AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kevin O’Brien: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆಂಗ್ಲರ ವಿರುದ್ಧ ಘರ್ಜಿಸಿದ್ದ ಕೆವಿನ್ ಒಬ್ರಿಯಾನ್ ಏಕದಿನ ಕ್ರಿಕೆಟ್​ಗೆ ವಿದಾಯ

Kevin O'Brien: ಕೇವಲ 50 ಎಸೆತಗಳಲ್ಲಿ ಪ್ರಚಂಡ ಶತಕ ಬಾರಿಸುವ ಮೂಲಕ ವಿಶ್ವ ದಾಖಲೆ ಮಾಡಿದರು. ಇದು ವಿಶ್ವಕಪ್‌ನಲ್ಲಿ ಅತಿ ವೇಗದ ಶತಕ ದಾಖಲೆಯಾಗಿದೆ.

Kevin O'Brien: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆಂಗ್ಲರ ವಿರುದ್ಧ ಘರ್ಜಿಸಿದ್ದ ಕೆವಿನ್ ಒಬ್ರಿಯಾನ್ ಏಕದಿನ ಕ್ರಿಕೆಟ್​ಗೆ ವಿದಾಯ
ಕೆವಿನ್ ಒ'ಬ್ರಿಯೆನ್
ಪೃಥ್ವಿಶಂಕರ
|

Updated on: Jun 18, 2021 | 8:41 PM

Share

ಸೌತಾಂಪ್ಟನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಮೇಲೆ ಎಲ್ಲರ ಕಣ್ಣುಗಳು ಇವೆ. ಜೂನ್ 18 ರ ಶುಕ್ರವಾರ ಪ್ರಾರಂಭವಾದ ಪಂದ್ಯವು ಮಳೆಯಿಂದಾಗಿ ವಿಳಂಬವಾಗಿದೆ. ಪಂದ್ಯ ಕೂಡ ಪ್ರಾರಂಭವಾಗಿಲ್ಲ ಮತ್ತು ಎಲ್ಲರೂ ಮಳೆ ನಿಲ್ಲುವವರೆಗೆ ಕಾಯುತ್ತಿದ್ದಾರೆ. ಆದರೆ ಇದರ ಹೊರತಾಗಿ, ಕ್ರಿಕೆಟ್ ಮತ್ತು ಅದಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಪ್ರಪಂಚದಾದ್ಯಂತ ನಡೆಯುತ್ತಿವೆ. ಈ ಎಲ್ಲದರ ನಡುವೆ ಹಿರಿಯ ಕ್ರಿಕೆಟಿಗ ನಿವೃತ್ತಿ ಘೋಷಿಸಿದ್ದಾರೆ. ಐರ್ಲೆಂಡ್ ಕ್ರಿಕೆಟ್ ತಂಡದ ಅತಿದೊಡ್ಡ ಹೆಸರು ಮತ್ತು ಅತ್ಯಂತ ಯಶಸ್ವಿ ಆಟಗಾರ ಕೆವಿನ್ ಒ’ಬ್ರಿಯೆನ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಬಲಗೈ ಸ್ಫೋಟಕ ಬ್ಯಾಟ್ಸ್‌ಮನ್ ಮತ್ತು ಉಪಯುಕ್ತ ಮಧ್ಯಮ ವೇಗಿ ಓ’ಬ್ರಿಯೆನ್ ಅವರ ಗಮನವು ಈಗ ಟಿ 20 ವಿಶ್ವಕಪ್ ಮತ್ತು ಟೆಸ್ಟ್ ಕ್ರಿಕೆಟ್‌ನ ಮೇಲೆ ಮಾತ್ರ ಇರುತ್ತದೆ ಎಂದು ಹೇಳಿದ್ದಾರೆ.

