- Kannada News Photo gallery Cricket photos IND VS WI Team Indias legendary player out of 3 T20 matches will play in America
IND vs WI: ಟಿ20 ಸರಣಿ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ; ಮೊದಲ 3 ಪಂದ್ಯಗಳಿಂದ ರಾಹುಲ್ ಔಟ್!
KL Rahul: ಮಾಧ್ಯಮ ವರದಿಗಳ ಪ್ರಕಾರ ಕೆಎಲ್ ರಾಹುಲ್ ಮೊದಲ ಮೂರು ಟಿ20 ಪಂದ್ಯಗಳಲ್ಲಿ ಆಡುವುದಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ T20 ಸರಣಿಯು ಜುಲೈ 29 ರಿಂದ ಪ್ರಾರಂಭವಾಗುತ್ತಿದೆ. ಮೊದಲ ಮೂರು T20ಗಳನ್ನು ಟ್ರಿನಿಡಾಡ್‌ನಲ್ಲಿ ಮತ್ತು ನಂತರ ಸೇಂಟ್ ಕಿಟ್ಸ್‌ನಲ್ಲಿ ಆಡಲಾಗುವುದು.
Updated on:Jul 26, 2022 | 6:45 PM

kl Rahul

KL Rahul

ಕೆಎಲ್ ರಾಹುಲ್ ಲಾಂಡರ್‌ಹಿಲ್‌ನಲ್ಲಿ ನಡೆಯಲಿರುವ 2 ಟಿ20 ಪಂದ್ಯಗಳಲ್ಲಿ ಮಾತ್ರ ಆಡುವ ನಿರೀಕ್ಷೆಯಿದೆ. ಕೆಎಲ್ ರಾಹುಲ್ ಕೂಡ ಲಾಂಡರ್‌ಹಿಲ್‌ನಲ್ಲಿ ಟಿ 20 ಶತಕ ಗಳಿಸಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ. 2016ರಲ್ಲಿ ಲಾಂಡರ್‌ಹಿಲ್‌ನಲ್ಲಿ ಕೆಎಲ್ ರಾಹುಲ್ 51 ಎಸೆತಗಳಲ್ಲಿ 110 ರನ್ ಗಳಿಸಿದ್ದರು.

ಭಾರತ ಟಿ20 ತಂಡದ ಸದಸ್ಯರು ಟ್ರಿನಿಡಾಡ್ ತಲುಪಿದ್ದಾರೆ. ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ಆರ್ ಅಶ್ವಿನ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್ ಟಿ20 ಸರಣಿಗೆ ತಂಡದೊಂದಿಗೆ ಸೇರಿಕೊಂಡಿದ್ದಾರೆ. ಈ ಎಲ್ಲಾ ಆಟಗಾರರಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಅದೇ ಸಮಯದಲ್ಲಿ ಕುಲದೀಪ್ ಯಾದವ್ ಕೂಡ ಫಿಟ್ ಆಗಿ ಟೀಂ ಇಂಡಿಯಾಗೆ ಮರಳಿದ್ದಾರೆ.

ಟಿ20 ಸರಣಿಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಕೆಎಲ್ ರಾಹುಲ್, ದಿನೇಶ್ ಕುಮಾರ್, ಕೆಎಲ್ ರಾಹುಲ್ , ರಿಷಬ್ ಪಂತ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಹರ್ಷಲ್ ಪಟೇಲ್.
Published On - 6:44 pm, Tue, 26 July 22




