿಲಿಯಮ್ಸನ್ ಐದು ಎಸೆತಗಳಲ್ಲಿ ಒಂದು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

  • 07 Apr 2024 10:06 PM (IST)

    ಗಿಲ್ ಔಟ್

    ಗುಜರಾತ್ ಟೈಟಾನ್ಸ್ ನಾಯಕ ಶುಭ್​ಮನ್ ಗಿಲ್ ಔಟಾಗಿದ್ದಾರೆ. ಗಿಲ್ 21 ಎಸೆತಗಳಲ್ಲಿ 19 ರನ್ ಗಳಿಸಿ ಯಶ್ ಠಾಕೂರ್ ಎಸೆತದಲ್ಲಿ ಬೌಲ್ಡ್ ಆದರು. ಪವರ್‌ಪ್ಲೇ ಅಂತ್ಯದ ವೇಳೆಗೆ ಗುಜರಾತ್ ಒಂದು ವಿಕೆಟ್‌ಗೆ 54 ರನ್ ಗಳಿಸಿದೆ.

  • 07 Apr 2024 10:01 PM (IST)

    ಗುಜರಾತ್​ಗೆ ಸ್ಫೋಟಕ ಆರಂಭ

    164 ರನ್‌ಗಳ ಗುರಿಯನ್ನು ಬೆನ್ನಟ್ಟಿರುವ ಗುಜರಾತ್‌ಗೆ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ವೇಗದ ಆರಂಭ ನೀಡಿದರು. ಐದು ಓವರ್‌ಗಳ ಅಂತ್ಯಕ್ಕೆ ಗುಜರಾತ್ ಯಾವುದೇ ವಿಕೆಟ್ ನಷ್ಟವಿಲ್ಲದೆ 47 ರನ್ ಗಳಿಸಿದೆ. ಸದ್ಯ ಶುಭಮನ್ ಗಿಲ್ 17 ಎಸೆತಗಳಲ್ಲಿ 14 ರನ್ ಗಳಿಸಿ ಕ್ರೀಸ್‌ನಲ್ಲಿದ್ದರೆ, ಸಾಯಿ ಸುದರ್ಶನ್ 27 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 07 Apr 2024 10:00 PM (IST)

    ಗುಜರಾತ್ ಇನ್ನಿಂಗ್ಸ್ ಆರಂಭ

    ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ ಆರಂಭವಾಗಿದ್ದು, ನಾಯಕ ಶುಭ್‌ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಕ್ರೀಸ್‌ನಲ್ಲಿದ್ದಾರೆ. ಎರಡು ಓವರ್‌ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 18 ರನ್ ಗಳಿಸಿದೆ.

  • 07 Apr 2024 09:20 PM (IST)

    ಗುಜರಾತ್‌ಗೆ 164 ರನ್‌ಗಳ ಗುರಿ

    ಮಾರ್ಕಸ್ ಸ್ಟೋನಿಸ್ ಅವರ 58 ರನ್ ಮತ್ತು ನಿಕೋಲಸ್ ಪೂರನ್ ಅವರ ಅಜೇಯ 32 ರನ್‌ಗಳ ನೆರವಿನಿಂದ ಲಕ್ನೋ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 163 ರನ್ ಗಳಿಸಿದೆ.

  • 07 Apr 2024 09:11 PM (IST)

    ಬಡೋನಿ ಔಟ್

    ರಶೀದ್ ಖಾನ್ ಲಕ್ನೋ ಸೂಪರ್ ಜೈಂಟ್ಸ್​ಗೆ ಐದನೇ ಹೊಡೆತ ನೀಡಿದ್ದಾರೆ. ಆಯುಷ್ ಬಡೋನಿ 11 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರು. ನಿಕೋಲಸ್ ಪೂರನ್ ಅವರೊಂದಿಗೆ ಕೃನಾಲ್ ಪಾಂಡ್ಯ ಕ್ರೀಸ್‌ನಲ್ಲಿದ್ದಾರೆ. ನಿಕೋಲಸ್ 15 ಎಸೆತಗಳಲ್ಲಿ 22 ರನ್ ಗಳಿಸಿ ಆಡುತ್ತಿದ್ದಾರೆ.

