ICC World Cup 2023: ಈ ದಿನದಂದು ಭಾರತಕ್ಕೆ ಎದುರಾಗಲಿವೆ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್

ICC World Cup 2023: ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್​ಗೆ (ICC World Cup 2023) ಎಂಟ್ರಿಕೊಟ್ಟ ಹತ್ತನೇ ಮತ್ತು ಕೊನೆಯ ತಂಡವಾಗಿ ನೆದರ್ಲೆಂಡ್ಸ್‌ ಆಯ್ಕೆಯಾಗಿದೆ.

ICC World Cup 2023: ಈ ದಿನದಂದು ಭಾರತಕ್ಕೆ ಎದುರಾಗಲಿವೆ ಶ್ರೀಲಂಕಾ ಮತ್ತು ನೆದರ್ಲೆಂಡ್ಸ್
ಶ್ರೀಲಂಕಾ, ಭಾರತ, ನೆದರ್ಲೆಂಡ್ಸ್ ತಂಡಗಳು
Follow us
ಪೃಥ್ವಿಶಂಕರ
|

Updated on: Jul 07, 2023 | 9:22 AM

ನೆದರ್ಲೆಂಡ್ಸ್ (Netherlands) ಕ್ರಿಕೆಟ್ ತಂಡ 12 ವರ್ಷಗಳ ನಂತರ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಇದರೊಂದಿಗೆ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್​ಗೆ (ICC World Cup 2023) ಎಂಟ್ರಿಕೊಟ್ಟ ಹತ್ತನೇ ಮತ್ತು ಕೊನೆಯ ತಂಡವಾಗಿ ನೆದರ್ಲೆಂಡ್ಸ್‌ ಆಯ್ಕೆಯಾಗಿದೆ. ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ಸ್ ಸೂಪರ್ 6 ಹಂತದ 8 ನೇ ಪಂದ್ಯ ನೆದರ್ಲೆಂಡ್ಸ್‌ ಮತ್ತು ಸ್ಕಾಟ್ಲೆಂಡ್ (Netherlands vs Scotland) ನಡುವೆ ನಡೆಯಿತು. ಈ ಪಂದ್ಯದಲ್ಲಿ ಗೆದ್ದ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆಯಲ್ಲಿತ್ತು. ಹೀಗಾಗಿ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿತ್ತು. ಆದಾಗ್ಯೂ, ನೆದರ್ಲೆಂಡ್ಸ್ ತಂಡ ಸ್ಕಾಟ್ಲೆಂಡ್ ವಿರುದ್ಧ 4 ವಿಕೆಟ್‌ಗಳ ಜಯದೊಂದಿಗೆ 2011 ರ ನಂತರ ವಿಶ್ವಕಪ್‌ನಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ನೆದರ್ಲೆಂಡ್ಸ್ ಐದನೇ ಬಾರಿಗೆ ವಿಶ್ವಕಪ್ ತಲುಪಿದ ಸಾಧನೆ ಮಾಡಿದೆ. ನೆದರ್ಲೆಂಡ್ಸ್ ಈ ಹಿಂದೆ 1996, 2003, 2007 ಮತ್ತು 2011ರಲ್ಲಿ ವಿಶ್ವಕಪ್‌ಗೆ ಅರ್ಹತೆ ಪಡೆದಿತ್ತು.

