ಆರ್ಸಿಬಿ (RCB) ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಇಂದು ಮುಖಾಮುಖಿ ಆಗುತ್ತಿವೆ. ಐಪಿಎಲ್ ಈ ಸೀಸನ್ನ 25ನೇ ಮ್ಯಾಚ್ ಇದಾಗಿದ್ದು, ಎರಡೂ ತಂಡಗಳು ತಲಾ ಎರಡು ಪಾಯಿಂಟ್ ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯಲ್ಲಿವೆ. ಇಂದು ಗೆದ್ದ ತಂಡಕ್ಕೆ ಎರಡು ಅಂಕ ಸಿಗಲಿದೆ. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರೋ ಆರ್ಸಿಬಿಗೆ ಇಂದು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಆರ್ಸಿಬಿ ತಂಡ ಆಡಿದ ಐದು ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಗೆದ್ದಿದೆ. ಮುಂಬೈ ಇಂಡಿಯನ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದು ಮ್ಯಾಚ್ ಗೆದ್ದಿದೆ. ಹೀಗಾಗಿ ಎರಡೂ ತಂಡಗಳಿಗೆ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಮುಂಬೈಗೆ ಹೋಂ ಪಿಚ್ ಆಗಿರುವುದರಿಂದ ಇಂದಿನ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಆರ್ಸಿಬಿಯಲ್ಲಿ ಕೆಲವೇ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಕಾರಣಕ್ಕೆ ಎರಡು ವಿದೇಶಿ ಆಟಗಾರರಿಗೆ ಬೇಂಚ್ ಕಾಯಿಸುವ ಕೆಲಸ ನೀಡಲು ನಿರ್ಧರಿಸಲಾಗಿದೆ ಎಂದು ವರದಿ ಆಗಿದೆ
ವಿರಾಟ್ ಕೊಹ್ಲಿ ಮಾತ್ರ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ವಿದೇಶಿ ಆಟಗಾರರಾದ ಮ್ಯಾಕ್ಸ್ವೆಲ್ ಹಾಗೂ ಕ್ಯಾಮರೂನ್ ಗ್ರೀನ್ ಸಂಪೂರ್ಣ ವಿಫಲತೆ ಕಂಡಿದ್ದಾರೆ. ಇಬ್ಬರೂ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಮ್ಯಾಕ್ಸ್ವೆಲ್ ಐದು ಇನ್ನಿಂಗ್ಸ್ನಲ್ಲಿ ಗಳಿಸಿದ್ದು 32 ರನ್ ಮಾತ್ರ. ಗ್ರೀನ್ 68 ರನ್ ಕಲೆ ಹಾಕಿದ್ದು, ಬೌಲಿಂಗ್ನಲ್ಲಿ ದುಬಾರಿ ಆಗಿದ್ದಾರೆ.
ಇದನ್ನೂ ಓದಿ: ಮುಂಬೈ- ಆರ್ಸಿಬಿ ಫೈಟ್; ಪಂದ್ಯ ಎಲ್ಲಿ ನಡೆಯಲ್ಲಿದೆ ಗೊತ್ತಾ?
ಇಂದಿನ ಪಂದ್ಯಕ್ಕೆ ಮ್ಯಾಕ್ಸ್ವೆಲ್ ಬದಲು ವಿಲ್ ಜಾಕ್ಸ್ ಬರೋ ಸಾಧ್ಯತೆ ಇದೆ. ಈ ಮೂಲಕ ವಿರಾಟ್ ಕೊಹ್ಲಿ ಹಾಗೂ ಫಾಪ್ ಡುಪ್ಲೆಸಿಸ್ ಓಪನಿಂಗ್ ತೆರಳಲಿದ್ದು, ಆ ಬಳಿಕ ವಿಲ್ ಜಾಕ್ಸ್ ಅಖಾಡಕ್ಕೆ ಇಳಿಯಲಿದ್ದಾರೆ. ಬೌಲಿಂಗ್ನಲ್ಲೂ ಅವರು ಸಹಕಾರಿ ಆಗಲಿದ್ದಾರೆ. ರಜತ್ ಪಟಿದಾರ್ ಬದಲು ಮಹಿಪಾಲ್ ಲೊಮ್ರೊರ್ ಬರೋ ಸಾಧ್ಯತೆ ಇದೆ. ಗ್ರೀನ್ನ ಕೈಬಿಟ್ಟರೆ ಆ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