IND vs WI: ಟಿ20 ಸರಣಿಗೆ ಟ್ರೆನಿಡಾಡ್ ತಲುಪಿದ ರೋಹಿತ್ ಪಡೆ; ಕನ್ನಡಿಗ ರಾಹುಲ್ ಮಾತ್ರ ನಾಪತ್ತೆ!

IND vs WI: ಟ್ರಿನಿಡಾಡ್‌ಗೆ ಬಂದಿಳಿದ ಟೀಂ ಇಂಡಿಯಾದಲ್ಲಿ ರಾಹುಲ್ ಕಾಣಿಸಿಕೊಂಡಿಲ್ಲ. ಹೀಗಾಗಿ ಟಿ20 ಸರಣಿಗೆ ರಾಹುಲ್ ಲಭ್ಯತೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ.

IND vs WI: ಟಿ20 ಸರಣಿಗೆ ಟ್ರೆನಿಡಾಡ್ ತಲುಪಿದ ರೋಹಿತ್ ಪಡೆ; ಕನ್ನಡಿಗ ರಾಹುಲ್ ಮಾತ್ರ ನಾಪತ್ತೆ!
Team India
Follow us
TV9 Web
| Updated By: ಪೃಥ್ವಿಶಂಕರ

Updated on: Jul 26, 2022 | 6:29 PM

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಮೊದಲ ಎರಡು ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಸದ್ಯಕ್ಕೆ ಇನ್ನೂ ಒಂದು ಏಕದಿನ ಪಂದ್ಯ ಬಾಕಿ ಉಳಿದಿದ್ದು, ಬುಧವಾರ ನಡೆಯಲಿದೆ. ಇದಾದ ಬಳಿಕ ಐದು ಪಂದ್ಯಗಳ ಟಿ20 ಸರಣಿಯೂ ನಡೆಯಲಿದ್ದು, ಇದಕ್ಕಾಗಿ ತಂಡ ಟ್ರಿನಿಡಾಡ್ ತಲುಪಿದೆ. ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ರೋಹಿತ್ ಶರ್ಮಾ, ರಿಷಬ್ ಪಂತ್, ಭುವನೇಶ್ವರ್ ಕುಮಾರ್ ಮತ್ತು ಆರ್ ಅಶ್ವಿನ್ (Rohit Sharma, Rishabh Pant , Bhuvneshwar Kumar and R Ashwin) ಕಾಣಿಸಿಕೊಂಡಿರುವ ವೀಡಿಯೊವನ್ನು ಪೋಸ್ಟ್ ಮಾಡಿದೆ. ಆದರೆ, ಟ್ರಿನಿಡಾಡ್‌ಗೆ ಬಂದಿಳಿದ ಟೀಂ ಇಂಡಿಯಾದಲ್ಲಿ ರಾಹುಲ್ (KL Rahul) ಕಾಣಿಸಿಕೊಂಡಿಲ್ಲ. ಹೀಗಾಗಿ ಟಿ20 ಸರಣಿಗೆ ರಾಹುಲ್ ಲಭ್ಯತೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗೆ ಇಂಜುರಿಯಿಂದ ಗುಣಮುಖರಾಗಿದ್ದ ರಾಹುಲ್, ಫಿಟ್ನೇಸ್ ಪರೀಕ್ಷೆಯಲ್ಲಿ ಪಾಸಾಗಿ ತಂಡವನ್ನು ಸೇರಿಕೊಳ್ಳುವುದರಲ್ಲಿದ್ದರು. ಆದರೆ ಅಷ್ಟರಲ್ಲಿ ಕೊರೊನಾ ಸೋಂಕಿನಿಂದಾಗಿ ರಾಹುಲ್ ವಿಂಡೀಸ್​ಗೆ ತೆರಳುವುದು ಕೊಂಚ ತಡವಾಗಿತ್ತು.

ಲಗೇಜ್ ಇಲ್ಲದೆ ಟ್ರಿನಿಡಾಡ್ ತಲುಪಿದರಾ ಪಂತ್

ಇದನ್ನೂ ಓದಿ
Image
ಕೊನೆಯ ಓವರ್​ನಲ್ಲಿ 26 ರನ್ ಬಾರಿಸಿ ತಂಡಕ್ಕೆ ಅದ್ಭುತ ಗೆಲುವು ತಂದಿತ್ತ ನಂ.1 ಟಿ20 ಬೌಲರ್..! ವಿಡಿಯೋ ನೋಡಿ
Image
Retired number: 10, 64, 77; ಕ್ರಿಕೆಟ್​ನಲ್ಲಿ ಈ ನಂಬರ್​ಗಳ ಜರ್ಸಿಗೂ ಸಿಕ್ಕಿದೆ ಶಾಶ್ವತ ನಿವೃತ್ತಿ! ಕಾರಣವೇನು ಗೊತ್ತಾ?
Image
IND vs WI: ತಂಡದಿಂದ ಹೊರಗಿದ್ದ ಆಟಗಾರ ಇದೀಗ ಧೋನಿ-ಕೊಹ್ಲಿಯನ್ನು ಹಿಂದಿಕ್ಕಿ, ಇತಿಹಾಸ ಸೃಷ್ಟಿಸಲಿದ್ದಾನೆ!

