Maharaja Trophy 2024: ಇಂದಿನಿಂದ ಮಹಾರಾಜ ಟ್ರೋಫಿ ಟಿ20 ಟೂರ್ನಿ ಶುರು
Maharaja Trophy 2024: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (KSCA) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳೆಂದರೆ ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಲಯನ್ಸ್, ಮಂಗಳೂರು ಡ್ರಾಗನ್ಸ್, ಗುಲ್ಬರ್ಗ ಮಿಸ್ಟಿಕ್ಸ್ ಮತ್ತು ಮೈಸೂರು ವಾರಿಯರ್ಸ್.
ಕರ್ನಾಟಕ ಟಿ20 ಕ್ರಿಕೆಟ್ ಲೀಗ್ ಮಹಾರಾಜ ಟ್ರೋಫಿ ಟೂರ್ನಿಯು ಇಂದಿನಿಂದ ಶುರುವಾಗಲಿದೆ. ಆಗಸ್ಟ್ 15 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ರಾತ್ರಿ 7 ಗಂಟೆಯಿಂದ ಆರಂಭವಾಗಲಿರುವ ಎರಡನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್ ತಂಡಗಳು ಸೆಣಸಲಿದೆ.
ಎಷ್ಟು ಗಂಟೆಗೆ ಪಂದ್ಯ ಶುರು?
ಡಬಲ್-ಹೆಡರ್ ಪಂದ್ಯಗಳಿರುವಾಗ ಮೊದಲ ಪಂದ್ಯವು 3 PM IST ಕ್ಕೆ ಪ್ರಾರಂಭವಾಗುತ್ತದೆ. ಹಾಗೆಯೇ ದ್ವಿತೀಯ ಪಂದ್ಯವು ರಾತ್ರಿ 7 PM IST ಕ್ಕೆ ಶುರುವಾಗಲಿದೆ.
ಪಂದ್ಯ ನಡೆಯುವುದು ಎಲ್ಲಿ?
ಈ ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಮಹಾರಾಜ ಟ್ರೋಫಿ ಟಿ20 ಸೀಸನ್-3 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನ ಸ್ಟಾರ್ ಸ್ಪೋರ್ಟ್ಸ್ 2 (ಇಂಗ್ಲಿಷ್) ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಫ್ಯಾನ್‌ಕೋಡ್ ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
ಮಹಾರಾಜ ಟ್ರೋಫಿ ವೇಳಾಪಟ್ಟಿ:
- ಗುರುವಾರ, ಆಗಸ್ಟ್ 15, 2024 : ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಮಧ್ಯಾಹ್ನ 3:00 IST
- ಗುರುವಾರ, ಆಗಸ್ಟ್ 15, 2024 : ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್, 7:00 PM IST
- ಶುಕ್ರವಾರ, ಆಗಸ್ಟ್ 16, 2024 : ಮಂಗಳೂರು ಡ್ರ್ಯಾಗನ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00 IST
- ಶುಕ್ರವಾರ, ಆಗಸ್ಟ್ 16, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, 7:00 PM IST
- ಶನಿವಾರ, ಆಗಸ್ಟ್ 17, 2024 : ಶಿವಮೊಗ್ಗ ಲಯನ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00 IST
- ಶನಿವಾರ, ಆಗಸ್ಟ್ 17, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, 7:00 PM IST
- ಭಾನುವಾರ, ಆಗಸ್ಟ್ 18, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00 IST
- ಭಾನುವಾರ, ಆಗಸ್ಟ್ 18, 2024 : ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, 7:00 PM IST
- ಸೋಮವಾರ, ಆಗಸ್ಟ್ 19, 2024 : ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00 IST
- ಸೋಮವಾರ, ಆಗಸ್ಟ್ 19, 2024 : ಮೈಸೂರು ವಾರಿಯರ್ಸ್ vs ಮಂಗಳೂರು ಡ್ರಾಗನ್ಸ್, 7:00 PM IST
- ಮಂಗಳವಾರ, ಆಗಸ್ಟ್ 20, 2024 : ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00 IST
- ಮಂಗಳವಾರ, ಆಗಸ್ಟ್ 20, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಮಂಗಳೂರು ಡ್ರಾಗನ್ಸ್, 7:00 PM IST
- ಬುಧವಾರ, ಆಗಸ್ಟ್ 21, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, 3:00 PM IST
- ಬುಧವಾರ, ಆಗಸ್ಟ್ 21, 2024 : ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್, 7:00 PM IST
- ಗುರುವಾರ, ಆಗಸ್ಟ್ 22, 2024 : ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್, ಮಧ್ಯಾಹ್ನ 3:00 IST
- ಗುರುವಾರ, ಆಗಸ್ಟ್ 22, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, 7:00 PM IST
- ಶುಕ್ರವಾರ, ಆಗಸ್ಟ್ 23, 2024 : ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00 IST
- ಶುಕ್ರವಾರ, ಆಗಸ್ಟ್ 23, 2024 : ಮಂಗಳೂರು ಡ್ರಾಗನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, 7:00 PM IST
- ಶನಿವಾರ, ಆಗಸ್ಟ್ 24, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00 IST
- ಶನಿವಾರ, ಆಗಸ್ಟ್ 24, 2024 : ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, 7:00 PM IST
- ಭಾನುವಾರ, ಆಗಸ್ಟ್ 25, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00 IST
- ಭಾನುವಾರ, ಆಗಸ್ಟ್ 25, 2024 : ಮಂಗಳೂರು ಡ್ರಾಗನ್ಸ್ vs ಶಿವಮೊಗ್ಗ ಲಯನ್ಸ್, 7:00 PM IST
- ಸೋಮವಾರ, ಆಗಸ್ಟ್ 26, 2024 : ಮಂಗಳೂರು ಡ್ರಾಗನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00 IST
- ಸೋಮವಾರ, ಆಗಸ್ಟ್ 26, 2024 : ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, 7:00 PM IST
- ಮಂಗಳವಾರ, ಆಗಸ್ಟ್ 27, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, 3:00 PM IST
- ಮಂಗಳವಾರ, ಆಗಸ್ಟ್ 27, 2024 : ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್, 7:00 PM IST
- ಬುಧವಾರ, ಆಗಸ್ಟ್ 28, 2024 : ಮಂಗಳೂರು ಡ್ರಾಗನ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00 IST
- ಬುಧವಾರ, ಆಗಸ್ಟ್ 28, 2024 : ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, 7:00 PM IST
- ಗುರುವಾರ, ಆಗಸ್ಟ್ 29, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00 IST
- ಗುರುವಾರ, ಆಗಸ್ಟ್ 29, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, 7:00 PM IST
- ಶುಕ್ರವಾರ, ಆಗಸ್ಟ್ 30, 2024 : ಸೆಮಿಫೈನಲ್ 1 (1 vs 4), 7:00 PM IST
- ಶನಿವಾರ, ಆಗಸ್ಟ್ 31, 2024 : ಸೆಮಿಫೈನಲ್ 2 (2 vs 3), 7:00 PM IST
- ಭಾನುವಾರ, ಸೆಪ್ಟೆಂಬರ್ 1, 2024 : ಫೈನಲ್, 7:00 PM IST