LSG vs RCB Highlights IPL 2023: ಸೇಡಿನ ಸಮರದಲ್ಲಿ ಗೆದ್ದು ಬೀಗಿದ ಆರ್ಸಿಬಿ; ಲಕ್ನೋಗೆ ಮುಖಭಂಗ
Lucknow Super Giants vs Royal challengers Bangalore IPL 2023 Highlights in Kannada: ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋವನ್ನು 18 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಬೆಂಗಳೂರು ತವರಿನಲ್ಲಿ ಲಕ್ನೋ ಎದುರಿನ ಸೋಲಿಗೆ ಸೇಡು ತೀರಿಸಿಕೊಂಡಿತು.

ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತೊಮ್ಮೆ ತವರಿನಲ್ಲಿ ಎಡವಿದೆ. ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋವನ್ನು 18 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಬೆಂಗಳೂರು ತವರಿನಲ್ಲಿ ಲಕ್ನೋ ಎದುರಿನ ಸೋಲಿಗೆ ಸೇಡು ತೀರಿಸಿಕೊಂಡಿತು. ಟೂರ್ನಿಯಲ್ಲಿ ಆರ್ಸಿಬಿಗೆ 5ನೇ ಗೆಲುವು ಲಭಿಸಿದರೆ, ಇತ್ತ ತವರಿನಲ್ಲಿ ಲಕ್ನೋಗೆ ಇದು ಸತತ ಮೂರನೇ ಸೋಲು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಕೊಹ್ಲಿ ಹಾಗೂ ಫಾಫ್ ಅವರ ಸಮಯೋಜಿತ ಆಟದಿಂದಾಗಿ 126 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 19.4ನೇ ಓವರ್ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 18 ರನ್‌ಗಳಿಂದ ಸೋಲೊಪ್ಪಿಕೊಂಡಿತು.
LIVE NEWS & UPDATES
-
ಆರ್ಸಿಬಿಗೆ 18 ರನ್ ಜಯ
126 ರನ್ಗಳ ಅಲ್ಪ ಮೊತ್ತವನ್ನು ರಕ್ಷಿಸಿದ ಆರ್ಸಿಬಿ ಲಕ್ನೋ ತಂಡವನ್ನು ಕೇವಲ 108 ರನ್ಗಳಿಗೆ ಆಲೌಟ್ ಮಾಡಿದೆ. ಇದರೊಂದಿಗೆ ಆರ್ಸಿಬಿ ಟೂರ್ನಿಯಲ್ಲಿ 5ನೇ ಗೆಲುವು ದಾಖಲಿಸಿದೆ.
-
ನವೀನ್ ಔಟ್
19ನೇ ಓವರ್‌ನ 4ನೇ ಎಸೆತದಲ್ಲಿ ನವೀನ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
-
-
ನವೀನ್ ಬೌಂಡರಿ
ಹರ್ಷಲ್ ಬೌಲ್ ಮಾಡಿದ 18ನೇ ಓವರ್ನಲ್ಲಿ ನವೀನ್ ಮಿಡ್ ಆಫ್ ಮೇಲೆ ಬೌಂಡರಿ ಬಾರಿಸಿದರು.
-
ಮಿಶ್ರಾ ಬೌಂಡರಿ
ಸಿರಾಜ್ ಬೌಲ್ ಮಾಡಿದ 17ನೇ ಓವರ್ನಲ್ಲಿ ಮಿಶ್ರಾ ವಿಕೆಟ್ ಕೀಪರ್ ಹಿಂದೆ ಬೌಂಡರಿ ಹೊಡೆದರು.
-
ಮತ್ತೊಂದು ರನೌಟ್
15ನೇ ಓವರ್‌ನ 4ನೇ ಎಸೆತದಲ್ಲಿ ರಿವರ್ಸ್ ಸ್ವಿಪ್ ಆಡಿದ ಬಿಷ್ಣೋಯಿ ಡಬಲ್ ರನ್ ಕದಿಯಲು ಓಡಿದರು. ಆದರೆ ಹೆಜಲ್ವುಡ್ ಅವರ ಅದ್ಭುತ ಫೀಲ್ಡಿಂಗ್ನಿಂದಾಗಿ ರನೌಟ್ಗೆ ಬಲಿಯಾದರು.
-
-
ಗೌತಮ್ ರನೌಟ್
12ನೇ ಓವರ್‌ನ ಮೊದಲ ಎಸೆತದಲ್ಲಿ ಡಬಲ್ ಕದಿಯಲು ಯತ್ನಿಸಿದ ಗೌತಮ್ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
-
ಸ್ಟೋಯ್ನಿಸ್ ಔಟ್
11ನೇ ಓವರ್‌ನ 4ನೇ ಎಸೆತದಲ್ಲಿ ಸ್ಟೋಯ್ನಿಸ್ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
-
ಗೌತಮ್ ಸಿಕ್ಸರ್
10ನೇ ಓವರ್‌ನ 5ನೇ ಎಸೆತದಲ್ಲಿ ಗೌತಮ್ ಸ್ಟ್ರೈಟ್ ಹಿಟ್ ಮಾಡಿ ಸಿಕ್ಸರ್ ಬಾರಿಸಿದರು.
-
ಲಕ್ನೋ ಅರ್ಧಶತಕ
9ನೇ ಓವರ್‌ನ ಮೊದಲ ಎಸೆತದಲ್ಲಿ ಗೌತಮ್ ಸಿಕ್ಸರ್ ಬಾರಿಸಿದರೆ, 2ನೇ ಎಸೆತದಲ್ಲಿ ಬೌಂಡರಿ ಹೊಡೆದರು. ಇದರೊಂದಿಗೆ ಲಕ್ನೋ ಅರ್ಧಶತಕ ಪೂರೈಸಿದೆ.
-
ಪೂರನ್ ಔಟ್
7ನೇ ಓವರ್‌ನ ಕೊನೆಯ ಎಸೆತದಲ್ಲಿ ಪೂರನ್ ಕ್ಯಾಚಿತ್ತು ಔಟಾದರು. ಸ್ಕ್ವೇರ್ ಲೆಗ್ನಲ್ಲಿ ಮಹಿಪಾಲ್ ಅದ್ಭುತ ಕ್ಯಾಚ್ ತೆಗೆದುಕೊಂಡರು.
-
ಪೂರನ್ ಸಿಕ್ಸರ್
6ನೇ ಓವರ್‌ನ 2ನೇ ಎಸೆತದಲ್ಲಿ ಪೂರನ್ ಮಿಡ್ ಆಫ್ ತಲೆಯ ಮೇಲೆ ಭರ್ಜರಿ ಸಿಕ್ಸರ್ ಬಾರಿಸಿ ಖಾತೆ ತೆರೆದು. ಪವರ್ ಪ್ಲೇ ಅಂತ್ಯಕ್ಕೆ ಲಕ್ನೋ 34/4
-
ಹೂಡಾ ಔಟ್, ಲಕ್ನೋ 27/4
ಪವರ್ ಪ್ಲೇ ಕೊನೆಯ ಓವರ್ ಬೌಲ್ ಮಾಡಲು ಬಂದ ಹಸರಂಗ ಮೊದಲ ಎಸೆತದಲ್ಲೇ ಹೂಡಾ ವಿಕೆಟ್ ಉರುಳಿಸಿದ್ದಾರೆ. ಹೂಡಾ ಸ್ಟಂಪ್ ಔಟ್ ಆದರು.
-
ಸ್ಟೋಯಿಸ್ ಸಿಕ್ಸರ್
ಬದೋನಿ ವಿಕೆಟ್ ಬಳಿಕ ಬಂದ ಸ್ಟೋಯಿಸ್ 5ನೇ ಓವರ್‌ನ 5ನೇ ಎಸೆತದಲ್ಲಿ ಸಿಕ್ಸರ್ ಹೊಡೆದರು.
