AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India squad for New Zealand Tests: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ಬಿಸಿಸಿಐಯಿಂದ ಅಚ್ಚರಿಯ ಆಯ್ಕೆ

India vs New Zealand: ಟಿ20 ವಿಶ್ವಕಪ್ ಮುಗಿದ ಬಳಿಕ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟ ಮಾಡಿದೆ. ವಿರಾಟ್ ಕೊಹ್ಲಿ ಅವರು ಎರಡನೇ ಟೆಸ್ಟ್​ಗೆ ತಂಡ ಸೇರಿಕೊಳ್ಳುತ್ತಿರುವ ಕಾರಣ ಮೊದಲ ಟೆಸ್ಟ್​ ಅನ್ನು ಅಜಿಂಕ್ಯಾ ರಹಾನೆ ಮುನ್ನಡೆಸುತ್ತಿದ್ದಾರೆ.

India squad for New Zealand Tests: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ಬಿಸಿಸಿಐಯಿಂದ ಅಚ್ಚರಿಯ ಆಯ್ಕೆ
India squad for New Zealand Tests
TV9 Web
| Updated By: Vinay Bhat|

Updated on:Nov 12, 2021 | 12:44 PM

Share

ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟೀಮ್ ಇಂಡಿಯಾವನ್ನು (India Squad for New Zeland Test Series) ಪ್ರಕಟ ಮಾಡಿದೆ. ವಿರಾಟ್ ಕೊಹ್ಲಿ (Virat Kohli) ಅವರು ಎರಡನೇ ಟೆಸ್ಟ್​ಗೆ ತಂಡ ಸೇರಿಕೊಳ್ಳುತ್ತಿರುವ ಕಾರಣ ಮೊದಲ ಟೆಸ್ಟ್​ ಅನ್ನು ಅಜಿಂಕ್ಯಾ ರಹಾನೆ (Ajinkya Rahane) ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಚೇತೇಶ್ವರ್ ಪೂಜಾರ (Cheteshwar Pujara) ಅವರಿಗೆ ಉಪ ನಾಯಕನ ಪಟ್ಟ ನೀಡಲಾಗಿದೆ. ರೋಹಿತ್ ಶರ್ಮಾ (Rohit Sharma), ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರಿಷಭ್ ಪಂತ್, ಶಾರ್ದೂಲ್ ಠಾಕೂರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದರ ಜೊತೆಗೆ ಅಚ್ಚರಿಯ ಆಯ್ಕೆ ಮಾಡಲಾಗಿದ್ದು, ಶ್ರೇಯಸ್ ಅಯ್ಯರ್ (Shreyas Iyer), ಕೆಎಸ್ ಭರತ್ ಮತ್ತು ಜಯಂತ್ ಯಾದವ್ ಅವರನ್ನು ಟೆಸ್ಟ್ ಸರಣಿಗೆ (India vs New Zealand) ಆಯ್ಕೆ ಮಾಡಲಾಗಿದೆ.

ನ್ಯೂಜಿಲೆಂಡ್‌ ವಿರುದ್ಧದ ಈ ಸರಣಿಯೊಂದಿಗೆ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಭಾರತ ತಂಡದ ಮುಖ್ಯ ಕೋಚ್‌ ಆಗಿ ಕೆಲಸ ಆರಂಭಿಸಲಿದ್ದಾರೆ. ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಇದು ನವೆಂಬರ್‌ 17, 19 ಮತ್ತು 21ರಂದು ಕ್ರಮವಾಗಿ ಜೈಪುರ, ರಾಂಚಿ ಮತ್ತು ಕೋಲ್ಕತಾದಲ್ಲಿ ನಡೆಯಲಿದೆ. ಇದಾದ ಬಳಿಕ 2 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ ನ. 25 ರಂದು ಕಾನ್ಪುರ ಮತ್ತು ಡಿ. 3 ರಂದು ಮುಂಬೈನಲ್ಲಿ ಜರುಗಲಿದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ:

ಅಜಿಂಕ್ಯಾ ರಹಾನೆ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ (ಉಪ – ನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ದಿಮಾನ್ ಸಾಹ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ.

ಕಿವೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಗೆ ಭಾರತ ತಂಡ ಹೀಗಿದೆ:

ರೋಹಿತ್‌ ಶರ್ಮಾ (ನಾಯಕ), ಕೆಎಲ್‌ ರಾಹುಲ್ (ಉಪನಾಯಕ), ಋತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ಕೀಪರ್‌), ವೆಂಕಟೇಶ್‌ ಅಯ್ಯರ್‌, ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ಅಕ್ಷರ್‌ ಪಟೇಲ್‌, ಅವೇಶ್ ಖಾನ್‌, ಭುವನೇಶ್ವರ್‌ ಕುಮಾರ್‌, ದೀಪಕ್ ಚಹರ್‌, ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌.

Published On - 12:35 pm, Fri, 12 November 21

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