Mohammad Rizwan: ಐಸಿಯುನಲ್ಲಿ ಚೆನ್ನಾಗಿ ನೋಡಿಕೊಂಡ ಭಾರತೀಯ ವೈದ್ಯನಿಗೆ ರಿಜ್ವಾನ್ ನೀಡಿದ ಗಿಫ್ಟ್ ಏನು ಗೊತ್ತಾ?

| Updated By: Vinay Bhat

Updated on: Nov 13, 2021 | 11:27 AM

Mohammad Rizwan Indian Doctor: ಮೊಹಮ್ಮದ್ ರಿಜ್ವಾನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಭಾರತ ಮೂಲದ ವೈದ್ಯ ಶಹೀರ್ ಸೈನಾಲಬ್ದಿನ್. ತನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ರಿಜ್ವಾನ್ ಅವರು ವೈದ್ಯ ಶಹೀರ್​ಗೆ ಸಹಿ ಮಾಡಿದ ಪಾಕಿಸ್ತಾನ ಜೆರ್ಸಿ ಉಡುಗೊರೆಯಾಗಿ ನೀಡಿದ್ದಾರಂತೆ.

Mohammad Rizwan: ಐಸಿಯುನಲ್ಲಿ ಚೆನ್ನಾಗಿ ನೋಡಿಕೊಂಡ ಭಾರತೀಯ ವೈದ್ಯನಿಗೆ ರಿಜ್ವಾನ್ ನೀಡಿದ ಗಿಫ್ಟ್ ಏನು ಗೊತ್ತಾ?
Mohammad Rizwan Indian doctor Gift
Follow us on

ಕ್ರಿಕೆಟ್​ನಲ್ಲಿ ಮಹತ್ವದ ಪಂದ್ಯಗಳಿದ್ದಾಗ ಇಂಜುರಿ ಇದ್ದರೂ ಕಣಕ್ಕಿಳಿದು ದೇಶಕ್ಕೋಸ್ಕರ ಆಡಿದ ಆಟಗಾರರ ಕುರಿತು ಅನೇಕ ಉದಾಹರಣೆಗಳಿವೆ. ಮೊನ್ನೆಯಷ್ಟೆ (T20 World Cup) ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Pakistan vs Australia) ನಡುವಣ ಎರಡನೇ ಸೆಮಿ ಫೈನಲ್ ಕದನದಲ್ಲೂ ಇದೇರೀತಿಯ ಘಟನೆಯೊಂದು ನಡೆಯಿತು. ಪಾಕಿಸ್ತಾನ ತಂಡದ ವಿಕೆಟ್ ಕೀಪರ್, ಬ್ಯಾಟರ್ ಮೊಹಮ್ಮದ್ ರಿಜ್ವಾನ್ (Mohammad Rizwan) ಅವರು ಶ್ವಾಸಕೋಶದ ಸೋಂಕಿನ ಸಮಸ್ಯೆಯಿಂದಾಗಿ ಪಂದ್ಯದ ಹಿಂದಿನ ದಿನದ ವರೆಗೂ ಐಸಿಯನಲ್ಲಿದ್ದು (Mohammad Rizwan ICU), ಪಂದ್ಯದ ದಿನ ಮೈದಾನದಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಈ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿ ಕೂಡ ಆಗಿದೆ. ಸದ್ಯ ಇವರು ಅಷ್ಟು ಬೇಗ ಗುಣಮುಖರಾಗಲು ಕಾರಣರಾದ ವೈದ್ಯರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಆ ವೈದ್ಯ ಭಾರತೀಯ (Indian Doctor) ಎಂಬುದು ಮತ್ತೊಂದು ವಿಶೇಷ.

