IPL 2023: ಕೊಹ್ಲಿ, ಗಿಲ್ ಶರ್ಟ್ ಲೆಸ್ ಫೋಟೋ ಹಾಕಿ ಹಾಟ್ ಆರ್ ನಾಟ್ ಕಾರ್ಯಕ್ರಮ: ನೆಟ್ಟಿಗರಿಂದ ಭಾರೀ ಆಕ್ರೋಶ

|

Updated on: May 19, 2023 | 2:14 PM

ಐಪಿಎಲ್ 2023 ರ ಅಧಿಕೃತ ಟಿವಿ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಎಸ್​ಆರ್​ಹೆಚ್ ಮತ್ತು ಆರ್​ಸಿಬಿ ಪಂದ್ಯ ಆರಂಭಕ್ಕೂ ಮುನ್ನ ಆಯೋಜಿಸಿದ ಒಂದು ಕಾರ್ಯಕ್ರಮವು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

IPL 2023: ಕೊಹ್ಲಿ, ಗಿಲ್ ಶರ್ಟ್ ಲೆಸ್ ಫೋಟೋ ಹಾಕಿ ಹಾಟ್ ಆರ್ ನಾಟ್ ಕಾರ್ಯಕ್ರಮ: ನೆಟ್ಟಿಗರಿಂದ ಭಾರೀ ಆಕ್ರೋಶ
Hot or Not Program
Follow us on

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ (IPL 2023) ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಒಂದು ಪಂದ್ಯದ ಸೋಲು-ಗೆಲುವು ಮೂರನೇ ತಂಡದ ಅಳಿವು ಉಳಿವಿನ ಭವಿಷ್ಯ ನಿರ್ಧಾರವಾಗುತ್ತಿದೆ. ಗುರುವಾರ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (SRH vs RCB) ನಡುವೆ ಪಂದ್ಯ ಆಯೋಜಿಸಲಾಗಿತ್ತು. ರಾಜಿವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ 8 ವಿಕೆಟ್​ಗಳ ಅಮೋಘ ಗೆಲುವು ಕಂಡಿತು. ವಿರಾಟ್ ಕೊಹ್ಲಿ (Virat Kohli) ನಾಲ್ಕು ವರ್ಷಗಳ ಬಳಿಕ ಐಪಿಎಲ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಈ ಪಂದ್ಯದಲ್ಲಿ ಕೊಹ್ಲಿಯ ಶತಕದ ಜೊತೆ ಮತ್ತೊಂದು ಸುದ್ದಿ ಭರ್ಜರಿ ವೈರಲ್ ಆಗುತ್ತಿದೆ.

ಐಪಿಎಲ್ 2023 ರ ಅಧಿಕೃತ ಟಿವಿ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಎಸ್​ಆರ್​ಹೆಚ್ ಮತ್ತು ಆರ್​ಸಿಬಿ ಪಂದ್ಯ ಆರಂಭಕ್ಕೂ ಮುನ್ನ ಆಯೋಜಿಸಿದ ಒಂದು ಕಾರ್ಯಕ್ರಮವು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸ್ಟಾರ್ ಸ್ಪೋರ್ಟ್ಸ್‌ನ ನಾಲ್ಕು ಮಹಿಳಾ ನಿರೂಪಕಿಯರನ್ನು ಒಂದೆಡೆ ಸೇರಿಸಿ ‘ಹಾಟ್ ಆರ್ ನಾಟ್’ ಎಂಬ ಕಾರ್ಯಕ್ರಮ ನಡೆಸಲಾಗಿದೆ. ಇದರಲ್ಲಿ ಮಾಯಾಂತಿ ಲ್ಯಾಂಗರ್ ಸೇರಿದಂತೆ ದೇಶದ ಅತ್ಯಂತ ಪ್ರಸಿದ್ಧ ಕ್ರೀಡಾ ನಿರೂಪಕಿಯರಿದ್ದರು. ಕಾರ್ಯಕ್ರಮವನ್ನು ಸುರೇನ್ ಸುಂದರಂ ಅವರು ನಡೆಸಿಕೊಟ್ಟರೆ, ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಕೂಡ ಜೊತೆಗಿದ್ದರು.

ಇದನ್ನೂ ಓದಿ
ಪತ್ನಿ ಅನುಷ್ಕಾ ಶರ್ಮಾ ಮೇಲೆ ಎಷ್ಟೊಂದು ಪ್ರೀತಿ; ಶತಕ ಬಾರಿಸಿದ ಬಳಿಕ ವಿರಾಟ್​ ಮಾಡಿದ್ದೇನು?
Virat Kohli 100: ಹೈದರಾಬಾದ್ ವಿರುದ್ಧ ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಕಾವ್ಯ ಮಾರನ್ ಕೊಟ್ಟ ರಿಯಾಕ್ಷನ್ ವೈರಲ್
ರಾಜಕೀಯ ಒತ್ತಡಗಳ ನಡುವೆ ಆರ್​ಸಿಬಿ ಮ್ಯಾಚ್ ವೀಕ್ಷಿಸಿದ ಸಿದ್ದರಾಮಯ್ಯ: ಫೋಟೋ ವೈರಲ್
Virat Kohli: ವಿರಾಟ್ ಕೊಹ್ಲಿ 103m ಸಿಕ್ಸ್ ಸಿಡಿಸಿದ್ದನ್ನು ಕಂಡು ಫಾಫ್ ಡುಪ್ಲೆಸಿಸ್ ಏನು ಮಾಡಿದ್ರು ಗೊತ್ತೇ?

IPL 2023 Points Table: ಭರ್ಜರಿ ಜಯದೊಂದಿಗೆ ಟಾಪ್-4 ಗೆ RCB ಎಂಟ್ರಿ

ಇದರಲ್ಲಿ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಶುಭ್​ಮನ್ ಗಿಲ್ ಮತ್ತು ಆಂಡ್ರೆ ರಸೆಲ್ ಅವರ ಶರ್ಟ್‌ಲೆಸ್ ಫೋಟೋಗಳನ್ನು ನಾಲ್ವರು ಮಹಿಳಾ ಆಂಕರ್‌ಗಳಲ್ಲಿ ತೋರಿಸಿ ಇವರಲ್ಲಿ ಹಾಟ್ ಯಾರು? ಅಥವಾ ಹಾಟ್ ಇಲ್ಲದವರು ಯಾರು? ಎಂದು ರೇಟ್ ಮಾಡಲು ಕೇಳಲಾಯಿತು. ಮಹಿಳಾ ಆಂಕರ್‌ಗಳು ಹಾಟ್‌ನೆಸ್ ಅಂಶದ ಆಧಾರದ ಮೇಲೆ ಬಲ ಅಥವಾ ಎಡಕ್ಕೆ ಸ್ವೈಪ್ ಮಾಡಿ ಉತ್ತರಿಸಬೇಕಿತ್ತು. ಮಾಯಾಂತಿ ಸೇರಿದಂತೆ ಮಹಿಳಾ ಆ್ಯಂಕರ್‌ಗಳು ಈ ಕ್ರೀಡೆಯನ್ನು ಆಡಿದ್ದಾರೆ. ಆದರೆ ಐಪಿಎಲ್ ಪಂದ್ಯಕ್ಕೆ ಮುನ್ನ ಈ ರೀತಿಯ ವಿಷಯವನ್ನು ನಿರೀಕ್ಷಿಸದ ಕಟ್ಟಾ ಕ್ರಿಕೆಟ್ ಅನುಯಾಯಿಗಳ ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

 

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡ ಹೆನ್ರಿಚ್ ಕ್ಲಾಸೆನ್ ಅವರ 104 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು. ಆರ್​ಸಿಬಿ ಪರ ಮಿಚೆಲ್ ಬ್ರೆಸ್​ವೆಲ್ 2 ವಿಕೆಟ್ ಪಡೆದರೆ, ಸಿರಾಜ್, ಶಹ್ಬಾಜ್ ಅಹ್ಮದ್ ಮತ್ತು ಹರ್ಷಲ್ ತಲಾ 1 ವಿಕೆಟ್ ಪಡೆದರು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪವರ್​ಪ್ಲೇನಲ್ಲಿ 64 ರನ್​ ಬಾರಿಸಿದ ಈ ಜೋಡಿ 12ನೇ ಓವರ್​ ವೇಳೆಗೆ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ವಿರಾಟ್ ಕೊಹ್ಲಿ 100 ರನ್ ಚಚ್ಚಿದರೆ, ಡುಪ್ಲೆಸಿಸ್ 71 ರನ್ ಸಿಡಿಸಿದರು. ಆರ್​ಸಿಬಿ 19.2 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 187 ರನ್ ಸಿಡಿಸಿ ಜಯ ಕಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