IPL Media Rights: ಕೋಟಿಗಳ ಸುರಿಮಳೆ: ಐಪಿಎಲ್​ ಪ್ರಸಾರ ಹಕ್ಕುಗಳಿಂದ BCCI ಗಳಿಸಿದೆಷ್ಟು ಗೊತ್ತಾ?

IPL Media Rights: ಪ್ಯಾಕೇಜ್-ಎ (ಟಿವಿ ರೈಟ್ಸ್)​ 23,575 ಕೋಟಿಗೆ ಮಾರಾಟವಾದರೆ, ಪ್ಯಾಕೇಜ್-ಬಿ (ಡಿಜಿಟಲ್ ಪ್ರಸಾರ ಹಕ್ಕುಗಳು) 20,500 ಕೋಟಿಗೆ ಹರಾಜಾಗಿದೆ.

IPL Media Rights: ಕೋಟಿಗಳ ಸುರಿಮಳೆ: ಐಪಿಎಲ್​ ಪ್ರಸಾರ ಹಕ್ಕುಗಳಿಂದ BCCI ಗಳಿಸಿದೆಷ್ಟು ಗೊತ್ತಾ?
IPL Media Rights
TV9kannada Web Team

| Edited By: Zahir PY

Jun 14, 2022 | 8:53 PM

IPL Media Rights: ಐಪಿಎಲ್ 2023 ರಿಂದ 2027ರವರೆಗಿನ ನೇರ ಪ್ರಸಾರ ಹಕ್ಕುಗಳ ಹರಾಜು ಪ್ರಕ್ರಿಯೆ ಮುಗಿದಿದೆ. ನಾಲ್ಕು ಪ್ಯಾಕೇಜ್​ಗಳ ಮೂಲಕ ನಡೆಸಲಾದ ಹರಾಜಿನಿಂದ ಬಿಸಿಸಿಐ ಬರೋಬ್ಬರಿ 48,390 ಕೋಟಿ ಆದಾಯಗಳಿಸಿದೆ. ಸೋಮವಾರ ನಡೆದ ಹರಾಜಿನಲ್ಲಿ ಭಾರತದಲ್ಲಿನ ಟಿವಿ ಪ್ರಸಾರ ಹಕ್ಕುಗಳನ್ನು 23,575 ಕೋಟಿಗೆ ಡಿಸ್ನಿ (ಸ್ಟಾರ್​ ನೆಟ್​ವರ್ಕ್​)​ ಖರೀದಿಸಿತ್ತು. ಹಾಗೆಯೇ ಭಾರತದ ಡಿಜಿಟಲ್​ ಪ್ರಸಾರ ಹಕ್ಕುಗಳನ್ನು ರಿಲಯನ್ಸ್ ವಯಾಕಾಮ್​-18 ಕಂಪೆನಿ 20,500 ಕೋಟಿ ನೀಡಿ ತಮ್ಮದಾಗಿಸಿಕೊಂಡಿತು. ಇನ್ನು ಪ್ಯಾಕೇಜ್ ಸಿ- ಅನ್ನು 3,258 ಕೋಟಿಗೆ ರಿಲಯನ್ಸ್ ವಯಾಕಾಮ್-18 ಪಡೆದರೆ, ಪ್ಯಾಕೇಜ್-ಡಿ ಅನ್ನು ವಯಾಕಾಮ್-18 ಹಾಗೂ ಟೈಮ್ಸ್​ ಇಂಟರ್​ನೆಟ್​ ಸಂಸ್ಥೆಯು​ 1057 ಕೋಟಿ ನೀಡಿ ಖರೀದಿಸಿದೆ.

