Mohammad Shami: ವಿಶ್ವಕಪ್‌ಗೂ ಮುನ್ನ ಸಂಕಷ್ಟಕ್ಕೆ ಸಿಲುಕಿದ ಮೊಹಮ್ಮದ್ ಶಮಿ, ಬಂಧನ ಸಾಧ್ಯತೆ!

Mohammad Shami: ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಇನ್ನು ಮೂರು ತಿಂಗಳು ಬಾಕಿ ಇರುವಾಗಲೇ ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರ ಮೊಹಮ್ಮದ್ ಶಮಿಗೆ ಸಂಕಷ್ಟ ಎದುರಾಗಿದೆ.

Mohammad Shami: ವಿಶ್ವಕಪ್‌ಗೂ ಮುನ್ನ ಸಂಕಷ್ಟಕ್ಕೆ ಸಿಲುಕಿದ ಮೊಹಮ್ಮದ್ ಶಮಿ, ಬಂಧನ ಸಾಧ್ಯತೆ!
ಮೊಹಮ್ಮದ್ ಶಮಿ
Image Credit source: barandbench

Updated on: Jul 07, 2023 | 9:56 AM

ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ (ICC World Cup 2023) ಇನ್ನು ಮೂರು ತಿಂಗಳು ಬಾಕಿ ಇರುವಾಗಲೇ ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರ ಮೊಹಮ್ಮದ್ ಶಮಿಗೆ (Mohammad Shami) ಸಂಕಷ್ಟ ಎದುರಾಗಿದೆ. ವೆಸ್ಟ್ ಇಂಡೀಸ್ ಸರಣಿಯಿಂದ ಹೊರಗಿರುವ ಶಮಿ, ಪ್ರಸ್ತುತ ವಿಶ್ರಾಂತಿಯಲ್ಲಿದ್ದಾರೆ. ಏಷ್ಯಾಕಪ್ ಮತ್ತು ವಿಶ್ವಕಪ್‌ (Asia cup, World Cup) ದೃಷ್ಟಿಯಿಂದ ಮೊಹಮ್ಮದ್ ಶಮಿಗೆ ಟೀಂ ಇಂಡಿಯಾದಿಂದ ಬ್ರೇಕ್ ನೀಡಲಾಗಿದೆ. ಆದರೆ ಶಮಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದ್ದು, ಪತ್ನಿ ಹಸಿನ್ ಜಹಾನ್ ನ್ಯಾಯಲಯದಲ್ಲಿ ಹೂಡಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಾಸ್ತವವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಮಿ ಬಂಧನಕ್ಕೆ ಕೊಲ್ಕತ್ತಾದ ಕೆಳ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಆದರೀಗ ಶಮಿ ಮಡದಿ ಹಸಿನ್ ಜಹಾನ್ ಅವರು ಸುಪ್ರೀಂ ಕೋರ್ಟ್ (Supreme Court) ಕದ ಬಡಿದಿದ್ದು, ಸವೋರ್ಚ ನ್ಯಾಯಾಲಯ ಮಹತ್ವದ ನಿರ್ಧಾರ ಕೈಗೊಂಡಿದೆ.

