ZIM Vs BAN: ತಂಡದ ಮಾನ ಉಳಿಸಿದ 10 ಮತ್ತು 11ನೇ ಕ್ರಮಾಂಕದ ಬ್ಯಾಟರ್ಸ್​; ಬಾಂಗ್ಲಾ ವಿರುದ್ಧ ಸರಣಿ ಗೆದ್ದ ಜಿಂಬಾಬ್ವೆ

TV9 Digital Desk

| Edited By: ಪೃಥ್ವಿಶಂಕರ

Updated on:Aug 12, 2022 | 4:00 PM

ZIM Vs BAN: 10ನೇ ಮತ್ತು 11ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರಿಚರ್ಡ್ ಮತ್ತು ನ್ಯೂಚಿ 10ನೇ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿದರು. ರಿಚರ್ಡ್ 34 ರನ್ ಗಳಿಸಿದರೆ, ವಿಕ್ಟರ್ ನ್ಯೂಚಿ 26 ರನ್ ಗಳಿಸಿದರು.

ZIM Vs BAN: ತಂಡದ ಮಾನ ಉಳಿಸಿದ 10 ಮತ್ತು 11ನೇ ಕ್ರಮಾಂಕದ ಬ್ಯಾಟರ್ಸ್​; ಬಾಂಗ್ಲಾ ವಿರುದ್ಧ ಸರಣಿ ಗೆದ್ದ ಜಿಂಬಾಬ್ವೆ

ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಆಡುವ ಜೊತೆಯಾಟ ಎದುರಾಳಿ ತಂಡಕ್ಕೆ ಸೋಲಿನ ಆತಂಕ ಮೂಡಿಸಿದ್ದರೆ ಇನ್ನು ಕೆಲವೊಮ್ಮೆ ತಮ್ಮ ತಂಡ ಹೀನಾಯವಾಗಿ ಸೋಲುವ ಅವಮಾನವನ್ನು ತಪ್ಪಿಸುತ್ತವೆ. ಈಗ ಅಂತಹದ್ದೆ ಒಂದು ಘಟನೆ ಮರುಕಳಿಸಿದ್ದು, ಜಿಂಬಾಬ್ವೆ ನೆಲದಲ್ಲಿ 10 ಮತ್ತು 11ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ನಡುವೆ ಇದೇ ರೀತಿಯ ಪಾಲುದಾರಿಕೆ ಕಂಡುಬಂದಿದೆ. ಈ ಜೊತೆಯಾಟ ತಂಡಕ್ಕೆ ಜಯವನ್ನು ತರದಿದ್ದರೂ, ಖಂಡಿತವಾಗಿಯೂ ತಂಡ ಹೀನಾಯವಾಗಿ ಸೋಲುವ ಮುಜುಗರವನ್ನು ತಪ್ಪಿಸಿದೆ. 10 ಮತ್ತು 11 ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಈ ಜೊತೆಯಾಟ ಜಿಂಬಾಬ್ವೆ ಮತ್ತು ಬಾಂಗ್ಲಾದೇಶ (Zimbabwe and Bangladesh) ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಕಂಡುಬಂದಿದೆ.

ಈ ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿ, 50 ಓವರ್‌ಗಳಲ್ಲಿ 9 ವಿಕೆಟ್‌ಗೆ 256 ರನ್ ಗಳಿಸಿತು. ಪ್ರತಿಕ್ರಿಯೆಯಾಗಿ ಗೆಲುವಿನ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡದ ಬ್ಯಾಟಿಂಗ್‌ ವಿಭಾಗ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಲು ಆರಂಭಿಸಿತು. ಆದರೆ ತಂಡದ ಮಾನ ಉಳಿಸಿದ್ದು ಮಾತ್ರ ಕೆಳಕ್ರಮಾಂಕದ ಇಬ್ಬರು ಬ್ಯಾಟ್ಸ್​ಮನ್​ಗಳು.

ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳ ಕಳಪೆ ಆಟ

ಜಿಂಬಾಬ್ವೆಯ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಉದುರಲ್ಲಾರಂಭಿಸಿದವು. ಯಾವುದೇ ಬ್ಯಾಟ್ಸ್‌ಮನ್‌ ವಿಕೆಟ್‌ನಲ್ಲಿ ಉಳಿಯಲು ಚಿಂತಿಸಲಿಲ್ಲ. ಅಂತಿಮವಾಗಿ ತಂಡದ 9 ವಿಕೆಟ್‌ಗಳು ಕೇವಲ 83 ರನ್‌ಗಳಿಗೆ ಪತನವಾದವು. ಹೀಗಾಗಿ 275 ರನ್​ಗಳ ಗುರಿಯನ್ನು ಬೆನ್ನಟ್ಟಿದ ತಂಡಕ್ಕೆ ಕೇವಲ 100 ರನ್ ಗಳಿಸಲು ಸಹ ಆಗಿರಲಿಲ್ಲ.

ಆದರೆ, ಅದರ ನಂತರ ಅಲ್ಲಿ ನೆರೆದವರು ನೋಡಿದ್ದು ಅದ್ಭುತ. ಜಿಂಬಾಬ್ವೆಯ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮಾಡದ ಕೆಲಸವನ್ನು ಅದರ ಮಧ್ಯಮ ಕ್ರಮಾಂಕದವರು ಮಾಡದ ಕೆಲಸವನ್ನು ಇಬ್ಬರು ಟೈಲ್ ಬ್ಯಾಟ್ಸ್‌ಮನ್‌ಗಳು ಅಂದರೆ 10 ಮತ್ತು 11 ಬ್ಯಾಟ್ಸ್‌ಮನ್‌ಗಳು ಮಾಡಿದ್ದು ಕಂಡುಬಂತು.

68 ರನ್ ಸೇರಿಸಿದ 10 ಮತ್ತು 11ನೇ ಕ್ರಮಾಂಕದ ಬ್ಯಾಟರ್ಸ್

10ನೇ ಮತ್ತು 11ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರಿಚರ್ಡ್ ಮತ್ತು ನ್ಯೂಚಿ 10ನೇ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿದರು. ರಿಚರ್ಡ್ 34 ರನ್ ಗಳಿಸಿದರೆ, ವಿಕ್ಟರ್ ನ್ಯೂಚಿ 26 ರನ್ ಗಳಿಸಿದರು. ಇದರ ನಂತರ, ಮೂರನೇ ಗರಿಷ್ಠ 25 ರನ್‌ಗಳು ಎಕ್ಸ್‌ಟ್ರಾಗಳಿಂದ ಬಂದವು. ಇದೆಲ್ಲದರ ನಂತರ ತಂಡದ ಸ್ಕೋರ್ 9 ವಿಕೆಟ್‌ಗೆ 83 ರನ್‌ಗಳಿಂದ 151 ರನ್‌ಗಳನ್ನು ತಲುಪಿತು. ಆದರೆ, ಜಿಂಬಾಬ್ವೆಗೆ ಜಯ ಸಿಗಲಿಲ್ಲ. ಹೀಗಾಗಿ ಮೂರನೇ ಏಕದಿನ ಪಂದ್ಯದಲ್ಲಿ 105 ರನ್‌ಗಳಿಂದ ಸೋಲಬೇಕಾಯಿತು. ಆದರೆ ಈ ಪಾಲುದಾರಿಕೆ ಸೋಲಿನ ಅಂತರವನ್ನು ಕಡಿಮೆ ಮಾಡುವ ಕೆಲಸ ಮಾಡಿತು.

ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಜಿಂಬಾಬ್ವೆ 2-1 ರಿಂದ ಗೆದ್ದುಕೊಂಡಿದೆ. ವಿಶೇಷವೆಂದರೆ 10 ಮತ್ತು 11ನೇ ಶ್ರೇಯಾಂಕದ ಈ ಇಬ್ಬರೂ ಆಟಗಾರರು ಭಾರತದ ವಿರುದ್ಧವೂ ಆಡಲಿದ್ದಾರೆ. ಇಡೀ ಜಿಂಬಾಬ್ವೆ ತಂಡ ಬಾಂಗ್ಲಾದೇಶದ ವಿರುದ್ಧ ಆಡಿದ ರೀತಿ ನೋಡಿದರೆ ಟೀಂ ಇಂಡಿಯಾಗೆ ಈ ತಂಡವನ್ನು ಸುಲಭವಾಗಿ ಸೋಲಿಸುವ ಅವಕಾಶಗಳು ತೀರ ಕಡಿಮೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada