Sourav Ganguly: ನೀವು ಕೇಳಿದ್ದು ಇಲ್ಲಿದೆ…ಸೌರವ್ ಗಂಗೂಲಿ ಸರ್ಪ್ರೈಸ್..!
Sourav Ganguly: ಹುಟ್ಟುಹಬ್ಬದಂದು ಸರ್ಪ್ರೈಸ್ ನೀಡುವುದಾಗಿ ಸೌರವ್ ಗಂಗೂಲಿ ಸೋಷಿಯಲ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ದಾದಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರು ತಮ್ಮ ಜನ್ಮದಿನವಾದ ಜುಲೈ 8, 2023 ರಂದು ವಿಶೇಷ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ದಾದಾ, ಶನಿವಾರದವರೆಗೆ ಕಾಯುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಜುಲೈ 8 ರಂದು ಸೌರವ್ ಗಂಗೂಲಿ 51ನೇ ವರ್ಷಕ್ಕೆ ಕಾಲಿಡಲಿದ್ದು, ಇದೇ ದಿನ ವಿಶೇಷ ವಿಚಾರವನ್ನು ಹಂಚಿಕೊಳ್ಳುವುದಾಗಿ ದಾದಾ ತಿಳಿಸಿದ್ದಾರೆ.
ನೀವು ಕೇಳಿದ್ದೀರಿ…ಅದು ಇಲ್ಲಿದೆ…ಜುಲೈ 8 ರಂದು ನನ್ನ ಜನ್ಮದಿನದಂದು ವಿಶೇಷ ಘೋಷಣೆ ಮಾಡುವುದಾಗಿ ಗಂಗೂಲಿ ತಿಳಿಸಿದ್ದಾರೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ದಾದಾ ಡೈರಿ ಬರೆಯುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಫೋಟೋದಲ್ಲಿ ‘ಲೀಡಿಂಗ್ ವಿತ್…’ ಎಂದು ಬರೆದಿರುವುದನ್ನು ಕಾಣಬಹುದು. ಹೀಗಾಗಿ ಗಂಗೂಲಿ ಹೊಸ ಇನಿಂಗ್ಸ್ ಶುರು ಮಾಡಲಿದ್ದಾರೆ ಎಂಬುದು ಸ್ಪಷ್ಟ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್?
ಸೌರವ್ ಗಂಗೂಲಿ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಅವರ ಈ ಸರ್ಪ್ರೈಸ್ ಬೆನ್ನಲ್ಲೇ ಕೋಚ್ ಆಗಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಸೋಷಿಯಲ್ ಮೀಡಿಯಾದಲ್ಲಿ ದಾದಾ ಹಂಚಿಕೊಂಡಿರುವ ಫೋಟೋದಲ್ಲಿ ಲೀಡಿಂಗ್ ವಿತ್ ಎಂದು ಬರೆದುಕೊಂಡಿರುವುದು ಹೊಸ ಮುನ್ನಡೆಸುವಿಕೆಯ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತ ಕಳೆದ ಎರಡು ಸೀಸನ್ಗಳಲ್ಲಿ ತಂಡದ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಅವರ ಕಾರ್ಯ ವೈಖರಿ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಸಂಪೂರ್ಣ ಸಂತುಷ್ಟರಾಗಿಲ್ಲ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಇದರ ಬೆನ್ನಲ್ಲೇ ಗಂಗೂಲಿಯನ್ನು ಕೋಚ್ ಆಗಿ ನೇಮಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದನ್ನೂ ಓದಿ: ವಿಶ್ವಕಪ್ಗಿಂತ ಐಪಿಎಲ್ ಟ್ರೋಫಿ ಗೆಲ್ಲುವುದು ಕಷ್ಟ, ರೋಹಿತ್ ಶರ್ಮಾ ಬೆಸ್ಟ್ ಕ್ಯಾಪ್ಟನ್: ಸೌರವ್ ಗಂಗೂಲಿ
ಇದೀಗ ಹುಟ್ಟುಹಬ್ಬದಂದು ಸರ್ಪ್ರೈಸ್ ನೀಡುವುದಾಗಿ ಸೌರವ್ ಗಂಗೂಲಿ ಸೋಷಿಯಲ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ದಾದಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗಳಿಗೆ ಶನಿವಾರ ಸ್ಪಷ್ಟ ಉತ್ತರ ಸಿಗಲಿದ್ದು, ಅಲ್ಲಿಯವರೆಗೂ ಕಾಯಲೇಬೇಕು.