ಒಂದು ತಿಂಗಳೊಳಗೆ ಪ್ರಕರಣ ಇತ್ಯರ್ಥ

ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಕೊಲ್ಕತ್ತಾದ ಕೆಳ ನ್ಯಾಯಾಲಯ ತಡೆಯಾಜ್ಞೆ ನೀಡಿದ ಬಳಿಕ ಶಮಿ ಮಡದಿ ಹಸಿನ್ ಜಹಾನ್ ಅವರು ಬಂಧನಕ್ಕೆ ತಡೆ ಮತ್ತು ವಿಚಾರಣೆಯ ಪ್ರಕ್ರಿಯೆಯಲ್ಲಿ ವಿಳಂಬವಾಗುವುದರ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದೀಗ ನಾಲ್ಕು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಒಂದು ತಿಂಗಳೊಳಗೆ ಈ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಅಲಿಪುರ ಸೆಷನ್ಸ್ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅಲ್ಲದೆ ಒಂದು ತಿಂಗಳೊಳಗೆ ಪ್ರಕರಣ ಇತ್ಯರ್ಥವಾಗದಿದ್ದರೆ ಬಂಧನ ಅಮಾನತುಗೊಳಿಸುವ ಬಗ್ಗೆ ಚಿಂತನೆ ನಡೆಸುವಂತೆ ಆದೇಶಿಸಲಾಗಿದೆ. ಹಾಗೊಂದು ವೇಳೆ ಅಮಾನತು ತೆರವುಗೊಂಡರೆ ವಿಶ್ವಕಪ್​ಗೂ ಮುನ್ನ ಮೊಹಮ್ಮದ್ ಶಮಿ ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ.

IPL 2023 Prize Money: ಸಿಎಸ್​ಕೆಗೆ ಸಿಕ್ತು ಬರೋಬ್ಬರಿ 20 ಕೋಟಿ: ರಹಾನೆ, ಗಿಲ್, ಶಮಿಗೂ ಸಿಕ್ತು ಲಕ್ಷ ಲಕ್ಷ ಹಣ: ಇಲ್ಲಿದೆ ಸಂಪೂರ್ಣ ಮಾಹಿತಿ

ಶಮಿ ವಿರುದ್ಧ ಆರೋಪ ಹೊರಿಸಿದ್ದ ಮಡದಿ

2018 ರಲ್ಲಿ, ಹಸಿನ್ ಜಹಾನ್ ಅವರು ಕ್ರಿಕೆಟಿಗ ಶಮಿ ವಿರುದ್ಧ ಕೌಟುಂಬಿಕ ಹಿಂಸೆ ಸೇರಿದಂತೆ ಇನ್ನಿತ್ತರ ವಿಚಾರಗಳನ್ನಿಟ್ಟುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಅಲಿಪುರ ಸೆಷನ್ಸ್ ನ್ಯಾಯಾಲಯ ಆಗಸ್ಟ್ 29, 2019 ರಂದು, ಶಮಿಯನ್ನು ಬಂಧಿಸುವಂತೆ ಆದೇಶಿಸಿತು. ಬಳಿಕ ಈ ತೀರ್ಪನ್ನು ಪ್ರಶ್ನಿಸಿ ಶಮಿ ಅವರು ಕೆಳ ನ್ಯಾಯಾಲಯದಲ್ಲಿ ಪ್ರತಿ-ಅಪೀಲು ಸಲ್ಲಿಸಿದ್ದರು.

ಬಳಿಕ ಕೆಳ ನ್ಯಾಯಾಲಯ ನವೆಂಬರ್ 2, 2019 ರವರೆಗೆ ಶಮಿಯವರ ಬಂಧನವನ್ನು ತಡೆಹಿಡಿಯಲು ಆದೇಶಿಸಿತ್ತು. ಅಂದಿನಿಂದ ಈ ಪ್ರಕರಣವು ಬಹಳ ದಿನಗಳಿಂದ ವಿಚಾರಣೆಯಲ್ಲಿದೆ. ಈ ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಹಸಿನ್ ಸುಪ್ರಿಯಾ ನ್ಯಾಯಾಲಯದ ಮೊರೆ ಹೋಗಿದ್ದರು. ಅದರಂತೆ, ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿಎ ನರಸಿಂಹ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾರ್ ಅವರ ಪೀಠವು ಗುರುವಾರ ಅಲಿಪುರ ಸೆಷನ್ಸ್ ನ್ಯಾಯಾಲಯಕ್ಕೆ ಒಂದು ತಿಂಗಳೊಳಗೆ ಪ್ರಕರಣದ ವಿಚಾರಣೆ ನಡೆಸುವಂತೆ ಸೂಚಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