MI vs CSK Highlights IPL 2023:ಚೆನ್ನೈಗೆ 7 ವಿಕೆಟ್ ಜಯ; ಮುಂಬೈಗೆ ಸತತ 2ನೇ ಸೋಲು
Chennai Super Kings vs Mumbai Indians IPL 2023 Highlights in Kannada: ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ ಹಾಗೂ ಚೆನ್ನೈ ನಡುವಿನ ಕದನದಲ್ಲಿ ಚೆನ್ನೈ ತಂಡ 7 ವಿಕೆಟ್‌ಗಳ ಜಯ ಸಾಧಿಸಿದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ ಹಾಗೂ ಚೆನ್ನೈ ನಡುವಿನ ಕದನದಲ್ಲಿ ಚೆನ್ನೈ ತಂಡ 7 ವಿಕೆಟ್‌ಗಳ ಜಯ ಸಾಧಿಸಿದೆ. ಕಳೆದ 10 ಸೀಸನ್‌ಗಳಂತೆ ಈ ಸೀಸನ್ನಲ್ಲೂ ಕಳಪೆ ಆರಂಭ ಮಾಡಿದ್ದ ಮುಂಬೈ ತನ್ನ ಎರಡನೇ ಪಂದ್ಯದಲ್ಲೂ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಕೇವಲ 157 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದಾದ ಬಳಿಕ ಈ ಗುರಿ ಬೆನ್ನಟ್ಟಿದ ಚೆನ್ನೈ 18 ಓವರ್‌ಗಳಲ್ಲಿ ಗುರಿ ಮುಟ್ಟಿತು. ಚೆನ್ನೈನ ಈ ಗೆಲುವಿನಲ್ಲಿ ರವೀಂದ್ರ ಜಡೇಜಾ, ಅಜಿಂಕ್ಯಾ ರಹಾನೆ ಮತ್ತು ರುತುರಾಜ್ ಪ್ರಮುಖ ಪಾತ್ರವಹಿಸಿದರು. ಈ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ ಜಡೇಜಾ ಕೇವಲ 20 ರನ್ ನೀಡಿ 3 ವಿಕೆಟ್ ಪಡೆದರು. ಹಾಗೆಯೇ ಬ್ಯಾಟಿಂಗ್ನಲ್ಲಿ ರಹಾನೆ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರೆ, ರುತುರಾಜ್ ಅಜೇಯ 40 ರನ್ ಬಾರಿಸಿದರು.
LIVE NEWS & UPDATES
-
ಚೆನ್ನೈಗೆ 7 ವಿಕೆಟ್‌ಗಳ ಜಯ
ಅಂಬಟಿ ರಾಯುಡು 19ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 11 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತು.
-
18 ಓವರ್‌ಗಳ ನಂತರ ಚೆನ್ನೈ ಸ್ಕೋರ್ 153/3
ಚೆನ್ನೈ ಪರ ಗಾಯಕ್ವಾಡ್ 40 ರನ್ ಹಾಗೂ ರಾಯುಡು 16 ರನ್ ಗಳಿಸಿ ಆಡುತ್ತಿದ್ದಾರೆ. 18 ಓವರ್‌ಗಳಲ್ಲಿ ಚೆನ್ನೈ ಸ್ಕೋರ್ 153/3
-
-
24 ಎಸೆತಗಳಲ್ಲಿ 23 ರನ್ ಅಗತ್ಯ
ಚೆನ್ನೈ ಪರ ಗಾಯಕ್ವಾಡ್ 37 ರನ್ ಹಾಗೂ ರಾದ್ಯು 2 ರನ್ ಗಳಿಸಿ ಆಡುತ್ತಿದ್ದಾರೆ. ಚೆನ್ನೈ ಗೆಲುವಿಗೆ 24 ಎಸೆತಗಳಲ್ಲಿ 23 ರನ್ ಅಗತ್ಯವಿದೆ.
-
15 ಓವರ್‌ಗಳ ನಂತರ ಚೆನ್ನೈ ಸ್ಕೋರ್ 135/2
ಚೆನ್ನೈ ಪರ ಗಾಯಕ್ವಾಡ್ 37 ರನ್ ಹಾಗೂ ರಾಯುಡು 1 ರನ್ ಗಳಿಸಿ ಆಡುತ್ತಿದ್ದಾರೆ. ಗಾಯಕ್ವಾಡ್ ಐಪಿಎಲ್ 2023 ರ 14 ನೇ ಸಿಕ್ಸರ್ ಬಾರಿಸಿದರು.
