T20 World Cup: ಅಫ್ಘಾನಿಸ್ತಾನ ತಾಲಿಬಾನ್ ವಶ; ಕ್ರಿಕೆಟ್ ಮೇಲಾದ ಪರಿಣಾಮವೇನು? ನಾಯಕ ನಬಿ ಹೇಳಿದಿಷ್ಟು

T20 World Cup: ತಂಡವು ಕಳೆದ ಒಂದೂವರೆ ತಿಂಗಳುಗಳಿಂದ ತಯಾರಿ ನಡೆಸುತ್ತಿದೆ. ವೀಸಾ ಪ್ರಕರಣದಲ್ಲಿ ಕೆಲವು ಸಮಸ್ಯೆಗಳಿದ್ದವು, ಈ ಕಾರಣದಿಂದಾಗಿ ಆಟಗಾರರು ಯುಎಇಗೆ ಮುಂಚಿತವಾಗಿ ಬರಲು ಸಾಧ್ಯವಾಗಲಿಲ್ಲ.

T20 World Cup: ಅಫ್ಘಾನಿಸ್ತಾನ ತಾಲಿಬಾನ್ ವಶ; ಕ್ರಿಕೆಟ್ ಮೇಲಾದ ಪರಿಣಾಮವೇನು? ನಾಯಕ ನಬಿ ಹೇಳಿದಿಷ್ಟು
ಮೊಹಮ್ಮದ್ ನಬಿ
Follow us
TV9 Web
| Updated By: ಪೃಥ್ವಿಶಂಕರ

Updated on: Oct 15, 2021 | 7:08 PM

ನಿರಾಯುಧರ ಮೇಲೆ ಗುಂಡು ಹಾರಿಸಲಾಗುತ್ತಿದೆ, ಬೀದಿಗಳಲ್ಲಿ ಬಾಂಬ್ ಸ್ಫೋಟಿಸಲಾಗುತ್ತಿದೆ, ಮುಗ್ಧ ಜೀವಗಳನ್ನು ಕೊಲ್ಲಲಾಗುತ್ತಿದೆ. ಈ ಎಲ್ಲಾ ನೋವು ಮತ್ತು ದುಃಖದ ನಡುವೆ, ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ವಿಶ್ವಕಪ್​ನಲ್ಲಿ ತನ್ನ ಪ್ರದರ್ಶನ ನೀಡಲು ಮುಂದಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣದ ನಂತರ ಮೊದಲ ಬಾರಿಗೆ, ಅಲ್ಲಿನ ಕ್ರಿಕೆಟ್ ತಂಡವು ಮೈದಾನಕ್ಕಿಳಿಯಲಿದೆ. ಟಿ 20 ವಿಶ್ವಕಪ್‌ಗಾಗಿ ತಂಡದ ಆಟಗಾರರು ಯುಎಇ ತಲುಪಿದ್ದಾರೆ. ತಂಡದ ನಾಯಕ ಮೊಹಮ್ಮದ್ ನಬಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 10 ರಂದು ಅಫ್ಘಾನಿಸ್ತಾನ ತಂಡದ ನಾಯಕನಾಗಿ ನಬಿಯನ್ನು ನೇಮಿಸಲಾಯಿತು. ಸ್ಟಾರ್ ಆಲ್ ರೌಂಡರ್ ರಶೀದ್ ಖಾನ್ ತಂಡವನ್ನು ಆಯ್ಕೆ ಮಾಡುವ ಮೊದಲು ಅವರ ಅಭಿಪ್ರಾಯವನ್ನು ತೆಗೆದುಕೊಳ್ಳಲಿಲ್ಲ ಎಂಬ ಕಾರಣ ನೀಡಿ ಕ್ಯಾಪ್ಟನ್ ಆಗಲು ನಿರಾಕರಿಸಿದರು. 36 ವರ್ಷದ ನಬಿ 2013 ಮತ್ತು 2015 ರ ನಡುವೆ ತಂಡದ ನಾಯಕರಾಗಿದ್ದರು. ಭಾನುವಾರದಿಂದ ಆರಂಭವಾಗಲಿರುವ ಟಿ 20 ವಿಶ್ವಕಪ್ ಮೊದಲು ಮಾಧ್ಯಮಗಳಿಗೆ ನೀಡಿದ ಕಾನ್ಫರೆನ್ಸ್ ಕರೆಯಲ್ಲಿ ಮಾತನಾಡಿದ ಅವರು, ‘ನಾಯಕತ್ವವು ತುಂಬಾ ಕಷ್ಟಕರವಾದ ಜವಾಬ್ದಾರಿ. ಪಂದ್ಯಾವಳಿಯಲ್ಲಿ ತಂಡವು ಉತ್ತಮವಾಗಿ ಆಡಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ನಾಯಕನಾಗಿ ಆಡಲು ಉತ್ಸುಕನಾಗಿದ್ದೇನೆ. ಅಫಘಾನಿಸ್ತಾನ ತಂಡವು ಮೊದಲ ಸುತ್ತಿನ ಅರ್ಹತಾ ಪಂದ್ಯವನ್ನು ಅಕ್ಟೋಬರ್ 25 ರಂದು ಮೊದಲ ಪಂದ್ಯವನ್ನು ಆಡಬೇಕಿದೆ.

ತಾಲಿಬಾನ್ ಬಗ್ಗೆ ನಬಿ ಹೇಳಿದಿಷ್ಟು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದರೂ, ತಂಡವು ಟಿ 20 ವಿಶ್ವಕಪ್‌ಗೆ ಪ್ರವೇಶಿಸಿದೆ. ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಂಡ ನಂತರ, ಅಫ್ಘಾನಿಸ್ತಾನದಲ್ಲಿ ಹೆಚ್ಚು ರಕ್ತಪಾತ ಮತ್ತು ಹಿಂಸಾಚಾರ ನಡೆಯಿತು. ನಬಿ ಈ ವಿಷಯದ ಬಗ್ಗೆ ಮಾತನಾಡಲು ನಿರಾಕರಿಸಿದರು. ಆದರೆ ವೀಸಾ ಸಮಸ್ಯೆಗಳನ್ನು ಮಾತ್ರ ಉಲ್ಲೇಖಿಸಿದರು. ತಂಡವು ಕಳೆದ ಒಂದೂವರೆ ತಿಂಗಳುಗಳಿಂದ ತಯಾರಿ ನಡೆಸುತ್ತಿದೆ. ವೀಸಾ ಪ್ರಕರಣದಲ್ಲಿ ಕೆಲವು ಸಮಸ್ಯೆಗಳಿದ್ದವು, ಈ ಕಾರಣದಿಂದಾಗಿ ಆಟಗಾರರು ಯುಎಇಗೆ ಮುಂಚಿತವಾಗಿ ಬರಲು ಸಾಧ್ಯವಾಗಲಿಲ್ಲ. ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಮತ್ತು ಇಂಗ್ಲೆಂಡ್ ಕೋಚ್ ಆಂಡಿ ಫ್ಲವರ್ ಅಫ್ಘಾನಿಸ್ತಾನದ ಬ್ಯಾಟಿಂಗ್ ಸಲಹೆಗಾರರಾಗಿದ್ದರೆ, ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲುಸ್ನರ್ ಮತ್ತು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಶಾನ್ ಟೈಟ್ ಬೌಲಿಂಗ್ ಕೋಚ್ ಆಗಿದ್ದಾರೆ.

ಟಿ 20 ವಿಶ್ವಕಪ್​ಗಾಗಿ ಅಫ್ಘಾನಿಸ್ತಾನ ತಂಡ – ಮೊಹಮ್ಮದ್ ನಬಿ (ಕ್ಯಾಪ್ಟನ್), ಹಜರತುಲ್ಲಾ ಜಜಾಯಿ, ಉಸ್ಮಾನ್ ಘನಿ, ಮೊಹಮ್ಮದ್ ಶಹಜಾದ್, ರಹಮಾನುಲ್ಲಾ ಗುರ್ಬಾಜ್, ಹಷ್ಮತುಲ್ಲಾ ಶಾಹಿದಿ, ಅಸ್ಘರ್ ಅಫಘಾನ್, ಗುಲ್ಬದಿನ್ ನಾಯಬ್, ನಜೀಬುಲ್ಲಾ ಹದ್ರಾನ್, ಕರೀಂ ಜನ್ನತ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ , ಫರೀದ್ ಅಹ್ಮದ್ ಮತ್ತು ನವೀನ್-ಉಲ್-ಹಕ್.

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