-
ಬದೋನಿ ಔಟ್
5ನೇ ಓವರ್‌ನ ಮೊದಲ ಎಸೆತದಲ್ಲಿ ಹೇಜಲ್ವುಡ್ ಬದೋನಿ ವಿಕೆಟ್ ಉರುಳಿಸಿದ್ದಾರೆ. ವಿರಾಟ್ ಅದ್ಭುತ ಕ್ಯಾಚ್ ತೆಗೆದುಕೊಂಡರು.
-
ಕೃನಾಲ್ ಔಟ್
ಸಿರಾಜ್ ಓವರ್ನಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿದ್ದ ಕೃನಾಲ್, 4ನೇ ಓವರ್ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ಔಟಾದರು. ಮ್ಯಾಕ್ಸಿಗೆ ವಿಕೆಟ್.
-
ಹ್ಯಾಟ್ರಿಕ್ ಬೌಂಡರಿ
3ನೇ ಓವರ್ ಬೌಲ್ ಮಾಡಿದ ಸಿರಾಜ್ ಕೊಂಚ ದುಬಾರಿಯಾದರು. ಈ ಓವರ್ನಲ್ಲಿ ಕೃನಾಲ್ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು.
-
ಮೇಯರ್ಸ್ ಔಟ್
ಸಿರಾಜ್ ಮೊದಲ ಓವರ್‌ನ ಎರಡನೇ ಎಸೆತದಲ್ಲೇ ವಿಕೆಟ್ ಉರುಳಿಸಿದ್ದಾರೆ. ಡೇಂಜರಸ್ ಮೇಯರ್ಸ್ ಮಿಡ್ ಆನ್ನಲ್ಲಿ ಕ್ಯಾಚಿತ್ತು ಔಟಾದರು.
-
127 ರನ್ ಟಾರ್ಗೆಟ್
ಲಕ್ನೋ ಬಿಗಿ ಬೌಲಿಂಗ್ ಮುಂದೆ ಮಂಕಾದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿದೆ. 20ನೇ ಓವರ್‌ನ ಕೊನೆಯ ಎಸೆತದಲ್ಲಿ ಹಸರಂಗ ಬೌಂಡರಿ ಹೊಡೆದರು.
-
ಬ್ಯಾಕ್ ಟು ಬ್ಯಾಕ್ ವಿಕೆಟ್
20ನೇ ಓವರ್ನಲ್ಲಿ ಆರ್ಸಿಬಿ 2 ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದೆ. 9 ವಿಕೆಟ್ ನಷ್ಟಕ್ಕೆ ಆರ್ಸಿಬಿ 121 ರನ್
-
ಕಾರ್ತಿಕ್ ಮತ್ತೆ ಫ್ಲಾಪ್
ಸತತ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಕಾರ್ತಿಕ್ ಈ ಪಂದ್ಯದಲ್ಲೂ ಅದನ್ನು ಮುಂದುವರೆಸಿದ್ದಾರೆ. 19ನೇ ಓವರ್‌ನ 4ನೇ ಎಸೆತದಲ್ಲಿ ರನೌಟ್ ಆದರು.
-
ಮಹಿಪಾಲ್ ಔಟ್
18ನೇ ಓವರ್‌ನ 5ನೇ ಎಸೆತದಲ್ಲಿ ಮಹಿಪಾಲ್ ಎಲ್ಬಿ ಬಲೆಗೆ ಬಿದ್ದರು. ಆರ್ಸಿಬಿ 6ನೇ ವಿಕೆಟ್ ಪತನ
-
ಫಾಫ್ ಔಟ್
17ನೇ ಓವರ್‌ನ 5ನೇ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಫಾಫ್, ಕೃನಾಲ್ ಪಾಂಡ್ಯಗೆ ಕ್ಯಾಚಿತ್ತು ಔಟಾದರು.
-
ಕಾರ್ತಿಕ್ ಸಿಕ್ಸರ್
17ನೇ ಓವರ್‌ನ 2ನೇ ಎಸೆತವನ್ನು ಕಾರ್ತಿಕ್ ಕೌಸ್ ಕಾರ್ನರ್ನಲ್ಲಿ ಸಿಕ್ಸರ್ಗಟ್ಟಿದರು.
-
ಕಾರ್ತಿಕ್ ಬೌಂಡರಿ
ಕೊನೆಗೂ 16ನೇ ಓವರ್‌ನ ಮೂರನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಮಿಡ್ ಮಿಕೆಟ್ ಮೇಲೆ ಬೌಂಡರಿ ಹೊಡೆದರು.
-
ಪ್ರಭುದೇಸಾಯಿ ಔಟ್
ಬೆಂಗಳೂರಿನ ನಾಲ್ಕನೇ ವಿಕೆಟ್ ಪತನಗೊಂಡಿದೆ. ಸುಯಶ್ ಪ್ರಭುದೇಸಾಯಿ ಔಟ್ ಆಗಿದ್ದಾರೆ. 15ನೇ ಓವರ್‌ನ ಮೂರನೇ ಎಸೆತದಲ್ಲಿ ಅಮಿತ್ ಮಿಶ್ರಾ ಎಸೆತದಲ್ಲಿ ಬಿಗ್ ಶಾಟ್ ಆಡಲು ಬಯಸಿದ ಸುಯಶ್, ಕೆ ಗೌತಮ್ಗೆ ಕ್ಯಾಚ್ ನೀಡಿದರು.
ಸುಯಶ್ ಪ್ರಭುದೇಸಾಯಿ – 6 ರನ್, 7 ಎಸೆತಗಳು
-
ಮ್ಯಾಕ್ಸ್‌ವೆಲ್ ಔಟ್
ತಮ್ಮ ಕೋಟಾದ ಕೊನೆಯ ಓವರ್ ಬೌಲ್ ಮಾಡಲು ಬಂದ ಬಿಷ್ಣೋಯಿ ಡೇಂಜರಸ್ ಬ್ಯಾಟರ್ ಮ್ಯಾಕ್ಸ್ವೆಲ್ರನ್ನು ಎಲ್ಬಿ ಬಲೆಗೆ ಬೀಳಿಸಿದರು. ಆರ್ಸಿಬಿ 3ನೇ ವಿಕೆಟ್ ಪತನ
-
ರಾವತ್ ಔಟ್
12ನೇ ಓವರ್‌ನ 4ನೇ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ರಾವತ್ ಬೌಂಡರಿ ಗೆರೆಯ ಬಳಿ ಮೇಯರ್ಸ್ಗೆ ಕ್ಯಾಚಿತ್ತು ಔಟಾದರು.
-
60 ಎಸೆತಗಳಲ್ಲಿ 65 ರನ್
ಆರ್ಸಿಬಿ ಇನ್ನಿಂಗ್ಸ್ನ 10 ಓವರ್ ಮುಗಿದಿದ್ದು, ತಂಡ ಈ 10 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಕೇವಲ 65 ರನ್ ಬಾರಿಸಿದೆ. ತಂಡದಿಂದ ಬಿಗ್ ಶಾಟ್ ಬರ್ತಿಲ್ಲ.