  • 07 Apr 2024 08:55 PM (IST)

    ಸ್ಟೊಯಿನಿಸ್ ಔಟ್

    ಮಾರ್ಕಸ್ ಸ್ಟೋನಿಸ್ ಅವರ ಅದ್ಭುತ ಇನ್ನಿಂಗ್ಸ್‌ಗೆ ದರ್ಶನ್ ನಲ್ಕಂಡೆ ಅಂತ್ಯ ಹಾಡಿದ್ದಾರೆ. ಅರ್ಧಶತಕ ಗಳಿಸಿದ ಬಳಿಕ ಸ್ಟೊಯಿನಿಸ್ ವಿಕೆಟ್ ಕಳೆದುಕೊಂಡಿದ್ದಾರೆ. 15 ಓವರ್‌ಗಳ ಅಂತ್ಯಕ್ಕೆ ಲಕ್ನೋ ನಾಲ್ಕು ವಿಕೆಟ್‌ಗೆ 114 ರನ್ ಗಳಿಸಿದೆ. ಸದ್ಯ ನಿಕೋಲಸ್ ಪುರನ್ ನಾಲ್ಕು ಎಸೆತಗಳಲ್ಲಿ ನಾಲ್ಕು ಹಾಗೂ ಆಯುಷ್ ಬದೋನಿ ಒಂದು ಎಸೆತದಲ್ಲಿ ಎರಡು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 07 Apr 2024 08:54 PM (IST)

    ಸ್ಟೊಯಿನಿಸ್ ಅರ್ಧಶತಕ

    ಲಕ್ನೋ ಸೂಪರ್‌ಜೈಂಟ್ಸ್ ಬ್ಯಾಟ್ಸ್‌ಮನ್ ಮಾರ್ಕಸ್ ಸ್ಟೊಯಿನಿಸ್ ಗುಜರಾತ್ ಟೈಟಾನ್ಸ್ ವಿರುದ್ಧ ಅರ್ಧಶತಕ ಗಳಿಸಿದ್ದಾರೆ. ಸ್ಟೊಯಿನಿಸ್ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಪ್ರಸ್ತುತ ಕ್ರೀಸ್‌ನಲ್ಲಿದ್ದಾರೆ.

  • 07 Apr 2024 08:54 PM (IST)

    ಕೆಎಲ್ ರಾಹುಲ್ ಔಟ್

    ದರ್ಶನ್ ನಲ್ಕಂಡೆ ಬೌಲಿಂಗ್​ನಲ್ಲಿ ನಾಯಕ ಕೆಎಲ್ ರಾಹುಲ್ ಔಟಾಗಿದ್ದಾರೆ. ರಾಹುಲ್ 31 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರು. ಮಾರ್ಕಸ್ ಸ್ಟೊಯಿನಿಸ್ 34 ಎಸೆತಗಳಲ್ಲಿ 41 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 07 Apr 2024 08:33 PM (IST)

    ರಾಹುಲ್- ಸ್ಟೊಯಿನಿಸ್ ಜೊತೆಯಾಟ

    ಲಕ್ನೋ 10 ಓವರ್‌ಗಳ ಅಂತ್ಯಕ್ಕೆ ಎರಡು ವಿಕೆಟ್‌ಗೆ 74 ರನ್ ಗಳಿಸಿದೆ. ಸದ್ಯ ಕೆಎಲ್ ರಾಹುಲ್ 25 ಎಸೆತಗಳಲ್ಲಿ 28 ರನ್ ಗಳಿಸಿ ಕ್ರೀಸ್‌ನಲ್ಲಿದ್ದರೆ, ಸ್ಟೊಯಿನಿಸ್ 24 ಎಸೆತಗಳಲ್ಲಿ 29 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 07 Apr 2024 08:32 PM (IST)

    7 ಓವರ್ ಅಂತ್ಯ

    ಗುಜರಾತ್ ಟೈಟಾನ್ಸ್ ವಿರುದ್ಧ ಆರಂಭಿಕ ಹಿನ್ನಡೆಯ ನಂತರ ನಾಯಕ ಕೆಎಲ್ ರಾಹುಲ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ನಿಂತು ತಂಡದ ಸ್ಕೋರ್ ಅನ್ನು 50ರ ಗಡಿ ದಾಟಿಸಿದರು. ಏಳು ಓವರ್‌ಗಳ ಅಂತ್ಯಕ್ಕೆ ಲಕ್ನೋ ಎರಡು ವಿಕೆಟ್‌ಗೆ 54 ರನ್ ಗಳಿಸಿದೆ.