ವಾಸ್ತವವಾಗಿ ನಾಯಕ ರೋಹಿತ್ ಶರ್ಮಾ, ಆರ್.ಅಶ್ವಿನ್, ಭುವನೇಶ್ವರ್ ಕುಮಾರ್, ದಿನೇಶ್ ಕಾರ್ತಿಕ್ ಎಲ್ಲರ ಕೈಯಲ್ಲೂ ಲಗೇಜ್​ಗಳಿದ್ದವು. ಎಲ್ಲರೂ ದೊಡ್ಡ ಬ್ಯಾಗ್​ಗಳೊಂದಿಗೆ ಟ್ರಿನಿಡಾಡ್ ತಲುಪಿದರು ಆದರೆ ಪಂತ್ ಅವರ ಕೈಯಲ್ಲಿ ಏನೂ ಇರಲಿಲ್ಲ. ಅವರ ಕೈಯಲ್ಲಿ ಜಾಕೆಟ್ ಮತ್ತು ಅವರ ಭುಜದ ಮೇಲೆ ಒಂದು ಸಣ್ಣ ಬ್ಯಾಗ್ ಮಾತ್ರ ಇತ್ತು.

ಪಂತ್‌ಗೆ ಟಿ20 ಸರಣಿ ಮಹತ್ವದ್ದಾಗಿದೆ

ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಸರಣಿಯು ರಿಷಬ್ ಪಂತ್ ಅವರಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ ಪಂತ್, ಈ ಸ್ವರೂಪದಲ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲಿ ಅವರು ಕೇವಲ 26 ಮತ್ತು 1 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. T20Iಗಳಲ್ಲಿ, ಪಂತ್ 44 ಇನ್ನಿಂಗ್ಸ್‌ಗಳಲ್ಲಿ ಕೇವಲ 22.58 ಸರಾಸರಿಯಲ್ಲಿ 768 ರನ್ ಗಳಿಸಿದ್ದಾರೆ. ಅಲ್ಲದೆ, ಪಂತ್ ಅವರ ಸ್ಟ್ರೈಕ್ ರೇಟ್ ಕೂಡ 125 ಕ್ಕಿಂತ ಕಡಿಮೆಯಾಗಿದೆ. ಟಿ 20 ನಲ್ಲಿ ಅವರ ಸ್ಥಾನಕ್ಕೆ ಅಪಾಯವಿರುವುದರಿಂದ ವೆಸ್ಟ್ ಇಂಡೀಸ್ ಸರಣಿಯಲ್ಲಿ ಪಂತ್ ತನ್ನನ್ನು ತಾನು ಸಾಬೀತುಪಡಿಸಬೇಕಾಗಿದೆ. ದಿನೇಶ್ ಕಾರ್ತಿಕ್ ಕೂಡ ವಿಕೆಟ್ ಕೀಪರ್ ಆಗಿ ತಂಡವನ್ನು ಪ್ರವೇಶಿಸಿದ್ದು, ಮಧ್ಯಮ ಕ್ರಮಾಂಕದಲ್ಲಿ ಇತರ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ಜುಲೈ 29 ರಂದು ಟ್ರಿನಿಡಾಡ್‌ನಲ್ಲಿ ನಡೆಯಲಿದೆ. ಇದಾದ ನಂತರ ಎರಡನೇ ಟಿ20 ಆಗಸ್ಟ್ 1 ರಂದು ಸೇಂಟ್ ಕಿಟ್ಸ್, ಮೂರನೇ ಟಿ20 ಪಂದ್ಯ ಆಗಸ್ಟ್ 2 ರಂದು ನಡೆಯಲಿದೆ. ನಾಲ್ಕನೇ ಟಿ20 ಪಂದ್ಯ ಆಗಸ್ಟ್ 6 ರಂದು ಅಮೆರಿಕದ ಲಾಂಡರ್‌ಹಿಲ್‌ನಲ್ಲಿ ಮತ್ತು ಐದನೇ ಟಿ20 ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್