Mohammed Shami: ದುಬಾರಿ ಬೆಲೆಯ ಜಾಗ್ವಾರ್ ಕಾರು ಖರೀದಿಸಿದ ಮೊಹಮ್ಮದ್ ಶಮಿ; ಬೆಲೆ ಎಷ್ಟು ಗೊತ್ತಾ?

| Updated By: ಪೃಥ್ವಿಶಂಕರ

Updated on: Aug 20, 2022 | 2:45 PM

Mohammed Shami: ಶಮಿ ಟೊಯೊಟಾ ಫಾರ್ಚುನರ್, ಬಿಎಂಡಬ್ಲ್ಯು 5 ಸಿರೀಸ್ ಮತ್ತು ಆಡಿ ಕಾರನ್ನು ಸಹ ಹೊಂದಿದ್ದಾರೆ. ಕಳೆದ ತಿಂಗಳಷ್ಟೇ ಶಮಿ, ಹೊಸ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಜೊತೆಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Mohammed Shami: ದುಬಾರಿ ಬೆಲೆಯ ಜಾಗ್ವಾರ್ ಕಾರು ಖರೀದಿಸಿದ ಮೊಹಮ್ಮದ್ ಶಮಿ; ಬೆಲೆ ಎಷ್ಟು ಗೊತ್ತಾ?
Follow us on

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಅಂಗಳದಿಂದ ದೂರ ಉಳಿದಿದ್ದಾರೆ. ಐಷಾರಾಮಿ ಜೀವನಶೈಲಿಯನ್ನು ಇಷ್ಟಪಡುವ ಆಟಗಾರರಲ್ಲಿ ಶಮಿ ಕೂಡ ಒಬ್ಬರು. ಅವರ ಬಟ್ಟೆ, ಬೂಟು ಮತ್ತು ಗಡಿಯಾರದಿಂದ, ಅವರ ಐಷಾರಾಮಿ ಜೀವನಶೈಲಿ ಎಲ್ಲೆಡೆ ಗೋಚರಿಸುತ್ತದೆ. ಶಮಿ ಇದೀಗ ತಮ್ಮ ವಾಹನಗಳ ಸಂಗ್ರಹಕ್ಕೆ ಅತ್ಯಂತ ದುಬಾರಿ ಕಾರನ್ನು ಸೇರಿಸಿದ್ದು, ಇದರ ಬೆಲೆ ಗೊತ್ತಾದ್ರೆ ನೀವೂ ಬೆಚ್ಚಿ ಬೀಳುತ್ತೀರಿ.

ಜಾಗ್ವಾರ್ ಕಾರು ಖರೀದಿಸಿದ ಶಮಿ

ವೇಗದ ಬೌಲಿಂಗ್​ಗೆ ಹೆಸರಾದ ಮೊಹಮ್ಮದ್ ಶಮಿ ಕೂಡ ವೇಗದ ಕಾರನ್ನು ತೆಗೆದುಕೊಂಡಿದ್ದಾರೆ. ಶಮಿ ಸ್ಪೋರ್ಟ್ಸ್ ಕಾರ್ ಖರೀದಿಸಿದ್ದು, ಕೆಂಪು ಬಣ್ಣದ ಜಾಗ್ವಾರ್ ಎಫ್-ಟೈಪ್ ವೇಗಕ್ಕೆ ಹೆಸರುವಾಸಿಯಾಗಿದೆ. ಇದು ಕೇವಲ 3.7 ಸೆಕೆಂಡುಗಳಲ್ಲಿ 100 ಕಿಮೀ ವೇಗವನ್ನು ಪಡೆದುಕೊಳ್ಳುವ ಸಾಮಥ್ಯ್ರ ಹೊಂದಿದೆ. ಈ ಕಾರಿನ ಬೆಲೆ 98.5 ಲಕ್ಷ ಅಂದರೆ ಸುಮಾರು ಒಂದು ಕೋಟಿ ರೂಪಾಯಿಯಾಗಿದ್ದು, ಕಾರಿನ ಎಂಜಿನ್ V8 331 kW ಸಾಮರ್ಥ್ಯದ್ದಾಗಿದೆ. ಈ ಕಾರಿನಲ್ಲಿ ಇಬ್ಬರು ಕುಳಿತುಕೊಳ್ಳಲು ಅವಕಾಶವಿದ್ದು, 2 ಸೀಟರ್ ಕಾರಿನ ಗರಿಷ್ಠ ವೇಗ ಗಂಟೆಗೆ 250 ಕಿ.ಮೀ. ಜಾಗ್ವಾರ್‌ನ ಈ ಐಷಾರಾಮಿ ಸ್ಪೋರ್ಟ್ಸ್ ಕಾರು 1997 ಸಿಸಿ ಮತ್ತು 5000 ಸಿಸಿ ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ಹೊಂದಿದೆ.

