‘ಐಪಿಎಲ್​​ನಲ್ಲಿ ಉತ್ತರ ಕೊಡುವೆ’; ಬಿಸಿಸಿಐ ಮೇಲೆ ಮುನಿದ ಶಾರುಖ್ ತಂಡದ ಸ್ಟಾರ್ ಬ್ಯಾಟರ್

ಕೆಟಿಗನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶಗಳನ್ನು ಪಡೆಯಲು ನಾನು ಯಾವಾಗಲೂ ಬಯಸುತ್ತೇನೆ. ನಾನು ಇದುವರೆಗೆ ಟೀಂ ಇಂಡಿಯಾದಲ್ಲಿ ಆಡಿದ ಪಂದ್ಯಗಳು ನನಗೆ ಸಮಾದಾನ ತಂದಿಲ್ಲ.

'ಐಪಿಎಲ್​​ನಲ್ಲಿ ಉತ್ತರ ಕೊಡುವೆ’; ಬಿಸಿಸಿಐ ಮೇಲೆ ಮುನಿದ ಶಾರುಖ್ ತಂಡದ ಸ್ಟಾರ್ ಬ್ಯಾಟರ್
Follow us
TV9 Web
| Updated By: ಪೃಥ್ವಿಶಂಕರ

Updated on:Aug 12, 2022 | 5:24 PM

ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಭಾರತಕ್ಕೆ ಅನೇಕ ಸ್ಟಾರ್‌ಗಳನ್ನು ನೀಡಿದೆ. ಐಪಿಎಲ್‌ನಲ್ಲಿ ಅಬ್ಬರಿಸಿದ ಹಲವು ಆಟಗಾರರಿಗೆ ಟೀಂ ಇಂಡಿಯಾದ (Team India) ಹಾದಿಯೂ ತೆರೆದುಕೊಂಡಿದೆ. ಆದರೆ ಐಪಿಎಲ್​ನಲ್ಲಿ ಮಿಮಚಿದ ನಂತರವೂ ಕೆಲವು ಯುವ ಪ್ರತಿಭೆಗಳಿಗೆ ಟೀಂ ಇಂಡಿಯಾದಲ್ಲಿ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ಅಂತಹ ಆಟಗಾರರು ಕೊಂಚವೂ ನಿರಾಶೆಗೊಳ್ಳದೆ ಅವಕಾಶಗಳಿಗಾಗಿ ಇನ್ನೂ ಕಾಯುತ್ತಿದ್ದಾರೆ. ಅಂತಹ ಕೆಲವು ಆಟಗಾರರಲ್ಲಿ ನಿತೀಶ್ ರಾಣಾ (Nitish Rana) ಕೂಡ ಒಬ್ಬರು.ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಮಾತನಾಡಿರುವ ರಾಣಾ ತನ್ನ ಮುಂದಿನ ಗುರಿಯನ್ನು ಎಲ್ಲರ ಮುಂದೆ ತೆರೆದಿಟ್ಟಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್ ನಿತೀಶ್ ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ಪರ ಆಡುತ್ತಾರೆ ಆದರೆ ಐಪಿಎಲ್‌ನಲ್ಲಿ ಅವರು ಎರಡು ಬಾರಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಪರ ಆಡುತ್ತಾರೆ. ಕಳೆದ ವರ್ಷ ಪ್ರಮುಖ ಆಟಗಾರರಿಂದ ಕಂಗೊಳಿಸುತ್ತಿದ್ದ ಟೀಂ ಇಂಡಿಯಾದ ಒಂದು ತಂಡ ಇಂಗ್ಲೆಂಡ್ ಪ್ರವಾಸದಲ್ಲಿತ್ತು. ಇನ್ನೊಂದು ತಂಡ ಶಿಖರ್ ಧವನ್ ನಾಯಕತ್ವದಲ್ಲಿ ಶ್ರೀಲಂಕಾಕ್ಕೆ ತೆರಳಿ ಏಕದಿನ, ಟಿ20 ಸರಣಿ ಆಡಿತ್ತು. ಆಗ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದರು. ರಾಣಾ ಇದುವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ODI ಮತ್ತು ಎರಡು T20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಆ ಬಳಿಕ ತಂಡದಲ್ಲಿ ಸ್ಥಾನ ಸಿಗಲಿಲ್ಲ.

ಗುರಿ ಬಗ್ಗೆ ಮಾತನಾಡಿದ ರಾಣಾ

ಇದನ್ನೂ ಓದಿ
Image
IPL 2023: ಮುಂದಿನ ಸೀಸನ್​ಗೆ ಇಂಗ್ಲೆಂಡ್​ನ ಇಬ್ಬರು ಸ್ಟಾರ್ ಆಲ್​ರೌಂಡರ್ಸ್​ ಮೇಲೆ ಕಣ್ಣಿಟ್ಟ ಸಿಎಸ್​ಕೆ..! ಯಾರವರು?
Image
ಜೈ ಶಾ ಯೋಜನೆಗೆ ಐಸಿಸಿ ಗ್ರೀನ್ ಸಿಗ್ನಲ್; ಇನ್ಮುಂದೆ ಎರಡೂವರೆ ತಿಂಗಳು ನಡೆಯಲಿದೆ ಐಪಿಎಲ್! ಜೊತೆಗೆ?
Image
ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್​ನಲ್ಲಿರುವ ಲಲಿತ್ ಮೋದಿ ಯಾರು? ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ?

ರಾಣಾ IPL-2022 ರಲ್ಲಿ ಉತ್ತಮ ಪ್ರದರ್ಶನ ನೀಡಿ 14 ಪಂದ್ಯಗಳಲ್ಲಿ 361 ರನ್ ಗಳಿಸಿದರು. ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅವರು, ನಾನು ರನ್ ಗಳಿಸಬೇಕು ಮತ್ತು ನನ್ನ ಆಟವನ್ನು ಸುಧಾರಿಸಬೇಕು. ಈ ಸೀಸನ್​ನಲ್ಲಿ ನಾನು ಹೆಚ್ಚು ರನ್ ಗಳಿಸುತ್ತೇನೆ ಎಂಬ ವಿಶ್ವಾಸ ನನಗಿದೆ. ಮುಂದಿನ ಸೀಸನ್​ನಲ್ಲಿ 400 ರನ್ ಗಳಿಸಿದ ನಂತರವೂ ತಂಡದಲ್ಲಿ ನನ್ನನ್ನು ಆಯ್ಕೆ ಮಾಡದಿದ್ದರೆ, ನಾನು ಮತ್ತೊಂದು ಸೀಸನ್​ನಲ್ಲಿ 600 ರನ್ ಗಳಿಸುವ ಗುರಿ ಇಟ್ಟುಕೊಳ್ಳುತ್ತೇನೆ ಎಂದಿದ್ದಾರೆ.

‘ನನಗೆ ಅವಕಾಶ ಬೇಕು’

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಬೇಕು ಎಂದು ರಾಣಾ ಹೇಳಿದ್ದಾರೆ. ಕ್ರಿಕೆಟಿಗನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶಗಳನ್ನು ಪಡೆಯಲು ನಾನು ಯಾವಾಗಲೂ ಬಯಸುತ್ತೇನೆ. ನಾನು (ಶ್ರೀಲಂಕಾದಲ್ಲಿ) ಇದುವರೆಗೆ ಟೀಂ ಇಂಡಿಯಾದಲ್ಲಿ ಆಡಿದ ಪಂದ್ಯಗಳು ನನಗೆ ಸಮಾದಾನ ತಂದಿಲ್ಲ. ಹೀಗಾಗಿ ನಾನು ಆಯ್ಕೆಗಾರರ ​​ಗಮನ ಸೆಳೆಯಲು ಮುಂಬರುವ ಐಪಿಎಲ್ ಸೀಸನ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಲು ಬಯಸುತ್ತೇನೆ ಎಂದಿದ್ದಾರೆ.

ರಾಣಾ ಇಲ್ಲಿಯವರೆಗೆ ಆಡಿದ ಒಂದು ODI ಪಂದ್ಯದಲ್ಲಿ ಏಳು ರನ್ ಗಳಿಸಿದ್ದಾರೆ ಮತ್ತು ಎರಡು T20 ಪಂದ್ಯಗಳಲ್ಲಿ ಕೇವಲ 15 ರನ್ ಗಳಿಸಿದ್ದಾರೆ. ಅವರ ಐಪಿಎಲ್ ವೃತ್ತಿಜೀವನವನ್ನು ಗಮನಿಸಿದರೆ, ರಾಣಾ ಇದುವರೆಗೆ 91 ಪಂದ್ಯಗಳನ್ನು ಆಡಿ 28.32 ಸರಾಸರಿಯಲ್ಲಿ 2181 ರನ್ ಗಳಿಸಿದ್ದಾರೆ. ಜೊತೆಗೆ 19 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ. ಕೋಲ್ಕತ್ತಾಕ್ಕೂ ಮುನ್ನ ರಾಣಾ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದರು.

Published On - 5:24 pm, Fri, 12 August 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