37 ವರ್ಷದ ಕೆವಿನ್ ಒ’ಬ್ರಿಯೆನ್ 2006 ರಲ್ಲಿ ಐರ್ಲೆಂಡ್ ಪರ ಏಕದಿನ ಚೊಚ್ಚಲ ಪಂದ್ಯವನ್ನಾಡಿದರು. ಅಂದಿನಿಂದ, ಅವರು ತಮ್ಮ ದೇಶದ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾದರು. ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದಾರೆ, ಜೊತೆಗೆ ಅವರು ಅತಿ ಹೆಚ್ಚು ವಿಕೆಟ್‌ಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಒ’ಬ್ರೇನ್ ಐರ್ಲೆಂಡ್ ಪರ 153 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಸ್ವರೂಪದಲ್ಲಿ ಸುಮಾರು 15 ವರ್ಷಗಳನ್ನು ಕಳೆದ ನಂತರ ಅವರು ನಿವೃತ್ತಿ ಘೋಷಿಸಿದ್ದಾರೆ.

ಏಕದಿನ ಆಡಲು ಹೆಚ್ಚು ಉತ್ಸಾಹವಿಲ್ಲ ಜೂನ್ 18 ರ ಶುಕ್ರವಾರ, ಈ ಪೌರಾಣಿಕ ಆಲ್‌ರೌಂಡರ್ ನಿವೃತ್ತಿಯ ಬಗ್ಗೆ ಕ್ರಿಕೆಟ್ ಐರ್ಲೆಂಡ್ ಮಾಹಿತಿ ನೀಡಿದೆ. ಅವರ ನಿವೃತ್ತಿಯನ್ನು ವಿವರಿಸಿದ ಕೆವಿನ್ ಒ’ಬ್ರಿಯೆನ್, “ಐರ್ಲೆಂಡ್ ಪರ 15 ವರ್ಷಗಳ ಕಾಲ ಆಡಿದ ನಂತರ, ಏಕದಿನ ಕ್ರಿಕೆಟ್‌ನಿಂದ ಹೊರಹೋಗಲು ಮತ್ತು ನಿವೃತ್ತಿ ಹೊಂದಲು ಇದೀಗ ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನನ್ನ ದೇಶವನ್ನು 153 ಬಾರಿ ಪ್ರತಿನಿಧಿಸಲು ನನಗೆ ಸಿಕ್ಕಿದ್ದು ಹೆಮ್ಮೆ ಎನಿಸುತ್ತದೆ ಮತ್ತು ನಾನು ಹೊತ್ತಿರುವ ನೆನಪುಗಳು ಯಾವಾಗಲೂ ನನ್ನೊಂದಿಗೆ ಇರುತ್ತವೆ.

ಐರ್ಲೆಂಡ್‌ಗಾಗಿ 2007, 2011 ಮತ್ತು 2015 ರ ವಿಶ್ವಕಪ್‌ಗಳಲ್ಲಿ ಭಾಗವಹಿಸಿದ ಓ’ಬ್ರಿಯೆನ್, ಮೊದಲಿನಂತೆ ಏಕದಿನ ಕ್ರಿಕೆಟ್‌ನಲ್ಲಿ ಅದೇ ರೀತಿಯ ಹಸಿವು ಇರಲಿಲ್ಲ ಮತ್ತು ಅದಕ್ಕಾಗಿಯೇ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಮುಂದಿನ 18 ತಿಂಗಳುಗಳಲ್ಲಿ ಎರಡು ವಿಶ್ವಕಪ್‌ಗಳು ಬರಲಿವೆ. ಆದರಿಂದ ನಾನು ಈಗ ನನ್ನ ಗಮನವನ್ನು ಮತ್ತು ನನ್ನನ್ನೇ ಸಂಪೂರ್ಣವಾಗಿ ಟಿ 20 ಕ್ರಿಕೆಟ್‌ಗೆ ವಿನಿಯೋಗಿಸುತ್ತೇನೆ ಎಂದಿದ್ದಾರೆ.

ಪಾಕಿಸ್ತಾನಕ್ಕೆ ಹೀನಾಯ ಸೋಲುಣಿಸಿದರು ಕೆವಿನ್ ಒ’ಬ್ರಿಯೆನ್ ವಿಶ್ವಕಪ್‌ನಲ್ಲಿ ಐರ್ಲೆಂಡ್‌ನ ಕೆಲವು ಅತ್ಯುತ್ತಮ ಕ್ಷಣಗಳ ಭಾಗವಾಗಿದ್ದಾರೆ. ಇದರಲ್ಲಿ ಮೊದಲನೆಯದು 2007 ರ ವಿಶ್ವಕಪ್‌ನಲ್ಲಿ, ಐರ್ಲೆಂಡ್ ಪಾಕಿಸ್ತಾನವನ್ನು ಕೇವಲ 132 ರನ್‌ಗಳಿಗೆ ಕಟ್ಟಿಹಾಕಿತು ಮತ್ತು ನಂತರ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿತು. ಈ ಪಂದ್ಯದಲ್ಲಿ 1 ವಿಕೆಟ್ ಪಡೆಯುವುದರ ಜೊತೆಗೆ ಒ’ಬ್ರೇನ್ ಅಜೇಯ 16 ರನ್ ಗಳಿಸಿದರು.

ವಿಶ್ವಕಪ್‌ನಲ್ಲಿ ಅದ್ಭುತ ದಾಖಲೆ ಇದರ ನಂತರ ಮುಂದಿನ ಅವಕಾಶವು 2011 ರ ವಿಶ್ವಕಪ್‌ನಲ್ಲಿ ಬಂದಿತು, ಇದು ಐರ್ಲೆಂಡ್‌ಗೆ ಮತ್ತು ಕೆವಿನ್ ಒ’ಬ್ರಿಯನ್‌ಗೆ ವೈಯಕ್ತಿಕವಾಗಿ ಅತ್ಯಂತ ಅದ್ಭುತ ಕ್ಷಣವಾಗಿದೆ. 49.1 ಓವರ್‌ಗಳಲ್ಲಿ ಇಂಗ್ಲೆಂಡ್‌ನಿಂದ 328 ರನ್ ಗಳಿಸುವ ಗುರಿ ಸಾಧಿಸುವ ಮೂಲಕ ಐರ್ಲೆಂಡ್ ಮತ್ತೆ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿತು. ಇದು 2019 ರವರೆಗೆ ವಿಶ್ವಕಪ್‌ನಲ್ಲಿ ಅತಿದೊಡ್ಡ ರನ್ ಚೇಸ್ ಆಗಿತ್ತು. ಇದರ ವಿಶೇಷ ವಿಷಯವೆಂದರೆ ಕೆವಿನ್ ಒ’ಬ್ರಿಯೆನ್ ಅವರ ಇನ್ನಿಂಗ್ಸ್. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಒ’ಬ್ರೇನ್ ಬಿರುಗಾಳಿಯನ್ನು ಸೃಷ್ಟಿಸಿದರು. ಅವರು ಕೇವಲ 50 ಎಸೆತಗಳಲ್ಲಿ ಪ್ರಚಂಡ ಶತಕ ಬಾರಿಸುವ ಮೂಲಕ ವಿಶ್ವ ದಾಖಲೆ ಮಾಡಿದರು. ಇದು ವಿಶ್ವಕಪ್‌ನಲ್ಲಿ ಅತಿ ವೇಗದ ಶತಕ ದಾಖಲೆಯಾಗಿದೆ. ಅವರು 63 ಎಸೆತಗಳಲ್ಲಿ 113 ರನ್ ಗಳಿಸುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ನೀಡಿದರು.

2006 ರಲ್ಲಿ ಏಕದಿನ ವೃತ್ತಿಜೀವನವನ್ನು ಪ್ರಾರಂಭಿಸಿದ ಕೆವಿನ್ ಒ’ಬ್ರಿಯೆನ್ 153 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 3619 ರನ್ ಗಳಿಸಿದ್ದಾರೆ. ಅವರು 2 ಶತಕಗಳು ಮತ್ತು 18 ಅರ್ಧಶತಕಗಳನ್ನು ಗಳಿಸಿದರು. ಅಷ್ಟೇ ಅಲ್ಲ, ಅವರು 114 ವಿಕೆಟ್‌ಗಳನ್ನು ಪಡೆದಿದ್ದಾರೆ.

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