Moeen Ali: 6 ಸಿಕ್ಸ್, 2 ಫೋರ್: ಅತೀ ವೇಗದ ಅರ್ಧಶತಕ ಸಿಡಿಸಿದ ಮೊಯೀನ್ ಅಲಿ

| Updated By: ಝಾಹಿರ್ ಯೂಸುಫ್

Updated on: Jul 28, 2022 | 1:25 PM

Moeen Ali: 235 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ರೀಜಾ ಹೆಂಡ್ರಿಕ್ಸ್ (57) ಹಾಗೂ ಟ್ರಿಸ್ಟನ್ ಸ್ಟಬ್ಸ್ ಅಬ್ಬರಿಸಿದರು. ಅದರಲ್ಲೂ ಕೇವಲ 28 ಎಸೆತಗಳಲ್ಲಿ 8 ಸಿಕ್ಸ್​ನೊಂದಿಗೆ 72 ರನ್​ ಬಾರಿಸುವ ಮೂಲಕ ಸ್ಟಬ್ಸ್ ಸೌತ್ ಆಫ್ರಿಕಾಗೆ ಗೆಲುವಿನ ಆಸೆ ಮೂಡಿಸಿದರು.

Moeen Ali: 6 ಸಿಕ್ಸ್, 2 ಫೋರ್: ಅತೀ ವೇಗದ ಅರ್ಧಶತಕ ಸಿಡಿಸಿದ ಮೊಯೀನ್ ಅಲಿ
Moeen Ali
Follow us on

ಸೌತ್ ಆಫ್ರಿಕಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 41 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಇಂಗ್ಲೆಂಡ್​ ನೀಡಿದ 235 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಸೌತ್ ಆಫ್ರಿಕಾ 193 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಇಂಗ್ಲೆಂಡ್ ತಂಡವು ಮೊದಲ ಪಂದ್ಯದಲ್ಲೇ ಜಯಗಳಿಸಿತು. ಈ ಗೆಲುವಿನ ರುವಾರಿ ಇಂಗ್ಲೆಂಡ್ ಆಲ್​ರೌಂಡರ್ ಮೊಯೀನ್ ಅಲಿ. ಏಕೆಂದರೆ ಇಂಗ್ಲೆಂಡ್ ಇನಿಂಗ್ಸ್​ನ ಅಂತಿಮ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿದಾಟಿಸಿದ್ದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಯೀನ್ ಅಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಸಿಕ್ಸ್​-ಫೋರ್​ಗಳ ಸುರಿಮಳೆಗೈದ ಇಂಗ್ಲೆಂಡ್ ಬ್ಯಾಟ್ಸ್​ಮನ್ ಸೌತ್ ಆಫ್ರಿಕಾ ಬೌಲರ್​ಗಳ ಬೆಂಡೆತ್ತಿದ್ದರು. ಪರಿಣಾಮ ಮೊಯೀನ್ ಅಲಿ ಬ್ಯಾಟ್​ನಿಂದ 6 ಸಿಕ್ಸ್ ಹಾಗೂ 2 ಫೋರ್​ಗಳು ಮೂಡಿಬಂತು. ಈ ಮೂಲಕ ಕೇವಲ 16 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಪೂರೈಸಿ ಹೊಸ ದಾಖಲೆ ಬರೆದರು.

ಹೌದು, ಇಂಗ್ಲೆಂಡ್ ಪರ ಅತೀ ವೇಗವಾಗಿ ಟಿ20 ಅರ್ಧಶತಕ ಬಾರಿಸಿದ ದಾಖಲೆ ಇದೀಗ ಮೊಯೀನ್ ಅಲಿ ಪಾಲಾಗಿದೆ. ಅಷ್ಟೇ ಅಲ್ಲದೆ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವೇಗವಾಗಿ ಹಾಫ್ ಸೆಂಚುರಿ ಬಾರಿಸಿದ 6ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಸದ್ಯ ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಅಗ್ರಸ್ಥಾನದಲ್ಲಿದ್ದು, ಯುವಿ 2007 ರಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ 16 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಇಂಗ್ಲೆಂಡ್ ಪರ ಫಾಸ್ಟೆಸ್ಟ್ ಫಿಫ್ಟಿ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಮೊಯೀನ್ ಅಲಿ ನಿರ್ಮಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಆಂಗ್ಲರು ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 41 ಆಗುವಷ್ಟರಲ್ಲಿ ಆರಂಭಿಕರಾದ ಜೇಸನ್ ರಾಯ್ (8) ಹಾಗೂ ನಾಯಕ ಜೋಸ್ ಬಟ್ಲರ್ (22) ವಿಕೆಟ್ ಕಳೆದುಕೊಂಡಿತು. ಆದರೆ ಆ ಬಳಿಕ ಬಂದ ಡೇವಿಡ್​ ಮಲಾನ್ 23 ಎಸೆತಗಳಲ್ಲಿ ಬಿರುಸಿನ 43 ರನ್​ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಮತ್ತೊಂದೆಡೆ ಜಾನಿ ಬೈರ್​ಸ್ಟೋವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಬೈರ್​ಸ್ಟೋವ್​ಗೆ ಸಾಥ್ ನೀಡಿದ ಮೊಯೀನ್ ಅಲಿ ಕೂಡ ಆಫ್ರಿಕನ್ ಬೌಲರ್​ಗಳ ಬೆಂಡೆತ್ತಿದ್ದರು. ಪರಿಣಾಮ 17ನೇ ಓವರ್​ ವೇಳೆ ಇಂಗ್ಲೆಂಡ್ ಮೊತ್ತವು 200ರ ಗಡಿದಾಟಿತು. ಅದರಲ್ಲೂ 17ನೇ ಓವರ್​ನಲ್ಲಿ ಬರೋಬ್ಬರಿ 33 ರನ್​ ಬಾರಿಸುವ ಮೂಲಕ ವೇಗಿ ಆಂಡಿಲೆ ಫೆಹ್ಲುಕ್ವಾಯೊ ಅವರ ಬೆಂಡೆತ್ತಿದ್ದರು. ಈ ಓವರ್​ನ ಮೊದಲ ಎಸೆತದಲ್ಲಿ ಬೈರ್​ಸ್ಟೋವ್ ಸಿಕ್ಸ್ ಸಿಡಿಸಿದರು. 2ನೇ ಎಸೆತದಲ್ಲೂ ಸಿಕ್ಸ್ ಉತ್ತರ ನೀಡಿದರು. ಇದಾದ ಬಳಿಕ ಫೆಹ್ಲುಕ್ವಾಯೊ ಬ್ಯಾಕ್ ಟು ಬ್ಯಾಕ್ ಎರಡು ವೈಡ್ ಎಸೆದರು. ಆ ಬಳಿಕ ಜಾನಿ ಬೈರ್​ಸ್ಟೋವ್ ಸಿಂಗಲ್ ತೆಗೆದರು. ಅಂತಿಮ ಮೂರು ಎಸೆತಗಳಲ್ಲಿ ಮೊಯೀನ್ ಅಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸುವ ಮೂಲಕ 33 ರನ್​ ಚಚ್ಚಿದರು.

ಮೊಯೀನ್ ಅಲಿ ಹಾಗೂ ಜಾನಿ ಬೈರ್​ಸ್ಟೋವ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು ಬೃಹತ್ ಮೊತ್ತದತ್ತ ಸಾಗಿತು. ಅಂತಿಮವಾಗಿ ಬೈರ್​ಸ್ಟೋವ್ 53 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 90 ರನ್​ ಕಲೆಹಾಕಿದರೆ, ಮೊಯೀನ್ ಅಲಿ ಕೇವಲ 18 ಎಸೆತಗಳಲ್ಲಿ 6 ಸಿಕ್ಸ್​ನೊಂದಿಗೆ 52 ರನ್​ ಚಚ್ಚಿದ್ದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ ಇಂಗ್ಲೆಂಡ್ ಮೊತ್ತವು 6 ವಿಕೆಟ್ ನಷ್ಟಕ್ಕೆ 234 ಕ್ಕೆ ಬಂದು ನಿಂತಿತು.

235 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ರೀಜಾ ಹೆಂಡ್ರಿಕ್ಸ್ (57) ಹಾಗೂ ಟ್ರಿಸ್ಟನ್ ಸ್ಟಬ್ಸ್ ಅಬ್ಬರಿಸಿದರು. ಅದರಲ್ಲೂ ಕೇವಲ 28 ಎಸೆತಗಳಲ್ಲಿ 8 ಸಿಕ್ಸ್​ನೊಂದಿಗೆ 72 ರನ್​ ಬಾರಿಸುವ ಮೂಲಕ ಸ್ಟಬ್ಸ್ ಸೌತ್ ಆಫ್ರಿಕಾಗೆ ಗೆಲುವಿನ ಆಸೆ ಮೂಡಿಸಿದರು. ಆದರೆ ಅಂತಿಮ ಹಂತದಲ್ಲಿ ಇಂಗ್ಲೆಂಡ್ ಬೌಲರ್​ಗಳ ಕರಾರುವಾಕ್ ದಾಳಿ ಪರಿಣಾಮ ಸೌತ್ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 193 ರನ್​ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು. ಇದರೊಂದಿಗೆ ಇಂಗ್ಲೆಂಡ್ ತಂಡವು 41 ರನ್​ಗಳ ಭರ್ಜರಿ ಜಯ ಸಾಧಿಸಿತು.