AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND-W vs SL-W: 69,79,79.. ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಶಫಾಲಿ ವರ್ಮಾ

IND-W vs SL-W: 69,79,79.. ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಶಫಾಲಿ ವರ್ಮಾ

ಪೃಥ್ವಿಶಂಕರ
|

Updated on: Dec 28, 2025 | 8:19 PM

Share

Shafali Verma's Explosive 79: ಶ್ರೀಲಂಕಾ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಶಫಾಲಿ ವರ್ಮಾ 79 ರನ್ ಸಿಡಿಸಿ ಮಿಂಚಿದ್ದಾರೆ. ಇದು ಸರಣಿಯಲ್ಲಿ ಅವರ ಸತತ 3ನೇ ಅರ್ಧಶತಕವಾಗಿದ್ದು, ಟಿ20 ವಿಶ್ವಕಪ್ ಸಮೀಪಿಸುತ್ತಿರುವಾಗ ತಂಡಕ್ಕೆ ದೊಡ್ಡ ಬಲ ತಂದಿದೆ. ಕೇವಲ 46 ಎಸೆತಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಫಾಲಿ, ಸ್ಮೃತಿ ಮಂಧನಾ ಜೊತೆಗೂಡಿ 162 ರನ್‌ಗಳ ದಾಖಲೆಯ ಜೊತೆಯಾಟ ಕಟ್ಟಿದರು. ಅವರ ಈ ಭರ್ಜರಿ ಫಾರ್ಮ್ ಭಾರತ ಮಹಿಳಾ ತಂಡಕ್ಕೆ ಶುಭ ಸೂಚನೆ.

ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ತಿರುವನಂತಪುರದಲ್ಲಿ ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಸ್ಫೋಟಕ 79 ರನ್​ಗಳ ಇನ್ನಿಂಗ್ಸ್ ಆಡಿದ್ದಾರೆ. ಇದು ಈ ಸರಣಿಯಲ್ಲಿ ಶಫಾಲಿ ಅವರ ಸತತ ಮೂರನೇ ಅರ್ಧಶತಕವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 9 ರನ್​ಗಳಿಗೆ ಔಟಾಗಿದ್ದ ಶಫಾಲಿ, ಆ ಬಳಿಕ 2ನೇ ಟಿ20 ಪಂದ್ಯದಲ್ಲಿ 69 ರನ್, 3ನೇ ಟಿ20 ಪಂದ್ಯದಲ್ಲಿ 79 ರನ್ ಹಾಗೂ 4ನೇ ಟಿ20 ಪಂದ್ಯದಲ್ಲಿ 79 ರನ್ ಬಾರಿಸಿದ್ದಾರೆ. ಟಿ20 ವಿಶ್ವಕಪ್ ಸಮೀಪಿಸುತ್ತಿರುವಾಗ ಶಫಾಲಿ ಅವರ ಈ ಅಮೋಘ ಫಾರ್ಮ್​ ತಂಡಕ್ಕೆ ಆನೆಬಲ ತಂದುಕೊಟ್ಟಿದೆ. ಇನ್ನು ಈ ಪಂದ್ಯದಲ್ಲಿ 46 ಎಸೆತಗಳನ್ನು ಎದುರಿಸಿದ ಶಫಾಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಮಾತ್ರವಲ್ಲದೆ ಸ್ಮೃತಿ ಜೊತೆಗೂಡಿ ಮೊದಲ ವಿಕೆಟ್​ಗೆ 162 ರನ್​ಗಳ ದಾಖಲೆಯ ಜೊತೆಯಾಟ ಕಟ್ಟಿದರು.