IPL 2023: ಮುಂದಿನ ಸೀಸನ್​ಗೆ ಇಂಗ್ಲೆಂಡ್​ನ ಇಬ್ಬರು ಸ್ಟಾರ್ ಆಲ್​ರೌಂಡರ್ಸ್​ ಮೇಲೆ ಕಣ್ಣಿಟ್ಟ ಸಿಎಸ್​ಕೆ..! ಯಾರವರು?

IPL 2023: ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಸಿಎಸ್​ಕೆ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಆದರೆ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಈ ತಂಡ ಮುಂದಿನ ಸೀಸನ್​ನಲ್ಲಿ ಒಂದಿಷ್ಟು ಬದಲಾವಣೆಗಳೊಂದಿಗೆ ಅಖಾಡಕ್ಕಿಳಿಯುವ ಸಾಧ್ಯತೆ ಇದೆ.

IPL 2023: ಮುಂದಿನ ಸೀಸನ್​ಗೆ ಇಂಗ್ಲೆಂಡ್​ನ ಇಬ್ಬರು ಸ್ಟಾರ್ ಆಲ್​ರೌಂಡರ್ಸ್​ ಮೇಲೆ ಕಣ್ಣಿಟ್ಟ ಸಿಎಸ್​ಕೆ..! ಯಾರವರು?
ಇಂಗ್ಲೆಂಡ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Jul 27, 2022 | 8:04 AM

ಚೆನ್ನೈ ಸೂಪರ್ ಕಿಂಗ್ಸ್ (CSK) IPL 2022 ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ವಾಸ್ತವವಾಗಿ, ಕಳೆದ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಸಿಎಸ್​ಕೆ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಆದರೆ, ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ನಾಯಕತ್ವದ ಈ ತಂಡ ಮುಂದಿನ ಸೀಸನ್​ನಲ್ಲಿ ಒಂದಿಷ್ಟು ಬದಲಾವಣೆಗಳೊಂದಿಗೆ ಅಖಾಡಕ್ಕಿಳಿಯುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಸೀಸನ್ಗೆ ಸಿಎಸ್​ಕೆ ಫ್ರಾಂಚೈಸಿ ತನ್ನ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಿದ್ದು, ಅದರ ಪ್ರಯುಕ್ತ ಕೆಲವು ಹೊಸ ಹಾಗೂ ಹಳೆಯ ಮುಖಗಳು ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ಸಿಎಸ್​ಕೆ ಆಡಳಿತ ಮಂಡಳಿ ಕೂಡ ಮುಂದಿನ ಹರಾಜಿನಲ್ಲಿ ಕೆಲವು ಪ್ರಮುಖ ಆಟಗಾರರನ್ನು ಖರೀದಿಸುವತ್ತ ಗಮನಹರಿಸಿದೆ. ಹೀಗಾಗಿ ಮುಂದಿನ ಹರಾಜಿನಲ್ಲಿ ಸಿಎಸ್​ಕೆ (Chennai Super Kings) ಖರೀದಿಸಬಹುದಾದ ಪ್ರಮುಖ 3 ಆಟಗಾರರ ವಿವರ ಇಲ್ಲಿದೆ.

ಸ್ಯಾಮ್ ಕರನ್..

IPL 2022 ರ ಸಮಯದಲ್ಲಿ ಗಾಯಗೊಂಡಿದ್ದ ಕರನ್, ಇದರಿಂದಾಗಿ ಸಂಪೂರ್ಣ ಸೀಸನ್​ನಿಂದ ಹೊರಗುಳಿದಿದ್ದರು. ಆದರೆ ಸ್ಯಾಮ್ ಕರನ್ ಮುಂದಿನ ಐಪಿಎಲ್​ಗೆ ಲಭ್ಯರಿರಲಿದ್ದಾರೆ ಎಂದು ಊಹಿಸಲಾಗಿದೆ. ಹೀಗಾಗಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹರಾಜಿನಲ್ಲಿ ಸ್ಯಾಮ್ ಕರನ್ ಅವರ ಮೇಲೆ ಬಾಜಿ ಕಟ್ಟಬಹುದು. ವಾಸ್ತವವಾಗಿ, CSK ತಮ್ಮ 38 ವರ್ಷ ವಯಸ್ಸಿನ ಆಲ್ ರೌಂಡರ್ DJ ಬ್ರಾಬೊಗೆ ಬದಲಿಯನ್ನು ಹುಡುಕುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಸ್ಯಾಮ್ ಕರನ್ ಉತ್ತಮ ಆಯ್ಕೆಯಾಗಿರಬಹುದು.

ಇದನ್ನೂ ಓದಿ
Image
CWG 2022: ಭಾರತ ಮಹಿಳಾ ಕ್ರಿಕೆಟ್ ತಂಡದ ಮತ್ತೊಬ್ಬ ಆಟಗಾರ್ತಿಗೆ ಕೊರೊನಾ ಸೋಂಕು..!
Image
IND vs WI: ಟಿ20 ಸರಣಿ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ; ಮೊದಲ 3 ಪಂದ್ಯಗಳಿಂದ ರಾಹುಲ್ ಔಟ್!
Image
IND vs WI: ಟಿ20 ಸರಣಿಗೆ ಟ್ರೆನಿಡಾಡ್ ತಲುಪಿದ ರೋಹಿತ್ ಪಡೆ; ಕನ್ನಡಿಗ ರಾಹುಲ್ ಮಾತ್ರ ನಾಪತ್ತೆ!

ಬೆನ್ ಸ್ಟೋಕ್ಸ್..

ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ತಮ್ಮ ಅದ್ಭುತ ಆಲ್ ರೌಂಡರ್ ಪ್ರದರ್ಶನದಿಂದ ಟಿ20 ಕ್ರಿಕೆಟ್‌ನಲ್ಲಿ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದರು. ಹೀಗಾಗಿ ಬೆನ್ ಸ್ಟೋಕ್ಸ್ ಇಡೀ ಸೀಸನ್​ಗೆ ತಂಡದಲ್ಲಿ ಲಭ್ಯವಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಲು ಮುಂದಾಗುವುದಂತೂ ಖಚಿತ.

ಶಕೀಬ್ ಅಲ್ ಹಸನ್

ಶಕೀಬ್ ಅಲ್ ಹಸನ್ ಐಪಿಎಲ್‌ನಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಈ ಹಿಂದೆ ಅವರು ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಅನುಭವ ಕೂಡ ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಕೀಬ್ ಅಲ್ ಹಸನ್ ಅವರು ಚೆನ್ನೈ ಸೂಪರ್ ಕಿಂಗ್ಸ್‌ನ ಲೆಜೆಂಡರಿ ಆಲ್‌ರೌಂಡರ್ ಡಿಜೆ ಬ್ರಾವೋಗೆ ಉತ್ತಮ ಬದಲಿಯಾಗಬಹುದು. ಆದರೆ ಈ ಆಟಗಾರನ ಮೇಲೆ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಬಾಜಿ ಕಟ್ಟಲಿದೆಯೇ ಅಥವಾ ಇಲ್ಲವೇ ಎಂಬುದು ಹರಾಜಿನ ವೇಳೆ ಕುತೂಹಲ ಮೂಡಿಸಲಿದೆ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