ಟಿ20 ಕ್ರಿಕೆಟ್‌ನ ಮ್ಯಾಜಿಕ್ ಪ್ರಪಂಚದಾದ್ಯಂತ ಹರಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಟಿ20 ಕ್ರಿಕೆಟ್‌ಗಳು ನಡೆಯುತ್ತಿರುವುದು ಮಾತ್ರವಲ್ಲದೆ, ಐಪಿಎಲ್ ರೀತಿಯ ಹಲವು ದೊಡ್ಡ ಟಿ20 ಲೀಗ್‌ಗಳು ಸಹ ನಡೆಯುತ್ತಿವೆ. ಮತ್ತೆ ಕೆಲವು ಅದೇ ರೀತಿಯ ಟೂರ್ನಿಗಳು ಪ್ರಾರಂಭವಾಗುತ್ತಿವೆ. ಇದೆಲ್ಲದರ ಹೊರತಾಗಿ, ಭಾರತದ ವಿವಿಧ ರಾಜ್ಯಗಳಲ್ಲಿ ಟಿ20 ಲೀಗ್‌ಗಳು ನಡೆಯುತ್ತಿವೆ. ಅಂತಹ ಲೀಗ್‌ನಲ್ಲಿ ಕೆಲವು ಆಟಗಾರರು ಅದ್ಭುತ ಬ್ಯಾಟಿಂಗ್ ಮೂಲು ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದಾರೆ. ಈಗ ಇದಕ್ಕೆ ಉದಾಹರಣೆ ಎಂಬಂತೆ 20 ವರ್ಷದ ಬ್ಯಾಟ್ಸ್‌ಮನ್ ರೋಹನ್ ಪಾಟೀಲ್ (Rohan Patil) ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಮಹಾರಾಜ ಟಿ20 ಲೀಗ್‌ನಲ್ಲಿ (Maharaja Trophy 2022) ಇದೇ ರೀತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಮಹಾರಾಜ ಟಿ20 ಲೀಗ್‌ನಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ಮತ್ತು ಮೈಸೂರು ವಾರಿಯರ್ಸ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯ ಕೇವಲ 19-19 ಓವರ್‌ಗಳದ್ದಾಗಿದ್ದರೂ, ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡ ನಿಗದಿತ 19 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಪವನ್ ದೇಶಪಾಂಡೆ ತಂಡದ ಪರ ಗರಿಷ್ಠ 41 ರನ್ ಗಳಿಸಿದರು. ಆದಾಗ್ಯೂ, ತಂಡದ ನಾಯಕ ಕರುಣ್ ನಾಯರ್ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ, ಕೇವಲ 18 ರನ್ ಗಳಿಸಲಷ್ಟೇ ಶಕ್ತರಾದರು. ಗುಲ್ಬರ್ಗ ತಂಡ 10 ವೈಡ್ ಮತ್ತು ನೋಬಾಲ್ ಸೇರಿದಂತೆ ಒಟ್ಟು 17 ರನ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟಿತು.
ಗುಲ್ಬರ್ಗ ಬ್ಯಾಟಿಂಗ್
ಗುರಿ ತುಂಬಾ ಕಷ್ಟಕರವಾಗಿರಲಿಲ್ಲ, ಆದರೆ ಅದು ಸುಲಭವೂ ಆಗಿರಲಿಲ್ಲ. ಆದರೆ ಗುಲ್ಬರ್ಗದ ಬ್ಯಾಟ್ಸ್‌ಮನ್‌ಗಳ ಉದ್ದೇಶವೇ ಬೇರೆಯಾಗಿತ್ತು. ತಂಡ 4 ಓವರ್‌ಗಳಲ್ಲಿ 50 ರನ್‌ಗಳನ್ನು ಪೂರೈಸಿತು. 3 ರನ್ ಗಳಿಸಿದ್ದ ಜೆ.ಆಚಾರ್ಯ ರೂಪೆದಲ್ಲಿ ಮೊದಲ ವಿಕೆಟ್ ಪತನಗೊಂಡಿತು.
ವಾಸ್ತವವಾಗಿ, 20 ವರ್ಷದ ಯುವ ಆರಂಭಿಕ ರೋಹನ್ ಪಾಟೀಲ್ ತಂಡದ ಪರ ಅಬ್ಬರಿಸಲು ಆರಂಭಿಸಿದರು. ಈ ಎಡಗೈ ಬ್ಯಾಟ್ಸ್‌ಮನ್ ಮೈಸೂರು ತಂಡದ ಬೌಲರ್ಗಳನ್ನು ಹಿಗ್ಗಮುಗ್ಗ ದಂಡಿಸಿ ಕೇವಲ 42 ಎಸೆತಗಳಲ್ಲಿ ಬಿರುಸಿನ ಶತಕ ಬಾರಿಸಿದರು.
#RohanPatil smashed, cut and pulled his way to a magnificent 112* off just 47 deliveries to take #GulbargaMystics to a resounding win!
Watch all action from the Shriram Maharaja Trophy LIVE, only on #FanCode? https://t.co/c3bssaHoxo#MaharajaTrophy pic.twitter.com/VPyWHQG5BN
— FanCode (@FanCode) August 12, 2022
ಬೌಂಡರಿ, ಸಿಕ್ಸರ್‌ಗಳ ಅಬ್ಬರ
ರೋಹನ್ ಪಾಟೀಲ್ ಅವರ ಈ ಬಿರುಸಿನ ಬ್ಯಾಟಿಂಗ್‌ನಲ್ಲಿ ಕೃಷ್ಣನ್ ಶ್ರೀಜಿತ್ ಅವರಿಗೆ ಉತ್ತಮ ಬೆಂಬಲ ನೀಡಿದರು. ಇಬ್ಬರೂ ಕೇವಲ 63 ಎಸೆತಗಳಲ್ಲಿ 113 ರನ್ ಗಳಿಸಿದರು. ಈ ಮೂಲಕ ಕೇವಲ 14.1 ಓವರ್‌ಗಳಲ್ಲಿ 9 ವಿಕೆಟ್‌ಗಳಿಂದ ತಂಡಕ್ಕೆ ಸುಲಭ ಜಯವನ್ನು ತಂದುಕೊಟ್ಟರು. ರೋಹನ್ ಪಾಟೀಲ್ ಕೇವಲ 47 ಎಸೆತಗಳಲ್ಲಿ ಔಟಾಗದೆ 112 ರನ್ ಗಳಿಸಿದರು. ರೋಹನ್ ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ 18 ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ 86 ರನ್ ಗಳಿಸಿದರು. ಜೊತೆಗೆ ಈ ಬ್ಯಾಟ್ಸ್‌ಮನ್ 11 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದರು. ಅದೇ ಸಮಯದಲ್ಲಿ ಶ್ರೀಜಿತ್ 29 ಎಸೆತಗಳಲ್ಲಿ 46 ರನ್ ಗಳಿಸಿದರು.