AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಏಕದಿನ ನಾಯಕತ್ವಕ್ಕೂ ವಿದಾಯ ಹೇಳಲಿದ್ದಾರೆ ಕೊಹ್ಲಿ; ಭಾರತ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿಕೆ

Virat Kohli: ಕೊಹ್ಲಿ ನಾಯಕತ್ವದಲ್ಲಿ ಭಾರತ ಕಳೆದ ಐದು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ಭವಿಷ್ಯದಲ್ಲಿ ಬ್ಯಾಟಿಂಗ್‌ನತ್ತ ಗಮನ ಹರಿಸಲು ಅವರು ನಾಯಕತ್ವವನ್ನು ತ್ಯಜಿಸಬಹುದು.

Virat Kohli: ಏಕದಿನ ನಾಯಕತ್ವಕ್ಕೂ ವಿದಾಯ ಹೇಳಲಿದ್ದಾರೆ ಕೊಹ್ಲಿ; ಭಾರತ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿಕೆ
ವಿರಾಟ್ ಕೊಹ್ಲಿ
TV9 Web
| Updated By: ಪೃಥ್ವಿಶಂಕರ|

Updated on: Nov 12, 2021 | 10:01 PM

Share

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ತೊರೆದಿದ್ದು, ಇದೀಗ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ. ಕೊಹ್ಲಿ ಇನ್ನೂ ODI ಮತ್ತು ಟೆಸ್ಟ್ ತಂಡಗಳ ನಾಯಕರಾಗಿದ್ದಾರೆ, ಆದರೆ ಇತರ ಎರಡೂ ಸ್ವರೂಪಗಳಲ್ಲಿ ಅವರ ನಾಯಕತ್ವದ ಭವಿಷ್ಯವು ಪ್ರಶ್ನೆಯಾಗಿಯೇ ಉಳಿದಿದೆ. ಕೊಹ್ಲಿಯೊಂದಿಗೆ ಸತತ 4 ವರ್ಷಗಳಿಂದ ಟೀಂ ಇಂಡಿಯಾಗಾಗಿ ಕೆಲಸ ಮಾಡಿದ್ದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಮುಂದಿನ ದಿನಗಳಲ್ಲಿ ಭಾರತದ ಹಿರಿಯ ಬ್ಯಾಟ್ಸ್‌ಮನ್ ಇತರ ಸ್ವರೂಪಗಳಲ್ಲಿ ನಾಯಕತ್ವವನ್ನು ತೊರೆಯುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್‌ಗೂ ಮುನ್ನ ವಿರಾಟ್ ಕೊಹ್ಲಿ ಈ ಮಾದರಿಯಲ್ಲಿ ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದರು. ನಂತರ ಕೊಹ್ಲಿ ತಮ್ಮ ಮೇಲಿನ ಜವಾಬ್ದಾರಿಗಳ ಭಾರವನ್ನು ಕಡಿಮೆ ಮಾಡಿಕೊಂಡು ಉಳಿದ ಎರಡು ಸ್ವರೂಪಗಳಲ್ಲಿ ತಂಡವನ್ನು ಮುನ್ನಡೆಸಲು ಸ್ವತಃ ರಿಫ್ರೆಶ್ ಆಗಿದ್ದೇನೆ ಎಂದು ಉಲ್ಲೇಖಿಸಿದ್ದರು. ಆದಾಗ್ಯೂ, ಕೊಹ್ಲಿ ತಮ್ಮ ನಾಯಕತ್ವದಲ್ಲಿ ಸತತ ನಾಲ್ಕು ಐಸಿಸಿ ಪಂದ್ಯಾವಳಿಗಳಲ್ಲಿ ಯಾವುದೇ ಪ್ರಶಸ್ತಿಯನ್ನು ಗೆಲ್ಲಲು ವಿಫಲರಾಗಿದ್ದಾರೆ. ಇದರಿಂದಾಗಿ ಕೊಹ್ಲಿ ಕೂಡ ಒತ್ತಡಕ್ಕೆ ಒಳಗಾಗಿದ್ದಾರೆ. ಈಗ ಟಿ20 ಮಾದರಿಯ ನಂತರ, ಏಕದಿನ ತಂಡದ ನಾಯಕತ್ವವನ್ನು ಅವರಿಂದಲೇ ಕಿತ್ತುಕೊಳ್ಳಬಹುದೆಂದು ಊಹಿಸಲಾಗಿದೆ.

ಏಕದಿನ ನಾಯಕತ್ವ ತೊರೆಯಬಹುದು ಬಿಸಿಸಿಐ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಟೀಂ ಇಂಡಿಯಾದಲ್ಲಿ ಕೊಹ್ಲಿಗೆ ಅತ್ಯಂತ ನಿಕಟವಾಗಿರುವ ಮಾಜಿ ಕೋಚ್ ಶಾಸ್ತ್ರಿ, ಕೊಹ್ಲಿ ಏಕದಿನ ನಾಯಕತ್ವದಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎಂದು ಸೂಚಿಸಿದ್ದಾರೆ. ಆದ್ದರಿಂದ ಬಯೋ ಕ್ರಿಕೆಟ್ ಬಬಲ್‌ನಲ್ಲಿ ಆಡುವ ಪ್ರಸ್ತುತ ಪರಿಸ್ಥಿತಿಯ ನಡುವೆ, ಅವರು ತನ್ನನ್ನು ತಾನು ಸಿದ್ಧವಾಗಿರಿಸಿಕೊಳ್ಳಬಹುದು ಮತ್ತು ತನ್ನ ಬ್ಯಾಟಿಂಗ್‌ನತ್ತ ಗಮನ ಹರಿಸಬಹುದು.

‘ಇಂಡಿಯಾ ಟುಡೆ’ ಇಂಗ್ಲಿಷ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡುತ್ತಾ, ಭಾರತದ ಮಾಜಿ ಕೋಚ್, ಅವರ ನಾಯಕತ್ವದಲ್ಲಿ ಭಾರತ ಕಳೆದ ಐದು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ಭವಿಷ್ಯದಲ್ಲಿ ಬ್ಯಾಟಿಂಗ್‌ನತ್ತ ಗಮನ ಹರಿಸಲು ಅವರು ನಾಯಕತ್ವವನ್ನು ತ್ಯಜಿಸಬಹುದು. ಇದು ತಕ್ಷಣವೇ ಆಗುವುದಿಲ್ಲ, ಆದರೆ ಅದು ಸಂಭವಿಸಬಹುದು. ಬಿಳಿ ಚೆಂಡಿನ ಕ್ರಿಕೆಟ್‌ನಲ್ಲಿ ಅದೇ ಸಂಭವಿಸಬಹುದು. ಈಗ ಅವರು ಕೇವಲ ಟೆಸ್ಟ್ ನಾಯಕತ್ವದ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ ಎಂದು ಅವರು ಹೇಳಿದರು.

2017ರಿಂದ ಎಲ್ಲ ಮಾದರಿಯ ನಾಯಕರಾಗಿದ್ದರು ಕೊಹ್ಲಿ 2015 ರಲ್ಲಿ ಟೆಸ್ಟ್ ತಂಡ ಮತ್ತು 2017 ರಲ್ಲಿ ODI-T20 ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಕೊಹ್ಲಿ ನಾಯಕತ್ವದಲ್ಲಿ ಭಾರತವು ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು, ಆದರೆ ಟೀಮ್ ಇಂಡಿಯಾ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯಲ್ಲಿ ಗೆದ್ದಿದೆ. ಅವರು 38 ಗೆಲುವುಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದಾರೆ.