Big Bash League: ಬಿಗ್​ ಬ್ಯಾಷ್​ನಲ್ಲೊಂದು ಊಹಿಸಲಾಗದ ಕ್ಯಾಚ್: ಮ್ಯಾಥ್ಯೂ ಶಾರ್ಟ್ ಹಿಡಿದ ರೋಚಕ ಕ್ಯಾಚ್ ನೋಡಿ

Big Bash League: ಬಿಗ್​ ಬ್ಯಾಷ್​ನಲ್ಲೊಂದು ಊಹಿಸಲಾಗದ ಕ್ಯಾಚ್: ಮ್ಯಾಥ್ಯೂ ಶಾರ್ಟ್ ಹಿಡಿದ ರೋಚಕ ಕ್ಯಾಚ್ ನೋಡಿ
Matthew Short Catch BBL

Matthew Short Catch Video: ಬಿಗ್​ಬ್ಯಾಷ್ ಲೀಗ್​ನಲ್ಲಿ ಬ್ರಿಸ್ಬೇನ್ ಹೀಟ್ ತಂಡಕ್ಕೆ ಆಸರೆಯಾಗಿ ನಿಂತಿದ್ದ ಸ್ಯಾಮ್ ಹೆಜ್ಲೆಟ್ ಔಟ್ ಆದ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ರಶೀದ್ ಖಾನ್ ಗೂಗ್ಲಿ ಟ್ರಿಕ್ ಅನ್ನು ಅರಿಯಲು ವಿಫಲವಾದ ಸ್ಯಾಮ್ ಫೀಲ್ಡಿಂಗ್ ಮಾಡುತ್ತಿದ್ದ ಮ್ಯಾಥ್ಯೂ ಶಾರ್ಟ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾಗಬೇಕಾಯಿತು.

TV9kannada Web Team

| Edited By: Vinay Bhat

Dec 24, 2021 | 11:31 AM

ಕಾಂಗರೂಗಳ ನಾಡಿನಲ್ಲಿ ಸಾಗುತ್ತಿರುವ 2021-22ನೇ ಸಾಲಿನ ಬಿಗ್ ಬ್ಯಾಷ್ ಲೀಗ್ (Big Bash League BBL) ಟೂರ್ನಿ ರೋಚಕ ಘಟ್ಟಕ್ಕೆ ಕಾಲಿಟ್ಟಿದೆ. ಗುರುವಾರ ನಡೆದ ಅಡಿಲೈಡ್ ಸ್ಟ್ರೈಕರ್ಸ್ (Adelaide Strikers) ಮತ್ತು ಬ್ರಿಸ್ಬೇನ್ ಹೀಟ್ (Brisbane Heat) ನಡುವಣ ಪಂದ್ಯ ಕೂಡ ಸಾಕಷ್ಟು ವಿಶೇಷತೆಗಳಿಂದ ಕೂಡಿತ್ತು. ಈ ಪಂದ್ಯದಲ್ಲಿ ಅಡಿಲೇಡ್ ತಂಡ ಗೆಲುವು ಕಾಣಲು ವಿಫಲವಾದರೂ ಫೀಲ್ಡಿಂಗ್ ಮೂಲಕ ಎಲ್ಲರ ಗಮನ ಸೆಳೆಯಿತು. ಅದರಲ್ಲೂ ಅಡಿಲೇಡ್ ತಂಡದ ಮ್ಯಾಥ್ಯೂ ಶಾರ್ಟ್ (Matthew Short) ಹಿಡಿದ ಕ್ಯಾಚ್ ಒಂದು ಅದ್ಭುತವಾಗಿತ್ತು. ರಶೀದ್ ಖಾನ್ (Rashid Khan) ಅವರ ಬೌಲಿಂಗ್​ನಲ್ಲಿ ಬ್ರಿಸ್ಬೇನ್ ತಂಡದ ಸ್ಯಾಮ್ ಹೆಜ್ಲೆಟ್ (Sam Heazlett) ಸಿಕ್ಸ್ ಸಿಡಿಸಲು ವಿಫಲವಾಗಿ ಮ್ಯಾಥ್ಯೂ ಶಾರ್ಟ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಇವರು ಹಿಡಿದ ಈ ಕ್ಯಾಚ್ ಊಹಿಸಲಾಗದಂತಿತ್ತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದ್ದು, ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಬ್ರಿಸ್ಬೇನ್ ತಂಡಕ್ಕೆ ಆಸರೆಯಾಗಿ ನಿಂತಿದ್ದ ಸ್ಯಾಮ್ ಹೆಜ್ಲೆಟ್ ಅರ್ಧಶತಕ ಹೊಸ್ತಿಲಲ್ಲಿದ್ದರು. 18ನೇ ಓವರ್ ಬೌಲಿಂಗ್ ಮಾಡಲು ಬಂದ ರಶೀದ್ ಖಾನ್ ತಮ್ಮ 4ನೇ ಎಸೆತವನ್ನು ಗೂಗ್ಲಿ ಮೂಲಕ ಎಸೆತದರು. ಈ ಟ್ರಿಕ್ ಅನ್ನು ಅರಿಯಲು ವಿಫಲವಾದ ಸ್ಯಾಮ್ ಚೆಂಡನ್ನು ಸಿಕ್ಸರ್​ಗೆಂದು ಅಟ್ಟಿದರು. ಆದರೆ, ಲಾಂಗ್ ಆನ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮ್ಯಾಥ್ಯೂ ಓಡಿ ಬಂದು ಅದ್ಭುತವಾಗಿ ಡೈವ್ ಹೊಡೆದು ಚೆಂಡನ್ನು ಹಿಡಿದರು. ಇಲ್ಲಿದೆ ನೋಡಿ ಆ ವಿಡಿಯೋ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬ್ರಿಸ್ಬೇನ್ ಹೀಟ್ ತಂಡ ಬೊಂಬಾಟ್ ಬ್ಯಾಟಿಂಗ್ ನಡೆಸಿತು. ಬೆನ್ ಡಕೆಟ್ ಕೇವಲ 47 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್​ನೊಂದಿಗೆ 78 ರನ್ ಚಚ್ಚಿದರೆ, ಹೆಜ್ಲೆಟ್ 30 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್​ನೊಂದಿಗೆ 49 ರನ್ ಸಿಡಿಸಿದರು. ಪರಿಣಾಮ 20 ಓವರ್​ಗಳಲ್ಲಿ ಬ್ರಿಸ್ಬೇನ್ ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು. ಅಡಿಲೇಡ್ ಪರ ರಶೀದ್ ಖಾನ್ 3 ವಿಕೆಟ್ ಕಿತ್ತರು.

209 ರನ್​ಗಳ ದೊಡ್ಡ ಟಾರ್ಗೆಟ್ ಬೆನ್ನಟ್ಟಿದ ಅಡಿಲೇಡ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಜೊನಥನ್ ವೆಲ್ಸ್ 41 ಎಸೆತಗಳಲ್ಲಿ 55 ಮತ್ತು ಮ್ಯಾಥ್ಯೂ 22 ರನ್ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ಚೇತರಿಕೆ ನೀಡಿದರೂ ಕಮ್​ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ. ಥೋಮಸ್ ಕೆಲ್ಲಿ 27 ರನ್ ಬಾರಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಅಡಿಲೇಡ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.

Virat Kohli: ಕೊಹ್ಲಿಯ ಒಂದು ಶತಕಕ್ಕಾಗಿ ಕಾದು ಕುಳಿತಿರುವ ಕ್ರಿಕೆಟ್ ಪ್ರೇಮಿಗಳು: ಸೆಂಚುರಿ ಬಂದರೆ ಸೃಷ್ಟಿಯಾಗಲಿದೆ ವಿಶ್ವ ದಾಖಲೆ

Cheteshwar Pujara: ಆಫ್ರಿಕಾ ವಿರುದ್ಧದ ಅಗ್ನಿಪರೀಕ್ಷೆಗೂ ಮುನ್ನ ಮಹತ್ವದ ಮತುಗಳನ್ನಾಡಿದ ಚೇತೇಶ್ವರ್ ಪೂಜಾರ

(Matthew Short stunning dive catch to dismiss Sam Heazlett in Rashid Khan Bowling in Big Bash League Video viral)

Follow us on

Most Read Stories

Click on your DTH Provider to Add TV9 Kannada