ಹೌದು, ನವೆಂಬರ್ 9 ರಂದು ಮೊಹಮ್ಮದ್ ರಿಜ್ವಾನ್‌ ಅವರಿಗೆ ಶ್ವಾಸನಾಳದೊಳಗೆ ಉರಿಯೂತ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರು ಗುಣಮುಖರಾಗಲು ಎರಡು ದಿನ ಐಸಿಯುನಲ್ಲಿ ಇದ್ದರು ಎಂದು ಪಾಕಿಸ್ತಾನ ತಂಡದ ವೈದ್ಯ ನಜೀಬ್ ಸೊಮ್ರೋ ಹೇಳಿದ್ದರು. ಸೆಮೀಸ್‌ನಲ್ಲಿ ಆಡಲು 29 ವರ್ಷದ ರಿಜ್ವಾನ್ ಉತ್ಸುಕರಾಗಿದ್ದ ಕಾರಣ ಕಣಕ್ಕಿಳಿಸಲಾಯಿತು ಎಂದು ಬಾಬರ್ ಅಜಮ್ ಕೂಡ ತಿಳಿಸಿದ್ದರು.

ರಿಜ್ವಾನ್‌ ಅವರಿಗೆ ದುಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಭಾರತ ಮೂಲದ ವೈದ್ಯ ಶಹೀರ್ ಸೈನಾಲಬ್ದಿನ್. ಅವರು ಅಷ್ಟು ಬೇಗನೆ ಚೇತರಿಸಿಕೊಂಡ ಬಗ್ಗೆ ಸ್ವತಃ ಶಹೀರ್ ಅವರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ರಿಜ್ವಾನ್ ಅವರು 35 ಗಂಟೆಗಳ ಕಾಲ ಐಸಿಯುನಲ್ಲೇ ಇದ್ದರು. ಆದರೂ ನನಗೆ ಆಡಬೇಕು. ನಾನು ತಂಡದ ಜತೆಗಿರಬೇಕು ಎಂದು ರಿಜ್ವಾನ್, ಆಸ್ಪತ್ರೆಯಲ್ಲಿರುವ ಸಮಯದಲ್ಲಿ ನಮ್ಮ ಬಳಿ ಹೇಳುತ್ತಿದ್ದರು’ ಎಂದು ಶಹೀರ್ ತಿಳಿಸಿದ್ದಾರೆ. ಇದೇವೇಳೆ ನಾನು ಅವರನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ನನಗೆ ಅವರು ಪಾಕಿಸ್ತಾನದ ಜೆರ್ಸಿ ಮೇಲೆ ಸಹಿ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ವೃದ್ಯರಿಗೆ ರಿಜ್ವಾನ್ ನೀಡಿರುವ ಉಡೊಗೊರೆ.

ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್(67) ಹಾಗೂ ಫಖರ್ ಜಮಾನ್(55) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಕೇವಲ 4 ವಿಕೆಟ್ ಕಳೆದುಕೊಂಡು 176 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಆದರೆ, ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಓವರ್‌ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿತು. ಪಾಕಿಸ್ತಾನ ಅಂತಿಮ ಹಂತದಲ್ಲಿ ಮಾಡಿದ ಕೆಲವು ಎಡವಟ್ಟಿನಿಂದ ಟೂರ್ನಿಯಿಂದ ಹೊರಬೀಳಬೇಕಾಗಿ ಬಂತು.

Rohit Sharma: ರೋಹಿತ್ ಶರ್ಮಾ ವಿಶ್ವ ದಾಖಲೆಯ ದ್ವಿಶತಕದ ವೈಭವಕ್ಕೆ ಇಂದು ಏಳು ವರ್ಷದ ಸಂಭ್ರಮ

India vs New Zealand: ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸದ್ದಿಲ್ಲದೆ ದ್ರಾವಿಡ್ ಮಾಡಿರುವ ಆ ಮಾಸ್ಟರ್ ಪ್ಲಾನ್ ಏನು ಗೊತ್ತಾ?

(Mohammad Rizwan gifted signed jersey to Indian doctor who treated him before Pakistan vs Australia Semi final Match)