-
ದುಬೆ ಔಟ್
ಕಾರ್ತಿಕೇಯ ಕುಮಾರ್ ಅವರ ಓವರ್‌ನಲ್ಲಿ ಶಿವಂ ದುಬೆ 28 ರನ್ ಗಳಿಸಿ ಔಟಾದರು.
-
-
ಗೆಲುವಿನತ್ತ ಚೆನ್ನೈ
ಚೆನ್ನೈ ಪರ ಗಾಯಕ್ವಾಡ್ 22 ಮತ್ತು ದುಬೆ 18 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಚೆನ್ನೈ ಗೆಲುವಿಗೆ 48 ಎಸೆತಗಳಲ್ಲಿ 50 ರನ್ ಅಗತ್ಯವಿದೆ. ಈ ಓವರ್‌ನಲ್ಲಿ ದುಬೆ ಇನ್ನೊಂದು ಫೋರ್ ಕಂಡಿತು.ಕೂಡ ಬಾರಿಸಿದರು.
-
ದುಬೆ ಫೋರ್
ಚೆನ್ನೈ ಪರ ಗಾಯಕ್ವಾಡ್ 20 ಮತ್ತು ದುಬೆ 9 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಚೆನ್ನೈ ಗೆಲುವಿಗೆ 60 ಎಸೆತಗಳಲ್ಲಿ 61 ರನ್‌ಗಳ ಅಗತ್ಯವಿದೆ.ಈ ಓವರ್‌ನಲ್ಲಿ ದುಬೆ ಒಂದು ಬೌಂಡರಿ ಬಾರಿಸಿದರು.
-
9 ಓವರ್ ಮುಕ್ತಾಯ
ಚೆನ್ನೈ ಪರ ಗಾಯಕ್ವಾಡ್ 15 ರನ್ ಹಾಗೂ ದುಬೆ 3 ರನ್ ಗಳಿಸಿ ಆಡುತ್ತಿದ್ದಾರೆ. ಚೆನ್ನೈ ಗೆಲುವಿಗೆ 66 ಎಸೆತಗಳಲ್ಲಿ 72 ರನ್ ಅಗತ್ಯವಿದೆ.
-
ಎರಡನೇ ವಿಕೆಟ್ ಪತನ
ಚೆನ್ನೈನ ಎರಡನೇ ವಿಕೆಟ್ ಪತನವಾಗಿದ್ದು, 61 ರನ್ ಗಳಿಸಿ ಅಬ್ಬರಿಸುತ್ತಿದ್ದ ಅಜಿಕ್ಯ ರಹಾನೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. 8 ಓವರ್‌ಗಳ ನಂತರ ಚೆನ್ನೈ ಸ್ಕೋರ್ 82/2
-
ಅಜಿಕ್ಯ ರಹಾನೆ ಅರ್ಧಶತಕ
ಅಜಿಕ್ಯ ರಹಾನೆ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ರಹಾನೆ ತಮ್ಮ ವೇಗದ ಅರ್ಧಶತಕ ಪೂರೈಸಿದರು. ಹಾಗೆಯೇ ಈ ಐಪಿಎಲ್ನ ಅತ್ಯಂತ ವೇಗದ ಅರ್ಧಶತಕ ಬಾರಿಸಿದರು. 6 ಓವರ್‌ಗಳ ನಂತರ ಚೆನ್ನೈ ಸ್ಕೋರ್ 68/1
-
5 ಓವರ್‌ಗಳ ನಂತರ ಚೆನ್ನೈ ಸ್ಕೋರ್ 55/1
ಚೆನ್ನೈ ಪರ ಗಾಯಕ್ವಾಡ್ 4 ರನ್ ಹಾಗೂ ರಹಾನೆ 44 ರನ್ ಗಳಿಸಿ ಆಡುತ್ತಿದ್ದಾರೆ. ರಹಾನೆ ಉತ್ತಮ ಫಾರ್ಮ್‌ನಲ್ಲಿದ್ದಾರೆ. 5 ಓವರ್‌ಗಳ ನಂತರ ಚೆನ್ನೈ ಸ್ಕೋರ್ 54/1
-
ರಹಾನೆ ಅಬ್ಬರ
4ನೇ ಓವರ್‌ನಲ್ಲಿ ರಹಾನೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಈ ಓವರ್‌ನಲ್ಲಿ 1 ಸಿಕ್ಸ್ ಹಾಗೂ 4 ಬೌಂಡರಿ ಸಹಿತ 23 ರನ್ ಬಾರಿಸಿದರು.
-
ರಹಾನೆ ಸಿಕ್ಸರ್
3ನೇ ಓವರ್‌ನಲ್ಲಿ ರಹಾನೆ ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ 9 ರನ್ ಬಂದವು.
-
2 ಓವರ್‌ಗಳ ನಂತರ ಚೆನ್ನೈ ಸ್ಕೋರ್ 12/1
ಚೆನ್ನೈ ಪರ ಗಾಯಕ್ವಾಡ್ 2 ರನ್ ಹಾಗೂ ರಹಾನೆ 2 ರನ್ ಗಳಿಸಿ ಆಡುತ್ತಿದ್ದಾರೆ. 2 ಓವರ್‌ಗಳ ನಂತರ ಚೆನ್ನೈ ಸ್ಕೋರ್ 12/1.
-
ಶೂನ್ಯಕ್ಕೆ ಕಾನ್ವೇ ಔಟ್
ಚೆನ್ನೈನ ಮೊದಲ ವಿಕೆಟ್ ಪತನಗೊಂಡಿದೆ. ಕಾನ್ವೇ ಮೊದಲ ಓವರ್‌ನ 4ನೇ ಎಸೆತದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮುಂಬೈ ಇಂಡಿಯನ್ಸ್ 158 ರನ್ ಟಾರ್ಗೆಟ್ ನೀಡಿದೆ.
-
158 ರನ್ ಟಾರ್ಗೆಟ್
ಅಂತಿಮ ಓವರ್‌ನಲ್ಲಿ 3 ಬೌಂಡರಿ ಬಂದವು. 20 ಓವರ್‌ಗಳ ನಂತರ ಮುಂಬೈ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಈ ಪಂದ್ಯದಲ್ಲಿ ಚೆನ್ನೈ ಗೆಲುವಿಗೆ 158 ರನ್‌ಗಳ ಗುರಿ ಇದೆ.
-
19 ಓವರ್‌ಗಳ ನಂತರ ಮುಂಬೈ ಸ್ಕೋರ್ 141/8
ಮುಂಬೈ ಇಂಡಿಯನ್ಸ್ ಪರ ಪಿಯೂಷ್ ಚಾವ್ಲಾ 4 ರನ್ ಹಾಗೂ ಶೋಕಿನ್ 6 ರನ್ ಗಳಿಸಿ ಆಡುತ್ತಿದ್ದಾರೆ. 19 ಓವರ್‌ಗಳಲ್ಲಿ ಮುಂಬೈ ಸ್ಕೋರ್ 141/8
-
17 ಓವರ್ ಮುಕ್ತಾಯ, ಡೇವಿಡ್ ಔಟ್
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ಗೆ ಜೀವ ತುಂಬಲು ಯತ್ನಿಸಿದ ಟಿಮ್ ಡೇವಿಡ್ 31 ರನ್ ಗಳಿಸಿ ಔಟಾದರು. ಈ ಓವರ್‌ನಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದ ಡೇವಿಡ್, ಡೀಪ್ ಮಿಡ್ ವಿಕೆ್ಟ್ನಲ್ಲಿ ಕ್ಯಾಚಿತ್ತು ಔಟಾದರು.
-
ಏಳನೇ ವಿಕೆಟ್ ಪತನ
ಚೊಚ್ಚಲ ಐಪಿಎಲ್ ಪಂದ್ಯವನ್ನಾಡುತ್ತಿರುವ ಮಗಲಾ ಟ್ರೈಸೆಂಟ್ ಸ್ಟಬ್ ಅವರ ವಿಕೆಟ್ ಪಡೆದರು. 16 ಓವರ್‌ಗಳ ನಂತರ ಮುಂಬೈ ಸ್ಕೋರ್ 113/7
-
15 ಓವರ್‌ಗಳ ನಂತರ ಮುಂಬೈ ಸ್ಕೋರ್ 109/6
ಮುಂಬೈ ಇಂಡಿಯನ್ಸ್ ಪರ ಟೀಮ್ ಡೇವಿಡ್ 12 ರನ್ ಮತ್ತು ಸ್ಟಬ್ 3 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಮುಂಬೈ ಸ್ಕೋರ್ 15 ಓವರ್‌ಗಳ ನಂತರ 109/6.
-
ಆರನೇ ವಿಕೆಟ್ ಪತನ
13ನೇ ಓವರ್‌ನ ಕೊನೆಯ ಎಸೆತದಲ್ಲಿ ರವೀಂದ್ರ ಜಡೇಜಾ ತಿಲಕ್ ವರ್ಮಾ ಅವರನ್ನು ಎಲ್ ಬಿಡಬ್ಲ್ಯೂ ಔಟ್ ಮಾಡಿದರು. ತಿಲಕ್ 22 ರನ್ ಗಳಿಸಿದರು. ಮುಂಬೈನ 6 ವಿಕೆಟ್‌ಗಳು ಪತನಗೊಂಡಿವೆ
-
12 ಓವರ್ ಮುಕ್ತಾಯ
ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ 15 ರನ್ ಮತ್ತು ಟೀಮ್ ಡೇವಿಡ್ 6 ರನ್ ಗಳಿಸಿ ಆಡುತ್ತಿದ್ದಾರೆ.12 ಓವರ್‌ಗಳ ನಂತರ ಮುಂಬೈ ಸ್ಕೋರ್ 93/5
-
10 ಓವರ್ ಅಂತ್ಯ
ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ 11 ರನ್ ಹಾಗೂ ಟೀಮ್ ಡೇವಿಡ್ 3 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಫೋರ್ ಕೂಡ ಬಂತು.
-
ಮುಂಬೈನ ಅರ್ಧದಷ್ಟು ತಂಡ ಪೆವಿಲಿಯನ್ಗೆ
ಮುಂಬೈನ ಅರ್ಧ ತಂಡ ಪೆವಿಲಿಯನ್ ಸೇರಿಕೊಂಡಿದೆ. ಮುಂಬೈ ಸ್ಕೋರ್ 9.1 ಓವರ್‌ಗಳಲ್ಲಿ 76/5
-
5ನೇ ವಿಕೆಟ್ ಪತನ
ಗ್ರೀನ್ ವಿಕೆಟ್ ಬಳಿಕ ಬಂದಿದ್ದ ಹರ್ಷದ್ ಕೂಡ ಸ್ಪಿನ್ ಬಲೆಗೆ ಬಿದ್ದಿದ್ದಾರೆ. ಸ್ಯಾಂಟ್ನರ್ ಎಸೆದ 10ನೇ ಓವರ್‌ನಲ್ಲಿ ಹರ್ಷದ್ ಎಲ್ಬಿ ಬಲೆಗೆ ಬಿದ್ದರು.
-
ಗ್ರೀನ್ ಕೂಡ ಔಟ್
ಮುಂಬೈ ವಿಕೆಟ್ ಪತನ ಆರಂಭವಾಗಿದೆ. ಮೊದಲ ಓವರ್‌ನಲ್ಲಿ ಕಿಶನ್ರನ್ನು ಔಟ್ ಮಾಡಿದ್ದ ಜಡೇಜಾ ಎರಡನೇ ಓವರ್‌ನಲ್ಲಿ ಗ್ರೀನ್ರನ್ನು ಔಟ್ ಮಾಡಿದರು.
-
ಸೂರ್ಯ ಔಟ್
ಕಳೆದ ಕೆಲವು ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಸೂರ್ಯಕುಮಾರ್ ಯಾದವ್ ಚೆನ್ನೈ ವಿರುದ್ಧವೂ ಮುಗ್ಗಿರಿಸಿದ್ದಾರೆ. ಸ್ಯಾಂಟ್ನರ್ ಎಸೆದಲ್ಲಿ ಸ್ವಿಪ್ ಶಾಟ್ ಆಡುವ ಯತ್ನದಲ್ಲಿ ಸೂರ್ಯ ಕೀಪರ್ಗೆ ಕ್ಯಾಚಿತ್ತು ಔಟಾದರು.
-
ಕಿಶನ್ ಔಟ್
7ನೇ ಓವರ್‌ನ 4ನೇ ಎಸೆತದಲ್ಲೇ ಜಡೇಜಾ ಕಿಶನ್ ವಿಕೆಟ್ ಉರುಳಿಸಿದ್ದಾರೆ. ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ಕಿಶನ್ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
-
ಪವರ್ ಪ್ಲೇ ಅಂತ್ಯ
ಪವರ್ ಪ್ಲೇನಲ್ಲಿ ಮುಂಬೈ ತಂಡ ನಾಯಕ ರೋಹಿತ್ ವಿಕೆಟ್ ಕಳೆದುಕೊಂಡು 61 ರನ್ ಕಲೆ ಹಾಕಿದೆ. 6ನೇ ಓವರ್‌ನಲ್ಲಿ ಕಿಶನ್ 2 ಬೌಂಡರಿ ಕೂಡ ಬಾರಿಸಿದರು.
-
5 ಓವರ್‌ಗಳ ನಂತರ ಮುಂಬೈ ಸ್ಕೋರ್ 47/1
ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 18 ರನ್ ಮತ್ತು ಗ್ರೀನ್ 6 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಗ್ರೀನ್ ಒಂದು ಫೋರ್ ಹೊಡೆದರು.
-
ರೋಹಿತ್ ಮತ್ತೆ ವಿಫಲ
ಆರ್ಸಿಬಿ ವಿರುದ್ಧವೂ ಮುಗ್ಗರಿಸಿದ್ದ ರೋಹಿತ್ 2ನೇ ಪಂದ್ಯದಲ್ಲೂ ಚೆನ್ನೈ ವಿರುದ್ಧ ಕೇವಲ 21 ರನ್ಗಳಿಗೆ ಇನ್ನಿಂಗ್ಸ್ ಮುಗಸಿದ್ದಾರೆ.
-
ಕಿಶನ್ ಬೌಂಡರಿ
3ನೇ ಓವರ್ ಎಸೆದ ಸಿಸಾಂಡ ಮಗಾಲಾ ಬೌಲಿಂಗ್ನಲ್ಲಿ ಕಿಶನ್ 2 ಬೌಂಡರಿ ಬಾರಿಸಿದರು. ಈ 2 ಬೌಂಡರಿಗಳೊಂದಿಗೆ ಮುಂಬೈ ಸ್ಕೋರ್ 30 ಆಗಿದೆ.
-
ಮುಂಬೈ ಬ್ಯಾಟಿಂಗ್ ಆರಂಭ
ಮುಂಬೈ ಬ್ಯಾಟಿಂಗ್ ಆರಂಭವಾಗಿದೆ. ಮುಂಬೈ ಪರ ರೋಹಿತ್- ಕಿಶನ್ ಕಣಕ್ಕಿಳಿದಿದ್ದಾರೆ. ದೀಪಕ್ ಎಸೆದ ಈ ಓವರ್‌ನಲ್ಲಿ ರೋಹಿತ್ 2 ಬೌಂಡರಿ ಬಾರಿಸಿದರು.
-
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಟ್ರಿಸ್ಟಾನ್ ಸ್ಟಬ್ಸ್, ಅರ್ಷದ್ ಖಾನ್, ಹೃತಿಕ್ ಶೋಕಿನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್‌ಡಾರ್ಫ್.
-
ಚೆನ್ನೈ ಸೂಪರ್ ಕಿಂಗ್ಸ್
ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ಕೀಪರ್/ನಾಯಕ), ಶಿವಂ ದುಬೆ, ಡ್ವೇನ್ ಪ್ರಿಟೋರಿಯಸ್, ದೀಪಕ್ ಚಾಹರ್, ಮಿಚೆಲ್ ಸ್ಯಾಂಟ್ನರ್, ಸಿಸಂಡಾ ಮಗಾಲಾ, ತುಷಾರ್ ದೇಶಪಾಂಡೆ.
-
ವಾರ್ನರ್ ಔಟ್
ಡೇವಿಡ್ ವಾರ್ನರ್ ಔಟಾಗಿದ್ದಾರೆ. 19ನೇ ಓವರ್‌ನ ಕೊನೆಯ ಎಸೆತದಲ್ಲಿ ಯುಜುವೇಂದ್ರ ಚಾಹಲ್ ವಾರ್ನರ್ ಅವರನ್ನು ಔಟ್ ಮಾಡಿದರು.
ಡೇವಿಡ್ ವಾರ್ನರ್ – 65 ರನ್, 55 ಎಸೆತಗಳು 7×4
-
ಟಾಸ್ ಗೆದ್ದ ಚೆನ್ನೈ
ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಮುಂಬೈ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - Apr 08,2023 7:01 PM