ಇದನ್ನೂ ಓದಿ
Independence Day: 75ನೇ ಸ್ವಾತಂತ್ರ್ಯ ದಿನವನ್ನು ಟೀಂ ಇಂಡಿಯಾ ಕ್ರಿಕೆಟಿಗರು ಆಚರಿಸಿದ್ದು ಹೀಗೆ; ಫೋಟೋ ನೋಡಿ
Mohammed Shami: ಇಂಜುರಿ, ವೈಯಕ್ತಿಕ ಸಮಸ್ಯೆ, ಕಳಪೆ ಪ್ರದರ್ಶನಗಳ ನಡುವೆ ಬೌಲಿಂಗ್​ನಲ್ಲಿ ಅದ್ಭುತ ದಾಖಲೆ ಬರೆದ ಶಮಿ
ಟೆಸ್ಟ್​ ನಾಯಕತ್ವಕ್ಕೆ ಪೈಪೋಟಿ ಶುರು; ಟೀಂ ಇಂಡಿಯಾದ ಟೆಸ್ಟ್ ಸಾರಥ್ಯಕ್ಕೆ ನಾನು ಸಿದ್ದ ಎಂದ ಮತ್ತೊಬ್ಬ ಬೌಲರ್!

ವಿಡಿಯೋ ಶೇರ್ ಮಾಡಿದ ಶಮಿ

ಶಮಿ ಇನ್‌ಸ್ಟಾಗ್ರಾಂನಲ್ಲಿ ಎರಡು ವಿಡಿಯೋಗಳನ್ನು ಹಂಚಿಕೊಂಡಿದ್ದು, ವೀಡಿಯೊದಲ್ಲಿ, ಅವರು ಕಾರಿನ ಕೀಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಎರಡನೇ ವೀಡಿಯೊದಲ್ಲಿ, ಅವರು ತಮ್ಮ ಕಾರನ್ನು ಓಡಿಸುತ್ತಿರುವುದು ಕಂಡು ಬರುತ್ತದೆ. ಕೆಂಪು ಬಣ್ಣದ ಕಾರು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದ್ದು, ಈ ಕಾರು BMW X5, Maserati Grand Turismo, Volvo XC90 ಕಾರುಗಳಿಗೆ ಸರಿಸಮಾನಾಗಿದೆ. 31 ವರ್ಷದ ಶಮಿ ಈ ಕಾರನ್ನು ಶಿವ ಮೋಟಾರ್ಸ್ ನಿಂದ ಖರೀದಿಸಿದ್ದು, ಶಿವ ಮೋಟಾರ್ಸ್‌ನ ನಿರ್ದೇಶಕ ಅಮಿತ್ ಗಾರ್ಗ್ ಅವರು ಶಮಿ ಜೊತೆಗಿನ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ. ಶಮಿ ಟೊಯೊಟಾ ಫಾರ್ಚುನರ್, ಬಿಎಂಡಬ್ಲ್ಯು 5 ಸಿರೀಸ್ ಮತ್ತು ಆಡಿ ಕಾರನ್ನು ಸಹ ಹೊಂದಿದ್ದಾರೆ. ಕಳೆದ ತಿಂಗಳಷ್ಟೇ ಶಮಿ, ಹೊಸ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಜೊತೆಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ವಿಶ್ರಾಂತಿಯಲ್ಲಿ ಮೊಹಮ್ಮದ್ ಶಮಿ

ಇಂಗ್ಲೆಂಡ್ ಪ್ರವಾಸಕ್ಕೆ ಟೀಮ್ ಇಂಡಿಯಾದಲ್ಲಿದ್ದ ಶಮಿ ಅಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದರು. ಇದಲ್ಲದೆ, ಅವರು ಏಕದಿನ ಸರಣಿಯಲ್ಲೂ ತಂಡದ ಭಾಗವಾಗಿದ್ದರು. ಆದರೆ, ಆ ಬಳಿಕ ಅವರಿಗೆ ವೆಸ್ಟ್ ಇಂಡೀಸ್ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಬಳಿಕ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೂ ಶಮಿಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ. ಈಗ ಏಷ್ಯಾಕಪ್‌ನಲ್ಲಿ ಶಮಿ ತಂಡಕ್ಕೆ ಮರಳುವ ನಿರೀಕ್ಷೆಯಿದೆ.

Published On - 2:43 pm, Sat, 20 August 22