
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ 2025ರ 17ನೇ ಪಂದ್ಯ ರೋಚಕತೆಯ ಹಂತ ತಲುಪಿತ್ತು. ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಹಾಗೂ ವಾಷಿಂಗ್ಟನ್ ಫ್ರೀಡಂ ಮಧ್ಯೆ ನಡೆದ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ಗೆದ್ದು ಬೀಗಿತು. ಈ ಪಂದ್ಯವನ್ನು ಬದಲಿಸಿದ ಖ್ಯಾತಿ ಗ್ಲೆನ್ ಫಿಲಿಪ್ಸ್ಗೆ ಸಲ್ಲುತ್ತದೆ. ಎರಡು ಸಿಕ್ಸ್ ಹೊಡೆದು ಅವರು ಪಂದ್ಯದ ಗತಿ ಬದಲಿಸಿದರು.
ಗ್ಲೆನ್ ಮ್ಯಾಕ್ಸ್ವೆಲ್ ನಾಯಕತ್ವದ್ವ ವಾಷಿಂಗ್ಟನ್ ತಂಡ ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆ್ಯಂಡ್ರೆ ಫ್ಲೆಚರ್ ಅವರು 60 ಬಾಲ್ಗೆ 7 ಫೋರ್ ಹಾಗೂ 6 ಸಿಕ್ಸರ್ಗಳೊಂದಿಗೆ 104 ರನ್ ಕಲೆ ಹಾಕಿ ತಂಡಕ್ಕೆ ಆಸರೆ ಆದರು. ರಸೆಲ್ 13 ಬಾಲ್ಗೆ 30 ರನ್ ಕಲೆ ಹಾಕಿದರು. ಅಂತಿಮವಾಗಿ 20 ಓವರ್ನಲ್ಲಿ ತಂಡ 213 ರನ್ ಕಲೆ ಹಾಕಿತು.
ಈ ಬೃಹತ್ ಮೊತ್ತ ಬೆನ್ನು ಹತ್ತಿದ ವಾಷಿಂಗ್ಟನ್ ಟೀಂ ಉತ್ತಮ ಆರಂಭವನ್ನೇ ಪಡೆಯಿತು. ಓಪನರ್ ಮಿಚೆಲ್ ಒವೆನ್ ಅವರು 16 ಬಾಲ್ಗೆ 43 ರನ್ ಸಿಡಿಸಿ ಔಟ್ ಆದರು. ರಚಿನ್ ರವೀಂದ್ರ ಅವರಿಂದ ಉತ್ತಮ ಆಟ (18 ರನ್) ಬರಲಿಲ್ಲ. ತಂಡದ ನಾಯಕ ಗ್ಲೆನ್ ಮ್ಯಾಕ್ಸ್ವೆಲ್ ಅವರು 23 ಬಾಲ್ಗೆ 41 ರನ್ ಸಿಡಿಸಿ ತಂಡಕ್ಕೆ ಆಸರೆ ಆದರು. ಅವರು ಕ್ಲೀನ್ ಬೌಲ್ಡ್ ಆದ ಬಳಿಕ ಮ್ಯಾಚ್ ನೈಟ್ ರೈಡರ್ಸ್ನತ್ತ ತಿರುಗಿತು.
ಆಗ ಗ್ಲೆನ್ ಫಿಲಿಪ್ಸ್ ಹಾಗೂ ಓಬಸ್ ಪಿಯೆನಾರ್ ಜೊತೆಯಾಟ ತಂಡಕ್ಕೆ ಸಹಕಾರಿ ಆಯಿತು. ಓಬಸ್ ಅವರು 16 ಬಾಲ್ಗೆ 23 ರನ್ ಸಿಡಿಸಿದರು. ಫಿಲಿಪ್ಸ್ 23 ಬಾಲ್ಗೆ 33 ರನ್ ಚಚ್ಚಿದರು. ಇದರಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದೆ. ಅಂತಿಮಹಂತದಲ್ಲಿ ಫಿಲಿಪ್ಸ್ ಹೊಡೆದ ಎರಡು ಸಿಕ್ಸ್ ತಂಡಕ್ಕೆ ಆಸರೆ ಆಯಿತು.
ಕೊನೆಯ ಓವರ್ಗೆ ಬೇಕಿದ್ದಿದ್ದು ಕೇವಲ 7 ರನ್. ರಸೆಲ್ ಅವರು ದಾಳಿಗೆ ಇಳಿದರೆ, ಓಬಸ್ ಬ್ಯಾಟಿಂಗ್ನಲ್ಲಿದ್ದರು. ರಸೆಲ್ ಮೊದಲ ಬಾಲ್ ವೈಡ್ ಹಾಕಿದರು. ಆ ಬಳಿಕ ಓಬಸ್ ಬಾಲ್ನ ಫೋರ್ಗೆ ಅಟ್ಟಿದರು. ಐದು ಬಾಲ್ಗೆ ಬೇಕಿದ್ದಿದ್ದು ಕೇವಲ ಎರಡು ರನ್ ಮಾತ್ರ. ನಂತರದ ಮೂರು ಬಾಲ್ಗಳನ್ನು ಹೊಡೆಯಲು ಓಬಸ್ಗೆ ಸಾಧ್ಯವಾಗಲೇ ಇಲ್ಲ. ಐದನೇ ಬಾಲ್ಗೆ ಸಿಂಗಲ್ ತೆಗೆದರು. ಕೊನೆಯ ಬಾಲ್ನಲ್ಲಿ ಫಿಲಿಪ್ಸ್ ಹೊಡೆದ ಬಾಲ್ ಕ್ಯಾಚ್ ಆಯಿತು. ಆದರೆ, ಹೋಲ್ಡರ್ ಕ್ಯಾಚ್ನ ಬಿಟ್ಟರು. ಈ ಮೂಲಕ ಒಂದು ರನ್ ತೆಗೆದು ವಾಷಿಂಗ್ಟನ್ ತಂಡ ಗೆಲುವಿನ ದಡ ಸೇರಿತು.
ಫಿಲಿಪ್ಸ್ ಅವರು ಗುಜರಾತ್ ಪರ ಆಡುತ್ತಿದ್ದರು. ಆದರೆ, ಫೀಲ್ಡಿಂಗ್ ಮಾಡುವಾಗ ಉಂಟಾದ ತೊಡೆಸಂದು ಗಾಯದಿಂದ ಅವರು ಐಪಿಎಲ್ನಿಂದಲೇ ಹೊರಕ್ಕೆ ಉಳಿಯಬೇಕಾಯಿತು.
Published On - 12:45 pm, Fri, 27 June 25