Maharaja Trophy 2025: ಮಹಾರಾಜ ಟ್ರೋಫಿಯ ಪೂರ್ಣ ವೇಳಾಪಟ್ಟಿ ಇಲ್ಲಿದೆ
Maharaja Trophy T20 League 2025: ಮೈಸೂರಿನಲ್ಲಿ ಆಗಸ್ಟ್ 11 ರಿಂದ 28 ರವರೆಗೆ ನಡೆಯಲಿರುವ ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿ T20 ಲೀಗ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಈ ಲೇಖನ ಒಳಗೊಂಡಿದೆ. ಆರು ತಂಡಗಳು ಲೀಗ್ ಹಂತದಲ್ಲಿ ಪರಸ್ಪರ ಸ್ಪರ್ಧಿಸಲಿವೆ, ನಂತರ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ. ಪ್ರತಿ ದಿನ ಎರಡು ಪಂದ್ಯಗಳು ನಡೆಯಲಿದ್ದು, ಅಂತಿಮ ಪಂದ್ಯ ಆಗಸ್ಟ್ 28 ರಂದು ನಡೆಯಲಿದೆ.

ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20ಲೀಗ್ (Maharaja Trophy 2025) ಇದೇ ಸೋಮವಾರದಿಂದ ಅಂದರೆ ಆಗಸ್ಟ್ 11 ರಿಂದ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೊದಲ ದಿನವೇ ಡಬಲ್-ಹೆಡರ್ ಇದ್ದು ಅಂದರೆ ಎರಡು ಪಂದ್ಯಗಳು ನಡೆಯಲಿದ್ದು, ಆರಂಭಿಕ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಮಂಗಳೂರು ಡ್ರಾಗನ್ಸ್ ತಂಡವನ್ನು ಎದುರಿಸಲಿದೆ. ಹಾಗೆಯೇ ದಿನದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ.
ಲೀಗ್ ಹಂತದಲ್ಲಿ ಪ್ರತಿ ದಿನವೂ ಎರಡು ಪಂದ್ಯಗಳು ನಡೆಯಲ್ಲಿದ್ದು, ಆಗಸ್ಟ್ 25 ರವರೆಗೆ ಈ ಹಂತ ನಡೆಯಲಿದೆ. ಆ ನಂತರ ಕ್ವಾಲಿಫೈಯರ್-1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್-2 ಪಂದ್ಯಗಳನ್ನು ಆಡಲಾಗುತ್ತದೆ. ಲೀಗ್ ಹಂತದ ಕೊನೆಯಲ್ಲಿ, ಅಗ್ರ ನಾಲ್ಕು ತಂಡಗಳು ನಾಕೌಟ್ ತಲುಪುತ್ತವೆ. ಲೀಗ್ ಹಂತದಲ್ಲಿ ಮೊದಲ ಪಂದ್ಯಗಳು ಮಧ್ಯಾಹ್ನ 3:15 ಕ್ಕೆ ಪ್ರಾರಂಭವಾದರೆ, ಸಂಜೆ ಪಂದ್ಯಗಳು ಸಂಜೆ 7:15 ರಿಂದ ನಡೆಯಲಿವೆ.
Maharaja Trophy 2025: ದಿನಕ್ಕೆರಡು ಪಂದ್ಯಗಳು; ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್ನಲ್ಲಿ ನೇರಪ್ರಸಾರ?
ಮಹಾರಾಜ ಟ್ರೋಫಿ ವೇಳಾಪಟ್ಟಿ
- ಆಗಸ್ಟ್ 11: ಗುಲ್ಬರ್ಗಾ ಮಿಸ್ಟಿಕ್ಸ್ vs ಮಂಗಳೂರು ಡ್ರಾಗನ್ಸ್ (ಮಧ್ಯಾಹ್ನ 3:15)
- ಆಗಸ್ಟ್ 11: ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್ (ರಾತ್ರಿ 7:15)
- ಆಗಸ್ಟ್ 12: ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 3:15)
- ಆಗಸ್ಟ್ 12: ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ (ರಾತ್ರಿ 7:15)
- ಆಗಸ್ಟ್ 13: ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3:15)
- ಆಗಸ್ಟ್ 13: ಮಂಗಳೂರು ಡ್ರಾಗನ್ಸ್ vs ಶಿವಮೊಗ್ಗ ಲಯನ್ಸ್ (ರಾತ್ರಿ 7:15)
- ಆಗಸ್ಟ್ 14: ಮೈಸೂರು ವಾರಿಯರ್ಸ್ vs ಮಂಗಳೂರು ಡ್ರಾಗನ್ಸ್ (ಮಧ್ಯಾಹ್ನ 3:15)
- ಆಗಸ್ಟ್ 14: ಗುಲ್ಬರ್ಗ ಮಿಸ್ಟಿಕ್ಸ್ vs ಬೆಂಗಳೂರು ಬ್ಲಾಸ್ಟರ್ಸ್ (ರಾತ್ರಿ 7:15)
- ಆಗಸ್ಟ್ 15: ಶಿವಮೊಗ್ಗ ಲಯನ್ಸ್ vs ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 3:15)
- ಆಗಸ್ಟ್ 15: ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಡ್ರಾಗನ್ಸ್ (ರಾತ್ರಿ 7:15)
- ಆಗಸ್ಟ್ 16: ಶಿವಮೊಗ್ಗ ಲಯನ್ಸ್ vs ಗುಲ್ಬರ್ಗಾ ಮಿಸ್ಟಿಕ್ಸ್ (ಮಧ್ಯಾಹ್ನ 3:15)
- ಆಗಸ್ಟ್ 16: ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್ (ರಾತ್ರಿ 7:15)
- ಆಗಸ್ಟ್ 17: ಮಂಗಳೂರು ಡ್ರಾಗನ್ಸ್ vs ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 3:15)
- ಆಗಸ್ಟ್ 17: ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್ (ರಾತ್ರಿ 7:15)
- ಆಗಸ್ಟ್ 18: ಮೈಸೂರು ವಾರಿಯರ್ಸ್ vs ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 3:15)
- ಆಗಸ್ಟ್ 18: ಗುಲ್ಬರ್ಗಾ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್ (ರಾತ್ರಿ 7:15)
- ಆಗಸ್ಟ್ 19: ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್ (ಮಧ್ಯಾಹ್ನ 3:15)
- ಆಗಸ್ಟ್ 19: ಮಂಗಳೂರು ಡ್ರಾಗನ್ಸ್ vs ಹುಬ್ಬಳ್ಳಿ ಟೈಗರ್ಸ್ (ರಾತ್ರಿ 7:15)
- ಆಗಸ್ಟ್ 20: ಗುಲ್ಬರ್ಗ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3:15)
- ಆಗಸ್ಟ್ 20: ಹುಬ್ಬಳ್ಳಿ ಟೈಗರ್ಸ್ vs ಬೆಂಗಳೂರು ಬ್ಲಾಸ್ಟರ್ಸ್ (ರಾತ್ರಿ 7:15)
- ಆಗಸ್ಟ್ 21: ಮಂಗಳೂರು ಡ್ರಾಗನ್ಸ್ vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3:15)
- ಆಗಸ್ಟ್ 21: ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್ (ರಾತ್ರಿ 7:15)
- ಆಗಸ್ಟ್ 22: ಹುಬ್ಬಳ್ಳಿ ಟೈಗರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ (ಮಧ್ಯಾಹ್ನ 3:15)
- ಆಗಸ್ಟ್ 22: ಶಿವಮೊಗ್ಗ ಲಯನ್ಸ್ vs ಮಂಗಳೂರು ಡ್ರಾಗನ್ಸ್ (ರಾತ್ರಿ 7:15)
- ಆಗಸ್ಟ್ 23: ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್ (ಮಧ್ಯಾಹ್ನ 3:15)
- ಆಗಸ್ಟ್ 23: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ (ರಾತ್ರಿ 7:15)
- ಆಗಸ್ಟ್ 24: ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್ (ಮಧ್ಯಾಹ್ನ 3:15)
- ಆಗಸ್ಟ್ 24: ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್ (ರಾತ್ರಿ 7:15)
- ಆಗಸ್ಟ್ 25: ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 3:15)
- ಆಗಸ್ಟ್ 25: ಮಂಗಳೂರು ಡ್ರಾಗನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ (ರಾತ್ರಿ 7:15)
- ಆಗಸ್ಟ್ 26: ಕ್ವಾಲಿಫೈಯರ್-1 (ಮಧ್ಯಾಹ್ನ 3:15)
- ಆಗಸ್ಟ್ 26: ಎಲಿಮಿನೇಟರ್ (ರಾತ್ರಿ 7:15)
- ಆಗಸ್ಟ್ 27: ಕ್ವಾಲಿಫೈಯರ್-2 (ರಾತ್ರಿ 7:15)
- ಆಗಸ್ಟ್ 28: ಫೈನಲ್ ಪಂದ್ಯ (ರಾತ್ರಿ 7:15)
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
