IND vs WI: ತಂಡದಿಂದ ಹೊರಗಿದ್ದ ಆಟಗಾರ ಇದೀಗ ಧೋನಿ-ಕೊಹ್ಲಿಯನ್ನು ಹಿಂದಿಕ್ಕಿ, ಇತಿಹಾಸ ಸೃಷ್ಟಿಸಲಿದ್ದಾನೆ!

IND vs WI: ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡವು, ವೆಸ್ಟ್ ಇಂಡೀಸ್ ತಂಡವನ್ನು ಅವರದ್ದೇ ನೆಲದಲ್ಲಿ ಸತತ 6 ODI ಸರಣಿಗಳಲ್ಲಿ ಸೋಲಿಸಿದೆ. ಭಾರತ 2009, 2011, 2013, 2017, 2019 ಮತ್ತು ಈಗ 2022 ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಸರಣಿಯನ್ನು ಗೆದ್ದಿದೆ.

IND vs WI: ತಂಡದಿಂದ ಹೊರಗಿದ್ದ ಆಟಗಾರ ಇದೀಗ ಧೋನಿ-ಕೊಹ್ಲಿಯನ್ನು ಹಿಂದಿಕ್ಕಿ, ಇತಿಹಾಸ ಸೃಷ್ಟಿಸಲಿದ್ದಾನೆ!
ಧೋನಿ, ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on: Jul 26, 2022 | 2:55 PM

ವೆಸ್ಟ್ ಇಂಡೀಸ್ (West Indies) ವಿರುದ್ಧದ ಏಕದಿನ ಸರಣಿಯನ್ನು ಈಗಾಗಲೇ ಧವನ್ (Shikhar Dhawan) ಪಡೆ ಗೆದ್ದು ಬೀಗಿದೆ. ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲಾಗಿದೆಯಾದರೂ ಮೂರನೇ ಏಕದಿನ ಪಂದ್ಯವು ಟೀಮ್ ಇಂಡಿಯಾಕ್ಕೆ (Team India) ತುಂಬಾ ವಿಶೇಷವಾಗಿದೆ. ವಿಶೇಷ ಏಕೆಂದರೆ ಭಾರತ ಮೂರನೇ ಪಂದ್ಯವನ್ನು ಗೆದ್ದರೆ ವೆಸ್ಟ್ ಇಂಡೀಸ್ ಕ್ಲೀನ್ ಸ್ವೀಪ್ ಮಾಡುತ್ತದೆ ಮತ್ತು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ, ಟೀಮ್ ಇಂಡಿಯಾ ಮೊದಲ ಬಾರಿಗೆ ವಿಂಡೀಸ್ ತಂಡವನ್ನು ಅವರ ನೆಲದಲ್ಲೇ ಕ್ಲೀನ್ ಸ್ವೀಪ್ ಮಾಡಿದ ದಾಖಲೆ ಮಾಡಲಿದೆ. ಆದರೆ ಭಾರತಕ್ಕೆ ಇದುವರೆಗೂ ಒಮ್ಮೆಯೂ ಕೆರಿಬಿಯನ್ ದೈತ್ಯರನ್ನು ಕ್ಲೀನ್​ಸ್ವೀಪ್ ಮಾಡಲು ಸಾಧ್ಯವಾಗಿಲ್ಲ.

ವಿರಾಟ್-ಧೋನಿ ನಾಯಕತ್ವದಲ್ಲಿಯೂ ವಿಫಲ

ವಿರಾಟ್ ಕೊಹ್ಲಿ-ಧೋನಿ, ರೈನಾ ನಾಯಕತ್ವದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಸರಣಿಯನ್ನು ಗೆದ್ದುಕೊಂಡಿತು ಆದರೆ ಈ ಮೂವರು ನಾಯಕರಿಗು ಕ್ಲೀನ್ ಸ್ವೀಪ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಶಿಖರ್ ಧವನ್​ಗೆ ಈ ಸುವರ್ಣಾವಕಾಶ ಸಿಕ್ಕಿದೆ. ಟೀಂ ಇಂಡಿಯಾಗೆ ಕೊನೆಯ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಕ್ಲೀನ್ ಸ್ವೀಪ್ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಮಳೆಯಿಂದಾಗಿ ಒಂದು ಪಂದ್ಯವನ್ನು ರದ್ದುಗೊಳಿಸಲಾಯಿತು. ಹೀಗಾಗಿ ಏಕದಿನ ಸರಣಿಯನ್ನು ಆಗಿನ ನಾಯಕ ವಿರಾಟ್ ಕೊಹ್ಲಿಗೆ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಕೈತಪ್ಪಿತ್ತು.

ಇದನ್ನೂ ಓದಿ
Image
MS Dhoni: ಕ್ಯಾಪ್ಟನ್ ಕೂಲ್​ ಧೋನಿಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್! ಕಾರಣವೇನು?
Image
SL Vs PAK: ಬರೋಬ್ಬರಿ 13 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ 1000 ರನ್ ಪೂರೈಸಿದ ಪಾಕ್ ಕ್ರಿಕೆಟಿಗ..!
Image
Hardik Pandya: ಟೀಂ ಇಂಡಿಯಾ ವಿಶ್ವಕಪ್ ಸೋಲಲು ಹಾರ್ದಿಕ್ ಪಾಂಡ್ಯ ಕಾರಣ! ರವಿಶಾಸ್ತ್ರಿ ಶಾಕಿಂಗ್ ಹೇಳಿಕೆ

ಆದರೆ ಈಗ ಧವನ್ ನಾಯಕತ್ವದಲ್ಲಿ ಈ ಸಾಧನೆ ಮಾಡಬಹುದು. ಧವನ್ ಟಿ 20 ತಂಡದಲ್ಲಿ ಇಲ್ಲ ಅಥವಾ ಅವರು ಟೆಸ್ಟ್ ಆಡುವುದಿಲ್ಲ. ಅಲ್ಲದೆ ಏಕದಿನ ಪಂದ್ಯಗಳಲ್ಲಿಯೂ ರೋಹಿತ್ ವಿಶ್ರಾಂತಿಯ ನಂತರ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಹೀಗಾಗಿ ಮುಂದೆ ಧವನ್​ಗೆ ನಾಯಕತ್ವ ಸಿಗುವುದು ತುಂಬಾ ಕಷ್ಟಸಾಧ್ಯ. ಹೀಗಾಗಿ ಧವನ್ ಈಗ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಇತಿಹಾಸ ಸೃಷ್ಟಿಸಬಹುದಾಗಿದೆ.

33 ವರ್ಷಗಳ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಭಾರತ?

ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಅವರ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿಲ್ಲ. ಆದರೆ ಆತಿಥೇಯರು ತಮ್ಮ ಸ್ವಂತ ನೆಲದಲ್ಲಿ ಟೀಮ್ ಇಂಡಿಯಾಕ್ಕೆ ಅಂತಹ ಸೋಲನ್ನು ಈ ಹಿಂದೆ ನೀಡಿದ್ದರು. 1989ರಲ್ಲಿ ವಿವ್ ರಿಚರ್ಡ್ಸ್ ನೇತೃತ್ವದ ವಿಂಡೀಸ್ ತಂಡ ಭಾರತವನ್ನು 5-0 ಅಂತರದಿಂದ ಸೋಲಿಸಿತ್ತು.

ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡವು, ವೆಸ್ಟ್ ಇಂಡೀಸ್ ತಂಡವನ್ನು ಅವರದ್ದೇ ನೆಲದಲ್ಲಿ ಸತತ 6 ODI ಸರಣಿಗಳಲ್ಲಿ ಸೋಲಿಸಿದೆ. ಭಾರತ 2009, 2011, 2013, 2017, 2019 ಮತ್ತು ಈಗ 2022 ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಸರಣಿಯನ್ನು ಗೆದ್ದಿದೆ. ಇದೀಗ 2022 ರಲ್ಲೂ ಕ್ಲೀನ್ ಸ್ವೀಪ್ ಮಾಡುವ ಅವಕಾಶವಿದ್ದು, ಟೀಮ್ ಇಂಡಿಯಾ ಇತಿಹಾಸವನ್ನು ರಚಿಸಬಹುದು. ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆಡುವ XI ನಲ್ಲಿಯೂ ಬದಲಾವಣೆಗಳನ್ನು ಕಾಣಬಹುದು. ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಅವಕಾಶ ಸಿಕ್ಕರೆ ಇದು ಅರ್ಷದೀಪ್ ಸಿಂಗ್ ಅವರ ಚೊಚ್ಚಲ ಪಂದ್ಯವಾಗಲಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ಅದ್ಭುತ ಪ್ರದರ್ಶನ ಕೂಡ ನೀಡಿದ್ದಾರೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್