-
ಕೊಹ್ಲಿ ಔಟ್
ಆರ್ಸಿಬಿಯ ಮೊದಲ ವಿಕೆಟ್ ಪತನವಾಗಿದೆ. ಆರಂಭದಿಂದಲೂ ರನ್ ಗಳಿಸಲು ತಿಣುಕಾಡುತ್ತಿದ್ದ ಕೊಹ್ಲಿ, ಬಿಷ್ಣೋಯಿ ಬೌಲಿಂಗ್ನಲ್ಲಿ ಸ್ಟಂಪ್ಔಟ್ ಆದರು. ಕೊಹ್ಲಿ 30 ಎಸೆತಗಳಲ್ಲಿ 31 ರನ್ ಬಾರಿಸಿದರು.
-
8ನೇ ಓವರ್ನಲ್ಲಿ ಬೌಂಡರಿ
ಅಂತಿಮವಾಗಿ ಆರ್ಸಿಬಿ ಇನ್ನಿಂಗ್ಸ್ಗೆ ಬೌಂಡರಿ ಸಿಕ್ಕಿದೆ. 8ನೇ ಓವರ್‌ನ 4ನೇ ಎಸೆತದಲ್ಲಿ ಕೊಹ್ಲಿ ಬೌಂಡರಿ ಹೊಡೆದರು.
-
ಆರ್ಸಿಬಿ ಅರ್ಧಶತಕ ಪೂರ್ಣ
7ನೇ ಓವರ್‌ನ ಮೊದಲ ಎಸೆತದಲ್ಲಿ ವೈಡ್ ಬಂತು. ಇದರ ಮೂಲಕ ಆರ್ಸಿಬಿ ತನ್ನ ಅರ್ಧಶತಕ ಪೂರೈಸಿದೆ. ಆರ್ಸಿಬಿ ಇನ್ನಿಂಗ್ಸ್ ನಿಧಾನವಾಗಿ ಸಾಗುತ್ತಿದೆ.
-
ಪವರ್ ಪ್ಲೇ ಅಂತ್ಯ
ಆರ್ಸಿಬಿ ಇನ್ನಿಂಗ್ಸ್ನ ಪವರ್ ಪ್ಲೇ ಮುಗಿದಿದ್ದು ಈ 6 ಓವರ್ಗಳಲ್ಲಿ ಆರ್ಸಿಬಿ 42 ರನ್ ಬಾರಿಸಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಆಡುತ್ತಿದೆ.
-
ಫಾಫ್ ಸಿಕ್ಸರ್
ನವಿನ್ ಬೌಲ್ ಮಾಡಿದ ನಾಲ್ಕನೇ ಓವರ್‌ನ 3ನೇ ಎಸೆತವನ್ನು ಫಾಫ್ ಕವರ್ಸ್ನಲ್ಲಿ ಸಿಕ್ಸರ್ಗಟ್ಟಿದರೆ, 5ನೇ ಎಸೆತದಲ್ಲಿ ಕೊಹ್ಲಿ ಬೌಂಡರಿ ಹೊಡೆದರು.
-
ರಾಹುಲ್ಗೆ ಇಂಜುರಿ
ಫಾಫ್ ಬಾರಿಸಿದ ಬೌಂಡರಿ ತಡೆಯುವ ಯತ್ನದಲ್ಲಿ ಲಕ್ನೋ ನಾಯಕ ರಾಹುಲ್ ಇಂಜುರಿ ಮಾಡಿಕೊಂಡಿದ್ದಾರೆ. ಹೀಗಾಗಿ ರಾಹುಲ್ ಮೈದಾನ ತೊರೆದಿದ್ದಾರೆ.
-
ಫಾಫ್ ಬೌಂಡರಿ
ಸ್ಟೋಯ್ನಿಸ್ ಬೌಲ್ ಮಾಡಿದ 2ನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ಫಾಫ್ ಕವರ್ಸ್ನಲ್ಲಿ ಬೌಂಡರಿ ಹೊಡೆದರು.
-
ಆರ್ಸಿಬಿ ಬ್ಯಾಟಿಂಗ್ ಆರಂಭ
ಆರ್ಸಿಬಿ ಇನ್ನಿಂಗ್ಸ್ ಆರಂಭವಾಗಿದ್ದು, ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿ ಬೌಂಡರಿ ಹೊಡೆದರು.