ಶ್ರೀಲಂಕಾ 9, ನೆದರ್ಲೆಂಡ್ಸ್ 10 ನೇ ತಂಡ

ನೆದರ್ಲೆಂಡ್ಸ್‌ಗಿಂತ ಮೊದಲು ಜಿಂಬಾಬ್ವೆಯನ್ನು ಸೋಲಿಸಿದ ಶ್ರೀಲಂಕಾ ಒಂಬತ್ತನೇ ತಂಡವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಐಸಿಸಿ ವಿಶ್ವಕಪ್ ಅರ್ಹತಾ ಸುತ್ತಿನ ಗ್ರೂಪ್ 2 ರಲ್ಲಿದ್ದಿದ್ದರಿಂದ ಶ್ರೀಲಂಕಾ ಕ್ವಾಲಿಫೈಯರ್ 2 ತಂಡವಾಗಿ ವಿಶ್ವಕಪ್​ಗೆ ಎಂಟ್ರಿಕೊಟ್ಟಿದೆ. ಇದೀಗ ನೆದರ್ಲೆಂಡ್ಸ್‌ ತಂಡ 1ನೇ ಗುಂಪಿನಿಂದ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿರುವುದರಿಂದ ಕ್ವಾಲಿಫೈಯರ್ 1 ತಂಡವಾಗಿ ವಿಶ್ವಕಪ್​ಗೆ ಆಯ್ಕೆಯಾಗಿದೆ. ಇದರೊಂದಿಗೆ ಈ ಬಾರಿಯ ವಿಶ್ವಕಪ್ ಆಡುತ್ತಿರುವ 10 ತಂಡಗಳು ಫೈನಲ್ ಆಗಿದ್ದು, ಈ 10 ತಂಡಗಳಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಶ್ರೀಲಂಕಾ (Q2) ಮತ್ತು ನೆದರ್ಲೆಂಡ್ಸ್‌ (Q1) ತಂಡಗಳು ಸೇರಿವೆ.

ಟೀಂ ಇಂಡಿಯಾ vs ಶ್ರೀಲಂಕಾ

ಕೆಲವು ದಿನಗಳ ಹಿಂದೆ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದ್ದ ಐಸಿಸಿ, ಟೀಂ ಇಂಡಿಯಾ ಯಾವ 7 ತಂಡಗಳ ವಿರುದ್ಧ ಆಡಲಿದೆ ಎಂಬುದುಕ್ಕೆ ಸ್ಪಷ್ಟನೆ ನೀಡಿತ್ತು. ಆದರೆ ಇನ್ನುಳಿದ 2 ತಂಡಗಳು ಯಾವುವು ಎಂಬುದಕ್ಕೆ ಉತ್ತರ ಸಿಕ್ಕಿರಲಿಲ್ಲ. ಆದರೆ ಈಗ ಚಿತ್ರ ಸ್ಪಷ್ಟವಾಗಿದೆ. ಹೀಗಾಗಿ ನವೆಂಬರ್ 2ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಪಂದ್ಯ ಆಡಲಿದೆ.

ಏಕದಿನ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಆಟಗಾರರಿವರು

ಟೀಂ ಇಂಡಿಯಾ vs ನೆದರ್ಲೆಂಡ್ಸ್‌

ಆದಾದ ಬಳಿಕ ನವೆಂಬರ್ 11 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ನೆದರ್ಲೆಂಡ್ಸ್‌ ವಿರುದ್ಧ ಸೆಣಸಲಿದೆ. ವಿಶ್ವಕಪ್‌ನ ಲೀಗ್ ಸುತ್ತಿನಲ್ಲಿ ಇದು ಟೀಂ ಇಂಡಿಯಾದ ಕೊನೆಯ ಪಂದ್ಯವಾಗಿದೆ.

ಪಂದ್ಯ ಹೀಗಿತ್ತು

ಟಾಸ್ ಗೆದ್ದ ನೆದರ್ಲೆಂಡ್ಸ್, ಸ್ಕಾಟ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಹೀಗಾಗಿ ಸ್ಕಾಟ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು. ಗೆಲುವಿಗೆ 278 ರನ್​ಗಳ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 43 ಎಸೆತಗಳು ಬಾಕಿ ಇರುವಂತೆ 42.5 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಈ ಗೆಲುವಿನ ಸವಾಲನ್ನು ಪೂರ್ಣಗೊಳಿಸಿತು. ನೆದರ್ಲೆಂಡ್ಸ್ ಪರ ಮಿಂಚಿದ ಬಾಸ್ ಡಿ ಲೀಡೆ ಮೊದಲು ಬೌಲಿಂಗ್​ನಲ್ಲಿ 5 ವಿಕೆಟ್ ಪಡೆದರೆ, ನಂತರ ಬ್ಯಾಟಿಂಗ್​ನಲ್ಲಿ 92 ಎಸೆತಗಳಲ್ಲಿ 123 ರನ್‌ಗಳ ಭರ್ಜರಿ ಶತಕ ಸಿಡಿಸಿ ಮಿಂಚಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್