
ಆಸ್ಟ್ರೇಲಿಯಾ ಮತ್ತು ಭಾರತ (India vs Australia) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ 7 ವಿಕೆಟ್ಗಳ ಜಯ ಸಾಧಿಸಿತು. ಇದು ಪಂದ್ಯದ ಫಲಿತಾಂಶವಾದರೆ, ಇನ್ನು ಇದೇ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ (Mitchell Starc) ವೇಗದ ಬೌಲಿಂಗ್ ಬಗ್ಗೆ ಎಲ್ಲೆಡೆ ಚರ್ಚೆ ಶುರುವಾಗಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಈ ವೇಳೆ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಅವರು ಎಸೆದ ಅದೊಂದು ಎಸೆತದ ವೇಗ ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ.
ಭಾರತದ ಇನ್ನಿಂಗ್ಸ್‌ನ ಮೊದಲ ಓವರ್ ಅನ್ನು ಮಿಚೆಲ್ ಸ್ಟಾರ್ಕ್ ಬೌಲ್ ಮಾಡಿದರು. ಈ ವೇಳೆ ಸ್ಟ್ರೈಕ್ನಲ್ಲಿದ್ದ ರೋಹಿತ್ ಶರ್ಮಾ ಎದುರಿಸಿದ ಮೊದಲ ಚೆಂಡು ಸ್ಪೀಡ್ ಗನ್‌ನಲ್ಲಿ 176.5 ಕಿ.ಮೀ ವೇಗವನ್ನು ತೋರಿಸಿತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಇಂಟರ್ನೆಟ್‌ನಲ್ಲಿ ವೈರಲ್ ಆದವು. ಈ ವಿಷಯ ತಿಳಿದ ಕ್ರಿಕೆಟ್ ಅಭಿಮಾನಿಗಳು ಕೂಡ ಅಚ್ಚರಿಗೊಂಡರು.
🚨 Mitchell Starc shatters Shoaib Akhtar’s 22-year-old record for the fastest ball ever bowled! ⚡🏏
● Shoaib Akhtar’s record: 161.3 km/h (100.23 mph)
● Starc’s thunderbolt vs India: 176.5 km/h (109 mph)#INDvsAUS pic.twitter.com/3JEVKGRNoW— KhilariTak (@khilaritak) October 19, 2025
ಆದಾಗ್ಯೂ ಸ್ಪೀಡ್ ಗನ್ ತಪ್ಪಾಗಿ 176.5 ಕಿ.ಮೀ ವೇಗವನ್ನು ದಾಖಲಿಸಿದೆ ಎಂದು ವರದಿಯಾಗಿದೆ. ಕೂಡಲೇ ಎಚ್ಚೆತ್ತುಕೊಂಡ ತಂತ್ರಜ್ಞರು ತಪ್ಪನ್ನು ಸರಿಪಡಿಸಿದರು. ವಾಸ್ತವವಾಗಿ ಸ್ಟಾರ್ಕ್ ಎಸೆದ ಆ ಚೆಂಡಿನ ವೇಗ ಗಂಟೆಗೆ 140. 8 ಕಿ.ಮೀ ಆಗಿತ್ತು. ಆದರೆ ಅಷ್ಟರಲ್ಲಾಗಲೇ ಸ್ಪೀಡ್ ಗನ್ನ ದೋಷಪೂರಿತ ಅಂಕಿ ಅಂಶ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಆರಂಭಿಸಿತ್ತು. ಇದನ್ನು ಗಮನಿಸಿದವರೆಲ್ಲ ಬಾಯಿ ಮೇಲೆ ಬೆರಳಿಟ್ಟಿದ್ದರು.
Starc’s very first delivery showed 176.5 km/h (109 mph) on the speed gun — everyone was shocked! 😳
Later it turned out to be a broadcast error — the actual speed was 140.8 km/h (87 mph). #AUSvIND #ICC #Cricket #Fans pic.twitter.com/2YS1YqWkB4— Real Khattak (@FaizanUmer50457) October 19, 2025
ವಾಸ್ತವವಾಗಿ ಇದುವರೆಗಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಚೆಂಡು 161.3 ಕಿ.ಮೀ. ಆಗಿದೆ. 2003 ರ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ 161.3 ಕಿ.ಮೀ ವೇಗದಲ್ಲಿ ಚೆಂಡನ್ನು ಬೌಲ್ ಮಾಡಿದ್ದರು. ಇಂಗ್ಲೆಂಡ್‌ನ ನಿಕ್ ನೈಟ್ ಆ ಚೆಂಡನ್ನು ಎದುರಿಸಿದ್ದರು.
IND vs AUS: 437 ದಿನಗಳ ನಂತರ ಭಾರತದ ಏಕದಿನ ಆಳ್ವಿಕೆ ಅಂತ್ಯ
ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮಳೆಯಿಂದಾಗಿ ಪಂದ್ಯವನ್ನು ನಾಲ್ಕು ಬಾರಿ ನಿಲ್ಲಿಸಬೇಕಾಯಿತು, ಇದರಿಂದಾಗಿ ತಲಾ 26 ಓವರ್‌ಗಳನ್ನು ಆಡಲು ನಿರ್ಧರಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 26 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 136 ರನ್ ಗಳಿಸಿತು. ಡಕ್‌ವರ್ತ್-ಲೂಯಿಸ್ ನಿಯಮದಡಿಯಲ್ಲಿ, ಆಸ್ಟ್ರೇಲಿಯಾ ಗೆಲ್ಲಲು 131 ರನ್‌ಗಳ ಗುರಿಯನ್ನು ಪಡೆಯಿತು. ನಾಯಕ ಮಿಚೆಲ್ ಮಾರ್ಷ್ ಅವರ ಅದ್ಭುತ ಇನ್ನಿಂಗ್ಸ್ ಆಧಾರದ ಮೇಲೆ ಆಸ್ಟ್ರೇಲಿಯಾ 21.1 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 131 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:44 pm, Sun, 19 October 25