-
ಲಕ್ನೋ ಸೂಪರ್ ಜೈಂಟ್ಸ್
ಲೋಕೇಶ್ ರಾಹುಲ್, ಕೈಲ್ ಮೇಯರ್ಸ್, ಮಾರ್ಕಸ್ ಸ್ಟಾಯಿನಿಸ್, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ನಿಕೋಲಸ್ ಪೂರನ್, ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಅಮಿತ್ ಮಿಶ್ರಾ, ಯಶ್ ಠಾಕೂರ್
-
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್
-
ಉಭಯ ತಂಡದಲ್ಲೂ ಬದಲಾವಣೆ
ಜೋಶ್ ಹ್ಯಾಜಲ್‌ವುಡ್ ತಂಡಕ್ಕೆ ಮರಳಿದ್ದಾರೆ. ಡೇವಿಡ್ ವಿಲ್ಲಿ ಲೀಗ್ನಿಂದ ಹೊರಬಿದ್ದಿದ್ದಾರೆ. ಅದೇ ವೇಳೆ ಶಹಬಾಜ್ ಅಹ್ಮದ್ ಬದಲಿಗೆ ಅನುಜ್ ರಾವತ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಲಕ್ನೋ ಬದಲಾವಣೆ ಮಾಡಿದ್ದು ಅವೇಶ್ ಖಾನ್ ಬದಲಿಗೆ ಗೌತಮ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
-
ಟಾಸ್ ಗೆದ್ದ ಆರ್ಸಿಬಿ ಬ್ಯಾಟಿಂಗ್ ಆಯ್ಕೆ
ಟಾಸ್ ಗೆದ್ದ ಆರ್ಸಿಬಿ ನಾಯಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿ ವಿರಾಟ್ ನಾಯಕತ್ವವಹಿಸಿದರೆ, ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಮತ್ತೆ ನಾಯಕತ್ವವಹಿಸಿಕೊಂಡಿದ್ದಾರೆ.
-
ಬೆಂಗಳೂರಿಗೆ ಮಹತ್ವದ ಪಂದ್ಯ
ಲಕ್ನೋ ಇಂದು ತವರಿನಲ್ಲಿ ಆಡುತ್ತಿದ್ದು, ಸೀಸನ್ನ 9ನೇ ಪಂದ್ಯದಲ್ಲಿ ಆರನೇ ಪಂದ್ಯವನ್ನು ಗೆಲ್ಲುವ ಹಂಬಲದಲ್ಲಿದೆ. ಲಕ್ನೋ ಇಲ್ಲಿಯವರೆಗೆ 8 ಪಂದ್ಯಗಳನ್ನು ಆಡಿದ್ದು 5 ಪಂದ್ಯಗಳನ್ನು ಗೆದ್ದಿದೆ. ಬೆಂಗಳೂರು 8 ಪಂದ್ಯಗಳನ್ನು ಆಡಿದ್ದು, 4 ಪಂದ್ಯಗಳನ್ನು ಗೆದ್ದಿದೆ.
-
ದಾಖಲೆ ಮೇಲೆ ಕೊಹ್ಲಿ ಕಣ್ಣು
ಕೊಹ್ಲಿ ಇಂದು ತಮ್ಮ ಬ್ಯಾಟ್‌ನಿಂದ ಆ 43 ರನ್ ಗಳಿಸಲು ಸಾಧ್ಯವಾದರೆ, ಒಂದೇ ತಂಡದ ಪರವಾಗಿ 7 ಸಾವಿರ ರನ್ ಗಳಿಸಿದ ಆಟಗಾರ ಎಂಬ ವಿಶೇಷ ದಾಖಲೆಯನ್ನೂ ಪಡೆಯಲಿದ್ದಾರೆ.
Published On - May 01,2023 6:20 PM
