MLC 2024: ತನ್ನಿಂದಾದ ಪ್ರಮಾದಕ್ಕೆ ಮಹಿಳಾ ಅಭಿಮಾನಿ ಬಳಿ ಕ್ಷಮೆಯಾಚಿಸಿದ ಪೊಲಾರ್ಡ್​; ವಿಡಿಯೋ ನೋಡಿ

MLC 2024: ಪೊಲಾರ್ಡ್​ ಈ ಪಂದ್ಯದಲ್ಲಿ 12 ಎಸೆತಗಳನ್ನು ಎದುರಿಸಿ​ 33 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರ ಬ್ಯಾಟ್‌ನಿಂದ 2 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸಿಡಿದವು. ಈ ಮೂರು ಸಿಕ್ಸರ್​ಗಳಲ್ಲಿ ಒಂದು ಸಿಕ್ಸರ್ ಮಿಡ್-ವಿಕೆಟ್ ಮೇಲೆ ಬಂದಿತು. ಆದರೆ ಈ ಸಿಕ್ಸರ್​, ಆ ದಿಕ್ಕಿನಲ್ಲಿ ಕುಳಿತಿದ್ದ ಮಹಿಳಾ ಅಭಿಮಾನಿಯ ಭುಜಕ್ಕೆ ತಗುಲಿತು. ಕೂಡಲೇ ಆ ಅಭಿಮಾನಿ ನೋವಿನಿಂದ ನರಳಲಾರಂಭಿಸಿದರು.

MLC 2024: ತನ್ನಿಂದಾದ ಪ್ರಮಾದಕ್ಕೆ ಮಹಿಳಾ ಅಭಿಮಾನಿ ಬಳಿ ಕ್ಷಮೆಯಾಚಿಸಿದ ಪೊಲಾರ್ಡ್​; ವಿಡಿಯೋ ನೋಡಿ
ಕೀರನ್ ಪೊಲಾರ್ಡ್
Follow us
ಪೃಥ್ವಿಶಂಕರ
|

Updated on:Jul 22, 2024 | 5:13 PM

ಟಿ20 ವಿಶ್ವಕಪ್ ಮುಗಿದ ಬಳಿಕ ಇದೀಗ ಅಮೆರಿಕದಲ್ಲಿ ಮೇಜರ್ ಲೀಗ್ ಕ್ರಿಕೆಟ್‌ ನಡೆಯುತ್ತಿದೆ. ಇಂದು ನಡೆದ ಲೀಗ್​ನ 19ನೇ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ನಾಯಕತ್ವದ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡ ಹಾಗೂ ಶಾರುಖ್ ಒಡೆತನದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪೊಲಾರ್ಡ್​ ಪಡೆ, ನೈಟ್ ರೈಡರ್ಸ್​ ತಂಡವನ್ನು ಇನ್ನು 18 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್​ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೈಟ್ ರೈಡರ್ಸ್ ತಂಡ 19.1 ಓವರ್‌ಗಳಲ್ಲಿ ಕೇವಲ 130 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ 17 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಸಾಧಿಸಿತು. ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ನಾಯಕ ಕೀರಾನ್ ಪೊಲಾರ್ಡ್‌ ಗೆಲುವಿನ ಪ್ರಮುಖ ಪಾತ್ರವಹಿಸಿದಲ್ಲದೆ, ತನ್ನಿಂದಾದ ಪ್ರಮಾದಕ್ಕೆ ಮಹಿಳಾ ಅಭಿಮಾನಿ ಮತ್ತು ಅವರ ಪತಿ ಬಳಿ ಕ್ಷಮೆ ಕೇಳಬೇಕಾಯಿತು.

ಕ್ಷಮೆಯಾಚಿಸಿದ ಪೊಲಾರ್ಡ್

ಮೇಲೆ ಹೇಳಿದಂತೆ ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕೀರನ್ ಪೊಲಾರ್ಡ್ ಬ್ಯಾಟಿಂಗ್ ಮೂಲಕ ಅದ್ಭುತ ಕೊಡುಗೆ ನೀಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 12 ಎಸೆತಗಳನ್ನು ಎದುರಿಸಿದ ಪೊಲಾರ್ಡ್​ 33 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರ ಬ್ಯಾಟ್‌ನಿಂದ 2 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸಿಡಿದವು. ಈ ಮೂರು ಸಿಕ್ಸರ್​ಗಳಲ್ಲಿ ಒಂದು ಸಿಕ್ಸರ್ ಮಿಡ್-ವಿಕೆಟ್ ಮೇಲೆ ಬಂದಿತು. ಆದರೆ ಈ ಸಿಕ್ಸರ್​, ಆ ದಿಕ್ಕಿನಲ್ಲಿ ಕುಳಿತಿದ್ದ ಮಹಿಳಾ ಅಭಿಮಾನಿಯ ಭುಜಕ್ಕೆ ತಗುಲಿತು. ಕೂಡಲೇ ಆ ಅಭಿಮಾನಿ ನೋವಿನಿಂದ ನರಳಲಾರಂಭಿಸಿದರು.

ಕೊನೆಯಲ್ಲಿ ನ್ಯೂಯಾರ್ಕ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದ ನಂತರ, ಪೊಲಾರ್ಡ್ ತನ್ನ ಸಿಕ್ಸರ್​ನಿಂದಾಗಿ ನೋವಿಗೊಳಗಾದ ಮಹಿಳಾ ಅಭಿಮಾನಿಯನ್ನು ಭೇಟಿಯಾಗಲು ನಿರ್ಧರಿಸಿದರು. ಸ್ವತಃ ಪೊಲಾರ್ಡ್ ಆ ಮಹಿಳಾ ಅಭಿಮಾನಿಯ ಬಳಿ ಹೋಗಿ ಕ್ಷಮೆ ಯಾಚಿಸಿದರು. ಜೊತೆಗೆ ಅವರ ಪತಿಗೂ ಕ್ಷಮೆಯಾಚಿಸಿದರು. ಇದಾದ ನಂತರ, ಪೊಲಾರ್ಡ್ ಆ ಇಬ್ಬರು ದಂಪತಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು, ಅವರಿಗೆ ತಮ್ಮ ಹಸ್ತಾಕ್ಷರದ ಕ್ಯಾಪ್ ನೀಡಿದರು.

ಪೊಲಾರ್ಡ್ ತಂಡಕ್ಕೆ ಜಯ

ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ಗೆಲುವಿನ ಹೀರೋ ಆಗಿದ್ದು ಕೀರಾನ್ ಪೊಲಾರ್ಡ್. ಬೌಲಿಂಗ್ ಮಾಡುವಾಗ ನೈಟ್ ರೈಡರ್ಸ್ ಆಲ್ ರೌಂಡರ್ ಆಂಡ್ರೆ ರಸೆಲ್ ಅವರನ್ನು ಔಟ್ ಮಾಡಿದ್ದ ಪೊಲಾರ್ಡ್​, ಇದಾದ ನಂತರ ತಂಡ ಸಂಕಷ್ಟದಲ್ಲಿದ್ದಾಗ 275 ಸ್ಟ್ರೈಕ್ ರೇಟ್​ನಲ್ಲಿ ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ಪ್ಲೇಆಫ್‌ಗೆ ಅರ್ಹತೆ ಗಳಿಸಿದರೆ, ಇತ್ತ ನೈಟ್ ರೈಡರ್ಸ್ ತಂಡ ಪಂದ್ಯಾವಳಿಯಿಂದ ಹೊರಗುಳಿಯಿತು. ಈ ಟೂರ್ನಿಯಲ್ಲಿ ನೈಟ್ ರೈಡರ್ಸ್ 7 ಪಂದ್ಯಗಳ ಪೈಕಿ 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:11 pm, Mon, 22 July 24