ಇಲ್ಲಿ ಪ್ಯಾಕೇಜ್-ಎ (ಟಿವಿ ರೈಟ್ಸ್)​ 23,575 ಕೋಟಿಗೆ ಮಾರಾಟವಾದರೆ, ಪ್ಯಾಕೇಜ್-ಬಿ  (ಡಿಜಿಟಲ್ ಪ್ರಸಾರ ಹಕ್ಕುಗಳು) 20,500 ಕೋಟಿಗೆ ಹರಾಜಾಗಿದೆ. ಈ ಮೂಲಕ ಕೇವಲ ಎರಡು ಪ್ಯಾಕೇಜ್​ಗಳ ಮೂಲಕ ಬಿಸಿಸಿಐ ಬರೋಬ್ಬರಿ 44,075 ಕೋಟಿ ಆದಾಯಗಳಿಸಿದೆ. ಇನ್ನು ಪ್ಯಾಕೇಜ್ ಸಿ (98 ಪ್ರಮುಖ ಪಂದ್ಯಗಳ ಡಿಜಿಟಲ್ ಹಕ್ಕು) 3,258 ಕೋಟಿಗೆ ಹರಾಜಾದರೆ, ಪ್ಯಾಕೇಜ್-ಡಿ (ವಿದೇಶಿ ನೇರ ಪ್ರಸಾರ ಹಕ್ಕು) 1057 ಕೋಟಿಗೆ ಬಿಕರಿಯಾಗಿದೆ. ಈ ಮೂಲಕ ಮುಂದಿನ ಐದು ಸೀಸನ್ ಐಪಿಎಲ್​ ನೇರ ಪ್ರಸಾರ ಹಕ್ಕುಗಳಿಂದ ಬಿಸಿಸಿಐ 48,390 ಕೋಟಿ ಆದಾಯಗಳಿಸಿದೆ. ಅಂದರೆ ಪ್ರತಿ ಪಂದ್ಯಗಳು 118.02 ಕೋಟಿ ರೂ.ಗೆ ಹರಾಜಾಗಿದೆ.

ಇದರೊಂದಿಗೆ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ಸ್ಪೋರ್ಟ್ಸ್​​ ಲೀಗ್ ಆಗಿ ಐಪಿಎಲ್​ ಗುರುತಿಸಿಕೊಂಡಿದೆ. ಸದ್ಯ ಅಗ್ರಸ್ಥಾನದಲ್ಲಿ ಅಮೆರಿಕದ ನ್ಯಾಷನಲ್ ಫುಟ್‌ಬಾಲ್ ಲೀಗ್ (NFL) ಇದ್ದು, ಇದರ ಪ್ರತಿ ಪಂದ್ಯದ ನೇರ ಪ್ರಸಾರದ ಹಕ್ಕು 133 ಕೋಟಿಗೆ ಮಾರಾಟವಾಗಿದೆ. ಇದೀಗ ಐಪಿಎಲ್ ನೇರ ಪ್ರಸಾರ ಹಕ್ಕು 48,390 ಕೋಟಿಗೆ ಮಾರಾಟವಾಗಿದ್ದು, ಈ ಮೂಲಕ​ ಪ್ರತಿ ಪಂದ್ಯಗಳ ಪ್ರಸಾರ ಹಕ್ಕುಗಳಿಂದ ಬಿಸಿಸಿಐ 118 ಕೋಟಿ ಆದಾಯಗಳಿಸಿದೆ. ಅದರಂತೆ ವಿಶ್ವದ ಶ್ರೀಮಂತ ಕ್ರಿಕೆಟ್ ಆಗಿ ಐಪಿಎಲ್ ಗುರುತಿಸಿಕೊಂಡಿದೆ. ಅಷ್ಟೇ ಅಲ್ಲದೆ ವಿಶ್ವದ ಅತ್ಯಂತ ದುಬಾರಿ ಪ್ರಸಾರ ಹಕ್ಕನ್ನು ಹೊಂದಿರುವ 2ನೇ ಲೀಗ್​ ಆಗಿ ಹೊರಹೊಮ್ಮಿದೆ.