  • 07 Apr 2024 08:01 PM (IST)

    ಪಡಿಕ್ಕಲ್ ಕೂಡ ಪೆವಿಲಿಯನ್‌ಗೆ

    ಗುಜರಾತ್ ಟೈಟಾನ್ಸ್ ವೇಗದ ಬೌಲರ್ ಉಮೇಶ್ ಯಾದವ್ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದ್ದು, ಲಕ್ನೋ ಸೂಪರ್‌ಜೈಂಟ್ಸ್‌ಗೆ ಎರಡನೇ ಹೊಡೆತ ನೀಡಿದ್ದಾರೆ. ದೇವದತ್ ಪಡಿಕ್ಕಲ್ ಅವರನ್ನು ಔಟ್ ಮಾಡುವ ಮೂಲಕ ಉಮೇಶ್ ತಂಡಕ್ಕೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಪಡಿಕ್ಕಲ್ ಏಳು ಎಸೆತಗಳಲ್ಲಿ ಏಳು ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದಾರೆ.

  • 07 Apr 2024 07:40 PM (IST)

    ಡಿಕಾಕ್ ಔಟ್

    ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಉತ್ತಮ ಆರಂಭವನ್ನು ಮಾಡಿದೆ. ವೇಗದ ಬೌಲರ್ ಉಮೇಶ್ ಯಾದವ್ ಮೊದಲ ಓವರ್‌ನಲ್ಲಿಯೇ ಡಿ ಕಾಕ್ ವಿಕೆಟ್ ಉರುಳಿಸಿದ್ದಾರೆ. ದೇವದತ್ ಪಡಿಕ್ಕಲ್ ಅವರೊಂದಿಗೆ ನಾಯಕ ಕೆಎಲ್ ರಾಹುಲ್ ಕ್ರೀಸ್‌ನಲ್ಲಿದ್ದಾರೆ.

  • 07 Apr 2024 07:38 PM (IST)

    ಲಕ್ನೋ ಇನ್ನಿಂಗ್ಸ್ ಆರಂಭ

    ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್ ಪೂರ್ಣಗೊಂಡಿದೆ. ಲಕ್ನೋ ಪರ ಕ್ವಿಂಟನ್ ಡಿ ಕಾಕ್ ನಾಯಕ ರಾಹುಲ್ ಅವರೊಂದಿಗೆ ಬ್ಯಾಟಿಂಗ್‌ಗೆ ಆರಂಭಿಸಿದ್ದಾರೆ.

  • 07 Apr 2024 07:37 PM (IST)

    ಲಕ್ನೋ ಸೂಪರ್‌ಜೈಂಟ್ಸ್

    ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ ಮತ್ತು ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಯಶ್ ಠಾಕೂರ್, ನವೀನ್ ಉಲ್ ಹಕ್. ಮಯಾಂಕ್ ಯಾದವ್.

  • 07 Apr 2024 07:36 PM (IST)

    ಗುಜರಾತ್ ಟೈಟಾನ್ಸ್

    ಶುಭಮನ್ ಗಿಲ್ (ನಾಯಕ), ಬಿಆರ್ ಶರತ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ದರ್ಶನ್ ನಲ್ಕಂಡೆ, ಮೋಹಿತ್ ಶರ್ಮಾ.

  • 07 Apr 2024 07:23 PM (IST)

    ಟಾಸ್ ಗೆದ್ದ ಲಕ್ನೋ

    ಟಾಸ್ ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ

  • 07 Apr 2024 07:20 PM (IST)

    29 ರನ್‌ಗಳಿಂದ ಗೆದ್ದ ಮುಂಬೈ

    ಮುಂಬೈ ಇಂಡಿಯನ್ಸ್ ಈ ಸೀಸನ್​ನ ಮೊದಲ ಗೆಲುವು ಸಾಧಿಸಿದೆ. ಐಪಿಎಲ್ 2024ರ 20ನೇ ಪಂದ್ಯದಲ್ಲಿ ಮುಂಬೈ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 29 ರನ್‌ಗಳಿಂದ ಸೋಲಿಸಿದೆ.

  • Published On - 7:01 pm, Sun, 7 April 24