ಮಹಾರಾಜ ಟ್ರೋಫಿ ಟಿ20 ಟೂರ್ನಿಯ 15ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಶಿವಮೊಗ್ಗ ಲಯನ್ಸ್ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈವರೆಗೆ ಆಡಿದ 5 ಪಂದ್ಯಗಳಲ್ಲೂ ಶಿವಮೊಗ್ಗ ತಂಡ ಸೋಲನುಭವಿಸಿದೆ. ಹೀಗಾಗಿ ಇಂದಿನ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದೆ ನಿಹಾಲ್ ಉಳ್ಳಾಲ್ ನೇತೃತ್ವದ ಶಿವಮೊಗ್ಗ ಪಡೆ.
ಮತ್ತೊಂದೆಡೆ ಭರ್ಜರಿ ಪ್ರದರ್ಶನದೊಂದಿಗೆ ಮಿಂಚುತ್ತಿರುವ ಮೈಸೂರು ವಾರಿಯರ್ಸ್ ತಂಡವು 5 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಒಂದು ವೇಳೆ ಇಂದಿನ ಮ್ಯಾಚ್ನಲ್ಲಿ ಮೈಸೂರು ವಾರಿಯರ್ಸ್ ಗೆದ್ದರೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ. ಹೀಗಾಗಿ ಕರುಣ್ ನಾಯರ್ ಪಡೆಯಿಂದ ಇಂದು ಸಹ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು.
ಮೈಸೂರು ವಾರಿಯರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ನಡುವಣ ಪಂದ್ಯವು ಮಧ್ಯಾಹ್ನ 3 ಗಂಟೆಯಿಂದ ಶುರುವಾಗಲಿದೆ. ಏಕೆಂದರೆ ಇಂದು ಎರಡು ಪಂದ್ಯಗಳಿದ್ದು, ಮೊದಲ ಪಂದ್ಯದಲ್ಲಿ ಮೈಸೂರು-ಶಿವಮೊಗ್ಗ ಮುಖಾಮುಖಿಯಾದರೆ, ಸಂಜೆ 7 ಗಂಟೆಯಿಂದ ಆರಂಭವಾಗಲಿರುವ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮಂಗಳೂರು ಡ್ರಾಗನ್ಸ್ ತಂಡಗಳು ಸೆಣಸಲಿದೆ.
ಮಹಾರಾಜ ಟ್ರೋಫಿ 2024ರ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ನಲ್ಲಿ ನೇರ ಪ್ರಸಾರವಾಗಲಿದೆ. ಹಾಗೆಯೇ ಫ್ಯಾನ್ ಕೋಡ್ ಆ್ಯಪ್ನಲ್ಲೂ ಈ ಪಂದ್ಯಗಳನ್ನು ವೀಕ್ಷಿಸಬಹುದು.
ಶಿವಮೊಗ್ಗ ಲಯನ್ಸ್ ತಂಡ: ಬಿ. ಮೋಹಿತ್, ನಿಹಾಲ್ ಉಳ್ಳಾಲ್ (ನಾಯಕ), ರೋಹಿತ್ ಕೆ, ಹಾರ್ದಿಕ್ ರಾಜ್, ಧ್ರುವ ಪ್ರಭಾಕರ್, ಅಭಿನವ್ ಮನೋಹರ್, ಎಸ್ ಶಿವರಾಜ್, ಅವಿನಾಶ್ ಡಿ, ಆದಿತ್ಯ ಮಣಿ, ಪ್ರದೀಪ್ ಟಿ, ವಾಸುಕಿ ಕೌಶಿಕ್, ಎಚ್ ಎಸ್ ಶರತ್, ಭರತ್ ಧುರಿ, ಆನಂದ್ ದೊಡ್ಡಮನಿ , ರಾಜವೀರ್ ವಾಧ್ವಾ, ರೋಹನ್ ನವೀನ್, ಡಿ ಅಶೋಕ್, ಧೀರಜ್ ಮೋಹನ್, ಆದಿತ್ಯ ವಿಶ್ವ ಕರ್ಮ.
ಇದನ್ನೂ ಓದಿ: IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು..!
ಮೈಸೂರು ವಾರಿಯರ್ಸ್ ತಂಡ: ಕೋದಂಡ ಅಜಿತ್ ಕಾರ್ತಿಕ್, ಎಸ್‌ಯು ಕಾರ್ತಿಕ್, ಕರುಣ್ ನಾಯರ್ (ನಾಯಕ), ಸಮಿತ್ ದ್ರಾವಿಡ್, ಸುಮಿತ್ ಕುಮಾರ್, ಮನೋಜ್ ಭಾಂಡಗೆ, ಹರ್ಷಿಲ್ ಧರ್ಮಾನಿ, ಜಗದೀಶ ಸುಚಿತ್, ಕೃಷ್ಣಪ್ಪ ಗೌತಮ್, ವಿದ್ಯಾಧರ್ ಪಾಟೀಲ್, ಧನುಷ್ ಗೌಡ, ದೀಪಕ್ ದೇವಾಡಿಗ, ಸ್ಮಯನ್ ಶ್ರೀವಾಸ್ತವ, ಇಜೆ ಜಾಸ್ಪರ್, ಗೌತಮ್ ಮಿಶ್ರಾ, ಕಿಶನ್ ಬೇಡರೆ, ಮುರಳೀಧರ ವೆಂಕಟೇಶ್, ಪ್ರಸಿದ್ಧ್ ಕೃಷ್ಣ, ಸರ್ಫರಾಝ್ ಅಶ್ರಫ್.