MI vs SRH Highlights IPL 2023: ಮುಂಬೈಗೆ ಸುಲಭ ಜಯ; ಗೆದ್ದರಷ್ಟೇ ಆರ್​ಸಿಬಿಗೆ ಉಳಿಗಾಲ

|

Updated on:May 21, 2023 | 7:26 PM

Mumbai Indians vs Sunrisers Hyderabad IPL 2023 Highlights in Kannada: ಇಂದು ಐಪಿಎಲ್​ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಸನ್ ರೈಸರ್ಸ್​ ಹೈದರಾಬಾದ್​ ತಂಡಗಳು ಮುಖಾಮುಖಿಯಾಗಿವೆ.

MI vs SRH Highlights IPL 2023: ಮುಂಬೈಗೆ ಸುಲಭ ಜಯ; ಗೆದ್ದರಷ್ಟೇ ಆರ್​ಸಿಬಿಗೆ ಉಳಿಗಾಲ
ಮುಂಬೈ- ಹೈದರಾಬಾದ್ ಮುಖಾಮುಖಿ

ಐಪಿಎಲ್​ನ​ 69ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ 8 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ಪ್ಲೇ ಆಫ್ ಭರವಸೆಯನ್ನು ಜೀವಂತವಾಗಿರಿಸಿದೆ. ಈಗ ಕೊನೆಯ ಪಂದ್ಯದಲ್ಲಿ ಆರ್​ಸಿಬಿ, ಗುಜರಾತ್ ವಿರುದ್ಧ ಸೋತರೆ ಮುಂಬೈ ಸುಲಭವಾಗಿ ಪ್ಲೇ ಆಫ್​ಗೇರಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 200 ರನ್ ಗಳಿಸಿತು. ಇದಕ್ಕುತ್ತರವಾಗಿ ಗ್ರೀನ್ ಅವರ ಅಬ್ಬರದ ಶತಕ ಹಾಗೂ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದಾಗಿ 18ನೇ ಓವರ್​ನಲ್ಲೇ ಗೆಲುವಿನ ದಡ ಸೇರಿತು.

LIVE NEWS & UPDATES

The liveblog has ended.
  • 21 May 2023 07:23 PM (IST)

    ಗ್ರೀನ್ ಶತಕ, ಮುಂಬೈಗೆ ಸುಲಭ ಜಯ

    ಮುಂಬೈ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಗ್ರೀನ್ ಚೊಚ್ಚಲ ಐಪಿಎಲ್ ಶತಕ ಸಿಡಿಸಿದ್ದಾರೆ

    ಇದರೊಂದಿಗೆ ಮುಂಬೈ ಸುಲಭ ಜಯ ಸಾಧಿಸಿದೆ

    ಈಗ ಆರ್​ಸಿಬಿ ಪ್ಲೇ ಆಫ್​ಗೇರಬೇಕೆಂದರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲಲೇಬೇಕಾಗಿದೆ.

  • 21 May 2023 07:16 PM (IST)

    ಗ್ರೀನ್ ಅಬ್ಬರ

    17ನೇ ಓವರ್​ನಲ್ಲಿ 13 ರನ್ ಬಂದವು

    ಈ ಓವರ್​ನಲ್ಲಿ ಸೂರ್ಯ ಹಾಗೂ ಗ್ರೀನ್ ತಲಾ ಒಂದೊಂದು ಬೌಂಡರಿ ಬಾರಿಸಿದರು

    ಮುಂಬೈ 193/2

  • 21 May 2023 07:13 PM (IST)

    ಮಲಿಕ್ ದುಬಾರಿ

    ಮಲಿಕ್ ಬೌಲ್ ಮಾಡಿದ 16ನೇ ಓವರ್​ನಲ್ಲಿ 20 ರನ್ ಬಂದವು

    ಈ ಓವರ್​ನಲ್ಲಿ ಗ್ರೀನ್ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರೆ

    ಕೊನೆಯ 2 ಎಸೆತಗಳಲ್ಲಿ ಸೂರ್ಯ 1 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು

  • 21 May 2023 06:56 PM (IST)

    ರೋಹಿತ್ ಔಟ್

    14ನೇ ಓವರ್​ನ ಮೊದಲ ಎಸೆತದಲ್ಲೇ ರೋಹಿತ್ ವಿಕೆಟ್ ಒಪ್ಪಿಸಿದರು

    ಮಯಾಂಕ್ ಎಸೆತದಲ್ಲಿ ರೋಹಿತ್ ನಿತೀಶ್​ಗೆ ಕ್ಯಾಚಿತ್ತು ಔಟಾದರು

    ರೋಹಿತ್ ಶರ್ಮಾ 56 (37)

  • 21 May 2023 06:55 PM (IST)

    ಗ್ರೀನ್ 2 ಸಿಕ್ಸರ್

    13ನೇ ಓವರ್​ನ ಮೊದಲ ಎಸೆತವನ್ನು ಲೆಗ್ ಬ್ಯಾಕ್ ಇನ್​ಸೈಡ್​ನಲ್ಲಿ ಸಿಕ್ಸರ್​ಗಟ್ಟಿದ ಗ್ರೀನ್, ಕೊನೆಯ ಎಸೆತವನ್ನು ಮಿಡ್ ವಿಕೆಟ್​ನಲ್ಲಿ ಸಿಕ್ಸರ್​ಗಟ್ಟಿದರು.

    ಮುಂಬೈ 148/1

  • 21 May 2023 06:48 PM (IST)

    ರೋಹಿತ್ ಅರ್ಧಶತಕ

    12ನೇ ಓವರ್​ನ 2ನೇ ಎಸೆತವನ್ನು ಎಕ್ಸ್​ಟ್ರಾ ಕವರ್​ನಲ್ಲಿ ಬೌಂಡರಿ ಬಾರಿಸಿದ ರೋಹಿತ್ ತಮ್ಮ ಅರ್ಧಶತಕ ಪೂರೈಸಿದರು.

    12 ಓವರ್ ಅಂತ್ಯಕ್ಕೆ 132/1

    ರೋಹಿತ್ ಶರ್ಮಾ 55* (35)

    ಕ್ಯಾಮರೂನ್ ಗ್ರೀನ್58* (28)

  • 21 May 2023 06:46 PM (IST)

    ಶತಕದ ಜೊತೆಯಾಟ

    11ನೇ ಓವರ್​ನಲ್ಲಿ ಬೌಂಡರಿ ಬಾರಿಸಿದ ಗ್ರೀನ್ ಇಬ್ಬರ ನಡುವಿನ ಶತಕದ ಜೊತೆಯಾಟವನ್ನು ಪೂರ್ಣಗೊಳಿಸಿದರು.

    11 ಓವರ್ ಅಂತ್ಯಕ್ಕೆ 121/1

  • 21 May 2023 06:45 PM (IST)

    10 ಓವರ್ ಅಂತ್ಯ

    10ನೇ ಓವರ್​ನಲ್ಲಿ 14 ರನ್ ಬಂದವು

    ಈ ಓವರ್​ನಲ್ಲಿ ಗ್ರೀನ್ 3 ಬೌಂಡರಿ ಬಾರಿಸಿದರು

    10 ಓವರ್ ಅಂತ್ಯಕ್ಕೆ 114/1

  • 21 May 2023 06:44 PM (IST)

    ಗ್ರೀನ್‌ ಅರ್ಧಶತಕ

    ಕ್ಯಾಮರೂನ್ ಗ್ರೀನ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬಂದ ಗ್ರೀನ್ ಅದ್ಭುತ ಅರ್ಧಶತಕ ಗಳಿಸಿದರು. ಗ್ರೀನ್ 9ನೇ ಓವರ್​ನಲ್ಲಿ ಸಿಕ್ಸರ್​ನೊಂದಿಗೆ ಅರ್ಧಶತಕ ಪೂರೈಸಿದರು.

  • 21 May 2023 06:11 PM (IST)

    ಪವರ್ ಪ್ಲೇ ಮುಕ್ತಾಯ

    ಮುಂಬೈ ಇನ್ನಿಂಗ್ಸ್​ನ 6 ಓವರ್​ ಮುಗಿದಿದೆ

    ಈ ಪವರ್ ಪ್ಲೇ ನಲ್ಲಿ ಮುಂಬೈ 1 ವಿಕೆಟ್ ಕಳೆದುಕೊಂಡು 60 ರನ್ ಕಲೆಹಾಕಿದೆ

    6ನೇ ಓವರ್​ನಲ್ಲೂ 1 ಸಿಕ್ಸರ್ ಹಾಗೂ 2 ಬೌಂಡರಿ ಬಂದವು

    ಕ್ಯಾಮರೂನ್ ಗ್ರೀನ್30* (10)

    ರೋಹಿತ್ ಶರ್ಮಾ 15* (15)

  • 21 May 2023 06:09 PM (IST)

    ಗ್ರೀನ್ ಫೋರ್

    4ನೇ ಓವರ್​ನ 2ನೇ ಎಸೆತವನ್ನು ರೋಹಿತ್ ಪಾಯಿಂಟ್ ದಿಕ್ಕಿನಲ್ಲಿ ಬೌಂಡರಿ ಬಾರಿಸಿದರೆ, ಕೊನೆಯ ಎಸೆತವನ್ನು ಗ್ರೀನ್ ಬೌಂಡರಿಗಟ್ಟಿದರು.

  • 21 May 2023 06:08 PM (IST)

    ಕಿಶನ್ ಔಟ್

    ಭುವನೇಶ್ವರ್ ಕುಮಾರ್ ಅವರ ಮೂರನೇ ಓವರ್‌ನ 5ನೇ ಎಸೆತದಲ್ಲಿ ಇಶಾನ್ ಕಿಶನ್ 14 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಹ್ಯಾರಿ ಬ್ರೂಕ್ ಮಿಡ್‌ವಿಕೆಟ್‌ನಲ್ಲಿ ಡೈವಿಂಗ್ ಕ್ಯಾಚ್ ಪಡೆದರು.

  • 21 May 2023 05:49 PM (IST)

    ಮುಂಬೈ ಉತ್ತಮ ಆರಂಭ

    ಮುಂಬೈ ಪರ ಕಿಶನ್ ಹಾಗೂ ರೋಹಿತ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

    ಮೊದಲನೇ ಓವರ್​ನ ಕೊನೆಯ ಎಸೆತದಲ್ಲಿ ಬೌಂಡರಿ ಬಂದರೆ

    2ನೇ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸ್, 2ನೇ ಎಸೆತದಲ್ಲಿ ಫೋರ್ ಬಂತು

    2 ಓವರ್ ಅಂತ್ಯಕ್ಕೆ 17/0

  • 21 May 2023 05:25 PM (IST)

    ಮುಂಬೈಗೆ 201 ರನ್ ಟಾರ್ಗೆಟ್

    ಹೈದರಾಬಾದ್ ಆರಂಭಿಕರ ಅರ್ಧಶತಕದ ನೆರವಿನಿಂದ ಹೈದರಾಬಾದ್ 200 ರನ್ ಕಲೆಹಾಕಿದೆ

    20ನೇ ಓವರ್​ನ ಕೊನೆಯ ಎಸೆತವನ್ನು ಸಿಕ್ಸರ್​ಗಟ್ಟಿದ ಮಾರ್ಕಾಮ್ ತಂಡವನ್ನು 200ರ ಗಡಿ ದಾಟಿಸಿದರು.

    ಹೈದರಾಬಾದ್ 201/5

  • 21 May 2023 05:18 PM (IST)

    ಆಕಾಶ್​ಗೆ 4 ವಿಕೆಟ್

    19ನೇ ಓವರ್ ಬೌಲ್ ಮಾಡಿದ ಆಕಾಶ್ 2 ವಿಕೆಟ್ ಉರುಳಿಸಿದರು

    ಈ 2 ವಿಕೆಟ್​ಗಳೊಂದಿಗೆ ಆಕಾಶ್ ಖಾತೆಗೆ 4 ವಿಕೆಟ್ ಬಿದ್ದಿವೆ

    19 ಓವರ್ ಅಂತ್ಯಕ್ಕೆ 186/5

  • 21 May 2023 05:10 PM (IST)

    3ನೇ ವಿಕೆಟ್ ಪತನ

    ಕಾರ್ತಿಕೇಯ ಬೌಲ್ ಮಾಡಿದ 18ನೇ ಓವರ್​ನಲ್ಲಿ ಫಿಲಿಪ್ಸ್ ಕೇವಲ 1 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

    18 ಓವರ್ ಅಂತ್ಯಕ್ಕೆ 180/3

  • 21 May 2023 05:02 PM (IST)

    83 ರನ್ ಬಾರಿಸಿ ಮಯಾಂಕ್ ಔಟ್

    17ನೇ ಓವರ್​ನ 2ನೇ ಎಸೆತವನ್ನು ಬೌಂಡರಿಗಟ್ಟಿದ ಮಯಾಂಕ್ 4ನೇ ಎಸೆತದಲ್ಲಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು

    17 ಓವರ್ ಅಂತ್ಯಕ್ಕೆ 174/2

    ಮಯಾಂಕ್ ಅಗರ್ವಾಲ್ 83 (46)

  • 21 May 2023 04:49 PM (IST)

    ಹೈದರಾಬಾದ್ 150 ರನ್ ಪೂರ್ಣ

    15ನೇ ಓವರ್​ನ 3ನೇ ಎಸೆತವನ್ನು ಸಿಕ್ಸರ್​ಗಟ್ಟಿದ ಮಯಾಂಕ್ ತಂಡವನ್ನು 150ರ ಗಡಿ ದಾಟಿಸಿದರು

    ಈ ಓವರ್​ನಲ್ಲಿ 13 ರನ್ ಬಂತು

    ಹೆನ್ರಿಕ್ ಕ್ಲಾಸೆನ್6* (3)

    ಮಯಾಂಕ್ ಅಗರ್ವಾಲ್ 73* (40)

  • 21 May 2023 04:47 PM (IST)

    ವಿವ್ರಾಂತ್ ಶರ್ಮಾ ಔಟ್

    ಹೈದರಾಬಾದ್ ಮೊದಲ ವಿಕೆಟ್ ಪತನವಾಗಿದೆ

    14ನೇ ಓವರ್​ನ 5ನೇ ಎಸೆತದಲ್ಲಿ ವಿವ್ರಾಂತ್ ಶರ್ಮಾ ಕ್ಯಾಚಿತ್ತು ಔಟಾದರು

    14 ಓವರ್ ಅಂತ್ಯಕ್ಕೆ 144/1

  • 21 May 2023 04:40 PM (IST)

    ಮಯಾಂಕ್ ಅರ್ಧಶತಕ

    13ನೇ ಓವರ್​ನ 2ನೇ ಎಸೆತವನ್ನು ಬೌಂಡರಿಗಟ್ಟಿದ ಮಯಾಂಕ್ ತಮ್ಮ ಅರ್ಧಶತಕ ಪೂರೈಸಿದರು.

    1 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 19 ರನ್ ಬಂದವು

    13 ಓವರ್ ಅಂತ್ಯಕ್ಕೆ 130/0

  • 21 May 2023 04:31 PM (IST)

    ಕಾರ್ತಿಕೇಯ ದುಬಾರಿ

    11ನೇ ಓವರ್​ನಲ್ಲಿ 10 ರನ್ ಬಂದವು

    ಈ ಓವರ್​ನಲ್ಲಿ 2 ಬೌಂಡರಿ ಬಂದವು

    ಇದರೊಂದಿಗೆ ಹೈದರಾಬಾದ್ ಶತಕ ಕೂಡ ಪೂರೈಸಿತು.

    11 ಓವರ್ ಅಂತ್ಯಕ್ಕೆ 103/0

  • 21 May 2023 04:23 PM (IST)

    ವಿವ್ರಾಂತ್ ಶರ್ಮಾ ಅರ್ಧಶತಕ

    ಹೈದರಾಬಾದ್ ಇನ್ನಿಂಗ್ಸ್​ನ 10 ಓವರ್​ ಮುಗಿದಿದೆ

    ತಂಡ ಈ 10 ಓವರ್​ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 93 ರನ್ ಬಾರಿಸಿದೆ.

    ಓವರ್​ನ 5ನೇ ಎಸೆತದಲ್ಲಿ ಸಿಂಗಲ್ ತೆಗೆದ ವಿವ್ರಾಂತ್ ಶರ್ಮ ತಮ್ಮ ಅರ್ಧಶತಕ ಪೂರೈಸಿದರು.

    ಮಯಾಂಕ್ ಅಗರ್ವಾಲ್ 35* (24)

    ವಿವ್ರಾಂತ್ ಶರ್ಮಾ 50* (36)

  • 21 May 2023 04:22 PM (IST)

    ಚಾವ್ಲಾಗೆ ಸಿಕ್ಸರ್

    ಚಾವ್ಲಾ ಬೌಲ್ ಮಾಡಿದ 8ನೇ ಓವರ್​ನಲ್ಲಿ 10 ರನ್ ಬಂದವು

    ಓವರ್​ನ ಮೊದಲ ಎಸೆತವನ್ನು ವಿವ್ರಾಂತ್ ಶರ್ಮಾ ಮಿಡ್ ವಿಕೆಟ್​ನಲ್ಲಿ ಸಿಕ್ಸರ್​ಗಟ್ಟಿದರು

    8 ಓವರ್ ಅಂತ್ಯಕ್ಕೆ 74/0

  • 21 May 2023 04:09 PM (IST)

    ಪವರ್ ಪ್ಲೇ ಮುಕ್ತಾಯ

    ಚಾವ್ಲಾ ಬೌಲ್ ಮಾಡಿದ 6ನೇ ಓವರ್​ನಲ್ಲಿ 10 ರನ್ ಬಂದವು

    ಓವರ್​ನ ಮೊದಲ ಮತ್ತು ಕೊನೆಯ ಎಸೆತದಲ್ಲಿ ಬೌಂಡರಿ ಬಂತು.

    ಹಾಗೆಯೇ ಈ ಓವರ್​ನಲ್ಲಿ ತಂಡದ ಅರ್ಧಶತಕ ಕೂಡ ಪೂರ್ಣಗೊಂಡಿತು

    ಹೈದರಾಬಾದ್ 53/0

  • 21 May 2023 03:59 PM (IST)

    5ನೇ ಓವರ್ ಅಂತ್ಯ

    ಆಕಾಶ್ ಬೌಲ್ ಮಾಡಿದ 5ನೇ ಓವರ್​ನಲ್ಲಿ 11 ರನ್ ಬಂದವು

    ಓವರ್​ನ 2ನೇ ಮತ್ತು ಕೊನೆಯ ಎಸೆತವನ್ನು ಮಯಾಂಕ್ ಮಿಡ್ ಆನ್​ನಲ್ಲಿ ಬೌಂಡರಿಗಟ್ಟಿದರು.

  • 21 May 2023 03:57 PM (IST)

    ಬ್ಯಾಕ್ ಟು ಬ್ಯಾಕ್ ಬೌಂಡರಿ

    ಜೋರ್ಡಾನ್ ಬೌಲ್ ಮಾಡಿದ 4ನೇ ಓವರ್​ನಲ್ಲಿ 10 ರನ್ ಬಂದವು

    ಓವರ್​ನ 2 ಮತ್ತು 3ನೇ ಎಸೆತವನ್ನು ವಿವ್ರಾಂತ್ ಶರ್ಮಾ ಬೌಂಡರಿಗಟ್ಟಿದರು.

    ಹೈದರಾಬಾದ್ 32/0

  • 21 May 2023 03:47 PM (IST)

    ಮಯಾಂಕ್ ಫೋರ್

    ಜೇಸನ್ ಬೆಹ್ರೆನ್ಡಾರ್ಫ್ ಬೌಲ್ ಮಾಡಿದ 3ನೇ ಓವರ್​ನಲ್ಲಿ ಮಯಾಂಕ್ 2 ಬೌಂಡರಿ ಬಾರಿಸಿದರು.

    3 ಓವರ್ ಅಂತ್ಯಕ್ಕೆ ಹೈದರಾಬಾದ್ 22/0

  • 21 May 2023 03:43 PM (IST)

    ಹೈದರಾಬಾದ್ ಬ್ಯಾಟಿಂಗ್ ಆರಂಭ

    ಹೈದರಾಬಾದ್ ತಂಡದ ಬ್ಯಾಟಿಂಗ್ ಆರಂಭವಾಗಿದೆ. ಬೆಹ್ರೆಂಡಾರ್ಫ್ ಅವರ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ವಿವ್ರಾಂತ್ ಹೈದರಾಬಾದ್ ಖಾತೆ ತೆರೆದರು.

  • 21 May 2023 03:24 PM (IST)

    ಸನ್‌ರೈಸರ್ಸ್ ಹೈದರಾಬಾದ್‌

    ಮಯಾಂಕ್ ಅಗರ್ವಾಲ್, ವಿವ್ರಾಂತ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಹ್ಯಾರಿ ಬ್ರೂಕ್, ನಿತೀಶ್ ರೆಡ್ಡಿ, ಗ್ಲೆನ್ ಫಿಲಿಪ್ಸ್, ಸನ್ವೀರ್ ಸಿಂಗ್, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್

  • 21 May 2023 03:24 PM (IST)

    ಮುಂಬೈ ಇಂಡಿಯನ್ಸ್‌

    ರೋಹಿತ್ ಶರ್ಮಾ, ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್

  • 21 May 2023 03:04 PM (IST)

    ಮುಂಬೈ ಗೆಲ್ಲಲೇಬೇಕು

    ಇದು ಗುಂಪು ಹಂತದ ಕೊನೆಯ ದಿನ. ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಪ್ಲೇ ಆಫ್‌ಗೆ ಹೋಗುವ ಭರವಸೆಯನ್ನು ಉಳಿಸಿಕೊಳ್ಳಲು, ಮುಂಬೈ ಇಂದು ದೊಡ್ಡ ಅಂತರದಿಂದ ಗೆಲ್ಲಲೇಬೇಕು.

  • 21 May 2023 03:03 PM (IST)

    ಟಾಸ್ ಗೆದ್ದ ಮುಂಬೈ

    ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Published On - May 21,2023 3:02 PM

    Follow us
    ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
    ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
    ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
    ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
    ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
    ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
    ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
    ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
    ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
    ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
    ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
    ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
    ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
    ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
    ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
    ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
    Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
    Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?