​62ನೇ ವಯಸ್ಸಿನಲ್ಲಿ ಕಣಕ್ಕಿಳಿದು ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೌನ್ಲೀ

Cricket World Records: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಯಾರು ಎಂದು ಕೇಳಿದರೆ ಈವರೆಗೆ ಓಸ್ಮಾನ್ ಗೋಕರ್ ಹೆಸರು ಕೇಳಿ ಬರುತ್ತಿತ್ತು. ಆದರೀಗ ಈ ದಾಖಲೆ ಇದೀಗ ಇತಿಹಾಸ ಪುಟ ಸೇರಿದೆ. ಏಕೆಂದರೆ ಓಸ್ಮಾನ್ ಅವರಿಗಿಂತಲೂ ಹಿರಿಯ ಆಟಗಾರರೊಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

​62ನೇ ವಯಸ್ಸಿನಲ್ಲಿ ಕಣಕ್ಕಿಳಿದು ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೌನ್ಲೀ
AI ಸಾಂದರ್ಭಿಕ ಚಿತ್ರ

Updated on: Mar 17, 2025 | 12:57 PM

ಎಲ್ಲರೂ ನಿವೃತ್ತಿ ನೀಡಿ ಪಿಂಚಣಿ ಪಡೆಯುವ ಹೊತ್ತಿನಲ್ಲಿ ಇಲ್ಲೊಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದಾರೆ. ಅದು ಸಹ ತಮ್ಮ 62ನೇ ವಯಸ್ಸಿನಲ್ಲಿ. ಈ ಮೂಲಕ ವಯಸ್ಸೆಂಬುದು ಕೇವಲ ನಂಬರ್ ಅಷ್ಟೇ ಎಂದು ಇಡೀ ವಿಶ್ವ ಸಾರಿದ್ದಾರೆ. ಹೀಗೆ ಹಿರಿ ವಯಸ್ಸಿನಲ್ಲಿ ಮೈದಾನಕ್ಕಿಳಿದ ಆಟಗಾರನ ಹೆಸರು ಮ್ಯಾಥ್ಯೂ ಬ್ರೌನ್ಲೀ.

ಕೋಸ್ಟಾರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಫಾಕ್​ಲ್ಯಾಂಡ್ ಐಲ್ಯಾಂಡ್ ಪರ ಕಣಕ್ಕಿಳಿಯುವ ಮೂಲಕ ಮ್ಯಾಥ್ಯೂ ಬ್ರೌನ್ಲೀ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಮ್ಯಾಥ್ಯೂ ಬ್ರೌನ್ಲೀ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

59 ವಯಸ್ಸಿನ ದಾಖಲೆ ಉಡೀಸ್:

ಮ್ಯಾಥ್ಯೂ ಬ್ರೌನ್ಲೀ ಅವರ ಈ ಸಾಧನೆಗೂ ಮುನ್ನ ಈ ದಾಖಲೆ ಓಸ್ಮಾನ್ ಗೋಕರ್ ಹೆಸರಿನಲ್ಲಿತ್ತು. 2019 ರಲ್ಲಿ ಇಲ್ಫೊವ್ ಕೌಂಟಿಯಲ್ಲಿ ನಡೆದ ರೋಮೇನಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಟರ್ಕಿಯ ಪರ 59 ವರ್ಷದ ಓಸ್ಮಾನ್ ಗೋಕರ್ ಕಣಕ್ಕಿಳಿದಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಹಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದರು.

ಇದನ್ನೂ ಓದಿ
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು

ಆದರೀಗ ಫಾಕ್‌ಲ್ಯಾಂಡ್ ಐಲ್ಯಾಂಡ್ ಪರ ಕಣಕ್ಕಿಳಿದು 62 ವರ್ಷದ ಮ್ಯಾಥ್ಯೂ ಬ್ರೌನ್ಲೀ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಪಂದ್ಯವಾಡಿದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂದಹಾಗೆ ಫಾಕ್​ಲ್ಯಾಂಡ್ ಐಲ್ಯಾಂಡ್ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ 106ನೇ ತಂಡವಾಗಿದೆ. ಅಚ್ಚರಿಯ ವಿಷಯವೆಂದರೆ ಈ ತಂಡವು ತನ್ನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಸಿದ ಪ್ಲೇಯಿಂಗ್ ಇಲೆವೆನ್​ನಲ್ಲಿ ಎಲ್ಲರೂ 31 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರು. ಇವರಲ್ಲಿ ಮ್ಯಾಥ್ಯೂ ಬ್ರೌನ್ಲೀ ಮಾತ್ರ 62 ವರ್ಷದ ಚಿರಯುವಕನಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: IPL 2025: 8 ಆಟಗಾರರು ಎಂಟ್ರಿ: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್

ಇನ್ನು ಈ ಪಂದ್ಯದಲ್ಲಿ ಫಾಕ್‌ಲ್ಯಾಂಡ್ ಐಲ್ಯಾಂಡ್ ತಂಡವು ಕೋಸ್ಟಾರಿಕಾ ವಿರುದ್ಧ 66 ರನ್​ಗಳಿಂದ ಸೋಲನುಭವಿಸಿತು. ಈ ಪಂದ್ಯದಲ್ಲಿ 10ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದಿ ಮ್ಯಾಥ್ಯೂ ಬ್ರೌನ್ಲೀ 1 ರನ್ ಕಲೆಹಾಕಿದ್ದರು. ಅಲ್ಲದೆ ಒಂದು ಓವರ್​ ಬೌಲಿಂಗ್ ಸಹ ಮಾಡಿರುವುದು ವಿಶೇಷ.