
ಐಪಿಎಲ್ 2022ರ ಸೀಸನ್ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿದ್ದಾರೆ. ತಮ್ಮ ಬಿಡುವಿನ ಕ್ಷಣಗಳನ್ನು ತಮ್ಮ ಪ್ರೀತಿಪಾತ್ರರ ಜೊತೆ ಕಳೆಯುತ್ತಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಟೆನಿಸ್ ಕೋಚ್ ಸುರೇಂದ್ರ ಕುಮಾರ್ ಕಾಕಾ ಅವರ ಹುಟ್ಟುಹಬ್ಬದ ಸಂತೋಷಕೂಟಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ರಾಂಚಿ ಮೂಲದ ಸುರೇಂದ್ರರ ಕಾಕಾ ಅವರು ಟೆನಿಸ್ ಕೋಚ್ ಮಾತ್ರವಲ್ಲದೆ ಧೋನಿಯ ಹಳೆಯ ಸ್ನೇಹಿತ ಎಂಬುದು ವಿಶೇಷ. ಹೀಗಾಗಿ ಸ್ವತಃ ಧೋನಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಧೋನಿ ಕೋಚ್ ಸುರೇಂದ್ರ ಕುಮಾರ್ ಅವರಿಗೆ ವಿಶೇಷ ಶೂಗಳನ್ನು ಉಡುಗೊರೆಯಾಗಿ ನೀಡಿರುವುದು ಇದೀಗ ವೈರಲ್ ಆಗಿದೆ.
ಟೆನಿಸ್ ಕೋಚ್ ಸುರೇಂದ್ರ ಕುಮಾರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಧೋನಿ ಹೊರತುಪಡಿಸಿ, ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅಮಿತಾಭ್ ಚೌಧರಿ, ಇತರ ಹಲವು ಅಧಿಕಾರಿಗಳು ಭಾಗವಹಿಸಿದ್ದರು. ಇನ್ನು ಗೆಳೆಯನ ಹುಟ್ಟುಹಬ್ಬದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಾಕಷ್ಟು ಸಮಯವನ್ನು ಕಳೆದ ಧೋನಿ, ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಅವರು ಸಾಕಷ್ಟು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.
ಇದೇ ವೇಳೆ ಧೋನಿ ತಮ್ಮ ಸ್ನೇಹಿತನಿಗೆ ಶೂಗಳನ್ನು ನೀಡಿ ಉಡುಗೊರೆಯಾಗಿ ನೀಡಿದ್ದರು. ಇದರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಶೇಷ ಎಂದರೆ ಧೋನಿ ನೀಡಿರುವ ಈ ಶೂ ಬೆಲೆ 13 ಸಾವಿರ ರೂ. ಎಂದು ತಿಳಿದು ಬಂದಿದೆ. ವೈಟ್ ಸ್ಪೋರ್ಟ್ಸ್ ಶೂ ಅನ್ನು ಗಿಫ್ಟ್ ಮಾಡುವ ಮೂಲಕ ಧೋನಿ ಗಮನ ಸೆಳೆದಿದ್ದರು. ಇದೀಗ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು IPL 2022 ರ ಬಳಿಕ ಧೋನಿ ಕ್ರಿಕೆಟ್ ಕ್ಷೇತ್ರದಿಂದ ದೂರವಿದ್ದಾರೆ. ಅವರು ಕೆಲವೊಮ್ಮೆ ಫುಟ್ಬಾಲ್ ಮತ್ತು ಕೆಲವೊಮ್ಮೆ ಟೆನಿಸ್ ಆಡುವುದನ್ನು ಕಾಣಬಹುದು. ಅದೇ ಸಮಯದಲ್ಲಿ ಸಾವಯವ ಕೃಷಿಗೆ ಸಂಪೂರ್ಣ ಒತ್ತು ನೀಡುತ್ತಿರುವ ಅವರು ಶೀಘ್ರದಲ್ಲೇ ಬಣ್ಣದ ಲೋಕಕ್ಕೂ ಎಂಟ್ರಿ ಕೊಡಲಿದ್ದಾರೆ. ಅಲ್ಲದೆ ತಮ್ಮದೇ ಪ್ರೊಡಕ್ಷನ್ ಹೌಸ್ ನಿರ್ಮಿಸಿರುವ ಧೋನಿ ತಮಿಳು ನಟ ವಿಜಯ್ ಜೊತೆ ಮೊದಲ ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.