410 ಪಂದ್ಯಗಳ ನೇರ ಪ್ರಸಾರ: 2023 ರಿಂದ 2027 ರವರೆಗೆ ಐಪಿಎಲ್​ನಲ್ಲಿ ಒಟ್ಟು 410 ಪಂದ್ಯಗಳನ್ನು ಆಡಲಾಗುತ್ತದೆ. ಈ 410 ಪಂದ್ಯಗಳಿಗೆ ಬಿಡ್ಡಿಂಗ್ ನಡೆಸಲಾಗಿದ್ದು, ಅದರಂತೆ ಪ್ರತಿ ಪಂದ್ಯಗಳು 111 ಕೋಟಿಗೆ ಮಾರಾಟವಾಗಿದೆ. ಅಂದರೆ ಇಲ್ಲಿ ಪ್ರತಿ ಸೀಸನ್​ಗೆ ಪಂದ್ಯಗಳ ಸಂಖ್ಯೆ ಹೆಚ್ಚುತ್ತಾ ಹೋಗಲಿದೆ. ಅಂದರೆ ಈ ಬಾರಿ ಹೊಸ ಎರಡು ತಂಡಗಳ ಸೇರ್ಪಡೆಯಿಂದಾಗಿ ಐಪಿಎಲ್ ಪಂದ್ಯಗಳ ಸಂಖ್ಯೆ ಹೆಚ್ಚಳವಾಗಿತ್ತು. ಅಂದರೆ ಲೀಗ್ ಫಾರ್ಮಾಟ್​​ ಬದಲಿಗೆ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಸಲಾಗಿತ್ತು. ಅದರಂತೆ ಈ ಬಾರಿ 60 ಪಂದ್ಯಗಳ ಬದಲಾಗಿ ಒಟ್ಟು 74 ಪಂದ್ಯಗಳನ್ನು ನಡೆಸಲಾಗಿತ್ತು.

ಅದೇ ಮಾದರಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲಿದೆ. ಅಂದರೆ ಐಪಿಎಲ್​ 2023 ಮತ್ತು 2024 ರಲ್ಲಿ 74 ಪಂದ್ಯಗಳೇ ನಡೆಯಲಿದೆ. ಆದರೆ ಐಪಿಎಲ್ 2025 ಮತ್ತು 2026 ರಲ್ಲಿ 84 ಪಂದ್ಯಗಳನ್ನು ನಡೆಸಲಾಗುತ್ತದೆ. ಹಾಗೆಯೇ 2027 ರಲ್ಲಿ ಪಂದ್ಯಗಳ ಸಂಖ್ಯೆಯನ್ನು 94 ಕ್ಕೆ ಏರಿಸಲಾಗುತ್ತದೆ. ಅಂದರೆ 2027 ರಲ್ಲಿ ಮತ್ತೆ ಲೀಗ್ ಮಾದರಿಯಲ್ಲೇ ಟೂರ್ನಿ ನಡೆಯಲಿದೆ.

ಈ ಮೂಲಕ ಎರಡು ಸೀಸನ್​ಗೊಮ್ಮೆ ಪಂದ್ಯಗಳ ಸಂಖ್ಯೆ ಹೆಚ್ಚಿಸಿ 5 ವರ್ಷಗಳಲ್ಲಿ 370 ರ ಬದಲು 410 ಪಂದ್ಯಗಳನ್ನು ಆಡಿಸಲಿದೆ. ಇದರಿಂದ 40 ಪಂದ್ಯಗಳು ಕೂಡ ಹೆಚ್ಚಳವಾಗಲಿದೆ. ಈ ಮೂಲಕ ಬಿಸಿಸಿಐ ಐಪಿಎಲ್​ 2023 ರಿಂದ 2027 ನಡುವಣ 410 ಪಂದ್ಯಗಳ ನೇರ ಪ್ರಸಾರ ಹಕ್ಕುಗಳನ್ನು ಬರೋಬ್ಬರಿ 48,390 ಕೋಟಿಗೆ ಮಾರಾಟ ಮಾಡಿದೆ.

ಇದನ್ನೂ ಓದಿ

ಇದನ್ನೂ ಓದಿ: IPL 2023: 74, 84, 94: ಐಪಿಎಲ್​ ಟೂರ್ನಿಯಲ್ಲಿ ಮಹತ್ವದ ಬದಲಾವಣೆ..!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada