
ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್ ಮತ್ತು ಅನುಭವಿ ಜುಲಾನ್ ಗೋಸ್ವಾಮಿ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಇದರ ಜೊತೆಗೆ ಈಗ ಪುರುಷರ ತಂಡದ ಅನೇಕ ಘಟಾನುಘಟಿ ಆಟಗಾರರು ಮಾಡಲು ಸಾಧ್ಯವಾಗದ ದಾಖಲೆಯನ್ನು ಈ ಇಬ್ಬರು ನಿರ್ಮಿಸಿದ್ದಾರೆ.

ಮಿಥಾಲಿ ರಾಜ್ ಮತ್ತು ಜುಲಾನ್ ಗೋಸ್ವಾಮಿ ಅವರ ಟೆಸ್ಟ್ ವೃತ್ತಿಜೀವನವು ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ಎಂ.ಎಸ್. ಧೋನಿಗಿಂತ ದೀರ್ಘವಾಗಿದೆ. ಕುಂಬ್ಳೆ ಅವರ ವೃತ್ತಿಜೀವನ 18 ವರ್ಷ 88 ದಿನಗಳು. ದ್ರಾವಿಡ್ ಅವರ ವೃತ್ತಿಜೀವನವು 15 ವರ್ಷ 222 ದಿನಗಳು ಮತ್ತು ಗಂಗೂಲಿಯ ವೃತ್ತಿಜೀವನವು 12 ವರ್ಷಗಳು 143 ದಿನಗಳು. ಈ ವಿಷಯದಲ್ಲಿ ಸಚಿನ್ ತೆಂಡೂಲ್ಕರ್ ಮಾತ್ರ ಇವರ ಮುಂದೆ ಇದ್ದಾರೆ.

ಇವರಿಬ್ಬರ ಟೆಸ್ಟ್ ವೃತ್ತಿಜೀವನವು 19 ವರ್ಷ 156 ದಿನಗಳಾಗಿದೆ. ವೆರಾ ಬರ್ಟ್ ಮತ್ತು ಮೇರಿ ಹೈಡ್ ನಂತರ ಮಹಿಳಾ ಕ್ರಿಕೆಟ್‌ನಲ್ಲಿ ಅವರು ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದಾರೆ. ನ್ಯೂಜಿಲೆಂಡ್‌ನ ವೆರಾ ಬರ್ಟ್‌ನ ವೃತ್ತಿಜೀವನ 20 ವರ್ಷ 335 ಮತ್ತು ಇಂಗ್ಲೆಂಡ್‌ನ ಮೇರಿ ಹೈಡ್ ಅವರ ವೃತ್ತಿಜೀವನ 19 ವರ್ಷ 211 ದಿನ ಆಗಿತ್ತು.

ಮಿಥಾಲಿ ರಾಜ್ ಮತ್ತು ಜುಲಾನ್ ಗೋಸ್ವಾಮಿ ಭಾರತಕ್ಕಾಗಿ ಟೆಸ್ಟ್ ಪಂದ್ಯಗಳನ್ನು ಆಡಿದ ಮಹಿಳಾ ಕ್ರಿಕೆಟಿಗರು. ಮಿಥಾಲಿ ಮತ್ತು ಜುಲಾನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆ ಮಾಡಿದ್ದಾರೆ. ಇಬ್ಬರೂ 2002 ರಲ್ಲಿ ಒಟ್ಟಿಗೆ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು ಮತ್ತು ಈಗ ಅವರ ಹೆಸರನ್ನು ಲಾಂಗೆಸ್ಟ್ ವೃತ್ತಿಜೀವನದ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ.