India vs New Zealand: ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸದ್ದಿಲ್ಲದೆ ದ್ರಾವಿಡ್ ಮಾಡಿರುವ ಆ ಮಾಸ್ಟರ್ ಪ್ಲಾನ್ ಏನು ಗೊತ್ತಾ?

Rahul Dravid, Team India Coach: ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಈ ಸರಣಿಗೆ ಆಯ್ಕೆಯಾಗಿರುವ ಪ್ರತಿಯೊಬ್ಬ ಆಟಗಾರನ ಜೊತೆ ಪ್ರತ್ಯೇಕವಾಗಿ ಕೋಚ್ ರಾಹುಲ್ ದ್ರಾವಿಡ್ ಚರ್ಚೆ ನಡೆಸಲಿದ್ದಾರೆ.

India vs New Zealand: ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸದ್ದಿಲ್ಲದೆ ದ್ರಾವಿಡ್ ಮಾಡಿರುವ ಆ ಮಾಸ್ಟರ್ ಪ್ಲಾನ್ ಏನು ಗೊತ್ತಾ?
Rahul Dravid India vs New Zealand
Follow us
| Edited By: Vinay Bhat

Updated on: Nov 13, 2021 | 8:58 AM

ಟಿ20 ವಿಶ್ವಕಪ್​ನಿಂದ (T20 World Cup) ಹೊರಬಿದ್ದ ಆಘಾತದ ಬೆನ್ನಲ್ಲೇ ಟೀಮ್ ಇಂಡಿಯಾ ನ್ಯೂಜಿಲೆಂಡ್ (India vs New Zealand) ವಿರುದ್ಧದ ಸರಣಿಗೆ ಸಜ್ಜಾಗುತ್ತಿದೆ. ತವರಿನಲ್ಲಿ ಮೂರು ಪಂದ್ಯಗಳ ಟಿ20 ಸರಣಿ ಪೈಕಿ ಇದೇ ನವೆಂಬರ್ 17 ರಂದು ಮೊದಲ ಪಂದ್ಯ ಆಡಲಿದೆ. ವಿರಾಟ್ ಕೊಹ್ಲಿ (Virat Kohli) ಟಿ20 ನಾಯಕತ್ವ ತ್ಯಜಿಸಿದ ಬಳಿಕ ರೋಹಿತ್ ಶರ್ಮಾ (Rohit Sharma) ಸಂಪೂರ್ಣ ಜವಾಬ್ದಾರಿ ಹೊತ್ತು ತಂಡವನ್ನು ಮುನ್ನಡೆಸುತ್ತಿದ್ದಾರೆ. ಜೊತೆಗೆ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid) ತಮ್ಮ ಕೆಲಸವನ್ನೂ ಶುರು ಮಾಡಲಿದ್ದಾರೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ಕೂಡ ರೂಪಿಸಿದ್ದಾರಂತೆ. ಹೌದು, ಬಿಸಿಸಿಐ ಈಗಾಗಲೇ ಮೂರು ಪಂದ್ಯಗಳ ಟಿ20 ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಮಾಡಿದೆ. ಇದರ ಬೆನ್ನಲ್ಲೇ ಕೋಚ್ ದ್ರಾವಿಡ್ ಅವರು ಆಟಗಾರರ ಜೊತೆ ವೈಯಕ್ತಿಕವಾಗಿ ಚರ್ಚಿಸಲಿದ್ದಾರಂತೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಪ್ರತಿಯೊಬ್ಬ ಆಟಗಾರನ ಜೊತೆ ಪ್ರತ್ಯೇಕವಾಗಿ ದ್ರಾವಿಡ್ ಅವರು ಚರ್ಚೆಯನ್ನು ನಡೆಸಲಿದ್ದಾರೆ. ನೂತನ ಕೋಚ್ ಆಗಿ ಆಯ್ಕೆಯಾದ ಕೂಡಲೇ ತಂಡದ ಎಲ್ಲ ಆಟಗಾರರನ್ನು ಗುಂಪು ಸೇರಿಸಿ ಮಾತನಾಡುವ ಬದಲಾಗಿ ಒಬ್ಬೊಬ್ಬರನ್ನೇ ಭೇಟಿಯಾಗುವುದರ ಮೂಲಕ ಚರ್ಚೆ ನಡೆಸಲು ರಾಹುಲ್ ದ್ರಾವಿಡ್ ಮುಂದಾಗಿದ್ದಾರೆ.

ಪ್ರಮುಖವಾಗಿ ಆಟಗಾರರ ಫಿಟ್‌ನೆಸ್ ಮತ್ತು ಮಾನಸಿಕ ಸ್ಥಿತಿಯ ಕುರಿತು ಚರ್ಚೆ ನಡೆಸಲಿದ್ದಾರಂತೆ. ಈ ವೇಳೆ ಆಟಗಾರರಿಗೆ ವಿಶ್ರಾಂತಿಯ ಅಗತ್ಯವಿದ್ದರೆ ತೆಗೆದುಕೊಳ್ಳಬಹುದು ಎಂಬ ಚರ್ಚೆಯನ್ನು ಕೂಡ ದ್ರಾವಿಡ್ ನಡೆಸಲಿದ್ದಾರೆ. ಅಂತೆಯೆ ತಂಡದಲ್ಲಿದ್ದುಕೊಂಡು ಉತ್ತಮ ಪ್ರದರ್ಶನ ನೀಡಲಿರುವ ಆಟಗಾರರಿಗೆ ಅವರ ಸ್ಥಾನದ ಕುರಿತು ಭರವಸೆಯನ್ನು ನೀಡಲಿದ್ದಾರೆ. ಅದು ಅನುಭವಿ ಆಟಗಾರ ಆಗಿರಲಿ ಅಥವಾ ಯುವ ಆಟಗಾರನಾಗಿರಲಿ ಯಾರು ಉತ್ತಮ ಪ್ರದರ್ಶನ ನೀಡಲಿದ್ದಾರೋ ಅವರಿಗೆ ತಂಡದಲ್ಲಿ ಸ್ಥಾನ ಖಚಿತ ಎಂಬ ಭರವಸೆಯನ್ನು ದ್ರಾವಿಡ್ ನೀಡಲಿದ್ದಾರೆ.

ಒಟ್ಟಾರೆ ರಾಹುಲ್ ದ್ರಾವಿಡ್ ಅವರ ಈ ತಂತ್ರದಿಂದ ತಂಡದಲ್ಲಿನ ವಿವಿಧ ಆಟಗಾರರ ವೈಯಕ್ತಿಕ ಅಭಿಪ್ರಾಯಗಳನ್ನು ಪಡೆದುಕೊಳ್ಳುವಲ್ಲಿ ದೊಡ್ಡ ಮಟ್ಟಕ್ಕೆ ಸಹಾಯ ಮಾಡಲಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಅನೇಕ ವಿಚಾರಗಳಿಂದ ಸಾಕಷ್ಟು ಕುತೂಹಲ ಕೆರಳಿಸಿದೆ.

ಕಿವೀಸ್ ವಿರುದ್ಧ ಮೊದಲು ಭಾರತ ಟಿ20 ಸರಣಿ ಆಡಲಿದೆ. ಇದು ನವೆಂಬರ್‌ 17, 19 ಮತ್ತು 21ರಂದು ಕ್ರಮವಾಗಿ ಜೈಪುರ, ರಾಂಚಿ ಮತ್ತು ಕೋಲ್ಕತಾದಲ್ಲಿ ನಡೆಯಲಿದೆ. ಇದಾದ ಬಳಿಕ ಮೊದಲ ಟೆಸ್ಟ್ ಕಾನ್ಪುರದಲ್ಲಿ ನವೆಂಬರ್ 25ರಿಂದ 29ರವರೆಗೆ ನಡೆಯಲಿದ್ದರೆ, 2ನೇ ಹಾಗೂ ಅಂತಿಮ ಟೆಸ್ಟ್ ಮುಂಬೈನಲ್ಲಿ ಡಿಸೆಂಬರ್ 3ರಿಂದ 7ರವರೆಗೆ ನಡೆಯಲಿದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ:

ಅಜಿಂಕ್ಯಾ ರಹಾನೆ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ (ಉಪ – ನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ದಿಮಾನ್ ಸಾಹ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ.

ಕಿವೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಗೆ ಭಾರತ ತಂಡ:

ರೋಹಿತ್‌ ಶರ್ಮಾ (ನಾಯಕ), ಕೆಎಲ್‌ ರಾಹುಲ್ (ಉಪನಾಯಕ), ಋತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ಕೀಪರ್‌), ವೆಂಕಟೇಶ್‌ ಅಯ್ಯರ್‌, ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ಅಕ್ಷರ್‌ ಪಟೇಲ್‌, ಅವೇಶ್ ಖಾನ್‌, ಭುವನೇಶ್ವರ್‌ ಕುಮಾರ್‌, ದೀಪಕ್ ಚಹರ್‌, ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌.

Hanuma Vihari: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ಗಿಲ್ಲ ಹನುಮಾ ವಿಹಾರಿ: ಅಭಿಮಾನಿಗಳ ಆಕ್ರೋಶ, ಕೂಡಲೇ ಎಚ್ಚೆತ್ತ ಬಿಸಿಸಿಐ

(Rahul Dravid One to One conversation with the players before start India vs New zealand series)

ತಾಜಾ ಸುದ್ದಿ
ಇಬ್ರಾಹಿಂ ಕಾಂಗ್ರೆಸ್ ಸೇರುವ ಬಗ್ಗೆ ಹೇಳಿಕೆಯೇನೂ ನೀಡಿಲ್ಲ: ಜಿ ಪರಮೇಶ್ವರ್
ಇಬ್ರಾಹಿಂ ಕಾಂಗ್ರೆಸ್ ಸೇರುವ ಬಗ್ಗೆ ಹೇಳಿಕೆಯೇನೂ ನೀಡಿಲ್ಲ: ಜಿ ಪರಮೇಶ್ವರ್
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್