Rohit Sharma: ರೋಹಿತ್ ಶರ್ಮಾ ವಿಶ್ವ ದಾಖಲೆಯ ದ್ವಿಶತಕದ ವೈಭವಕ್ಕೆ ಇಂದು ಏಳು ವರ್ಷದ ಸಂಭ್ರಮ

Rohit Sharma 264: ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಬೌಲರ್‌ಗಳು ಮೂಕವಿಸ್ಮಿತರಾಗಿದ್ದರು. 4 ರನ್‌ ಗಳಿಸಿದ್ದಾಗ ತಿಸಾರ ಪೆರೆರಾ ಕ್ಯಾಚ್‌ ಬಿಟ್ಟು ನೀಡಿದ ಜೀವದಾನವನ್ನು ರೋಹಿತ್‌ ಶರ್ಮಾ ಪರಿಪೂರ್ಣವಾಗಿ ಬಳಸಿಕೊಂಡಿದ್ದರು.

Rohit Sharma: ರೋಹಿತ್ ಶರ್ಮಾ ವಿಶ್ವ ದಾಖಲೆಯ ದ್ವಿಶತಕದ ವೈಭವಕ್ಕೆ ಇಂದು ಏಳು ವರ್ಷದ ಸಂಭ್ರಮ
Rohit Sharma Double Century
Follow us
| Edited By: Vinay Bhat

Updated on: Nov 13, 2021 | 10:30 AM

ಟೀಮ್‌ ಇಂಡಿಯಾದ (Team India) ಸಾರ್ವಕಾಲಿಕ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟರ್ ರೋಹಿತ್‌ ಶರ್ಮಾ (Rohit Sharma), ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ 2014ರ ನವೆಂಬರ್‌ 13ರಂದು ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಗರಿಷ್ಠ ವೈಯಕ್ತಿಕ ಸ್ಕೋರ್‌ ದಾಖಲಿಸಿದ ವಿಶ್ವ ದಾಖಲೆಗೆ ಇಂದು (ನ.13, ಬುಧವಾರ, 2019) ಏಳು ವರ್ಷಗಳು ಪೈರೈಸಿದೆ. ಇದಕ್ಕೂ ಮುನ್ನ 2013 ರಲ್ಲಿ ಹಿಟ್​ಮ್ಯಾನ್ (Hitman) ಆಸ್ಟ್ರೇಲಿಯಾ ವಿರುದ್ದ ಮೊದಲ ದ್ವಿಶತಕ ಸಿಡಿಸಿದ್ದರು. ಈ ಮೂಲಕ ಸಚಿನ್ ತೆಂಡುಲ್ಕರ್ (Sachin Tendulkar) ಹಾಗೂ ವಿರೇಂದ್ರ ಸೆಹ್ವಾಗ್ ಬಳಿಕ ಈ ಸಾಧನೆ ಮಾಡಿದ 3ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮರು ವರ್ಷವೇ ರೋಹಿತ್ ಶ್ರೀಲಂಕಾ ವಿರುದ್ದ ವಿಶ್ವದಾಖಲೆಯ ದ್ವಿಶತಕ (Rohit Sharma Double century) ಸಿಡಿಸಿ ದಾಖಲೆ ಬರೆದರು.

ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಬೌಲರ್‌ಗಳು ಮೂಕವಿಸ್ಮಿತರಾಗಿದ್ದರು. 4 ರನ್‌ ಗಳಿಸಿದ್ದಾಗ ತಿಸಾರ ಪೆರೆರಾ ಕ್ಯಾಚ್‌ ಬಿಟ್ಟು ನೀಡಿದ ಜೀವದಾನವನ್ನು ರೋಹಿತ್‌ ಪರಿಪೂರ್ಣವಾಗಿ ಬಳಸಿಕೊಂಡಿದ್ದರು. ರೋಹಿತ್  264 ರನ್ ಸಿಡಿಸಿ, ಏಕದಿನದ ವೈಯುಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು.

ಒಂದು ಕಾಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿವುದು ಕನಸಿನ ಮಾತು ಎಂದಿತ್ತು. ಆದರೆ, ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ಈ ಕನಸನ್ನು ನನಸಾಗಿಸಿದ್ದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌. ಆದರೆ, ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು ರೋಹಿತ್‌ ಶರ್ಮಾ. ಏಕದಿನ ಕ್ರಿಕೆಟ್‌ನಲ್ಲಿ ಒಂದಲ್ಲ ಎರಡಲ್ಲಾ.. ಒಟ್ಟು ಮೂರು ದ್ವಿಶತಕಗಳನ್ನು ಸಿಡಿಸಿದ ವಿಶ್ವ ದಾಖಲೆ ರೋಹಿತ್‌ ಶರ್ಮಾ ಅವರ ಹೆಸರಲ್ಲಿದೆ.

ಲಂಕಾ ಬೌಲರ್‌ಗಳನ್ನು ಮನಸೋಯಿಚ್ಛೆ ದಂಡಿಸಿದ ಹಿಟ್‌ಮ್ಯಾನ್‌, ಎದುರಿಸಿದ 173 ಎಸೆತಗಳಲ್ಲಿ 33 ಫೋರ್‌ ಮತ್ತು 9 ಅದ್ಭುತ ಸಿಕ್ಸರ್‌ಗಳನ್ನು ಸಿಡಿಸಿದ್ದರು. ರೋಹಿತ್‌ ಅವರ ದ್ವಿಶತಕದ ನೆರವಿನಿಂದ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ 5 ವಿಕೆಟ್‌ಗೆ 404 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 251ಕ್ಕೆ ಆಲ್‌ಔಟ್‌ ಆಗುವ ಮೂಲಕ 153 ರನ್‌ಗಳ ಹೀನಾಯ ಸೋಲುಂಡಿತ್ತು.

Khel Ratna Award: ನೀರಜ್ ಚೋಪ್ರಾ ಸೇರಿ 12 ಮಂದಿ ಸಾಧಕರಿಗೆ ಇಂದು ಖೇಲ್ ರತ್ನ ಪ್ರಶಸ್ತಿ ಪ್ರದಾನ

India vs New Zealand: ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸದ್ದಿಲ್ಲದೆ ದ್ರಾವಿಡ್ ಮಾಡಿರುವ ಆ ಮಾಸ್ಟರ್ ಪ್ಲಾನ್ ಏನು ಗೊತ್ತಾ?

(Rohit Sharma Double century On this day Hit man record 264 lights up Eden Gardens sets new benchmark)

ತಾಜಾ ಸುದ್ದಿ
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